- Home
- Entertainment
- TV Talk
- ಮನೆ ಮನೆಗೆ 'ಬಾವ' ಬರುವ ದಿನಾಂಕ ಫಿಕ್ಸ್: 2025ರ ಬ್ಲಾಕ್ ಬಸ್ಟರ್ 'ಸು ಪ್ರೇಮ್ ಸೋ' ಕಿರುತೆರೆಗೆ!
ಮನೆ ಮನೆಗೆ 'ಬಾವ' ಬರುವ ದಿನಾಂಕ ಫಿಕ್ಸ್: 2025ರ ಬ್ಲಾಕ್ ಬಸ್ಟರ್ 'ಸು ಪ್ರೇಮ್ ಸೋ' ಕಿರುತೆರೆಗೆ!
2025ರ ಬ್ಲಾಕ್ ಬಸ್ಟರ್ ಚಿತ್ರ 'ಸು ಪ್ರೇಮ್ ಸೋ' ಇದೀಗ ಕಿರುತೆರೆಗೆ ಬರಲು ಸಿದ್ಧವಾಗಿದೆ. ರಾಜ್ ಬಿ ಶೆಟ್ಟಿ ನಿರ್ಮಾಣದ, ಕರಾವಳಿ ಸಂಸ್ಕೃತಿಯ ಹಾಸ್ಯಮಯ ಕಥೆಯುಳ್ಳ ಈ ಚಿತ್ರವು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ.

2025ರ ಕನ್ನಡ ಚಿತ್ರರಂಗದ ಅತಿದೊಡ್ಡ ಬ್ಲಾಕ್ ಬಸ್ಟರ್ ಚಲನಚಿತ್ರಗಳಲ್ಲಿ ಒಂದಾದ 'ಸು ಪ್ರೇಮ್ ಸೋ' (Su Prêm Sô) ಇದೀಗ ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಕೋಟ್ಯಂತರ ಸಿನಿಮಾ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದ ಈ ಚಿತ್ರದ ವಿಶ್ವ ದೂರದರ್ಶನ ಪ್ರಥಮ ಪ್ರದರ್ಶನ (World Television Premiere) ದಿನಾಂಕವನ್ನು ಕಲರ್ಸ್ ಕನ್ನಡ ವಾಹಿನಿ ಅಧಿಕೃತವಾಗಿ ಘೋಷಿಸಿದೆ.
ನಗುವಿನ ಲೆಜೆಂಡರಿ ಜರ್ನಿ, ಸು ಫ್ರಮ್ ಸೋ ಸಿನಿಮಾ ಕಿರುತೆರೆಗೆ ಬರುತ್ತಿದೆ. ಕನ್ನಡ ಚಿತ್ರರಂಗದಲ್ಲಿ 2025ರಲ್ಲಿ ಅತಿಹೆಚ್ಚು ಆದಾಯ ಗಳಿಸಿದ ಮತ್ತು ಬ್ಲಾಕ್ ಬಸ್ಟರ್ ಸಿನಿಮಾ ಇತ್ತೀಚೆಗೆ ಒಟಿಟಿಗೆ ರಿಲೀಸ್ ಆಗಿತ್ತು.
ಕರಾವಳಿ ಭಾಗದ ಸ್ಥಳೀಯ ಸಂಸ್ಕೃತಿಯನ್ನು ಹೊಂದಿರುವ ಸು ಫ್ರಮ್ ಸೋ ಸಿನಿಮಾಗೆ ರಾಜ್ಯ, ಹೊರ ರಾಜ್ಯಗಳಲ್ಲಿಯೂ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಮಲೆಯಾಳಂ ಭಾಷಾಂತರವೂ ಕೂಡ ಹಿಟ್ ಆಗಿತ್ತು. ಅನೇಕ ಸ್ಟಾರ್ ನಾಯಕರ ಸಿನಿಮಾಗಳಿಗೆ ಸೆಡ್ಡು ಹೊಡೆದು ಸುಮಾರು 50ಕ್ಕೂ ಅಧಿಕ ದಿನಗಳು ಥಿಯೇಟರ್‌ನಲ್ಲಿ ಕಮಾಲ್ ಮಾಡಿದ ಸಿನಿಮಾ ಇದಾಗಿತ್ತು.
ಆರಂಭದಿಂದ ಅಂತ್ಯದವರೆಗೂ ನಗುವನ್ನೇ ನೀಡುವ ಸು ಫ್ರಮ್ ಸೋ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ನಿರ್ಮಾಣಕಾರನಾಗಿ ಹಾಗೂ ಹಾಸ್ಯ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ನಿರ್ದೇಶನ ಮತ್ತು ನಾಯಕನ ಸ್ಥಾನವನ್ನು ಜೆ.ಪಿ. ತುಮ್ಮಿನಾಡ್ ತುಂಬಿದ್ದಾರೆ.
ಕರಾವಳಿ ಭಾಗದ ಸ್ನೇಹಿತರೇ ಸೇರಿಕೊಂಡು ಮಾಡಿದ ಕಡಿಮೆ ಬಜೆಟ್‌ನ ಸಿನಿಮಾವೊಂದು ಬರೋಬ್ಬರಿ 120 ಕೋಟಿ ರೂ.ಗಿಂತ ಅಧಿಕ ಆದಾಯವನ್ನು ಗಳಿಸಿದೆ. ಎರಡ್ಮೂರು ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಕನ್ನಡದ ಅತಿ ಕಡಿಮೆ ಬಜೆಟ್‌ನ ಸಿನಿಮಾ 100 ಕೋಟಿ ರೂ. ಆದಾಯ ಗಳಿಸಿರುವುದು ದೊಡ್ಡ ಸಾಧನೆಯೇ ಆಗಿದೆ.
ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅ.12ರಂದು ಸು ಫ್ರಮ್ ಸೋ ಸಿನಿಮಾ ಪ್ರದರ್ಶನ ಆಗಲಿದ್ದು, ಇನ್ನೂ ಸು ಫ್ರಮ್ ಸೋ ಸಿನಿಮಾವನ್ನು ನೋಡದ ಅನೇಕ ಪ್ರೇಕ್ಷಕರಿಗೆ ಹಾಗೂ ರಾಜ್ಯದ ಎಲ್ಲ ಗ್ರಾಮೀಣ ಭಾಗದ ಜನರಿಗೆ ಕರಾವಳಿ ಸಂಸ್ಕೃತಿಯ ನಡುವೆ ಅಡಗಿರುವ ನಗುವನ್ನು ತಲುಪಿಸುವ ಕಾರ್ಯ ಮಾಡಲಿದೆ.
ಒಂದು ಕಡೆ ಕರಾವಳಿಯ ಕಲಿ ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ ಚಾಪ್ಟರ್ -1 ಸಿನಿಮಾ ರಿಲೀಸ್ ಆಗಿರುವ ಬೆನ್ನಲ್ಲಿಯೇ ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ. ಇದೀಗರಿಷಬ್ ಶೆಟ್ಟಿ ಸ್ನೇಹಿತ ರಾಜ್ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್ ಸೋ ಸಿನಿಮಾ ಟಿವಿಯಲ್ಲಿ ಪ್ರಸಾರ ಆಗುತ್ತಿದೆ. ಈ ಪ್ರಸಾರದ ಮೂಲಕ ಸಿನಿಮಾ ಮಂದಿರದಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ಚಿತ್ರದ ವಿಶೇಷ ಕಥಾಹಂದರ ಮತ್ತು ತಾರಾಬಳಗದ ಮನೋಜ್ಞ ಅಭಿನಯವನ್ನು ಇಡೀ ಕರ್ನಾಟಕದ ಮನೆಮನೆಗೂ ತಲುಪಿಸಲಾಗುತ್ತದೆ.
ಈ ಬಗ್ಗೆ ಕಲರ್ಸ್ ಕನ್ನಡ ಟಿವಿ ವಾಹಿನಿಯೂ ಕೂಡ ವಿಭಿನ್ನವಾಗಿ ಪ್ರೋಮೋ ಬಿಡುಗಡೆ ಮಾಡಿದೆ. 'ವಿಷ್ಯ ಗೊತ್ತಯ್ತಾ? ಕಲರ್ಸ್ ಕನ್ನಡಕ್ಕೆ ಇದೇ ಅಕ್ಟೋಬರ್ 12 ಬಾವ ಬರ್ತಿದ್ದಾರಂತೆ' ಯಾರು ಸು ಫ್ರಮ್ ಸೋ..., ಯಾವಾಗ ಅಕ್ಟೋಬರ್ 12 ಸಂಜೆ 6 ಎಂದು ಜಾಹೀರಾತು ನೀಡಿದ್ದಾರೆ. ಈ ಬ್ಲಾಕ್ ಬಸ್ಟರ್ ಹಿಟ್ ಚಿತ್ರದ ಟಿ.ವಿ. ಪ್ರೀಮಿಯರ್ ಅನ್ನು ಕಣ್ತುಂಬಿಕೊಳ್ಳಲು ಕನ್ನಡಿಗರು ಕಾತುರರಾಗಿದ್ದಾರೆ.