ಟಿವಿ ಸುದ್ದಿ ಮಾಧ್ಯಮದಲ್ಲಿನ ಅತ್ಯುತ್ತಮ ಸಾಧನೆಗಾಗಿ ನೀಡಲಾಗುವ 2024ರ ಪ್ರತಿಷ್ಠಿತ ಎನ್ಬಾ ಪ್ರಶಸ್ತಿ ಘೋಷಣೆಯಾಗಿದ್ದು, ‘ಏಷ್ಯಾನೆಟ್ ಸುವರ್ಣ ನ್ಯೂಸ್‌’ 8 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ನವದೆಹಲಿ (ಡಿ.14): ಟಿವಿ ಸುದ್ದಿ ಮಾಧ್ಯಮದಲ್ಲಿನ ಅತ್ಯುತ್ತಮ ಸಾಧನೆಗಾಗಿ ನೀಡಲಾಗುವ 2024ರ ಪ್ರತಿಷ್ಠಿತ ಎನ್ಬಾ ಪ್ರಶಸ್ತಿ ಘೋಷಣೆಯಾಗಿದ್ದು, ‘ಏಷ್ಯಾನೆಟ್ ಸುವರ್ಣ ನ್ಯೂಸ್‌’ 8 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ವಾಲ್ಮೀಕಿ ಹಾಗೂ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣಗಳ ಕುರಿತ ವಿಶೇಷ ವರದಿ, ಚಿತ್ರದುರ್ಗದ ರೇಣುಕಾಸ್ವಾಮಿ‌ ಕೊಲೆ ಪ್ರಕರಣ ಕುರಿತ ವಿಶೇಷ ವರದಿ, ಲೆಫ್ಟ್, ರೈಟ್ ಸೆಂಟರ್ ಕಾರ್ಯಕ್ರಮಗಳಿಗಾಗಿ ವಿಶೇಷ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅಲ್ಲದೆ, ‘ನ್ಯೂಸ್ ಅವರ್’ಗೆ ‘ಬೆಸ್ಟ್ ಪ್ರೈಮ್ ಟೈಮ್ ಶೋ’ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದೆ. ಅಲ್ಲದೆ, ಜಾತಕಫಲ, ಎಫ್ಐಆರ್ ವಿಭಾಗಗಳಲ್ಲಿಯೂ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರಶಸ್ತಿ ಲಭಿಸಿದೆ.

ಪೃಥ್ವಿರಾಜ್‌ ಹಾಲಹಳ್ಳಿಗೆ ಎಚ್. ನರಸಿಂಹಯ್ಯ ಪ್ರಶಸ್ತಿ

ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ನೀಡುವ 2025 ರ ರಾಜ್ಯ ಮಟ್ಟದ ಎಚ್.ಎನ್ ಡಾ.ಎಚ್ ನರಸಿಂಹಯ್ಯ ಪ್ರಶಸ್ತಿಗೆ ಚಿಂತಕ ಪೃಥ್ವಿರಾಜ್‌ ಹಾಲಹಳ್ಳಿ ಭಾಜನರಾಗಿದ್ದಾರೆ. ಹುಲಿಕಲ್ ನಟರಾಜ್ ರವರ ನೇತೃತ್ವದ ಈ ಪರಿಷತ್ತು ರಾಜ್ಯದ ಹಲವಾರು ಕಡೆ ವಿವಿಧ ಕಾರ್ಯಕ್ರಮಗಳನ್ನು ನೀಡಿ ವಿಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಸಾರುತ್ತಿದ್ದು,ಪೃಥ್ವಿರಾಜ್‌ ಎಚ್ ಎಮ್ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಾಲಹಳ್ಳಿ ಗ್ರಾಮದವರು. ಸುಮಾರು 15 ವರ್ಷಗಳ ಕಾಲ ಮೈಸೂರಿನ ಸರಸ್ವತಿಪುರಂ ನ ಜೆಎಸ್ಎಸ್ ಮಹಿಳಾ ಕಾಲೇಜು,ಮರಿಮಲ್ಲಪ್ಪ ಕಾಲೇಜು,ನಂಜನಗೂಡು ಜೆಎಸ್ಎಸ್ ಕಾಲೇಜಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು.

ಪ್ರತಿಷ್ಠಿತ ಮೈಸೂರು ದಸರಾದಲ್ಲಿ ವಿವಿಧ ವೇದಿಕೆ ಹಾಗೂ ದಸರಾ ಮತ್ತು ಯುವ ಸಂಭ್ರಮದಲ್ಲಿ ಪ್ರಧಾನ ನಿರೂಪಕರಾಗಿ ಮತ್ತು ಮೈಸೂರು ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಕಾಲೇಜುಗಳಿಗೆ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಸ್ಪರ್ಧಾತ್ಮಕ ಪರೀಕ್ಷೆ ಗಳ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.ರಾಜ್ಯಮಟ್ಟದ ಕಾರ್ಯಕ್ರಮಗಳಿಗೆ ಭಾವಗೀತೆ ಚರ್ಚಾ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದ್ದಾರೆ.ಪ್ರಸ್ತುತ ಗುಂಡ್ಲುಪೇಟೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇದೇ ತಿಂಗಳ ಡಿ. 27,28,29 ರಂದು ಯಾದಗಿರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಜಿಲ್ಲಾ ಅಧ್ಯಕ್ಷ ಎಂ. ಕಿರಣ್ ರಾಜ್ ತಿಳಿಸಿದ್ದಾರೆ.