ಅಗ್ನಿಶಾಮಕ ದಳದಲ್ಲಿ ಫೈರ್ ಫೈಟರ್ ಆಗಿ ಗುರುತಿಸಿಕೊಂಡಿದ್ದ ನಾಯಿ ಇದೀಗ ಸೇವೆಯಿಂದ ನಿವೃತ್ತಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಭಾವುಕರಾಗಿದ್ದಾರೆ. ಬೀಳ್ಕೋಡುಗೆ ನೀಡುವ ವೇಳೆ ಫೈರ್ ಫೈಟರ್ ನಾಯಿ ಸಿಬ್ಬಂದಿಗಳ ಬಿಗಿದಪ್ಪಿದ ಕ್ಷಣ ಎಲ್ಲರ ಕಣ್ಣಾಲಿ ತೇವಗೊಳಿಸಿತ್ತು.

ತಿರುವಂತಪುರಂ(ಮೇ.23) ಪೊಲೀಸ್, ಅಗ್ನಿಶಾಮಕ ದಳ ಸೇರಿದಂತೆ ಭದ್ರತಾ ಪಡೆಗಗಳು ನಾಯಿಯನ್ನು ಸೇವೆಯಲ್ಲಿ ಬಳಸಿಕೊಳ್ಳುತ್ತದೆ. ತರಬೇತುಗೊಳಿಸಿದ ನಾಯಿ ಪೊಲೀಸ್ ಹಾಗೂ ಭದ್ರತಾ ಪಡೆಗಳಿಗೆ ಕಾರ್ಯಾಚರಣೆ ವೇಳೆ ಭಾರಿ ನೆರವು ನೀಡುತ್ತದೆ. ತರಬೇತುಗೊಳಿಸಿದ ನಾಯಿಯನ್ನು ಯಾವುದೇ ಇಲಾಖೆಯಲ್ಲಿ ಸೇವೆಗೆ ಸೇರಿಸುವಾಗ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಇನ್ನು ಇಂತಿಷ್ಟು ವರ್ಷಗಳ ಸೇವೆ ಬಳಿಕ ನಿವೃತ್ತಿಯಾಲಿದೆ. ಇದೀಗ ಅಗ್ನಿಶಾಮದ ದಳದಲ್ಲಿ ಶಿಸ್ತಿನಿಂದ ಸೇವೆ ಸಲ್ಲಿಸಿ ಹಲವರ ಪ್ರಾಣ ಉಳಿಸಿದ ಹಾಗೂ ಭಾರಿ ವಿಪತ್ತಿನಿಂದ ಹಲವರನ್ನು ರಕ್ಷಿಸಿದ ಫೈರ್ ಫೈಟರ್ ನಾಯಿ ನಿವೃತ್ತಿಯಾಗಿದೆ. ಕೇರಳದ ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸಿದ ನಾಯಿ ಶಾಜುಗೆ ಸಿಬ್ಬಂದಿಗಳು ಭಾವುದ ವಿದಾಯ ಹೇಳಿದ್ದಾರೆ. ಬೀಳ್ಗೊಡುಗೆ ದಿನ ಫೈರ್ ಫೈಟರ್ ಶಾಜು ನಾಯಿ ಸಿಬ್ಬಂದಿಗಳನ್ನು ಬಿಗಿದಪ್ಪಿ ಮುದ್ದಾಡಿತ್ತು. ನಾಯಿಯ ಭಾವುಕ ವಿದಾಯ ಹಲವರ ಕಣ್ಣಾಲಿ ತೇವಗೊಳಿಸಿದೆ. 

ಫೈರ್ ಫೈಟರ್‌ಗೆ ಗೌರವಯುತ ಬೀಳ್ಕೊಡುಗೆ
ಸ್ಟ್ರೀಟ್ ಡಾಗ್ ಬಾಂಬೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಕೇರಳ ಅಗ್ನಿಶಾಮಕ ದಳದಲ್ಲಿ ಶಾಜು ಅತ್ಯಂತ ಪ್ರೀತಿಯ ಸಿಬ್ಬಂದಿಯಾಗಿದ್ದ. ಹಲವು ಕಾರ್ಯಾಚರಣೆಯಲ್ಲಿ ಕೇರಳ ಅಗ್ನಿಶಾಮಕ ದಳಕ್ಕೆ ನೆರವು ನೀಡಿತ್ತು. ನಾಯಿ ಶಾಜುವನ್ನು ಅಗ್ನಿಶಾಮಕ ಸಿಬ್ಬಂದಿ ರಾಜು ನೋಡಿಕೊಳ್ಳುತ್ತಿದ್ದರು. ಕೇರಳ ಅಗ್ನಿಶಾಮಕ ದಳದ ಪ್ರತಿ ಕಾರ್ಯಾಚರಣೆಯಲ್ಲಿ ಶಾಜು ನಾಯಿ ಮುಂಚೂಣಿಯಲ್ಲಿ ನಿಂತು ಸಿಬ್ಬಂದಿಗಳಿಗೆ ನೆರವು ನೀಡುತ್ತಿತ್ತು. ಅಷ್ಟೇ ಮುದ್ದಾಗಿ ಅಗ್ನಿಶಾಮಕ ಸಿಬ್ಬಂದಿ ನಾಯಿಯನ್ನು ನೋಡಿಕೊಂಡಿತ್ತು. ಇಷ್ಟು ದಿನ ತಮ್ಮ ಜೊತೆಗಿದ್ದ ಸೇವೆ ಸಲ್ಲಿಸಿದ ಶಾಜು ನಾಯಿಯನ್ನು ಅಷ್ಟೇ ಗೌರವದಿಂದ ಬೀಳ್ಕೊಟ್ಟಿದ್ದಾರೆ.

 

View post on Instagram
 

 

ಶಾಜು ನಿವೃತ್ತಿ, ಭಾವುಕರಾದ ಸಿಬ್ಬಂದಿ
ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದ ನಾಯಿ ಶಾಜು ನಿವೃತ್ತಿಯಾಗಿದೆ. ಆದರೆ ಶಾಜುವನ್ನು ಬೀಳ್ಕೊಡಲು ಸಿಬ್ಬಂದಿಗಳಿಗೆ ಮನಸ್ಸೇ ಇರಲಿಲ್ಲ. ಆದರೆ ಕಳುಹಿಸಿಕೊಡಲೇ ಬೇಕಿತ್ತು. ವಿದಾಯ ದಿನ ಸಿಬ್ಬಂದಿಗಳು ಬಾವುಕರಾಗಿದ್ದಾರೆ. ಶಾಜು ಬಿಗಿದಪ್ಪಿ ಮುದ್ದಾಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ಮಾತ್ರವಲ್ಲ, ಈ ವಿಡಿಯೋ ನೋಡಿದ ಹಲವರು ಭಾವುಕರಾಗಿದ್ದರೆ. 

ಶಾಜುಗೆ ಶುಭಹಾರೈಸಿದ ನೆಟ್ಟಿಗರು
ಈ ವಿಡಿಯೋ ನೋಡಿ ಹಲವರು ಭಾವುಕರಾಗಿದ್ದಾರೆ. ಜೊತೆಗೆ ನಾಯಿ ಶಾಜು ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದ್ದಾರೆ. ಸದ್ದಿಲ್ಲದೆ ಶಾಜು ನಿವೃತ್ತಿಯಾಗಿದೆ. ಶಾಜು ಸೇವೆ ಹಾಗೂ ಶೌರ್ಯವನ್ನು ಶ್ಲಾಘಿಸಲೇಬೇಕು. ಅಗ್ನಿಶಾಮಕ ದಳದ ಸಿಬ್ಬಂದಿಗಳ ಅಷ್ಟೇ ಮುದ್ದಾಗಿ ಸಾಕಿದ್ದಾರೆ. ಸಿಬ್ಬಂದಿಗಳು ಧನ್ಯವಾದ ಎಂದ ಹಲವರು ಕಮೆಂಟ್ ಮಾಡಿದ್ದಾರೆ.