ನಟಿ ಅಶ್ವಿನಿ ಗೌಡ ಅವರ 41ನೇ ಹುಟ್ಟುಹಬ್ಬವನ್ನು ಬಿಗ್​ಬಾಸ್​ ಮನೆಯಲ್ಲಿ ಆಚರಿಸಲಾಗಿದೆ. ಈ ವೇಳೆ ಕೈಯಿಂದ ಮುಟ್ಟದೇ ಕೇಕ್​ ತಿನ್ನುವ ಚಾಲೆಂಜ್​ನಲ್ಲಿ, ಧ್ರುವಂತ್​ ಅವರು ಕೇಕ್ ತಿಂದ ರೀತಿ ನೋಡಿ ನೆಟ್ಟಿಗರು ಅವರನ್ನು 'ಕೇಕ್​ ಆಂಜನೇಯ' ಎಂದು ಕರೆಯುತ್ತಿದ್ದಾರೆ.

ನಿನ್ನೆ ಅಂದರೆ ನವೆಂಬರ್​ 24 ನಟಿ, ಅಶ್ವಿನಿ ಗೌಡ (Ashwini Gowda) ಅವರಿಗೆ ಹುಟ್ಟುಹಬ್ಬದ ಸಂಭ್ರಮ. 40 ವಸಂತಗಳನ್ನು ಪೂರೈಸಿರುವ ಅಶ್ವಿನಿ ಅವರು 41ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಬಿಗ್​ಬಾಸ್​​ ಮನೆಯಲ್ಲಿ ಹುಟ್ಟುಹಬ್ಬದ ಆಚರಣೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಬಿಗ್​ಬಾಸ್​ ಸ್ಪರ್ಧಿಗಳಿಗೆ ಇದೇ ಸಂದರ್ಭದಲ್ಲಿ ಕೈಯಿಂದ ಮುಟ್ಟದೇ ಕೇಕ್​ ತಿನ್ನುವ ಚಾಲೆಂಜ್​ ನೀಡಲಾಗಿದೆಯೇ ಎನ್ನುವ ಸಂದೇಹ ಬಂದಿದೆ. ಇದಕ್ಕೆ ಕಾರಣ ಇದೀಗ ವಾಹಿನಿ ಹಂಚಿಕೊಂಡಿರುವ ಧ್ರುವಂತ್​ ಅವರ ಕೇಕ್​ ತಿನ್ನುವ ವಿಡಿಯೋ.

ಟ್ಯಾಗ್​ ಮಾಡಿ

ಈ ವಿಡಿಯೋ ಶೇರ್​ ಮಾಡಿರುವ ವಾಹಿನಿ, ಟ್ಯಾಗ್ ಮಾಡಿ ನಿಮ್ಮ ಆ ಫ್ರೆಂಡ್ ನಾ ಎಂದು ಹೇಳುವ ಮೂಲಕ ಬಕಬಕ ಕೇಕ್​ ತಿನ್ನುವವರ ಬಗ್ಗೆ ಹೇಳಿದೆ. ಇದರಲ್ಲಿ ಧ್ರುವಂತ್​ ಅವರು ಕೈಯಲ್ಲಿ ಕೇಕ್​ ಹಿಡಿದುಕೊಂಡಿದ್ದಾರೆ. ಪಕ್ಕದಲ್ಲಿ ಅಶ್ವಿನಿ ಕೂಡ ಇರುವುದನ್ನು ನೋಡಬಹುದು. ಕೇಕ್​ ಅನ್ನು ಕೈಯಿಂದ ತಿನ್ನುವಂತಿಲ್ಲ ಎಂದಿರುವ ಕಾರಣ, ಗಬಗಬನೆ ಬಾಯಿ ಹಾಕಿ ತಿಂದಿದ್ದಾರೆ ಧ್ರುವಂತ್​. ಆ ಕ್ಷಣದಲ್ಲಿ ಅವರು ಥೇಟ್​ ಆಂಜನೇಯನ ಹಾಗೆ ಕಾಣಿಸುತ್ತಿರುವುದಾಗಿ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ಹೇರ್​​ಸ್ಟೈಲ್​

ಧ್ರುವಂತ್​ ಅವರ ಹೇರ್​ಸ್ಟೈಲ್​ ಮತ್ತು ಅವರು ಕೇಕ್​ ತಿಂದಾಗ ಬಾಯಿ ಉಬ್ಬಿದಂತೆ ಕಂಡಿರುವ ಹಿನ್ನೆಲೆಯಲ್ಲಿ ಥೇಟ್​ ಅವರು ಆಂಜನೇಯನ ರೀತಿಯಲ್ಲಿ ಕಾಣಿಸುತ್ತಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ. ಆದ್ದರಿಂದ ಧ್ರುವಂತ್​ ಅವರನ್ನು ಕೇಕ್​ ಆಂಜನೇಯ ಎಂದು ಕರೆಯುತ್ತಿದ್ದಾರೆ.

ಅಶ್ವಿನಿ- ಧ್ರುವಂತ್​

ಇನ್ನು ಬಿಗ್​ಬಾಸ್​ನಲ್ಲಿ (Bigg Boss) ಅಶ್ವಿನಿ ಗೌಡ ಅವರು ಹವಾ ಸೃಷ್ಟಿಸುತ್ತಿದ್ದಾರೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಇವರ ವಿರುದ್ಧವೇ ಕಮೆಂಟ್​ಗಳ ಸುರಿಮಳೆಯಾಗುತ್ತಿರುತ್ತದೆ. ಅಶ್ವಿನಿ ಗೌಡ ಅವರು ಜಗಳದಿಂದಲೇ ಬಿಗ್​ಬಾಸ್​ ಮನೆಯಲ್ಲಿ ಫೇಮಸ್​ ಆಗಿರೋ ಕಾರಣದಿಂದಾಗಿ ಅವರ ಬಗ್ಗೆ ನೆಗೆಟಿವ್​ ಕಮೆಂಟ್ಸ್​ ಸುರಿಮಳೆಯೇ ಆಗುತ್ತಿರುತ್ತದೆ. ಇನ್ನು ಧ್ರುವಂತ್ ನಿಜವಾದ ಹೆಸರು ಚರಿತ್ ಬಾಳಪ್ಪ. ಇವರು ಸದ್ಯ ಕಾಂಟ್ರವರ್ಸಿಯಲ್ಲಿ ಇದ್ದಾರೆ. ಪ್ರಾರಂಭದಲ್ಲಿ ಧ್ರುವಂತ್‌ಗೆ ರಾಶಿಕಾ ಮದುವೆ ವಿಚಾರವಾಗಿ ಪ್ರಶ್ನೆ ಮಾಡಿದ್ದರು. ಆಗ ಅವರು ಸಿಂಗಲ್‌ ಅಂತ ಹೇಳಿಕೊಂಡಿದ್ದರು. ನಾನು ಸಿಂಗಲ್‌ ಕಿಂಗ್‌, ಲವ್‌ ಬ್ರೇಕಪ್‌ ಆಗಿದೆ ಎಂದಿದ್ದರು. ಆದರೆ ಬಿಗ್ಬಾಸ್​ ಮನೆ ಸೇರುತ್ತಿದ್ದಂತೆಯೇ, ಇವರ ವಿರುದ್ಧ ಕೆಲವು ವರ್ಷಗಳ ಹಿಂದೆ ಮಹಿಳೆಯೊಬ್ಬರು ಕಿರುಕುಳದ ಆರೋಪ ಮಾಡಿ ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿರುವುದು ಬಹಿರಂಗಗೊಂಡಿದ್ದು, ಅದರ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.

View post on Instagram