- Home
- Entertainment
- TV Talk
- Bigg Bossನಲ್ಲಿ ಡಾಗ್ ಸತೀಶ್ ಚಡ್ಡಿಯ ಬಿಸಿಬಿಸಿ ಚರ್ಚೆ: ಚಡ್ಡಿ ಕಳ್ಳರನ್ನು ಕಂಡುಹಿಡಿದ್ರಾ ಕಿಚ್ಚ ಸುದೀಪ್?
Bigg Bossನಲ್ಲಿ ಡಾಗ್ ಸತೀಶ್ ಚಡ್ಡಿಯ ಬಿಸಿಬಿಸಿ ಚರ್ಚೆ: ಚಡ್ಡಿ ಕಳ್ಳರನ್ನು ಕಂಡುಹಿಡಿದ್ರಾ ಕಿಚ್ಚ ಸುದೀಪ್?
ಬಿಗ್ಬಾಸ್ನಿಂದ ಹೊರಬಂದ ಡಾಗ್ ಸತೀಶ್, ಸ್ಪರ್ಧಿ ಸ್ಪಂದನಾ ತನ್ನ ದುಬಾರಿ ಶರ್ಟ್ ಹಾಳು ಮಾಡಿದ್ದಾರೆ ಮತ್ತು ತನ್ನ ಚಡ್ಡಿಗಳು ಕಳೆದುಹೋಗಿವೆ ಎಂದು ಆರೋಪಿಸಿದ್ದರು. ಈ ವಿಷಯವನ್ನು ನಿರೂಪಕ ಸುದೀಪ್ ಅವರು ವಾರದ ಕಂತಿನಲ್ಲಿ , ಮನೆಯ ಸದಸ್ಯರನ್ನು ಪ್ರಶ್ನಿಸಿದಾಗ ತಮಾಷೆಯ ಸನ್ನಿವೇಶ ಸೃಷ್ಟಿಯಾಯಿತು.

ಬಿಗ್ಬಾಸ್ ಸೆಲೆಬ್ರಿಟಿಗಳು
ಬಿಗ್ಬಾಸ್ (Bigg Boss) ನಿಂದ ಹೊರಕ್ಕೆ ಬರುತ್ತಿದ್ದಂತೆಯೇ ಸ್ಪರ್ಧಿಗಳು ಕೆಲ ದಿನಗಳ ಮಟ್ಟಿಗೆ ಸೆಲೆಬ್ರಿಟಿಗಳಾಗುತ್ತಾರೆ. ಎಲ್ಲಾ ಮಾಧ್ಯಮಗಳಲ್ಲಿ ಅವರೇ ಹೈಲೈಟ್. ಈ ಸಂದರ್ಭದಲ್ಲಿ ಬಿಗ್ಬಾಸ್ ಮನೆಯೊಳಗಿನ ಕೆಲವು ಸಿಹಿ ಕಹಿ ಘಟನೆಗಳನ್ನು ಮೀಡಿಯಾಗಳ ಮುಂದೆ ಶೇರ್ ಮಾಡಿಕೊಳ್ಳುವುದು ಸಾಮಾನ್ಯ. ಅಂಥವರಲ್ಲಿ ಒಬ್ಬರು ಡಾಗ್ ಸತೀಶ್.
ಡಾಗ್ ಸತೀಶ್ ಹವಾ
ನೂರಾರು ಕೋಟಿ ರೂಪಾಯಿಗಳ ನಾಯಿಗಳ ಒಡೆದ ಎಂದೇ ಫೇಮಸ್ ಆಗಿರೋ ಡಾಗ್ ಸತೀಶ್ (Bigg Boss Dog Sathish) ಅವರಿಗೆ ತಮ್ಮ ಶ್ರೀಮಂತಿಕೆ ಮತ್ತು ಸೌಂದರ್ಯದ ಮೇಲೆ ಎಷ್ಟು ಕಾನ್ಫೆಡೆನ್ಸ್ ಇದೆಯೋ, ಅದೇ ರೀತಿ ತಮ್ಮ ಮಾತಿನ ಮೇಲೂ ಇದೆ. ಇದಾಗಲೇ ಹಲವಾರು ಮಾಧ್ಯಮಗಳಲ್ಲಿ ಅವರು ಬಿಗ್ಬಾಸ್ ಬಗ್ಗೆ ಮಾತನಾಡುತ್ತಲೇ ಕೆಲವು ನೆಗೆಟಿವ್ ಕಮೆಂಟ್ಸ್ ಕೂಡ ಮಾಡಿದ್ದಿದೆ. ಅದರಲ್ಲಿ ಒಂದು ಅವರ ಬಟ್ಟೆಗಳ ಬಗ್ಗೆ.
ಡಾಗ್ ಸತೀಶ್ ಆರೋಪ
ಡಾಗ್ ಸತೀಶ್ ಬಿಗ್ ಬಾಸ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಸ್ಪಂದನಾ ಅವರಿಗೆ ಒಂದು ದುಬಾರಿ ಶರ್ಟ್ ಕೊಟ್ಟಿದ್ದರಂತೆ. ಆ ಶರ್ಟ್ ಸ್ಪಂದನಾ ಹಾಳು ಮಾಡಿದ್ದಾರೆ ಎಂದು ಮಾಧ್ಯಮಗಳಿಗೆ ಡಾಗ್ ಸತೀಶ್ ಹೇಳಿಕೆ ಕೊಡುತ್ತಿರುವುದನ್ನೇ ಸುದೀಪ್ ಸ್ಪರ್ಧಿಗಳಿಗೆ ಪ್ರಶ್ನಿಸಿದ್ದಾರೆ! ಮಾತ್ರವಲ್ಲದೇ ಅವರ ದುಬಾರಿ ಚಡ್ಡಿಗಳನ್ನೂ ಯಾರೋ ತೆಗೆದುಕೊಂಡಿದ್ದಾರೆ ಎಂದೂ ಸತೀಶ್ ಆರೋಪಿಸುತ್ತಿದ್ದಾರೆ. ಇದರ ಬಗ್ಗೆಯೂ ಸುದೀಪ್ ಎಲ್ಲಾ ಸ್ಪರ್ಧಿಗಳನ್ನು ವಿಚಾರಿಸಿದ್ದಾರೆ!
ಷರ್ಟ್, ಚಡ್ಡಿ ಕದ್ದರಂತೆ!
ಸುದೀಪ್ ಅವರು ತಮ್ಮದೇ ಆದ ಧಾಟಿಯಲ್ಲಿ ಈ ವಿಷಯವನ್ನು ಎತ್ತಿ, ಮಾಜಿ ಸ್ಪರ್ಧಿ ಡಾಗ್ ಸತೀಶ್ ಅವರ ದುಬಾರಿ ಶರ್ಟ್ ತೆಗೆದುಕೊಂಡು, ಸ್ಪಂದನಾ ಹಾಳು ಮಾಡಿದ್ದಾರಂತೆ. ಇರೋ ಬರೋ ಚಾನೆಲ್‌ನಲ್ಲಿ ಅವರು ಇದನ್ನೇ ಹೇಳುತ್ತಿದ್ದಾರೆ. ನಿಜನಾ ಎಂದು ಪ್ರಶ್ನಿಸಿದ್ದಾರೆ ಸುದೀಪ್. ಅಷ್ಟೇ ಅಲ್ಲದೇ ಅವರದ್ದು ನಾಲ್ಕು ಚಡ್ಡಿ ಕೂಡ ಕೊಟ್ಟಿಲ್ವಂತೆ. ಅವರ ಬ್ರಶ್ ಕೂಡ ಕೊಟ್ಟಿಲ್ವಂತೆ. ಇರೋ ಬರೋ ಚಾನೆಲ್‌ನಲ್ಲಿ ಹಿಡ್ಕೊಂಡು ಜಡೀತಾ ಇದ್ದಾರೆ ಎಂದಿದ್ದಾರೆ.
ಸ್ಪಂದನಾಗೆ ಶಾಕ್
ಈ ಬಗ್ಗೆ ಸ್ಪಂದನಾ ಅವರನ್ನು ಸುದೀಪ್ ಪ್ರಶ್ನಿಸಿದಾಗ, ಸ್ಪಂದನಾ ಶಾಕ್ನಿಂದ ಇಲ್ಲ, "ವೀಕೆಂಡ್ ಎಪಿಸೋಡ್‌ನಲ್ಲಿ ಕೊಟ್ಟಿದ್ದರು. ಅದಾದ ಮೇಲೆ ಆ ಶರ್ಟ್ ಅನ್ನು ಅವರು ವಾಪಸ್ ತೆಗೆದುಕೊಂಡು ಬಿಟ್ಟರು. ಆ ಶರ್ಟ್ ಮನೆಯಲ್ಲಿ ಎಲ್ಲೂ ಇಲ್ಲ" ಎಂದರು.
ಎಲ್ಲರನ್ನೂ ಪ್ರಶ್ನಿಸಿದ ಕಿಚ್ಚ
ಕೊನೆಗೆ ಸುದೀಪ್ ಡಾಗ್ ಸತೀಶ್ ಚಡ್ಡಿ ಬಗ್ಗೆನೂ ಪ್ರಸ್ತಾಪಿಸಿದ್ದಾರೆ. ಜಾಹ್ನವಿಯವರಿಗೆ ಹಾಗೂ ಅಶ್ವಿನಿ ಗೌಡ ಅವರನ್ನು ಉದ್ದೇಶಿಸಿ ಬಟ್ಟೆ ಪ್ರಶ್ನೆ ಕೇಳಿದ್ದಾರೆ, ಧನುಷ್ ಬಳಿ ಚಡ್ಡಿಯ ಪ್ರಶ್ನೆಯನ್ನೂ ಕೇಳಿ ತಮಾಷೆ ಮಾಡಿದ್ದಾರೆ. ಅದಕ್ಕೆ ಧನುಷ್ "ನಾನು ಅವರನ್ನು ಮಾತಾಡಿಸುತ್ತಲೇ ಇರಲಿಲ್ಲ" ಎಂದಿದ್ದಾರೆ. ಒಟ್ಟಿನಲ್ಲಿ ಸಂಡೆ ವಿಶೇಷತೆಯಲ್ಲಿ ಡಾಗ್ ಸತೀಶ್ ಚಡ್ಡಿ ಸಕತ್ ಸೌಂಡ್ ಮಾಡಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

