ಪೋಷಕರಿಲ್ಲದ ವೇಳೆ ಮನೆಗೆ ತೆರಳಿ ವಿದ್ಯಾರ್ಥಿನಿ ಮೇಲೆ ಲೈ0ಗಿಕ ದೌರ್ಜನ್ಯ, ದೈಹಿಕ ಶಿಕ್ಷಕ ಅರೆಸ್ಟ್, ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿ, ಆಮಿಷ ಒಡ್ಡಿ, ಜೀವ ಬೆದರಿಕೆ ಹಾಕಿ ತನ್ನ ಕಾರ್ಯ ಸಾಧಿಸುತ್ತಿದ್ದ.
ಉತ್ತರಕನ್ನಡ (ನ.24) ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಮೊದಲೇ ಸ್ಕೆಚ್ ಹಾಕುತ್ತಿದ್ದ. ವಿದ್ಯಾರ್ಥಿನಿಯನ್ನು ಬಲೆಗೆ ಬೀಳಿಸಲು ಹಲವು ಆಮಿಷ, ಜೀವ ಬೆದರಿಕೆ ಒಡ್ಡುತ್ತಿದ್ದ. ಬಳಿಕ ಪೋಷಕರಿಲ್ಲದ ವೇಳೆ ವಿದ್ಯಾರ್ಥಿನಿಯ ಮನೆಗೆ ತೆರಳಿ ಲೈ0ಗಿಕ ದೌರ್ಜನ್ಯ ನಡೆಸುತ್ತಿದ್ದ ದೈಹಿಕ ಶಿಕ್ಷಕನನ್ನು ಅರೆಸ್ಟ್ ಮಾಡಲಾಗಿದೆ. ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಘಟನೆ ನಡದಿದೆ. ಈ ವಿಚಾರ ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಜೀವ ಬೆದರಿಕ ಹಾಕಿ ನಿರಂತರವಾಗಿ ಲೈ0ಗಿಕ ದೌರ್ಜನ್ಯ ಎಸಗಿದ್ದಾನೆ.
ದೈಹಿಕ ಶಿಕ್ಷಕ ಕಿರಣ ಟೋಪೋಜಿ ಬಂಧಿತ ಆರೋಪಿ
ಮುಂಡಗೋಡದ ಪ್ರತಿಷ್ಠಿತ ಖಾಸಗಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಕಿರಣ ಟೋಪೋಜಿ ಬಂಧಿತ ಆರೋಪಿ. ಈತನ ವಿರುದ್ದ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಘಟನೆ ಸಂಬಂಧಿಸಿ ಅಪ್ರಾಪ್ತೆ ಕುಟುಂಬಸ್ಥರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಕಿರಣ ಟೋಪೋಜಿಯನ್ನು ಅರೆಸ್ಟ್ ಮಾಡಿದ್ದಾರೆ.ಫೋಕ್ಸೋ ಪ್ರಕರಣ ದಾಖಲಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದೈಹಿಕ ಶಿಕ್ಷಕ ಕಿರಣ ವಿರುದ್ಧ ಹಲವರ ದೂರು
ದೈಹಿಕ ಶಿಕ್ಷಕ ಕಿರಣ ಟೋಪೊಜಿ ಪಟ್ಟಣದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಅಪ್ರಾಪ್ತ ವಿದ್ಯಾರ್ಥಿನಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ತೆರಳಿ ಆಗಾಗ ಲೈ0ಗಿಕ ದೌರ್ಜನ್ಯ ಎಸಗುತ್ತಿದ್ದ. ಸ್ಥಳೀಯರು ಈ ದೈಹಿಕ ಶಿಕ್ಷಕನ ವಿರುದ್ದ ಹಲವು ದೂರು ನೀಡಿದ್ದಾರೆ. ವಿದ್ಯಾರ್ಥಿಗಳು ಭಯದಿಂದ ಶಿಕ್ಷನ ವಿರುದ್ಧ ಮೌನವಹಿಸಿದ್ದರು.ಇದೀಗ ಒಂದೊಂದೆ ಪ್ರಕರಣಗಳು ಹೊರಬರುತ್ತಿದೆ.
ಕಳೆದ ವರ್ಷದಿಂದ ಮತ್ತೊಂದು ಪ್ರತಿಷ್ಠಿತ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ದೈಹಿಕ ಶಿಕ್ಷಕ, ಅದೇ ಶಾಲೆಯ ವಿದ್ಯಾರ್ಥಿನಿಯ ಮೇಲೆ ಲೈ0ಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿಯ ಕೃತ್ಯದಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೂ ಮೊದಲು ಬೇರೊಂದು ಖಾಸಗಿ ಶಾಲೆಯಲ್ಲಿ ಕರ್ತವ್ಯದಲ್ಲಿದ್ದಾಗ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಇತರ ವರ್ತನೆ ಹಿನ್ನೆಲೆ ದೂರು ಬಂದದ್ದರಿಂದ ಸಂಸ್ಥೆಯವರು ಕೆಲಸದಿಂದ ತೆಗೆದು ಹಾಕಿದ್ದರು.


