08:59 PM (IST) May 23

ಕೇಂದ್ರಕ್ಕೆ ಬಂಪರ್‌ ಡಿವಿಡೆಂಡ್‌, ಆರ್‌ಬಿಐನಿಂದ 2.69 ಲಕ್ಷ ಕೋಟಿ ರೂಪಾಯಿ ಸ್ವೀಕರಿಸಲಿರುವ ಮೋದಿ ಸರ್ಕಾರ!

ಪರಿಷ್ಕೃತ ಬಂಡವಾಳ ಚೌಕಟ್ಟು ಮತ್ತು ಹೆಚ್ಚಿದ ಅಪಾಯದ ಬಫರ್ ಹಂಚಿಕೆಯ ನಂತರ, RBI, FY25 ಕ್ಕೆ ಸರ್ಕಾರಕ್ಕೆ ದಾಖಲೆಯ 2.69 ಲಕ್ಷ ಕೋಟಿ ರೂ. ಲಾಭಾಂಶವನ್ನು ವರ್ಗಾಯಿಸಲಿದೆ, ಇದು FY24 ಕ್ಕಿಂತ ಶೇಕಡಾ 27.4 ರಷ್ಟು ಹೆಚ್ಚಾಗಿದೆ.

 

Read Full Story
06:46 PM (IST) May 23

'ಬೆಂಗಳೂರಲ್ಲಿ ಇಂಗ್ಲೀಷ್‌ ಕಡ್ಡಾಯ ಮಾಡಿ..' ಪಾರ್ಕಿಂಗ್‌ ನಿರಾಕರಿಸಿದಕ್ಕೆ ಹಿಂದಿವಾಲಾ ಗೂಗಲ್‌ ಟೆಕ್ಕಿ ಬೇಸರ!

ಬೆಂಗಳೂರಿನಲ್ಲಿ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಪಾರ್ಕಿಂಗ್ ನಿರಾಕರಿಸಲಾಗಿದೆ ಎಂದು ಟೆಕ್ಕಿ ಆರೋಪಿಸಿದ್ದಾರೆ. ಇದರಿಂದಾಗಿ ಇಂಗ್ಲಿಷ್ ಭಾಷೆಯನ್ನು ಭಾರತದಲ್ಲಿ ಕಡ್ಡಾಯಗೊಳಿಸಬೇಕೆಂದು ಅವರು ವಾದಿಸಿದ್ದಾರೆ. ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
Read Full Story
05:54 PM (IST) May 23

KCET 2025 ಫಲಿತಾಂಶ - ಮೇ 24 ರಂದು ಬಿಡುಗಡೆ, ಚೆಕ್‌ ಮಾಡೋದು ಹೇಗೆ?

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) KCET 2025 ರ ಫಲಿತಾಂಶವನ್ನು ಮೇ 24 ರಂದು ಬೆಳಿಗ್ಗೆ 11:30 ಕ್ಕೆ ಪ್ರಕಟಿಸಲಿದೆ. ಅಭ್ಯರ್ಥಿಗಳು kea.kar.nic.in ಅಥವಾ cetonline.karnataka.gov.in ನಲ್ಲಿ ಫಲಿತಾಂಶಗಳನ್ನು ಪರಿಶೀಲಿಸಬಹುದು.
Read Full Story
05:22 PM (IST) May 23

ಅಡ್ಡಿಯಾದ ಮಳೆ, ಹಿಂದೂ ಜೋಡಿ ಮದುವೆಯಾಗಲು ಮಂಟಪ ಬಿಟ್ಟು ಕೊಟ್ಟ ಮುಸ್ಲಿಂ ಜೋಡಿಗಳು!

ಪುಣೆಯಲ್ಲಿ ಮಳೆಯಿಂದಾಗಿ ಅಡಚಣೆಗೊಳಗಾದ ಹಿಂದೂ ಮದುವೆಯೊಂದಕ್ಕೆ ಮುಸ್ಲಿಂ ಕುಟುಂಬ ತಮ್ಮ ಮದುವೆ ಮಂಟಪವನ್ನು ಬಿಟ್ಟುಕೊಟ್ಟು ಮಾನವೀಯತೆ ಮೆರೆದಿದೆ. ಎರಡೂ ಕುಟುಂಬಗಳು ಒಟ್ಟಾಗಿ ಸಂಭ್ರಮಿಸಿದ್ದು, ಧರ್ಮಕ್ಕಿಂತ ಮಿಗಿಲಾದ ಮನುಷ್ಯತ್ವದ ಸಂದೇಶ ಸಾರಿದೆ.
Read Full Story
04:47 PM (IST) May 23

ಈಶಾನ್ಯ ಭಾರತಕ್ಕೆ ಅದಾನಿಯಿಂದ 50 ಸಾವಿರ ಕೋಟಿ ಕೊಡುಗೆ, ಅಂಬಾನಿ 75 ಸಾವಿರ ಕೋಟಿ ರೂ ಹೂಡಿಕೆ

ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದಾನಿ ಗ್ರೂಪ್ ಈಶಾನ್ಯ ಭಾರತದಲ್ಲಿ ₹1.25 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿವೆ. ರಿಲಯನ್ಸ್ ₹75,000 ಕೋಟಿ ಮತ್ತು ಅದಾನಿ ಗ್ರೂಪ್ ₹50,000 ಕೋಟಿ ಹೂಡಿಕೆ ಮಾಡಲಿವೆ.
Read Full Story
02:49 PM (IST) May 23

ಬೆಂಗಳೂರು 9 ತಿಂಗಳ ಮಗುವಿಗೆ ಕೋವಿಡ್; ಆಟವಾಡಿಸಲು ಬಂದ ಅಕ್ಕ-ಪಕ್ಕದ ಮನೆಯವರಿಂದ ಸೋಂಕು!

ಬೆಂಗಳೂರಿನಲ್ಲಿ 9 ತಿಂಗಳ ಮಗುವಿಗೆ ಕೋವಿಡ್-19 ಸೋಂಕು ತಗುಲಿದ್ದು, ವೈದ್ಯಲೋಕದಲ್ಲಿ ಆತಂಕ ಮೂಡಿಸಿದೆ. ಮಗುವಿನ ಪೋಷಕರಿಗೆ ಯಾವುದೇ ಲಕ್ಷಣಗಳಿಲ್ಲದ ಕಾರಣ, ಅಕ್ಕಪಕ್ಕದ ಮನೆಯವರಿಂದ ಸೋಂಕು ಹರಡಿರಬಹುದು ಎಂದು ಶಂಕಿಸಲಾಗಿದೆ. ಮಕ್ಕಳಲ್ಲಿ ಕೋವಿಡ್ ಅಪರೂಪವಾದರೂ, ಈ ಘಟನೆ ಎಚ್ಚರಿಕೆಯ ಗಂಟೆಯಾಗಿದೆ.

ಪೂರ್ತಿ ಓದಿ
02:04 PM (IST) May 23

ಕನ್ನಡ ಭಾಷೆ ಆತಂಕದಿಂದ ಬೆಂಗಳೂರು ಕಂಪನಿ ಪುಣೆಗೆ ಸ್ಥಳಾಂತರ, ಸಂಸ್ಥಾಪಕನಿಂದ ಘೋಷಣೆ

ನನ್ನ ಕಂಪನಿಯಲ್ಲಿರುವ ಕನ್ನಡ ಭಾಷಿಕರಲ್ಲದ ಉದ್ಯೋಗಿಗಳು ನಾಳೆ ಕನ್ನಡ ಆತಂಕಕ್ಕೆ ತುತ್ತಾಗಬಾರದು. ಹೀಗಾಗಿ ಬೆಂಗಳೂರಿನ ಕಂಪನಿಯನ್ನು ಪುಣೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇನೆ ಎಂದು ಟೆಕ್ ಸಂಸ್ಥಾಪಕ ಘೋಷಿಸಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ.

ಪೂರ್ತಿ ಓದಿ
01:42 PM (IST) May 23

ಬೆಂಗಳೂರು ಪ್ರವಾಹ ತಡೆಗೆ ಬಿಬಿಎಂಪಿ ಕೆಲಸ ಪರಿಶೀಲನೆಗೆ ಖಾಸಗಿ ಏಜೆನ್ಸಿ ನೇಮಿಸಿದ ಲೋಕಾಯುಕ್ತ!

ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾದ ಪ್ರವಾಹದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ. ಲೋಕಾಯುಕ್ತರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬಿಬಿಎಂಪಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪೂರ್ತಿ ಓದಿ
01:16 PM (IST) May 23

FACT CHECK: ದೇಶದ್ರೋಹಿ ಜ್ಯೋತಿ ಮಲ್ಹೋತ್ರಾ ಜೊತೆಯೂ ರಾಹುಲ್​ ಗಾಂಧಿ? ಏನಿದರ ಅಸಲಿಯತ್ತು?

ದೇಶದ್ರೋಹಿ ಎಂದೇ ಬಿಂಬಿತವಾಗಿರುವ ಜ್ಯೋತಿ ಮಲ್ಹೋತ್ರಾ, ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಜೊತೆ ಇರುವ ಫೋಟೋ ವೈರಲ್​ ಆಗುತ್ತಿದ್ದು, ನೆಟ್ಟಿಗರ ಬಾಯಿಗೆ ಆಹಾರವಾಗಿದೆ. ಏನಿದರ ಅಸಲಿಯತ್ತು?

ಪೂರ್ತಿ ಓದಿ
01:10 PM (IST) May 23

ಸೇವೆಯಿಂದ ನಿವೃತ್ತಿಯಾದ ಅಗ್ನಿಶಾಮಕ ದಳದ ಫೈರ್‌ ಫೈಟರ್ ನಾಯಿ, ಭಾವುಕರಾದ ಸಿಬ್ಬಂದಿ

ಅಗ್ನಿಶಾಮಕ ದಳದಲ್ಲಿ ಫೈರ್ ಫೈಟರ್ ಆಗಿ ಗುರುತಿಸಿಕೊಂಡಿದ್ದ ನಾಯಿ ಇದೀಗ ಸೇವೆಯಿಂದ ನಿವೃತ್ತಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಭಾವುಕರಾಗಿದ್ದಾರೆ. ಬೀಳ್ಕೋಡುಗೆ ನೀಡುವ ವೇಳೆ ಫೈರ್ ಫೈಟರ್ ನಾಯಿ ಸಿಬ್ಬಂದಿಗಳ ಬಿಗಿದಪ್ಪಿದ ಕ್ಷಣ ಎಲ್ಲರ ಕಣ್ಣಾಲಿ ತೇವಗೊಳಿಸಿತ್ತು.

ಪೂರ್ತಿ ಓದಿ
01:06 PM (IST) May 23

ಜೆಕೊಬ್ ಬೆಥೆಲ್ ಬದಲಿಗೆ ಮತ್ತೋರ್ವ ಡೇಂಜರಸ್ ಬ್ಯಾಟರ್ ಕರೆತಂದ ಆರ್‌ಸಿಬಿ!

ಐಪಿಎಲ್ ಪ್ಲೇ ಆಫ್‌ಗೂ ಮುನ್ನ ಆರ್‌ಸಿಬಿ ತಂಡಕ್ಕೆ ನ್ಯೂಜಿಲೆಂಡ್‌ನ ಸ್ಪೋಟಕ ಬ್ಯಾಟರ್ ಟಿಮ್ ಸೀಫರ್ಟ್ ಎಂಟ್ರಿ ನೀಡಿದ್ದಾರೆ. ಜೆಕೊಬ್ ಬೆಥೆಲ್ ನ್ಯಾಷನಲ್ ಡ್ಯೂಟಿಗಾಗಿ ಇಂಗ್ಲೆಂಡ್ ತಂಡ ಸೇರಿಕೊಳ್ಳಲಿದ್ದರಿಂದ ಸೀಫರ್ಟ್ ಅವರ ಬದಲಿ ಆಟಗಾರರಾಗಿ ಆರ್‌ಸಿಬಿಗೆ ಆಗಮಿಸಿದ್ದಾರೆ.

ಪೂರ್ತಿ ಓದಿ
12:20 PM (IST) May 23

ಬಾಂಗ್ಲಾದೇಶದಲ್ಲಿ ಕೋಲಾಹಲ, ಶೀಘ್ರದಲ್ಲೇ ಯೂನಸ್ ಹಂಗಾಮಿ ಸರ್ಕಾರ ಪತನ ಸಾಧ್ಯತೆ

ಬಾಂಗ್ಲಾದೇಶದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ಪ್ರದಾನಿ ಶೇಕ್ ಹಸೀನಾ ಪದಚ್ಯುತ ಗೊಳಿಸಿ ಅಧಿಕಾರದ ಗದ್ದುಗೆ ಏರಿದ ಹಂಗಾಮಿ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯೂನಸ್ ಶೀಘ್ರದಲ್ಲೇ ತಮ್ಮ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ.

ಪೂರ್ತಿ ಓದಿ
12:08 PM (IST) May 23

ತಾಳಿ ಕಟ್ಟುವಾಗ ಪ್ರಿಯಕರ ಕರೆಯಿಂದ ಹಸಮಣೆಯಿಂದ ಹೊರನಡೆದ ವಧು, ಕಣ್ಣೀರಿಟ್ಟ ವರ

ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ಮದುವೆ ಬೇಡ ಎಂದು ಘಟನೆ ಹಾಸನದಲ್ಲಿ ನಡೆದಿದೆ. ಕೊನೆಯ ಕ್ಷಣದಲ್ಲಿ ಮದುವೆ ಮುರಿದು ಬಿದ್ದಿದೆ. ವಧು ಫೋಷಕರು ಕಣ್ಣೀರಿಟ್ಟರೆ, ಇತ್ತ ವರನ ಕಣ್ಣಾಲಿ ತೇವಗೊಂಡಿದೆ.
 

ಪೂರ್ತಿ ಓದಿ
11:47 AM (IST) May 23

ಒಂದೇ ದಿನ ನೇಪಾಳ, ಟಿಬೆಟ್ ಮತ್ತು ಇಂಡೋನೇಷ್ಯಾ, ಜಪಾನ್‌ನಲ್ಲಿ ಭಾರೀ ಭೂಕಂಪನ!

ನೇಪಾಳದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಟಿಬೆಟ್‌ನಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಇಂಡೋನೇಷ್ಯಾದಲ್ಲೂ 5.9 ತೀವ್ರತೆಯ ಭೂಕಂಪನ ದಾಖಲಾಗಿದೆ.

ಪೂರ್ತಿ ಓದಿ
11:47 AM (IST) May 23

ಮಹಾರಾಷ್ಟ್ರದಿಂದ ಮತ್ತೆ ಆಲಮಟ್ಟಿ ಕ್ಯಾತೆ: ಡ್ಯಾಂನಿಂದ ಪ್ರವಾಹ

ಕರ್ನಾಟಕದ ಆಲಮಟ್ಟಿ ಅಣೆಕಟ್ಟು ಮಹಾರಾಷ್ಟ್ರದ ಕೊಲ್ಹಾಪುರ-ಸಾಂಗ್ಲಿ ಪ್ರದೇಶದಲ್ಲಿ ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯ ಕಾರ್ಯಕರ್ತರು ದೂರಿದ್ದಾರೆ. 
 

ಪೂರ್ತಿ ಓದಿ
11:41 AM (IST) May 23

ವಕ್ಫ್‌: ಮಧ್ಯಂತರ ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ವಕ್ಫ್‌ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶವನ್ನು ಕಾಯ್ದಿರಿಸಿದೆ. 

ಪೂರ್ತಿ ಓದಿ
10:58 AM (IST) May 23

ಟರ್ಬುಲೆನ್ಸ್‌ನಿಂದ ವಿಮಾನ ಪತನ ತಪ್ಪಿಸಲು ಇಂಡಿಗೋ ಪೈಲೆಟ್ ಮನವಿ ತಿರಸ್ಕರಿಸಿದ ಪಾಕಿಸ್ತಾನ

ಟರ್ಬುಲೆನ್ಸ್‌ನಿಂದ ಪ್ರಯಾಣಿಕರು ಚೀರಾಡುತ್ತಿದ್ದಾರೆ, ವಿಮಾನ ನಿಯಂತ್ರಣ ಕಳೆದುಕೊಳ್ಳುತ್ತಿದೆ. ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿದೆ. ಕೊನೆಗೆ ಪ್ರಯಾಣಿಕರ ಜೀವ ಉಳಿಸಲು ಇಂಡಿಗೋ ವಿಮಾನ ಪೈಲೆಟ್ ಪಾಕಿಸ್ತಾನಕ್ಕೆ ಒಂದು ಮನವಿ ಮಾಡಿದ್ದರು. ಆದರೆ ಪಾಕಿಸ್ತಾನ ಈ ಮನವಿ ತಿರಸ್ಕರಿಸಿತ್ತು ಅನ್ನೋ ಮಾಹಿತಿ ಬಯಲಾಗಿದೆ. 

ಪೂರ್ತಿ ಓದಿ
10:50 AM (IST) May 23

ಹಾರ್ವರ್ಡ್‌ಗೆ ವಿದೇಶಿ ವಿದ್ಯಾರ್ಥಿ ಸೇರ್ಪಡೆ ನಿಷೇಧ: ಭಾರತೀಯ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಟ್ರಂಪ್!

ಅಮೆರಿಕದ ಟ್ರಂಪ್ ಆಡಳಿತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶವನ್ನು ನಿಷೇಧಿಸಿದೆ. ಈ ಕ್ರಮದಿಂದಾಗಿ ಸಾವಿರಾರು ವಿದೇಶಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ಹಾರ್ವರ್ಡ್ ನ್ಯಾಯಾಲಯದ ಮೊರೆ ಹೋಗಿದೆ.

ಪೂರ್ತಿ ಓದಿ
10:04 AM (IST) May 23

15000 ಹುದ್ದೆ ಭರ್ತಿಗೆ ಸರ್ಕಾರಕ್ಕೆ ಶಿಫಾರಸು: ರಾಜ್ಯ ಆಡಳಿತ ಸುಧಾರಣಾ ಆಯೋಗದಿಂದ ಸಿಎಂಗೆ ವರದಿ

ಪಡಿತರ ಚೀಟಿ ದತ್ತಾಂಶವನ್ನು ಜನನ ಮತ್ತು ಮರಣ ನೋಂದಣಿ ತಂತ್ರಾಂಶದೊಂದಿಗೆ ಸಂಯೋಜಿಸುವುದು, ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ 15000 ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡುವುದು ಸೇರಿ 189 ಹೊಸ ಶಿಫಾರಸುಗಳನ್ನು ಸರ್ಕಾರಕ್ಕೆ ರಾಜ್ಯ ಆಡಳಿತ ಸುಧಾರಣಾ ಆಯೋಗ ಸಲ್ಲಿಸಿದೆ.
 

ಪೂರ್ತಿ ಓದಿ
09:31 AM (IST) May 23

18 ಶಾಸಕರ ಅಮಾನತು ರದ್ದಾಗುತ್ತಾ?: ಮೇ.25ರಂದು ಸ್ಪೀಕರ್‌, ಸಿಎಂ ನಿರ್ಧಾರ

ಸದನದಿಂದ ಅಮಾನತುಗೊಂಡಿರುವ ಬಿಜೆಪಿಯ ಹದಿನೆಂಟು ಮಂದಿ ಶಾಸಕರ ಕುರಿತು ತೀರ್ಮಾನ ಮಾಡಲು ಮೇ.25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ್‌ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.  

ಪೂರ್ತಿ ಓದಿ