11:01 PM (IST) Jul 23

Karnataka News Live 23 July 2026Cricket - ಟಿ20 ಕ್ರಿಕೆಟ್‌ನಲ್ಲಿ ಅಗ್ನಿಪರೀಕ್ಷೆ ಗೆದ್ದ 6 ಇಂಡಿಯನ್ ಕಿಂಗ್ಸ್! ಕೇವಲ 12 ಎಸೆತಗಳಲ್ಲಿ ಸೃಷ್ಟಿಸಿದ್ದ ಮಹಾ ದಾಖಲೆಗೆ ಭಾರತದಲ್ಲಿಲ್ಲ ಸಾಟಿ!

ಜಿಂಬಾಬ್ವೆ ವಿರುದ್ಧ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಇತಿಹಾಸ ಬರೆದ ಯುವ ತಾರೆ ವೈಭವ್ ಸೂರ್ಯವಂಶಿ, ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಭಾರತೀಯರ ಎಲೈಟ್ ಕ್ಲಬ್‌ಗೆ ಸೇರಿದ್ದಾರೆ. ಆದರೆ 12 ಎಸೆತಗಳ ಅಜೇಯ ವಿಶ್ವ ದಾಖಲೆಯನ್ನು ಯಾರಿಂದಲೂ ಮುರಿಯಲಾಗಿಲ್ಲ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
10:47 PM (IST) Jul 23

Karnataka News Live 23 July 2026ಬಿಡುಗಡೆಗೂ ಮುನ್ನವೇ ಕಿಡಿ ಹಚ್ಚಿದ ಟೊಯೋಟಾ - ಹೈಲಕ್ಸ್ ಆಫ್-ರೋಡರ್ SUV ಮೊದಲ ಟೀಸರ್ ಔಟ್

ಟೊಯೋಟಾ ಸಂಸ್ಥೆಯು ಜುಲೈ 28 ರಂದು ತನ್ನ ಹೊಸ ಜಮಾನದ 'ಹೈಲಕ್ಸ್' ಪಿಕ್-ಅಪ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ನೂತನ ಮಾಡೆಲ್ ಕಟ್ಟುಮಸ್ತಾದ ಮುಂಭಾಗದ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್, ದೊಡ್ಡ ಟಚ್‌ಸ್ಕ್ರೀನ್ ಮತ್ತು 48V ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರುವ ನಿರೀಕ್ಷೆಯಿದೆ.
Read Full Story
10:37 PM (IST) Jul 23

Karnataka News Live 23 July 2026ರೊಚ್ಚಿಗೆದ್ದ ವಿದ್ಯಾರ್ಥಿಗಳ ಪರ ನಿಂತ ಸಚಿನ್! ಚೀಟಿಂಗ್' ವಿರುದ್ಧ ಮಾಸ್ಟರ್ ಬ್ಲಾಸ್ಟರ್ ಕೊಟ್ಟ ಖಡಕ್ ಎಚ್ಚರಿಕೆ ಏನು?

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಕೊನೆಗೂ ಮೌನ ಮುರಿದಿದ್ದಾರೆ. ತಮ್ಮ ತಂದೆಯವರ ಪಾಠವನ್ನು ಸ್ಮರಿಸುತ್ತಾ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯ ಮಹತ್ವದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

Read Full Story
07:41 PM (IST) Jul 23

Karnataka News Live 23 July 2026ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ - ನಂದಿನಿ ಬೆಣ್ಣೆ, ತುಪ್ಪದ ದರ ದಿಢೀರ್ ಏರಿಕೆ!; ನಾಳೆಯಿಂದಲೇ ಪರಿಷ್ಕೃತ ದರ ಜಾರಿ!

ಕೆಎಂಎಫ್ ಅಂಗಸಂಸ್ಥೆಯಾದ ಬಮೂಲ್, ನಂದಿನಿ ತುಪ್ಪ ಮತ್ತು ಬೆಣ್ಣೆಯ ದರವನ್ನು ದಿಢೀರ್ ಏರಿಕೆ ಮಾಡಿದೆ. ಪ್ರತಿ ಕೆಜಿಗೆ ತುಪ್ಪದ ಮೇಲೆ ₹15 ಮತ್ತು ಬೆಣ್ಣೆಯ ಮೇಲೆ ₹25 ಹೆಚ್ಚಳವಾಗಿದ್ದು, ಈ ಹೊಸ ದರಗಳು ಜುಲೈ 24 ರಿಂದ ಜಾರಿಗೆ ಬರಲಿವೆ.

Read Full Story
07:04 PM (IST) Jul 23

Karnataka News Live 23 July 2026BMTCಯಲ್ಲಿ ಹೀಗೊಬ್ಬ ದಾನಶೂರ ಕೃಷ್ಣ, ಸಹಾಯಕ್ಕೆ ದುಡ್ಡಲ್ಲ, ಮನಸ್ಸಿದ್ದರೆ ಸಾಕು ಎಂದ ಮೂರ್ತಿ!

ಬೆಂಗಳೂರಿನ ಬಿಎಂಟಿಸಿ ಚಾಲಕ ಕೃಷ್ಣಮೂರ್ತಿ ಅವರು ತಮ್ಮ ದೈನಂದಿನ ವೃತ್ತಿಯ ಜೊತೆಗೆ ಮಾನವೀಯ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿದಿನ ತಮ್ಮ ಮಾರ್ಗದಲ್ಲಿ ಸಿಗುವ ಅಸಹಾಯಕರಿಗೆ ಮತ್ತು ಹಸಿದವರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸುವ ಮೂಲಕ ಇವರು ನಿಜವಾದ ಒಳ್ಳೆಯತನಕ್ಕೆ ಮಾದರಿಯಾಗಿದ್ದಾರೆ.
Read Full Story
06:46 PM (IST) Jul 23

Karnataka News Live 23 July 2026ಬೆಂಗಳೂರು ಪ್ರಯಾಣಿಕರಿಗೆ ಶುಭಸುದ್ದಿ - 5 ಹೊಸ ಬಸ್ ಸೇವೆ ಆರಂಭಿಸಿದ BMTC!; ಮಾರ್ಗ, ಸಮಯದ ಪೂರ್ಣ ವಿವರ ಇಲ್ಲಿದೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ನಗರದ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು ಹೊಸ ಬಸ್ ಸೇವೆಗಳನ್ನು ಆರಂಭಿಸಿದೆ. ಜುಲೈ 22 ಮತ್ತು 23 ರಿಂದ ಬನಶಂಕರಿ, ಮರಳವಾಡಿ, ಹಾರೋಹಳ್ಳಿ ಮತ್ತು ಪೀಣ್ಯ 2ನೇ ಹಂತದಂತಹ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ನೂತನ ಮಾರ್ಗಗಳು ಕಾರ್ಯಾರಂಭ ಮಾಡಿವೆ.
Read Full Story
06:28 PM (IST) Jul 23

Karnataka News Live 23 July 2026ಕರ್ನಾಟಕ ಸೆಕ್ಷನ್‌ನ ಮೂರು ಹೆದ್ದಾರಿಗಳ ಟೋಲ್‌ ದರ ಭರ್ಜರಿಯಾಗಿ ಏರಿಸಿದ NHAI

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ ಕರ್ನಾಟಕ ಭಾಗ, ಬೆಂಗಳೂರು-ನೆಲಮಂಗಲ ಹೆದ್ದಾರಿ ಮತ್ತು ಮುಳಬಾಗಿಲು-ಆಂಧ್ರ ಗಡಿ ವಿಭಾಗದ ಟೋಲ್ ದರಗಳನ್ನು ಹೆಚ್ಚಿಸಿದೆ.

Read Full Story
05:58 PM (IST) Jul 23

Karnataka News Live 23 July 2026ಪ್ಲಾಸ್ಟಿಕ್‌ ವೇಸ್ಟ್‌ ಬಳಸಿ ಬೆಂಗಳೂರಿನ ರಸ್ತೆಯನ್ನು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಪ್ರೆಸ್ಟೀಜ್‌ ಗ್ರೂಪ್‌

ಬೆಂಗಳೂರಿನ ಬ್ರಂಟನ್ ರಸ್ತೆಯನ್ನು ಪ್ರೆಸ್ಟೀಜ್ ಗ್ರೂಪ್ 3 ಕೋಟಿ ರೂ. ವೆಚ್ಚದಲ್ಲಿ ಪುನರಭಿವೃದ್ಧಿಪಡಿಸುತ್ತಿದೆ. ಈ ಯೋಜನೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಿಸಲಾಗುತ್ತಿದ್ದು, ಪಾದಚಾರಿ ಮಾರ್ಗ ಮತ್ತು ಬೀದಿ ದೀಪಗಳನ್ನೂ ಮೇಲ್ದರ್ಜೆಗೇರಿಸಲಾಗುತ್ತಿದೆ.

Read Full Story
05:42 PM (IST) Jul 23

Karnataka News Live 23 July 2026Food - ಸಂತೆಯಲ್ಲಿ ಇವನ್ನು ನೋಡಿದ್ರೂ ತರಬೇಡಿ! ಮಳೆಗಾಲದಲ್ಲಿ ಈ 5 ತರಕಾರಿಗಳು ನಿಮ್ಮ ಆರೋಗ್ಯಕ್ಕೆ ಸೈಲೆಂಟ್ ಪಾಯ್ಸನ್!

ಮಳೆಗಾಲದಲ್ಲಿ ಹೆಚ್ಚಾಗುವ ತೇವಾಂಶದಿಂದಾಗಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ತರಕಾರಿಗಳ ಮೇಲೆ ವೇಗವಾಗಿ ಬೆಳೆಯುತ್ತವೆ. ಈ ಸಮಯದಲ್ಲಿ ಕೆಲವು ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಹೊಟ್ಟೆಯ ಸೋಂಕಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆ ತರಕಾರಿ ಯಾವವು ಎನ್ನುವುದನ್ನು ನೋಡೋಣ ಬನ್ನಿ.

Read Full Story
04:13 PM (IST) Jul 23

Karnataka News Live 23 July 2026CJP - ಹೋರಾಟಕ್ಕೆ ಸಿಕ್ಕಿತು ಬಿಗ್ ಸಕ್ಸಸ್ - ಕಾಕ್ರೋಚ್ ಪಾರ್ಟಿಯ ಮೊದಲ ಗೆಲುವಿಗೆ ಖಾಕಿ ಪಡೆ ಶೇಕ್!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಆ ವಿಡಿಯೋದಿಂದಾಗಿ ಎದ್ದ ಯುವಜನರ ಆಕ್ರೋಶಕ್ಕೆ ಮಣಿದು ಸರ್ಕಾರ ಈ ಕ್ರಮ ಕೈಗೊಂಡಿದ್ದು, ಇದು ಹೋರಾಟಗಾರರ ಮೊದಲ ಗೆಲುವು ಎಂದು ಬಣ್ಣಿಸಲಾಗಿದೆ. ಈ ಪ್ರಕರಣ ಇದೀಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
03:46 PM (IST) Jul 23

Karnataka News Live 23 July 2026ಇಂಗ್ಲೆಂಡ್ ಸರಣಿ ಹೊಡೆತ - ಈ ನಾಲ್ವರ ವೃತ್ತಿ ಬದುಕು ಅಪಾಯದಲ್ಲಿದೆ..!

ಟೀಂ ಇಂಡಿಯಾದ ನಾಲ್ವರು ಸ್ಟಾರ್ ಆಟಗಾರರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಇಂಗ್ಲೆಂಡ್ ಸೀರಿಸ್ ವಿರುದ್ಧ ಹೀನಾಯ ಸೋಲು ಬೆನ್ನಲ್ಲೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ಅವರು ಯಾರು ಎಂದು ತಿಳಿದುಕೊಳ್ಳಲು ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ..

Read Full Story
03:15 PM (IST) Jul 23

Karnataka News Live 23 July 2026ಮಹಾರಾಷ್ಟ್ರವನ್ನು ಹಿಂದಿಕ್ಕಿ ಕರ್ನಾಟಕ ನಂ.1 - ಎಫ್‌ಡಿಐಹೂಡಿಕೆ ಪ್ರಮಾಣ ಬರೋಬ್ಬರಿ 13 ಬಿಲಿಯನ್‌ ಡಾಲರ್‌ ಜಿಗಿತ!

ವಿದೇಶಿ ನೇರ ಹೂಡಿಕೆ (FDI) ಆಕರ್ಷಣೆಯಲ್ಲಿ ಕರ್ನಾಟಕವು ಮಹಾರಾಷ್ಟ್ರವನ್ನು ಹಿಂದಿಕ್ಕಿ ದೇಶದಲ್ಲೇ ಪ್ರಥಮ ಸ್ಥಾನಕ್ಕೇರಿದೆ. ಕಳೆದ ಹಣಕಾಸು ವರ್ಷದಲ್ಲಿ ರಾಜ್ಯವು ಸುಮಾರು $13 ಬಿಲಿಯನ್ ಬಂಡವಾಳವನ್ನು ಸೆಳೆದಿದ್ದು, ತಂತ್ರಜ್ಞಾನ ಮತ್ತು ಸೇವಾ ವಲಯಗಳು ಈ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ಮೂಲಕ ಕರ್ನಾಟಕವು ಜಾಗತಿಕ ಹೂಡಿಕೆದಾರರ ಪ್ರಮುಖ ತಾಣವಾಗಿ ಹೊರಹೊಮ್ಮಿದೆ.
Read Full Story
03:07 PM (IST) Jul 23

Karnataka News Live 23 July 2026ಜಾತ್ರೆಗೆ ಹೋಗುವ ವಿಚಾರಕ್ಕೆ ಪತಿ ಜೊತೆ ಜಗಳ; ಅದೇ ಸಿಟ್ಟಿನಲ್ಲಿ ದೂಧಗಂಗಾ ನದಿಗೆ ಹಾರಿದ ಪತ್ನಿ!

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ದಂಪತಿ ನಡುವಿನ ಸಣ್ಣ ಜಗಳವೊಂದು ದೊಡ್ಡ ದುರಂತಕ್ಕೆ ಕಾರಣವಾಗಿದೆ. ಜಾತ್ರೆಗೆ ಹೋಗುವ ವಿಚಾರವಾಗಿ ಗಂಡನೊಂದಿಗೆ ಜಗಳವಾಡಿದ ಪತ್ನಿಯೊಬ್ಬಳು ಮನನೊಂದು ನದಿಗೆ ಹಾರಿದ್ದಾಳೆ. ಅಷ್ಟಕ್ಕೂ ಆಗಿದ್ದೇನು? ಸ್ಟೋರಿ ಓದಿ..

Read Full Story
02:53 PM (IST) Jul 23

Karnataka News Live 23 July 2026ಬೇಕಂತಲೇ ನೋ-ಬಾಲ್ ಎಸೆದರೆ ಇನ್ನು ಮ್ಯಾಚ್‌ನಿಂದಲೇ ಔಟ್! BCCI ಖಡಕ್ ತೀರ್ಮಾನ

2026-27ರ ದೇಶೀಯ ಕ್ರಿಕೆಟ್ ಸೀಸನ್‌ಗೆ ಬಿಸಿಸಿಐ ಮಹತ್ವದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ದುಲೀಪ್ ಟ್ರೋಫಿಯಿಂದ ಅನ್ವಯವಾಗುವ ಈ ಬದಲಾವಣೆಗಳಲ್ಲಿ, ಉದ್ದೇಶಪೂರ್ವಕ ನೋ-ಬಾಲ್‌ಗೆ ಕಠಿಣ ಶಿಕ್ಷೆ, ದಿನದ ಕೊನೆಯ ಓವರ್ ಪೂರ್ಣಗೊಳಿಸುವುದು ಮತ್ತು ಅಂತಿಮ ಇನ್ನಿಂಗ್ಸ್ ಡಿಕ್ಲೇರ್‌ಗೆ ನಿಷೇಧದಂತಹ ಕಠಿಣ ಕ್ರಮಗಳು ಸೇರಿವೆ. ಈ ನಿಯಮಗಳು ಎಂಸಿಸಿ ಶಿಫಾರಸುಗಳನ್ನು ಆಧರಿಸಿವೆ.
Read Full Story
02:41 PM (IST) Jul 23

Karnataka News Live 23 July 2026ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಅಮೆರಿಕ ಮುಂದೆ 10 ಬಿಲಿಯನ್ ಡಾಲರ್ ತುರ್ತು ನೆರವಿಗಾಗಿ ಬಿಕ್ಷೆ ಬೇಡಿದ ಪಾಕಿಸ್ತಾನ!

ದಶಕಗಳಲ್ಲೇ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನ, ತನ್ನ ಕುಸಿಯುತ್ತಿರುವ ವಿದೇಶಿ ವಿನಿಮಯ ಮೀಸಲು ರಕ್ಷಿಸಿಕೊಳ್ಳಲು ಅಮೆರಿಕದಿಂದ 10 ಬಿಲಿಯನ್ ಡಾಲರ್ ಆರ್ಥಿಕ ನೆರವು ಕೋರಿದೆ. ಈಗಾಗಲೇ ಐಎಂಎಫ್, ಚೀನಾ ಮತ್ತು ಸೌದಿ ಅರೇಬಿಯಾದಿಂದ ಶತಕೋಟಿ ಡಾಲರ್ ಸಾಲ ಪಡೆದಿದ್ದರೂ, ಹೆಚ್ಚಿನ ಹಣವನ್ನು ಹಳೆಯ ಸಾಲ ತೀರಿಸಲು ಬಳಸಲಾಗುತ್ತಿದೆಯೇ ಹೊರತು ದೇಶದ ಅಭಿವೃದ್ಧಿಗಲ್ಲ.
Read Full Story
02:32 PM (IST) Jul 23

Karnataka News Live 23 July 2026'ಕಾಕ್ರೋಚ್' ಎನ್ನುವುದು ಉತ್ತರ ಭಾರತದ ಹಿಂದಿಯನ್ ಮನುವಾದಿಗಳ ಚಳವಳಿ -ಚೇತನ್ ಅಹಿಂಸಾ

ಕಾಕ್ರೋಚ್ ಎನ್ನುವುದು ಉತ್ತರ ಭಾರತದ, ಹಿಂದಿಯನ್ ಮನುವಾದಿಗಳ ಚಳವಳಿಯಾಗಿದೆ ಎಂದು ನಟ ಚೇತನ್ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಹಿಂದಿ ಹೇರಿಕೆ ಮತ್ತು ಉತ್ತರ ಭಾರತದ ಮೇಲ್ವರ್ಗದ ಸಿದ್ಧಾಂತಗಳ ಪ್ರಭಾವವಿದೆ ಎಂಬರ್ಥದಲ್ಲಿ ಚೇತನ್ ಮಾತುಗಳನ್ನಾಡಿದ್ದಾರೆ.

Read Full Story
01:33 PM (IST) Jul 23

Karnataka News Live 23 July 2026ಸಚಿವನಾಗೋ ಆಸೆ ವ್ಯಕ್ತಪಡಿಸಿದ ಪ್ರದೀಪ್ ಈಶ್ವರ್; 'ಕೊಡದಿದ್ರೆ..' ಏನು ಮಾಡ್ತಾರಂತೆ ಗೊತ್ತಾ?

ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗ ನಡೆಯಲಿದೆ. ನಮ್ಮ ಪಕ್ಷದಲ್ಲಿ ಸಾಕಷ್ಟು ಜನ ಸಮರ್ಥರಿದ್ದಾರೆ. ಅದರಲ್ಲೂ ಬಹಳಷ್ಟು ಮಂದಿ ಯುವಕರಿದ್ದು, ಅವರೆಲ್ಲರಿಗೂ ಸಚಿವರಾಗುವ ಅರ್ಹತೆ ಇದೆ. ಅದೇ ರೀತಿ ನನಗೂ ಕೂಡ ಸಚಿವನಾಗಬೇಕು ಎನ್ನುವ ಬಯಕೆ ಮತ್ತು ಆಸೆ ಎರಡೂ ಇದೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

Read Full Story
01:11 PM (IST) Jul 23

Karnataka News Live 23 July 2026ಇನ್​ಸ್ಟಾ ಫೋಟೋಗೆ 'ಸುಂದರಿ' ಎಂದು ಕಮೆಂಟ್​ - ಬೆಂಗಳೂರು ಯುವಕನ ವಿರುದ್ಧ ಕ್ರಿಮಿನಲ್​ ಕೇಸ್​! ಕೋರ್ಟ್​ ಹೇಳಿದ್ದೇನು

ಸಹಪಾಠಿಯ ಫೋಟೋಗೆ 'ಸುಂದರಿ' ಎಂದು ಕಮೆಂಟ್ ಮಾಡಿದ್ದಕ್ಕೆ ಯುವಕನೊಬ್ಬನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಇದು 'ಜೆನ್‌ಜಿ' ಶೈಲಿಯ ಖಾಸಗಿ ಸಂಭಾಷಣೆಯಷ್ಟೇ, ಅಪರಾಧವಲ್ಲ ಎಂದು ಹೇಳಿ ಎಫ್‌ಐಆರ್ ರದ್ದುಗೊಳಿಸಿ ಯುವಕನಿಗೆ ರಿಲೀಫ್ ನೀಡಿದೆ.
Read Full Story
12:17 PM (IST) Jul 23

Karnataka News Live 23 July 2026ಇಟ್ಟ ವಸ್ತು ಇದ್ದಕ್ಕಿದ್ದಂತೆ ಮಾಯ ಆದ್ರೆ ಅದ್ರ ಹಿಂದಿದೆ ʼಚೌಡಿ ಕಾಟʼ; ಆ ಬಿಳಿ ಸೀರೆ ಚೌಡಿ ಚೇಷ್ಟೆಯ ಅಸಲಿ ಕಥೆ!

Goddess Chowdi: ಏನಾದರೂ ವಸ್ತು ಆಗ ಇತ್ತು, ಈಗ ಕಾಣಿಸಿಲ್ಲ ಅಂದ್ರೆ ಕೆಲವರು ಚೌಡಿ ಕಾಟ ಎನ್ನೋದುಂಟು. ಹಳ್ಳಿಗಳಲ್ಲಿ, ಜನಪದ ಸಂಸ್ಕೃತಿಯಲ್ಲಿ 'ಚೌಡಿ ಕಾಟ' ಅಥವಾ 'ಚೌಡಿ ಮುಚ್ಚಿದ್ದಾಳೆ' ಎಂಬ ಮಾತು ತುಂಬಾ ಕೇಳಿ ಬರುತ್ತಲಿರುತ್ತದೆ. ಯಾವುದಾದರೂ ವಸ್ತು ಕಣ್ಣೆದುರಲ್ಲೇ ಇದ್ದರೂ ತಕ್ಷಣಕ್ಕೆ ಕಾಣಿಸದೇ ಹೋದಾಗ ಈ ರೀತಿ ಹೇಳಲು ಕಾರಣ ಇದೆ.

Read Full Story
12:13 PM (IST) Jul 23

Karnataka News Live 23 July 2026ಹೃದಯ ವಿದ್ರಾವಕ ಘಟನೆ.. ಮಗನ ಅಗಲಿಕೆ ನೋವು ತಾಳಲಾರದೇ ಕುಸಿದುಬಿದ್ದು ಪ್ರಾಣಬಿಟ್ಟ ಅಮ್ಮ

ಹೊಟ್ಟೆ ನೋವಿನಿಂದ ಮಗ ಹೋದರೆ, ಮಗನ ಅಗಲಿಕೆಯ ನೋವಿನಿಂದ ತಾಯಿ ಹೋದರು. ಸಾವಿನಲ್ಲೂ ಈ ಕರುಳ ಬಳ್ಳಿ ಬೇರ್ಪಡಲಿಲ್ಲ ಎಂಬುದು ಮಾತ್ರ ಈ ಘಟನೆಯ ಅತ್ಯಂತ ಕರುಣಾಜನಕ ಸತ್ಯ.

Read Full Story