Canara Bank Free computer education training: ಕೆನರಾ ಬ್ಯಾಂಕ್ ಸಂಸ್ಥೆಯು ಬೆಂಗಳೂರಿನಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿಯನ್ನು ಆಯೋಜಿಸಿದೆ. 

ಬೆಂಗಳೂರು: ಕೆನರಾ ಬ್ಯಾಂಕ್ ಸಂಸ್ಥೆ ನಿರುದ್ಯೋಗಿ ಯುವಕ-ಯುವತಿಯರಿಗೆ "ಕಂಪ್ಯೂಟರ್ ಆಫಿಸ್ ಅಡ್ಮಿನಿಷ್ಟ್ರೇಷನ್, ಟ್ಯಾಲಿ, ಡೆಸ್ಕ್‌ಟಾಪ್, ಪಬ್ಲಿಶಿಂಗ್ ಹಾಗೂ ಹಾರ್ಡ್‌ವೇರ್ ಮತ್ತು ನೆಟ್‌ವರ್ಕ್ ಅಡ್ಮಿನಿಷ್ಟ್ರೇಷನ್" ಕುರಿತ ವಿಷಯಗಳ ತರಬೇತಿಯನ್ನು ನೀಡುತ್ತಿದೆ. ಕಂಪ್ಯೂಟರ್‌ ಮೂಲಭೂತ ಅಂಶಗಳು, ಕಂಪ್ಯೂಟರ್ ಅಸೆಂಬ್ಲಿಂಗ್ ಮತ್ತು ಟ್ರಬಲ್ ಶೂಟಿಂಗ್, ಕೋರೆಲ್ ಡ್ರಾ, ಫೋಟೋಶಾಪ್ ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ

ಅರ್ಹತಾ ಪರೀಕ್ಷೆ ಮತ್ತು ಸಂದರ್ಶನದ ಸಮಯ

ಸದರೀ ತರಬೇತಿಗೆ ಸೇರಲು ಇಚ್ಛಿಸುವವರು ನೇರ ಸಂದರ್ಶನಕ್ಕೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯಲ್ಲಿ ಹಾಜರಾಗಬೇಕು. ಪ್ರತಿದಿನ ಬೆಳಗ್ಗೆ, 11 ಗಂಟೆಗೆ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನಗಳು ನಡೆಯುತ್ತದೆ. ಅರ್ಜಿ ಫಾರಂಗಳನ್ನು ಪರೀಕ್ಷೆಗೆ ಹಾಜರಾಗುವ ಸಂದರ್ಭದಲ್ಲಿ ಪಡೆಯಬಹುದಾಗಿದೆ. ಆರ್ಥಿಕವಾಗಿ ಬಡವರಾದ ಸಾವಿರಾರು ಅಭ್ಯರ್ಥಿಗಳು/ವಿದ್ಯಾರ್ಥಿಗಳು ಇದರಿಂದ ಹೆಚ್ಚಿನ ಪ್ರಯೋಜನ ಪಡೆದುಕೊಂಡಿದ್ದಾರೆ.

ತರಬೇತಿ ಪಡೆಯಲು ಬೇಕಿರುವ ಅರ್ಹತೆ

  • ಕನಿಷ್ಠ SSLC ಪಾಸ್ ಆಗಿರಬೇಕು
  • PUC, ITI, Diploma, ಡಿಗ್ರಿ ಪಡೆದವರಿಗೆ ಮೊದಲ ಆದ್ಯತೆ
  • ವಯೋಮಿತಿ: ಕನಿಷ್ಠ 18, ಗರಿಷ್ಠ 35

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕಾದ ವಿಳಾಸ

ನಿರ್ದೇಶಕರು

ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ಸಂಸ್ಥೆ

3ನೇ ಮಹಡಿ, ಚಿತ್ರಾಪುರ ಭವನ

8ನೇ ಮುಖ್ಯರಸ್ತೆ, 15ನೇ ಅಡ್ಡರಸ್ತೆ, ಮಲ್ಲೇಶ್ವರಂ

ಬೆಂಗಳೂರು: 560055

ಮೊಬೈಲ್ ಸಂಖ್ಯೆಗಳು ಈ ರೀತಿಯಾಗಿವೆ. 9448538107 / 080 23440036 / 23463580