ಬೆಂಗಳೂರಿನ ಪೂರ್ವ ಹೈಲ್ಯಾಂಡ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಮಯ ಭಾಷೆ ಕನ್ನಡವಾಗಲಿ" ಶೀರ್ಷಿಕೆಯಡಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದ ವಿಶೇಷತೆಯೆಂದರೆ, ಸಾವಿರಕ್ಕೂ ಹೆಚ್ಚು ಕನ್ನಡೇತರ ನಿವಾಸಿಗಳು ಒಟ್ಟಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದು.
- Home
- News
- State
- Karnataka News Live: ತಾಳ್ಮೆ, ಸಹನೆ, ಪರೋಪಕಾರಿತನ ಕನ್ನಡಗರ ಮೂಲ ಗುಣ - ಇತಿಹಾಸಕಾರ ಧರ್ಮೇಂದ್ರ ಕುಮಾರ್
Karnataka News Live: ತಾಳ್ಮೆ, ಸಹನೆ, ಪರೋಪಕಾರಿತನ ಕನ್ನಡಗರ ಮೂಲ ಗುಣ - ಇತಿಹಾಸಕಾರ ಧರ್ಮೇಂದ್ರ ಕುಮಾರ್

ಬೆಂಗಳೂರು: ಡಿಸಿಎಂ ಡಿಕೆಶಿಗೆ ಟಾಂಗ್ ನೀಡಿದ ಜಾರಕಿಹೊಳಿ, ಕೆಲವೇ ಜನರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ಬಹಳಷ್ಟು ಜನ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ದುಡಿದಿದ್ದಾರೆ. ರಾಜ್ಯದ ಜನ ಮತ ಹಾಕಿದ್ದರಿಂದ ನಾವು ಶಾಸಕರು, ಮಂತ್ರಿ ಆಗಿದ್ದೇವೆ. ನಮಗೆ ಇತಿ ಮಿತಿ ಇರಬೇಕು. ಎಲ್ಲವೂ ನನ್ನಿಂದಲೇ ಆಗಿದೆ ಎನ್ನುವುದು ತಪ್ಪು. ಪಕ್ಷ ಅಧಿಕಾರಕ್ಕೆ ಬರಲು ಎಲ್ಲರ ಸಹಕಾರವಿದೆ. ಅದರ ಶ್ರೇಯಸ್ಸನ್ನು ಕೆಲವೇ ಜನರು ತೆಗೆದುಕೊಳ್ಳುವುದನ್ನು ನಾನು ಒಪ್ಪುವುದಿಲ್ಲ. ಸ್ವಾಭಾವಿಕವಾಗಿ ಎಲ್ಲರೂ ಹಕ್ಕು ಮಂಡಿಸುತ್ತಾರೆ. ಎಲ್ಲರಿಗೂ ಅಧಿಕಾರ ಸಿಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದರಲ್ಲಿ ತಪ್ಪಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
Karnataka News Live 24 November 2025ತಾಳ್ಮೆ, ಸಹನೆ, ಪರೋಪಕಾರಿತನ ಕನ್ನಡಗರ ಮೂಲ ಗುಣ - ಇತಿಹಾಸಕಾರ ಧರ್ಮೇಂದ್ರ ಕುಮಾರ್
Karnataka News Live 24 November 2025ತಡ ರಾತ್ರಿ ಕೆಸಿ ವೇಣುಗೋಪಾಲ್ ಭೇಟಿಗೆ ಮುಂದಾದ ಡಿಕೆಶಿ, ಕುತೂಹಲ ಮೂಡಿಸಿದ ಕ್ಷಿಪ್ರ ನಡೆ
ತಡ ರಾತ್ರಿ ಕೆಸಿ ವೇಣುಗೋಪಾಲ್ ಭೇಟಿಗೆ ಮುಂದಾದ ಡಿಕೆಶಿ, ಕುತೂಹಲ ಮೂಡಿಸಿದ ಕ್ಷಿಪ್ರ ನಡೆ , ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಕೆಸಿ ವೇಣುಗೋಪಾಲ್ ಭೇಟಿಯಾಗಿ ಅಧಿಕಾರ ಹಸ್ತಾಂತರ ಕುರಿತು ಮಾತುಕತೆ ನಡೆಸಲ ಮುಂದಾಗಿದ್ದಾರೆ.
Karnataka News Live 24 November 2025ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ , ಮಾಜಿ ಕ್ರಿಕೇಟರ್ ವೆಂಕಟೇಶ್ ಪ್ರಸಾದ್ ಬಣ ಹಾಗೂ ಬ್ರಿಜೇಶ್ ಬಣದ ನಡುವೆ ತೀವ್ರ ಪೈಪೋಟಿ ಎರ್ಪಟ್ಟಿತ್ತು. ಆದರೆ ಭಾರಿ ಟ್ವಿಸ್ಟ್ ಮೂಲಕ ಎಲ್ಲವೂ ಬದಲಾಗಿದೆ.
Karnataka News Live 24 November 2025ಪೋಷಕರಿಲ್ಲದ ವೇಳೆ ಮನೆಗೆ ತೆರಳಿ ವಿದ್ಯಾರ್ಥಿನಿ ಮೇಲೆ ಲೈ0ಗಿಕ ದೌರ್ಜನ್ಯ, ದೈಹಿಕ ಶಿಕ್ಷಕ ಅರೆಸ್ಟ್
ಪೋಷಕರಿಲ್ಲದ ವೇಳೆ ಮನೆಗೆ ತೆರಳಿ ವಿದ್ಯಾರ್ಥಿನಿ ಮೇಲೆ ಲೈ0ಗಿಕ ದೌರ್ಜನ್ಯ, ದೈಹಿಕ ಶಿಕ್ಷಕ ಅರೆಸ್ಟ್, ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿ, ಆಮಿಷ ಒಡ್ಡಿ, ಜೀವ ಬೆದರಿಕೆ ಹಾಕಿ ತನ್ನ ಕಾರ್ಯ ಸಾಧಿಸುತ್ತಿದ್ದ.
Karnataka News Live 24 November 2025ಧರ್ಮಸ್ಥಳ ಬುರುಡೆ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನಿಗೆ ಜಾಮೀನು ಮಂಜೂರು
ಧರ್ಮಸ್ಥಳ ಬುರುಡೆ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನಿಗೆ ಜಾಮೀನು ಮಂಜೂರು , ಮಂಗಳೂರಿನ ಜಿಲ್ಲಾ ನ್ಯಾಯಾಲಯ ಈ ಆದೇಶ ನೀಡಿದೆ. ಆಗಸ್ಟ್ 23ರಿಂದ ಬಂಧನದಲ್ಲಿದ್ದ ಚಿನ್ನಯ್ಯ ಬೇಲ್ ನೀಡಲಾಗಿದೆ.
Karnataka News Live 24 November 2025Bigg Boss ಅಶ್ವಿನಿ ಗೌಡ ಹುಟ್ಟುಹಬ್ಬಕ್ಕೆ ಧ್ರುವಂತ್ ಕೇಕ್ ಆಂಜನೇಯ? ಜಾತಲಾಣದಲ್ಲಿ ವಿಡಿಯೋ ಸಕತ್ ವೈರಲ್
Karnataka News Live 24 November 2025ಮದ್ವೆಯಾಗ್ತಿದ್ದಂತೆಯೇ ನಟಿ ರಜಿನಿಗೆ ಹುಚ್ಚುನಾಯಿ ಕಚ್ಚಿತಂತೆ! ಹೀಗೆ ಮಾಡೋದಾ ಗಂಡ?
Karnataka News Live 24 November 2025Bhagyalakshmi ಸೀರಿಯಲ್ ಮುಗಿದೇ ಹೋಯ್ತಾ? ಏನಿದು ಇಷ್ಟು ಖುಷಿ- ಇಲ್ಲೇ ಇರೋದು ಟ್ವಿಸ್ಟ್!
Karnataka News Live 24 November 2025Bigg Bossನಲ್ಲಿ ಡಾಗ್ ಸತೀಶ್ ಚಡ್ಡಿಯ ಬಿಸಿಬಿಸಿ ಚರ್ಚೆ - ಚಡ್ಡಿ ಕಳ್ಳರನ್ನು ಕಂಡುಹಿಡಿದ್ರಾ ಕಿಚ್ಚ ಸುದೀಪ್?
ಬಿಗ್ಬಾಸ್ನಿಂದ ಹೊರಬಂದ ಡಾಗ್ ಸತೀಶ್, ಸ್ಪರ್ಧಿ ಸ್ಪಂದನಾ ತನ್ನ ದುಬಾರಿ ಶರ್ಟ್ ಹಾಳು ಮಾಡಿದ್ದಾರೆ ಮತ್ತು ತನ್ನ ಚಡ್ಡಿಗಳು ಕಳೆದುಹೋಗಿವೆ ಎಂದು ಆರೋಪಿಸಿದ್ದರು. ಈ ವಿಷಯವನ್ನು ನಿರೂಪಕ ಸುದೀಪ್ ಅವರು ವಾರದ ಕಂತಿನಲ್ಲಿ , ಮನೆಯ ಸದಸ್ಯರನ್ನು ಪ್ರಶ್ನಿಸಿದಾಗ ತಮಾಷೆಯ ಸನ್ನಿವೇಶ ಸೃಷ್ಟಿಯಾಯಿತು.
Karnataka News Live 24 November 2025ಅರುಣಾಚಲ ಚೀನಾ ಭಾಗ, ಪಾಸ್‌ಪೋರ್ಟ್ ಅಮಾನ್ಯ ಎಂದು ಭಾರತೀಯಳಿಗೆ ಪ್ರಯಾಣ ನಿರಾಕರಿಸಿದ ಚೀನಾ
ಅರುಣಾಚಲ ಚೀನಾ ಭಾಗ, ಪಾಸ್‌ಪೋರ್ಟ್ ಅಮಾನ್ಯ ಎಂದು ಭಾರತೀಯಳಿಗೆ ಪ್ರಯಾಣ ನಿರಾಕರಿಸಿದ ಚೀನಾ , ಗಡಿಯಲ್ಲಿ ಕಿರಿಕ್ ಮಾಡುವ ಜೊತೆಗೆ ಇದೀಗ ಚೀನಾ ಭಾರತೀಯರಿಗೆ ಕಿರುಕುಳ ನೀಡಲು ಆರಂಭಿಸಿದೆ.
Karnataka News Live 24 November 2025ಕೆನರಾ ಬ್ಯಾಂಕ್‌ನಿಂದ ಉಚಿತ ಕಂಪ್ಯೂಟರ ತರಬೇತಿ - ಅರ್ಹತೆ, ವಯೋಮಿತಿ ಮಾಹಿತಿ ಇಲ್ಲಿದೆ
Canara Bank Free computer education training: ಕೆನರಾ ಬ್ಯಾಂಕ್ ಸಂಸ್ಥೆಯು ಬೆಂಗಳೂರಿನಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿಯನ್ನು ಆಯೋಜಿಸಿದೆ.
Karnataka News Live 24 November 2025Bigg Boss Kannada ನಾಮಿನೇಷನ್‌ನಲ್ಲಿ ಹೊಸ ತಿರುವು; ಹೊಸ ಅಧ್ಯಾಯದಲ್ಲಿ ಒಂದ್ಕಡೆ ಗಿಲ್ಲಿ, ಮತ್ತೊಂದ್ಕಡೆ?
Karnataka News Live 24 November 2025ಯಕ್ಷಗಾನ ವಿವಾದ - ಬಿಳಿಮಲೆ ಹೇಳಿಕೆಗೆ ಪೇಜಾವರ ಶ್ರೀಗಳು ತಿರುಗೇಟು!
ಯಕ್ಷಗಾನ ಕಲಾವಿದರ ಸಲಿಂಗಕಾಮದ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಉಡುಪಿಯ ಪೇಜಾವರ ಶ್ರೀಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಕ್ಷಗಾನ ಕಲಾವಿದರು ಮಹಾನ್ ಕಲಾತಪಸ್ವಿಗಳು ಮತ್ತು ಸಮಾಜ ಅವರನ್ನು ಗೌರವಿಸುತ್ತದೆ ಎಂದರು.
Karnataka News Live 24 November 2025ಡಿಕೆಶಿ ಭವಿಷ್ಯ ಅಂದೇ ಸದನದಲ್ಲಿ ನುಡಿದಿದ್ರಾ ಯಡಿಯೂರಪ್ಪ? ಹಲ್ಚಲ್ ಸೃಷ್ಟಿಸ್ತಿರೋ ಈ ವಿಡಿಯೋದಲ್ಲಿ ಏನಿದೆ?
ಎರಡೂವರೆ ವರ್ಷಗಳ ಬಳಿಕ ಸಿಎಂ ಸ್ಥಾನ ಬಿಟ್ಟುಕೊಡುವ ಒಪ್ಪಂದದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರಕ್ಕಾಗಿ ಜಟಾಪಟಿ ನಡೆಯುತ್ತಿದೆ. ಈ ರಾಜಕೀಯ ಬಿಕ್ಕಟ್ಟಿನ ನಡುವೆಯೇ, ಡಿ.ಕೆ.ಶಿವಕುಮಾರ್ ಭವಿಷ್ಯದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಆಡಿದ್ದ ಮಾತು ವೈರಲ್ ಆಗುತ್ತಿವೆ.
Karnataka News Live 24 November 2025ಯಾರು ಸಿಎಂ ಆಗಬೇಕು ಎಂಬ ಪ್ರಶ್ನೆಗೆ 'ನಾನೇ ಮುಂದಿನ ಮುಖ್ಯಮಂತ್ರಿ' ಎಂದ ಜಾರಕಿಹೊಳಿ!
Karnataka CM: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು 2028ಕ್ಕೆ ತಾವೇ ಮುಖ್ಯಮಂತ್ರಿಯಾಗಬೇಕೆಂಬ ಆಕಾಂಕ್ಷೆಯನ್ನು ಬೆಳಗಾವಿಯಲ್ಲಿ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಲ್ಲಿ ತಮ್ಮ ಹಿರಿತನವನ್ನು ಉಲ್ಲೇಖಿಸಿ, ವಿಜಯೇಂದ್ರ ನಾಯಕತ್ವವನ್ನು ಒಪ್ಪುವುದಿಲ್ಲ ಎಂದಿದ್ದರೂ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದರು.
Karnataka News Live 24 November 2025'ನಾನೇ 5 ವರ್ಷ ಸಿಎಂ' ಎನ್ನುವ ದೈನೇಸಿ ಸ್ಥಿತಿ ಸಿದ್ದರಾಮಯ್ಯರಿಗೆ ಬರಬಾರದಿತ್ತು - ಬೊಮ್ಮಾಯಿ ಟಾಂಗ್
ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಸಿದ್ದರಾಮಯ್ಯ 'ನಾನೇ ಐದು ವರ್ಷ ಮುಖ್ಯಮಂತ್ರಿ' ಎಂದು ಹೇಳಿಕೊಳ್ಳುವ ಸ್ಥಿತಿಯನ್ನು ಲೇವಡಿ ಮಾಡಿದ್ದಾರೆ. ಅವರಲ್ಲಿ 'ರೆಬಿಲಿಯನ್' ಮತ್ತು 'ಕಾಂಪ್ರಮೈಸ್' ಎಂಬ ಹೋರಾಟ ನಡೆಯುತ್ತಿದ್ದು, ಈ ತಿಂಗಳ ಅಂತ್ಯದೊಳಗೆ ಅವರ ಅಧಿಕಾರದ ಭವಿಷ್ಯ ಗೊತ್ತಾಗಲಿದೆ ಎಂದರು.
Karnataka News Live 24 November 20252026ರಲ್ಲಿ ಟೂರ್ ಪ್ಲ್ಯಾನ್ ಮಾಡ್ತಿದ್ದೀರಾ? ರಜೆಗಳ ಫುಲ್ ಡಿಟೇಲ್ಸ್ ನಿಮಗಾಗಿ- ತಿಂಗಳು ಆಯ್ಕೆ ಮಾಡಿ, ಪ್ಲ್ಯಾನ್ ಮಾಡಿ
Karnataka News Live 24 November 2025ಬೆಂಗಳೂರು - ಸ್ನೇಹಿತನಿಂದ ಕೊಲೆಯಾದ ಯುವತಿ; ಆಂಧ್ರದಿಂದ ಬಿಬಿಎಂ ಓದಲು ಬಂದಿದ್ದ ದೇವಿಶ್ರೀ ದುರಂತ ಸಾವು!
BBM Student Devi Shree Murdered: ಬೆಂಗಳೂರಿನ ತಮ್ಮೇನಹಳ್ಳಿಯಲ್ಲಿ ಆಂಧ್ರ ಮೂಲದ ಬಿಬಿಎಂ ವಿದ್ಯಾರ್ಥಿನಿ ದೇವಿಶ್ರೀಯನ್ನು ಆಕೆಯ ಸ್ನೇಹಿತ ಪ್ರೇಮ್ ವರ್ಧನ್ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Karnataka News Live 24 November 2025Belagavi - ದುಖಃದಿಂದ ಸುದ್ದಿಗೋಷ್ಠಿ ಮಾಡ್ತಿದ್ದೇನೆ ಎಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ, ವಾಲ್ಮೀಕಿ ಸಮಾಜವನ್ನು ಎಸ್‌ಟಿ ವರ್ಗಕ್ಕೆ ಸೇರಿಸಲಾಗುವುದಿಲ್ಲ ಎಂದು ಹೇಳಿಕೆ ನೀಡಿದ ಹುಕ್ಕೇರಿ ತಹಶೀಲ್ದಾರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೌನ ವಹಿಸಿರುವ ಸತೀಶ್ ಜಾರಕಿಹೊಳಿ ಕಾರ್ಯವೈಖರಿಯನ್ನು ಪ್ರಶ್ನಿಸಿ, ತಹಶೀಲ್ದಾರ್ ಬಂಧನಕ್ಕೆ ಆಗ್ರಹಿಸಿದ್ದಾರೆ.
Karnataka News Live 24 November 2025ತುಮಕೂರು - ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ, ಬೈಕ್ ಸಮೇತ ಶವವಾಗಿ ಪತ್ತೆ!
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಮೂರು ದಿನಗಳಿಂದ ಕಾಣೆಯಾಗಿದ್ದ ಮಧು ಎಂಬ ವ್ಯಕ್ತಿ ಬೈಕ್ ಸಮೇತ ಶವವಾಗಿ ಪತ್ತೆಯಾಗಿದ್ದಾರೆ. ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದೆಂದು ಶಂಕಿಸಲಾಗಿದ್ದು, ಅಪಾಯಕಾರಿ ತಿರುವಿನ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಗ್ರಾಮಸ್ಥರು ಆಕ್ರೋಶ.