ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) KCET 2025 ರ ಫಲಿತಾಂಶವನ್ನು ಮೇ 24 ರಂದು ಬೆಳಿಗ್ಗೆ 11:30 ಕ್ಕೆ ಪ್ರಕಟಿಸಲಿದೆ. ಅಭ್ಯರ್ಥಿಗಳು kea.kar.nic.in ಅಥವಾ cetonline.karnataka.gov.in ನಲ್ಲಿ ಫಲಿತಾಂಶಗಳನ್ನು ಪರಿಶೀಲಿಸಬಹುದು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ, KEA KEA KCET 2025ರ ಫಲಿತಾಂಶ ಬಿಡುಗಡೆಯ ದಿನಾಂಕ ಮತ್ತು ಸಮಯವನ್ನು ಪ್ರಕಟಿಸಿದೆ. UGCET ಫಲಿತಾಂಶಗಳನ್ನು ಮೇ 24 ರಂದು ಬೆಳಿಗ್ಗೆ 11.30 ಕ್ಕೆ ಪ್ರಕಟಿಸಲಾಗುವುದು ಎಂದು ಹೇಳಿದೆ. ಕರ್ನಾಟಕ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು KEA ಯ ಅಧಿಕೃತ ವೆಬ್‌ಸೈಟ್ kea.kar.nic.in ಅಥವಾ cetonline.karnataka.gov.in ಮೂಲಕ ಪರಿಶೀಲಿಸಬಹುದು. KCET ಫಲಿತಾಂಶವು karresults.nic.in ನಲ್ಲಿ ಲಭ್ಯವಿದೆ.

UGCET -25 ಫಲಿತಾಂಶಗಳನ್ನು ಮೇ 24 ರಂದು ಮಧ್ಯಾಹ್ನ 2 ಗಂಟೆಯಿಂದ ಪ್ರಕಟಿಸಲಾಗುವುದು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಬೆಳಿಗ್ಗೆ 11:30 ಕ್ಕೆ ಕೆಇಎ ಕಚೇರಿಯಲ್ಲಿ ಪ್ರಕಟಿಸಲಿದ್ದಾರೆ. ಫಲಿತಾಂಶದ ಲಿಂಕ್‌ಗಳು ಮಧ್ಯಾಹ್ನ 2 ಗಂಟೆಯ ನಂತರ ಲೈವ್ ಆಗುತ್ತವೆ. ಎಂದು ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು UGCET 2025 ಪರೀಕ್ಷೆಯನ್ನು ಏಪ್ರಿಲ್ 15, 16 ಮತ್ತು ಏಪ್ರಿಲ್ 17, 2025 ರಂದು ರಾಜ್ಯಾದ್ಯಂತ ಹಲವು ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿದೆ. ಪರೀಕ್ಷೆಯನ್ನು ಎರಡು ಪಾಳಿಗಳಲ್ಲಿ ಮಾಡಲಾಯ್ತು ಮೊದಲ ಪಾಳಿ ಬೆಳಿಗ್ಗೆ 10.30 ರಿಂದ 11.50 ರವರೆಗೆ, ಎರಡನೇ ಪಾಳಿ ಮಧ್ಯಾಹ್ನ 2.30 ರಿಂದ 3.50 ರವರೆಗೆ ನಡೆದಿತ್ತು.

ಕೆಇಎ ಫಲಿತಾಂಶದ ಬಳಿಕ ಎಂಜಿನಿಯರಿಂಗ್, ವಾಸ್ತುಶಿಲ್ಪ, ಕೃಷಿ ವಿಜ್ಞಾನ, ಬಿ-ಫಾರ್ಮ್ ಮತ್ತು ಫಾರ್ಮ್-ಡಿ ಶ್ರೇಣಿಗಳನ್ನು ನಿಗದಿಪಡಿಸಲಾಗುತ್ತದೆ. ಎಂಜಿನಿಯರಿಂಗ್, ವಾಸ್ತುಶಿಲ್ಪ, ಕೃಷಿ ವಿಜ್ಞಾನ, ಬಿ-ಫಾರ್ಮ್ ಮತ್ತು ಫಾರ್ಮ್-ಡಿ ಶ್ರೇಣಿಗಳನ್ನು ತೋರಿಸುವ ಪ್ರತ್ಯೇಕ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

Scroll to load tweet…