ಬಾಂಗ್ಲಾದೇಶದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ಪ್ರದಾನಿ ಶೇಕ್ ಹಸೀನಾ ಪದಚ್ಯುತ ಗೊಳಿಸಿ ಅಧಿಕಾರದ ಗದ್ದುಗೆ ಏರಿದ ಹಂಗಾಮಿ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯೂನಸ್ ಶೀಘ್ರದಲ್ಲೇ ತಮ್ಮ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ.
ಢಾಕ(ಮೇ.23) ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ, ಪ್ರತಿಭಟನೆ, ಕೋಲಾಹಲಗಳು ಸೃಷ್ಟಿಯಾಗಿ ವರ್ಷಗಳು ಉರುಳಿಸಿದೆ. ಪ್ರಧಾನಿ ಶೇಕ್ ಹಸೀನಾ ಪದಚ್ಯುತಗೊಳಿಸಿದ ಬಳಿಕ ವಿಪಕ್ಷಗಳ ಭಾರಿ ಬಹುಮತದೊಂದಿಗೆ ಸರ್ಕಾರದ ಮುಖ್ಯಸ್ಥಾನಕ್ಕೇರಿದ ಮೊಹಮ್ಮದ್ ಯೂನಸ್ ಹೆಜ್ಜೆ ಹೆಚ್ಚೆಗೂ ಸವಾಲು ಎದುರಿಸುತ್ತಿದ್ದಾರೆ. ಆರಂಭದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ, ಹಿಂದೂ ನಾಯಕರ ಬಂಧನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರೆ ಬಳಿಕ ಶೇಕ್ ಹಸೀನಾ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಿದ ದಾಳಿ ಬಾಂಗ್ಲಾದೇಶದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಭಾರತದ ವಿರೋಧಿ ನಡೆ ಹಾಗೂ ಪಾಕಿಸ್ತಾನ ಹಾಗೂ ಚೀನಾ ತಾಳಕ್ಕೆ ತಕ್ಕಂತೆ ಕುಣಿಯಲು ಆರಂಭಿಸಿದ ಮೊಹಮ್ಮದ್ ಯೂನಸ್ ಸರ್ಕಾರ ಇದೀಗ ಇತರ ಪಕ್ಷಗಳ ನಾಯಕರಿಂದ ಭಾರಿ ವಿರೋಧ ಕಟ್ಟಿಕೊಳ್ಳುವಂತೆ ಮಾಡಿದೆ. ಇದೀಗ ಬಾಂಗ್ಲಾದೇಶದಲ್ಲಿ ರಾಜಕೀಯ ಸಮರ ತಾರಕ್ಕೇರಿದೆ. ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನ್ಸ್ ಶೀಘ್ರದಲ್ಲೇ ತಮ್ಮ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ದಟ್ಟವಾಗಿದೆ.
ಬಾಂಗ್ಲಾದೇಶದಲ್ಲಿ ಅಸ್ತಿತ್ವಕ್ಕೆ ಬಂದ ಹಂಗಾಮಿ ಸರ್ಕಾರ ಪತನ
ಬಾಂಗ್ಲಾದೇಶದಲ್ಲಿ ಹಂಗಾಮಿ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ವಿರುದ್ದ ಹಲವು ನಾಯಕರು ತಿರುಗಿ ಬಿದ್ದಿದ್ದಾರೆ. ಇದೇ ನಾಯಕರಿಂದ ಸಂಪೂರ್ಣ ಒಪ್ಪಿಗೆಯೊಂದಿಗೆ ಅಧಿಕಾರಕ್ಕೆ ಬಂದ ಯೂನಸ್ ನಡೆ ಹಲವರನ್ನು ಅಚ್ಚರಿಗೊಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಂಗ್ಲಾದೇಶ ತೀವ್ರ ಹಿನ್ನಡ ಅನುಭವಿಸುಂತವಾಗಿದೆ. ಇನ್ನು ಭಾರತದ ಬೆಂಬಲವೂ ವಂಚಿತವಾಗಿದೆ. ಇತ್ತೀಚೆಗೆ ಬಾಂಗ್ಲಾದೇಶದಿಂದಲೂ ಭಾರತ ಆಮದು ನಿರ್ಬಂಧಿಸಿದೆ. ಈ ಎಲ್ಲಾ ಬೆಳವಣಿಗೆಯಿಂದ ಬಾಂಗ್ಲಾದೇಶ ಸಂಕಷ್ಟಕ್ಕೆ ಸಿಲುಕಿದೆ. ಬಾಂಗ್ಲಾದೇಶದ ನ್ಯಾಷನಲ್ ಸಿಟಿಜನ್ ಪಾರ್ಟಿ ಮುಖ್ಯಸ್ಥ ನಿಹಾದ್ ಇಸ್ಲಾಮ್ ಈ ಕುರಿತು ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. ಬಾಂಗ್ಲಾದೇಶದ ಬಹುತೇಕ ಎಲ್ಲಾ ಪಾರ್ಟಿಗಳು ಮೊಹಮ್ಮದ್ ಯೂನಸ್ ವಿರುದ್ಧ ನಿಂತಿದೆ. ಯೂನಸ್ ಸರ್ಕಾರದಲ್ಲಿ ಮುಂದುವರಿಯುದು ಅಸಾಧ್ಯವಾಗಿದೆ ಎಂದಿದ್ದಾರೆ.
ರಾಜೀನಾಮೆ ಬೆದರಿಕೆ ಹಾಕಿದ ಮೊಹಮ್ಮದ್ ಯೂನಸ್
ಬಾಂಗ್ಲಾದೇಶದ ರಾಜಕೀಯ ಪಕ್ಷಗಳ ನಾಯಕರು ಮೊಹಮ್ಮದ್ ಯೂನಸ್‌ಗೆ ನೀಡಿದ್ದ ಬೆಂಬಲ ವಾಪಸ್ ಪಡೆಯುತ್ತಿದ್ದಾರೆ. ಯೂನಸ್ ನಿರ್ದಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಂಗಾಮಿ ಸರ್ಕಾರ ಪತನದ ವಾಸನೆ ಸಿಗುತ್ತಿದ್ದಂತೆ ಇದೀಗ ಮೊಹಮ್ಮದ್ ಯೂನಸ್ ಹೊಸ ದಾಳ ಉರುಳಿಸಿದ್ದಾರೆ. ಪಕ್ಷ ಹಾಗೂ ನಾಯಕರಿಂದ ಸಹಕಾರ ಸಿಗದಿದ್ದರೆ ರಾಜೀನಾಮೆ ನೀಡುವುದಾಗಿ ಬೆದರಿಸಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ. ಬಾಂಗ್ಲಾದೇಶದ ಅತೀ ದೊಡ್ಡ ರಾಜಕೀಯ ಪಕ್ಷಗಳಲ್ಲೊಂದಾದ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಢಾಕಾದಲ್ಲಿ ಭಾರಿ ಪ್ರತಿಭಟನೆ ಬೆನ್ನಲ್ಲೇ ಮೊಹಮ್ಮದ್ ಯೂನಸ್ ರಾಜೀನಾಮೆ ಬೆದರಿಕೆ ಹಾಕಿದ್ದಾರೆ. ಬಿಎನ್‌ಪಿ ಪಾರ್ಟಿ ಯೂನಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ್ತು. ಈ ಪ್ರತಿಭಟನೆ ಯೂನಸ್ ಸರ್ಕಾರದ ಬುಡವನ್ನೇ ಅಲುಗಾಡಿಸಿತ್ತು.
ಇಂದು ರಾಜೀನಾಮೆ ಎಂದ ನಿಹಾದ್ ಇಸ್ಲಾಮ್
ನ್ಯಾಷನಲ್ ಪಾರ್ಟಿ ಮುಖ್ಯಸ್ಥ ನಿಹಾದ್ ಇಸ್ಲಾಮ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಮೊಹಮ್ಮದ್ ಯೂನಸ್ ಇದೇ ರಾಜೀನಾಮೆ ನೀಡಲಿದ್ದಾರೆ. ಈ ಕುರಿತ ಮಾಹಿತಿಗಳು ಬರುತ್ತಿದೆ ಎಂದು ನಿಹಾದ್ ಇಸ್ಲಾಮ್ ಹೇಳಿದ್ದಾರೆ.

