- Home
- Life
- Travel
- 2026ರಲ್ಲಿ ಟೂರ್ ಪ್ಲ್ಯಾನ್ ಮಾಡ್ತಿದ್ದೀರಾ? ರಜೆಗಳ ಫುಲ್ ಡಿಟೇಲ್ಸ್ ನಿಮಗಾಗಿ- ತಿಂಗಳು ಆಯ್ಕೆ ಮಾಡಿ, ಪ್ಲ್ಯಾನ್ ಮಾಡಿ
2026ರಲ್ಲಿ ಟೂರ್ ಪ್ಲ್ಯಾನ್ ಮಾಡ್ತಿದ್ದೀರಾ? ರಜೆಗಳ ಫುಲ್ ಡಿಟೇಲ್ಸ್ ನಿಮಗಾಗಿ- ತಿಂಗಳು ಆಯ್ಕೆ ಮಾಡಿ, ಪ್ಲ್ಯಾನ್ ಮಾಡಿ
2026ರ ಕ್ಯಾಲೆಂಡರ್ ಇಲ್ಲಿದೆ, ಇದು ಉದ್ಯೋಗಸ್ಥರಿಗೆ ರಜೆಗಳನ್ನು ಯೋಜಿಸಲು ಸಹಾಯ ಮಾಡುತ್ತದೆ. ಶನಿವಾರ-ಭಾನುವಾರದ ಜೊತೆಗೆ ಒಂದೆರಡು ದಿನ ರಜೆ ತೆಗೆದುಕೊಂಡು ಹೇಗೆ ದೀರ್ಘ ಪ್ರವಾಸ ಅಥವಾ ಹತ್ತಿರದ ಟ್ರಿಪ್‌ಗಳನ್ನು ಯೋಜಿಸಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

2026ಕ್ಕೆ ದಿನ ಗಣನೆ
ಇನ್ನೇನು ಕೆಲವೇ ದಿನಗಳಲ್ಲಿ 2026 ಕಾಲಿಡಲಿದೆ. ಇದಾಗಲೇ ಹಲವರು ಅದರಲ್ಲಿಯೂ ಹೆಚ್ಚಾಗಿ ಉದ್ಯೋಗಸ್ಥರು ಮುಂದಿನ ವರ್ಷದ ಕ್ಯಾಲೆಂಡರ್ ತೆಗೆದು ರಜೆಯ ಲೆಕ್ಕಾಚಾರ ಹಾಕಲು ಶುರು ಮಾಡಿಕೊಂಡಿದ್ದಾರೆ. ಯಾವಾಗ ರಜೆ ಸಿಗುತ್ತೆ, ಎಲ್ಲಿಗೆ ಹೋಗಬೇಕು ಎನ್ನುವ ಪ್ಲ್ಯಾನ್ ಎಲ್ಲಾ ಫಿಕ್ಸ್ ಮಾಡುವ ಟೈಮ್ ಇದು. ಸುದೀರ್ಘ ರಜೆ ಇದ್ದ ಸಮಯದಲ್ಲಿ, ಎಲ್ಲಾ ಕಡೆ ರಶ್ ಇರುವ ಕಾರಣ, ಆರೇಳು ತಿಂಗಳು ಮೊದಲೇ ಬುಕ್ ಮಾಡಿಕೊಳ್ಳಬೇಕಾಗುತ್ತದೆ. ಇನ್ನು 2-3 ದಿನಗಳು ರಜೆ ಇದ್ದಲ್ಲಿ ಹತ್ತಿರದಲ್ಲೇ ಎಲ್ಲಾದರೂ ಟ್ರಿಪ್ ಹೋಗಿ ಬರುವ ಪ್ಲ್ಯಾನ್ ಮಾಡುವವರೂ ಇದ್ದಾರೆ. ಹಾಗಿದ್ದರೆ ಅಂಥವರಿಗಾಗಿ ಇಲ್ಲೊಂದು ಕ್ಯಾಲೆಂಡರ್ ಇದೆ.
ರಜೆಗಳ ಮಾಹಿತಿ
ಈ ಕ್ಯಾಲೆಂಡರ್ನಲ್ಲಿ ನಿಮಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಜನವರಿಯಿಂದ ಹಿಡಿದು ಡಿಸೆಂಬರ್ವರೆಗೆ ನೀವು ಯಾವುದಾದರೂ ಒಂದು ತಿಂಗಳೊ ಅಥವಾ ಪ್ರತಿ ತಿಂಗಳೋ ಹತ್ತಿರದ ಊರುಗಳಿಗೆ ಪ್ಲ್ಯಾನ್ ಮಾಡಿಕೊಳ್ಳಬಹುದು. ಶನಿವಾರ, ಭಾನುವಾರಗಳಂದು ಕಚೇರಿಗೆ ರಜೆ ಇರುವವರು ನಡುವೆ ಒಂದೋ- ಎರಡೋ ದಿನಗಳು ರಜೆ ಹಾಕಿದರೆ ಹೇಗೆಲ್ಲಾ ನೀವು ಪ್ಲ್ಯಾನ್ ಮಾಡಿಕೊಳ್ಳಬಹುದು, ಇಲ್ಲವೇ ಬಹು ದೂರದ ಟೂರ್ಗೂ ಯೋಜನೆ ಹೇಗೆ ರೂಪಿಸಬೇಕು ಎನ್ನುವುದನ್ನು ಈ ಕ್ಯಾಲೆಂಡರ್ ನಿಮಗೆ ವಿವರಿಸುತ್ತದೆ.
ಜನವರಿ 2026
ಜನವರಿ 1: ಹೊಸ ವರ್ಷ
ಜನವರಿ 2: ರಜೆ ತೆಗೆದುಕೊಳ್ಳಿ
ಜನವರಿ 3: ಶನಿವಾರ
ಜನವರಿ 4: ಭಾನುವಾರ
------------
ಜನವರಿ 14: ಮಕರ ಸಂಕ್ರಾಂತಿ
ಜನವರಿ 15: ರಜೆ ತೆಗೆದುಕೊಳ್ಳಿ
ಜನವರಿ 16: ರಜೆ ತೆಗೆದುಕೊಳ್ಳಿ
ಜನವರಿ 17: ಶನಿವಾರ
ಜನವರಿ 18: ಭಾನುವಾರ
------------
ಜನವರಿ 24: ಶನಿವಾರ
ಜನವರಿ 25: ಭಾನುವಾರ
ಜನವರಿ 26: ಗಣರಾಜ್ಯೋತ್ಸವ
ಮಾರ್ಚ್ 2026
ಮಾರ್ಚ್ 4: ಹೋಳಿ
ಮಾರ್ಚ್ 5: ರಜೆ ತೆಗೆದುಕೊಳ್ಳಿ
ಮಾರ್ಚ್ 6: ರಜೆ ತೆಗೆದುಕೊಳ್ಳಿ
ಮಾರ್ಚ್ 7: ಶನಿವಾರ
ಮಾರ್ಚ್ 8: ಭಾನುವಾರ
-----
ಮಾರ್ಚ್ 19: ಯುಗಾದಿ
ಮಾರ್ಚ್ 20: ರಜೆ ತೆಗೆದುಕೊಳ್ಳಿ
ಮಾರ್ಚ್ 21: ಶನಿವಾರ
ಮಾರ್ಚ್ 22: ಭಾನುವಾರ
ಏಪ್ರಿಲ್ 2026
ಏಪ್ರಿಲ್ 3: ಗುಡ್ ಫ್ರೈಡೇ
ಏಪ್ರಿಲ್ 4: ಶನಿವಾರ
ಏಪ್ರಿಲ್ 5: ಭಾನುವಾರ
ಮೇ 2026
ಮೇ 1: ಕಾರ್ಮಿಕರ ದಿನ
ಮೇ 2: ಶನಿವಾರ
ಮೇ 3: ಭಾನುವಾರ
ಜೂನ್ 2026
ಜೂನ್ 26: ಮೊಹರಂ
ಜೂನ್ 27: ಶನಿವಾರ
ಜೂನ್ 28: ಭಾನುವಾರ
ಸೆಪ್ಟೆಂಬರ್ 2026
ಸೆಪ್ಟೆಂಬರ್ 12: ಶನಿವಾರ
ಸೆಪ್ಟೆಂಬರ್ 13: ಭಾನುವಾರ
ಸೆಪ್ಟೆಂಬರ್ 14: ಗಣೇಶ ಚತುರ್ಥಿ
ಅಕ್ಟೋಬರ್ 2026
ಅಕ್ಟೋಬರ್ 2: ಗಾಂಧಿ ಜಯಂತಿ
ಅಕ್ಟೋಬರ್ 3: ಶನಿವಾರ
ಅಕ್ಟೋಬರ್ 4: ಭಾನುವಾರ
---
ಅಕ್ಟೋಬರ್ 17: ಶನಿವಾರ
ಅಕ್ಟೋಬರ್ 18: ಭಾನುವಾರ
ಅಕ್ಟೋಬರ್ 19: ರಜೆ ತೆಗೆದುಕೊಳ್ಳಿ
ಅಕ್ಟೋಬರ್ 20: ದಸರಾ
ಡಿಸೆಂಬರ್ 2026
ಡಿಸೆಂಬರ್ 25: ಕ್ರಿಸ್ಮಸ್
ಡಿಸೆಂಬರ್ 26: ಶನಿವಾರ
ಡಿಸೆಂಬರ್ 27: ಭಾನುವಾರ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

