ಹಾವೇರಿಯ ಚಿತ್ರಮಂದಿರದಲ್ಲಿ 'ಕಾಂತಾರ: ಚಾಪ್ಟರ್ 1' ಸಿನಿಮಾ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರು, ರಿಷಬ್ ಶೆಟ್ಟಿಯವರ ದೈವದ ದೃಶ್ಯದ ವೇಳೆ ಮೈಮೇಲೆ ದೇವರು ಬಂದಂತೆ ವರ್ತಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿತ್ರದ ತೀವ್ರ ಭಾವನಾತ್ಮಕ ಪ್ರಭಾವವನ್ನು ತೋರಿಸಿದೆ
ಹಾವೇರಿ (ಅ.2): ಇಂದು ಬೆಳಿಗ್ಗೆ 11 ಗಂಟೆಗೆ ಹಾವೇರಿ ನಗರದ ಮಾಗಾವಿ ಚಿತ್ರಮಂದಿರದಲ್ಲಿ 'ಕಾಂತಾರ: ಚಾಪ್ಟರ್ 1' ಸಿನಿಮಾ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬರು ಸಿನಿಮಾದ ಎರಡನೇ ಅರ್ಧದಲ್ಲಿ ರಿಷಬ್ ಶೆಟ್ಟಿಯವರಿಗೆ ದೈವ ಬರುವ ದೃಶ್ಯವನ್ನು ನೋಡಿ 'ಮೈ ಮೇಲೆ ದೇವರು ಬಂದಂತೆ' ವರ್ತಿಸಿದ ಘಟನೆ ನಡೆದಿದೆ.
ಈ ವಿಚಿತ್ರ ವರ್ತನೆಯನ್ನು ಚಿತ್ರಮಂದಿರದಲ್ಲಿದ್ದ ಕೆಲವು ಪ್ರೇಕ್ಷಕರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ: ಚಾಪ್ಟರ್ 1' ಚಿತ್ರವು ಇಂದು ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ದುಬಾರಿ ಟಿಕೆಟ್ ಬೆಲೆ ಮತ್ತು ಯಶಸ್ವಿ ಪ್ರೀಮಿಯರ್ ಶೋಗಳಿಂದಾಗಿ ಭಾರಿ ಕಲೆಕ್ಷನ್‌ಗೆ ಕಾರಣವಾಗಿದೆ. ಕರ್ನಾಟಕದಲ್ಲಿ 350 ಚಿತ್ರಮಂದಿರಗಳಲ್ಲಿ ಸುಮಾರು 2,000 ಪ್ರದರ್ಶನಗಳೊಂದಿಗೆ, ಮೊದಲ ದಿನವೇ 25 ಕೋಟಿ ರೂಪಾಯಿ ಗಳಿಕೆಯ ನಿರೀಕ್ಷೆಯಿದೆ.
ಈ ಘಟನೆಯು ಸಿನಿಮಾದ ತೀವ್ರವಾದ ಭಾವನಾತ್ಮಕ ಪರಿಣಾಮ ತೋರಿಸಿದೆ. ದೈವ ಬಂದಂತೆ ಕುಣಿದಾಡಿದ ಮಹಿಳೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇಂದು ಬೆಳಗ್ಗೆಯಿಂದಲೇ ರಾಜ್ಯಾದ್ಯಂತ ಚಿತ್ರಮಂದಿರಗಳು ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿವೆ. ಕಾಂತಾರ ಸಿನಿಮಾ ನೋಡಿದ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
