- Home
- Entertainment
- TV Talk
- Bigg Boss Kannada ನಾಮಿನೇಷನ್‌ನಲ್ಲಿ ಹೊಸ ತಿರುವು; ಹೊಸ ಅಧ್ಯಾಯದಲ್ಲಿ ಒಂದ್ಕಡೆ ಗಿಲ್ಲಿ, ಮತ್ತೊಂದ್ಕಡೆ?
Bigg Boss Kannada ನಾಮಿನೇಷನ್‌ನಲ್ಲಿ ಹೊಸ ತಿರುವು; ಹೊಸ ಅಧ್ಯಾಯದಲ್ಲಿ ಒಂದ್ಕಡೆ ಗಿಲ್ಲಿ, ಮತ್ತೊಂದ್ಕಡೆ?
ಬಿಗ್‌ಬಾಸ್ ಮನೆಯಲ್ಲಿನ ನಾಮಿನೇಷನ್ ಪ್ರಕ್ರಿಯೆಯಲ್ಲಿ ಹೊಸ ತಿರುವು ಉಂಟಾಗಿದೆ. ತಮ್ಮ ವೃತ್ತಿಯ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಜಾನ್ವಿ ಮತ್ತು ರಕ್ಷಿತಾ ಶೆಟ್ಟಿ ಇಬ್ಬರೂ ಗಿಲ್ಲಿ ನಟನನ್ನು ನಾಮಿನೇಟ್ ಮಾಡಿದ್ದಾರೆ. ಈ ಘಟನೆಯು ಮನೆಯೊಳಗೆ ಹೊಸ ಸಂಘರ್ಷಕ್ಕೆ ಕಾರಣವಾಗಿದೆ.

ನಾಮಿನೇಷನ್ ಪ್ರಕ್ರಿಯೆ
ಇಂದು ಬೆಳಗ್ಗೆಯ ಪ್ರೋಮೋದಲ್ಲಿ ನಾಮಿನೇಷನ್ ಪ್ರಕ್ರಿಯೆ ತೋರಿಸಲಾಗಿತ್ತು. ಎರಡನೇ ಪ್ರೋಮೋ ಹೊರಬಂದಿದ್ದ, ವೀಕ್ಷಕರು ಬಿಗ್‌ಬಾಸ್ ಮನೆಯಲ್ಲಿ ಹೊಸ ಅಧ್ಯಾಯ ಶುರುವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ರಕ್ಷಿತಾ ಶೆಟ್ಟಿಯವರನ್ನು ಗಿಲ್ಲಿ ನಟ ತಮ್ಮ ವಂಶದ ಕುಡಿ ಎಂದು ಕರೆದುಕೊಂಡಿದ್ದರು. ಇದೀಗ ಇಬ್ಬರ ನಡುವೆಯೇ ಕಿಚ್ಚು ಹೊತ್ತಿಕೊಂಡಂತೆ ಕಾಣಿಸುತ್ತಿದೆ.
ಜಾನ್ವಿ ಮತ್ತು ರಕ್ಷಿತಾ ಶೆಟ್ಟಿ
ಈ ಬಾರಿ ನಾಮಿನೇಟ್ ಮಾಡಲು ಇಚ್ಛಿಸುವ ಸ್ಪರ್ಧಿಯ ಬಟ್ಟೆಯಲ್ಲಿನ ಕೊಳೆ ತೊಳೆಯುತ್ತಾ ಕಾರಣಗಳನ್ನು ನೀಡಬೇಕು. ಜಾನ್ವಿ ಮತ್ತು ರಕ್ಷಿತಾ ಶೆಟ್ಟಿ ಇಬ್ಬರು ಗಿಲ್ಲಿ ನಟ ಅವರನ್ನು ನಾಮಿನೇಟ್ ಮಾಡಿ ಒಂದೇ ಕಾರಣ ನೀಡಿದ್ದಾರೆ. ಜಾನ್ವಿ ಮತ್ತು ರಕ್ಷಿತಾ ನೀಡಿದ ಕಾರಣಗಳು ಏನು ಎಂದು ನೋಡೋಣ ಬನ್ನಿ.
ಸವಿರುಚಿ ನಿರೂಪಣೆ
ಗಿಲ್ಲಿ ಹೆಸರು ಹೇಳಿದ ಜಾನ್ವಿ, ಇವರಿಗೆ ನಿರೂಪಣೆ ಮಾಡಬೇಕಂತೆ. ಸವಿರುಚಿ ನಿರೂಪಣೆ ಇವರಿಗೆ ಸಣ್ಣ ಕಾರ್ಯಕ್ರಮವಂತೆ. ಇವರನ್ನು ನೇರವಾಗಿ ಅನುಬಂಧ ಅವಾರ್ಡ್ ಕಾರ್ಯಕ್ರಮದ ನಿರೂಪಕರನ್ನಾಗಿ ಮಾಡಿ ಎಂದು ಜಾನ್ವಿ ಹೇಳುತ್ತಾರೆ. ತಮ್ಮ ವೃತ್ತಿ ಬಗ್ಗೆ ಗಿಲ್ಲಿ ನಟ ಕೆಳಮಟ್ಟದಲ್ಲಿ ಮಾತನಾಡಿದ್ದಾರೆ ಎಂದು ಜಾನ್ವಿ ನೇರವಾಗಿಯೇ ಆರೋಪಿಸಿದ್ದಾರೆ.
ಹೇಗೆ ನಿಮ್ಮನ್ನು ನಂಬಲಿ ?
ಇನ್ನು ರಕ್ಷಿತಾ ಶೆಟ್ಟಿ ಸಹ ಇದೇ ಕಾರಣವನ್ನು ನೀಡಿದ್ದಾರೆ. ಯುಟ್ಯೂಬ್ ವ್ಲಾಗರ್ ಕೆಲಸ ಮಾಡಿಯೇ ಬಿಗ್‌ಬಾಸ್ ಮನೆಗೆ ಬಂದಿದ್ದೇವೆ. ನಮ್ಮ ಕೆಲಸವೇ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇವೆ. ಈ ಹಿಂದೆ ಅಶ್ವಿನಿ ಗೌಡ ಅವರು ಯುಟ್ಯೂಬ್‌ಗೆ ಮಾತನಾಡಿದ್ದಾಗ ನೀವೇ ಯಾವ ಕೆಲಸವೂ ಚಿಕ್ಕದು ಅಥವಾ ದೊಡ್ಡದು ಅಂತಿರಲ್ಲ ಎಂದು ಹೇಳಿದ್ದೀರಿ. ನಮ್ಮ ವೃತ್ತಿ ಬಗ್ಗೆಯೇ ಮಾತಾಡಿದ್ರೆ ನಾನು ಹೇಗೆ ನಿಮ್ಮನ್ನು ನಂಬಲಿ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ತಮ್ಮ ಖುಷಿಗೆ ಮೂರು ಕಾರಣಗಳನ್ನು ನೀಡಿದ ರಕ್ಷಿತಾ ಶೆಟ್ಟಿ
ವೀಕ್ಷಕರು ಹೇಳಿದ್ದೇನು?
ಈ ಪ್ರೋಮೋ ನೋಡಿದ ಬಿಗ್‌ಬಾಸ್ ವೀಕ್ಷಕರು, ಒಂದು ವೇಳೆ ಸ್ಪರ್ಧಿಗಳ ವೃತ್ತಿ ಬಗ್ಗೆ ಕೇವಲವಾಗಿ ಗಿಲ್ಲಿ ನಟ ಮಾತನಾಡಿದ್ರೆ ಖಂಡಿತ ತಪ್ಪಾಗುತ್ತದೆ. ಹಾಗಾಗಿ ಗಿಲ್ಲಿ ಹೇಳಿದ್ದೇನು ಎಂಬುದನ್ನು ನೋಡಲು ಕಾಯುತ್ತಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಂದೆಡೆ ಕೆಲವರು, ರಕ್ಷಿತಾ ಶೆಟ್ಟಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕ ನಂತರ ಅಹಂಕಾರ ಬಂದಿದೆ. ಅಶ್ವಿನಿ ಗೌಡ ಗ್ರೂಪ್‌ಗೆ ರಕ್ಷಿತಾ ಹೋದಂತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: BBK 12: ಸೀರಿಯಸ್ ಟೈಮ್‌ನಲ್ಲೂ ಗಿಲ್ಲಿ ವಿಚಿತ್ರ ವರ್ತನೆ; ಇತ್ತ ರಿಷಾ ಗೌಡ ಎಲಿಮಿನೇಷನ್‌ನಲ್ಲಿತ್ತು ಅಚ್ಚರಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

