ತಡ ರಾತ್ರಿ ಕೆಸಿ ವೇಣುಗೋಪಾಲ್ ಭೇಟಿಗೆ ಮುಂದಾದ ಡಿಕೆಶಿ, ಕುತೂಹಲ ಮೂಡಿಸಿದ ಕ್ಷಿಪ್ರ ನಡೆ , ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಕೆಸಿ ವೇಣುಗೋಪಾಲ್ ಭೇಟಿಯಾಗಿ ಅಧಿಕಾರ ಹಸ್ತಾಂತರ ಕುರಿತು ಮಾತುಕತೆ ನಡೆಸಲ ಮುಂದಾಗಿದ್ದಾರೆ.

ಬೆಂಗಳೂರು (ನ.24) ಕರ್ನಾಟಕದಲ್ಲಿ ಕಾಂಗ್ರಸ್ ರಾಜಕಾರಣ ರಂಗೇರಿದೆ. ಮುಖ್ಯಮಂತ್ರಿ ಬದಲಾವಣೆ, ಅಧಿಕಾರ ಹಸ್ತಾಂತರ ವಿಚಾರದಲ್ಲಿ ಕಳೆದ ಕೆಲ ದಿನಗಳಿಂದ ಜಟಾಪಟಿಗಳು ನಡೆಯುತ್ತಿದೆ. ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಬಹುತೇಕ ನಾಯಕರು ಭೇಟಿಯಾಗಿ ಇದೇ ವಿಚಾರ ಚರ್ಚಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಬಳಿ ಸ್ಪಷ್ಟತೆ ಬಯಸಿದ್ದ ಡಿಕೆ ಶಿವಕುಮಾರ್ ಇದೀಗ ಇಂದು ತಡ ರಾತ್ರಿ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭೇಟಿಯಾಗಲು ಮುಂದಾಗಿದ್ದಾರೆ. ಬೆಂಗಳೂರಿಗೆ ಆಗಮಿಸುತ್ತಿರುವ ವೇಣುಗೋಪಾಲ್ ಭೇಟಿಯಾಗಿ ಕ್ಲಾರಿಟಿ ಪಡೆಯಲು ಹಾಗೂ ತಮ್ಮ ಸ್ಪಷ್ಟ ನಿಲುವ ಹೈಕಮಾಂಡ್‌ಗೆ ತಿಳಿಸಲು ಮುಂದಾಗಿದ್ದಾರೆ.

ವಿಮಾನ ನಿಲ್ದಾಣದಲ್ಲೇ ವೇಣುಗೋಪಾಲ್ ಭೇಟಿ?

ದೆಹಲಿಯಿಂದ ಬೆಂಗಳೂರಿಗ ಆಗಮಿಸುತ್ತಿರುವ ಕೆಸಿ ವೇಣುಗೋಪಾಲ್ ರಾತ್ರಿ 11ರ ಸುಮಾರಿಗೆ ಕೇಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ವಿಮಾನ ನಿಲ್ದಾಣದಿಂದ ಕೆಸಿ ವೇಣುಗೋಪಾಲ್ ತಾಜ್ ಹೊಟೇಲ್ ಆಗಮಿಸಿ ತಂಗಲಿದ್ದಾರೆ. ನಾಳೆ ಬೆಳಗ್ಗೆ 7 ಗಂಟೆಗೆ ಕೊಚ್ಚಿಗೆ ಪ್ರಯಾಣ ಬೆಳೆಸಲಿದ್ದಾರೆ. ಹೀಗಾಗಿ ಪ್ರತ್ಯೇಕವಾಗಿ ಮಾತನಾಡಲು ಕೆಸಿ ವೇಣುಗೋಪಾಲ್‌ಗೆ ಸಮಯವಿಲ್ಲ. ಇದೇ ಕಾರಣದಿಂದ ವಿಮಾನ ನಿಲ್ದಾಣಕ್ಕೆ ತೆರಳಿ ಕೆಸಿ ವೇಣುಗೋಪಾಲ್ ಬರಮಾಡಿಕೊಂಡು ಮಾತುಕತೆ ನಡೆಸೆಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ.

ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ಪಷ್ಟವಾಗಿ ತಮ್ಮ ನಿರ್ಧಾರವನ್ನು ಡಿಕೆ ಸಹದೋರರು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದ್ರ ಬೆನ್ನಲ್ಲೇ ಕುತೂಹಲ ಮೂಡಿಸಿದ ಡಿಕೆಶಿ ಕೆ.ಸಿ.ವೇಣುಗೋಪಾಲ್ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಹೈಕಮಾಂಡ್‌ಗೆ ಅಧಿಕಾರ ಬದಲಾವಣೆ ಹಾಗೂ ತಮ್ಮ ನಿರ್ಧಾರಗಳ ಕುರಿತು ಸ್ಪಷ್ಟ ಸೂಚನೆ ನೀಡುವ ಸಾಧ್ಯತೆ ಇದೆ.

ಡಿಕೆಶಿ ಪರ ಬ್ಯಾಟಿಂಗ್

ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಲು ತೆರಳಿರುವ ಏಳು ಜನರ ತಂಡ ಮುಂದಾಗಿದೆ. ಶಾಸಕರಾದ ಬಾಲಕೃಷ್ಣ, ಬಸವರಾಜ್ ಶಿವಗಂಗಾ, ಮಹೇಂದ್ರ ತಮ್ಮಣ್ಣನವರ್, ಬಾಬಾ ಸಾಹೇಬ್ ಪಾಟೀಲ್, ಉದಯ್ ಕದಲೂರು, ಇಕ್ಬಾಲ್ ಹುಸೇನ್, ಶಾಸಕಿ ನಯನ ಮೋಟಮ್ಮ ಡಿಕೆಶಿ ಪರ ಬ್ಯಾಟಿಂಗ್ ಮಾಡಲು ಸಜ್ಜಾಗಿದ್ದಾರೆ.

ಖರ್ಗೆ ಭೇಟಿಯಾಗಿ ಮಾತುಕತೆ ನಡೆಸಿದ್ದ ಸಿಎಂ

ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರಿನ ಸದಾವಶಿವನಗರದ ನಿವಾಸದಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸುಮಾರು 1 ಗಂಟೆಗಳ ಕಾಲ ಮಾತುಕತೆ ನಡೆಸಿದೆ. ಈ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿರುವ ಮಾಹಿತಿಯೂ ಬಯಲಾಗಿತ್ತು. ಪಕ್ಷದ ಚೌಕಟ್ಟಿನೊಳಗೆ ಮಾತನಾಡುವುದು ಬಿಟ್ಟು, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಅನಗತ್ಯ ಗೊಂದಲ ಸೃಷ್ಟಿಸುವ ಪ್ರಯತ್ನಗಳು ಉತ್ತಮವಲ್ಲ ಎಂದು ಖರ್ಗೆ ಅಭಿಪ್ರಾಯಪಟ್ಟಿದ್ದರು ಎಂದು ವರದಿಯಾಗಿದೆ.