ಧರ್ಮಸ್ಥಳ ಬುರುಡೆ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನಿಗೆ ಜಾಮೀನು ಮಂಜೂರು , ಮಂಗಳೂರಿನ ಜಿಲ್ಲಾ ನ್ಯಾಯಾಲಯ ಈ ಆದೇಶ ನೀಡಿದೆ. ಆಗಸ್ಟ್ 23ರಿಂದ ಬಂಧನದಲ್ಲಿದ್ದ ಚಿನ್ನಯ್ಯ ಬೇಲ್ ನೀಡಲಾಗಿದೆ.

ಮಂಗಳೂರು (ನ.24) ರಾಜ್ಯ, ದೇಶ ಹಾಗೂ ವಿದೇಶಗಳಲ್ಲೂ ಸುದ್ದಿ ಮಾಡಿದ ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ ತಂಡ ಆಗಾಗಲೇ ಚಾರ್ಜ್‌ಶೀಟ್ ಸಲ್ಲಿಸಿದೆ. ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿ ವಾದ ಮಂಡನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ಮಹತ್ವದ ಆದೇಶ ಹೊರಬಿದ್ದಿದೆ. ಧರ್ಮಸ್ಥಳ ಬುರುಡೆ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನಿಗೆ ಜಾಮೀನು ಮಂಜೂರು ಮಾಡಲಾಗಿದೆ. ಮಂಗಳೂರಿನ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದೆ.

ಚಾರ್ಜ್‌ಶೀಟ್ ಬೆನ್ನಲ್ಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಚಿನ್ನಯ್ಯ

ಎಸ್‌ಐಟಿ ತಂಡ ಇತ್ತೀಚೆಗೆ ಬೆಳ್ತಂಗಡಿ ನ್ಯಾಯಾಲದಲ್ಲಿ ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಮಧ್ಯಂತರ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಮಧ್ಯಂತರ ಚಾರ್ಜ್ ಶೀಟ್ ಸಲ್ಲಿಕೆ ಬೆನ್ನಲ್ಲೇ ಜಿಲ್ಲಾ ಕೋರ್ಟ್ ನಲ್ಲಿ ಚಿನ್ನಯ್ಯ ಪರ ವಕೀರಲು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಜಾಮೀನು ವೇಳೆ ಬರೋಬ್ಬರಿ 12 ಷರತ್ತು ಹಾಗೂ 1 ಲಕ್ಷ ರೂಪಾಯಿ ಬಾಂಡ್ ವಿಧಿಸಿ ಜಾಮೀನು ನೀಡಲಾಗಿದೆ. ದ.ಕ ಜಿಲ್ಲಾ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಧರ್ಮಸ್ಥಳ ಬುರುಡೆ ಪ್ರಕರಣ ಭುಗಿಲೆದ್ದ ಬಳಿಕ ಬೇಡಿಕೆಯಂತೆ ಎಸ್‌ಐಟಿ ರಚನೆ ಮಾಡಲಾಗಿತ್ತು. ಎಸ್‌ಐಟಿ ತನಿಖೆಯಲ್ಲಿ ಧರ್ಮಸ್ಥಳ ಸುತ್ತ ಮುತ್ತ ಕಳೇಬರ ಪತ್ತೆಗೆ ಅಗೆಯಲಾಗಿತ್ತು. ಹಲವು ಕಡೆ ಜೆಸಿಬಿ, ಸಿಬ್ಬಂದಿಗಳ ಸಹಾಯದ ಮೂಲಕ ಉತ್ಖನನ ಮಾಡಲಾಗಿತ್ತು. ವಿಚಾರಣೆ ಮುಂದುವರಿಯುತ್ತಿದ್ದಂತೆ ತಿರುವು ಪಡೆದುಕೊಂಡಿತ್ತು. ದೂರು ಕೊಟ್ಟ ಚಿನ್ನಯ್ಯನನ್ನೇ ಎಸ್ಐಟಿ ಬಂಧಿಸಿತ್ತು. ಬಳಿಕ ವಿಚಾರಣೆ ತೀವ್ರಗೊಂಡಿತ್ತು. ಈ ವೇಳೆ ಧರ್ಮಸ್ಥಳ ವಿರುದ್ದ ನಡೆಸಿದ ಷಡ್ಯಂತ್ರಗಳು ಬಯಲಾಗತೊಡಗಿತು. ಆಗಸ್ಟ್ 23ರಂದು ಚಿನ್ನಯ್ಯನ ಬಂಧನವಾಗಿತ್ತು. ಸೆಪ್ಟೆಂಬರ್ 06ರಂದು ಚಿನ್ನಯ್ಯನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಶಿವಮೊಗ್ಗ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು.

ಸುಳ್ಳು ಸಾಕ್ಷಿ BNSS 215 ಅಡಿಯ ಚಾರ್ಜ್ ಶೀಟ್ ಸಲ್ಲಿಕೆ

ಧರ್ಮಸ್ಥಳ ಬುರುಡೆ ಕೇಸ್ ನ ಎಸ್ಐಟಿ ತನಿಖೆಯ ಮಧ್ಯಮಂತ್ರ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಬರೋಬ್ಬರಿ 4 ಸಾವಿರ ಪುಟಗಳ ವರದಿ ಇದಾಗಿದೆ. ಸುಳ್ಳು ಸಾಕ್ಷಿ BNSS 215 ಅಡಿಯ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಈ ಕುರಿತು ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದಲ್ಲಿ ವಾದ ಪ್ರತಿವಾದ ಮಂಡನೆಯಾಗುತ್ತಿದೆ. ಚಾರ್ಜ್‌ಶೀಟ್ ಅಂಶಗಳ ಕುರಿತು ವಿಚಾರಣೆ ಆರಂಭಗೊಂಡಿದೆ. ಎಸ್ಐಟಿ ಪರ ಸರಕಾರಿ ವಕೀಲ ದಿವ್ಯರಾಜ್ ವಾದ ಮಂಡಿಸಿದ್ದಾರೆ.ಆರೋಪಿ ಚಿನ್ನಯ್ಯನ ಪರ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರು ಭಾಗಿಯಾಗಿದ್ದರು. ಈ ವಾದ ಮಂಡನೆಯಲ್ಲಿ ಚಿನ್ನಯ್ಯ ಪರ ವಕೀಲರು ಜಾಮೀನು ನೀಡಲು ಆಗ್ರಹಿಸಿದ್ದರು.