MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಇಂಗ್ಲೆಂಡ್ ಸರಣಿ ಹೊಡೆತ - ಈ ನಾಲ್ವರ ವೃತ್ತಿ ಬದುಕು ಅಪಾಯದಲ್ಲಿದೆ..!

ಇಂಗ್ಲೆಂಡ್ ಸರಣಿ ಹೊಡೆತ - ಈ ನಾಲ್ವರ ವೃತ್ತಿ ಬದುಕು ಅಪಾಯದಲ್ಲಿದೆ..!

ಟೀಂ ಇಂಡಿಯಾದ ನಾಲ್ವರು ಸ್ಟಾರ್ ಆಟಗಾರರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಇಂಗ್ಲೆಂಡ್ ಸೀರಿಸ್ ವಿರುದ್ಧ ಹೀನಾಯ ಸೋಲು ಬೆನ್ನಲ್ಲೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ಅವರು ಯಾರು ಎಂದು ತಿಳಿದುಕೊಳ್ಳಲು ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ..

2 Min read
Author : Ganesh Mabla Gowda
Published : Jul 23 2026, 03:46 PM IST
Share this Photo Gallery
  • FB
  • TW
  • Linkdin
  • Whatsapp
15
ಮ್ಯಾನೇಜ್ಮೆಂಟ್‌ಗೆ ದೊಡ್ಡ ತಲೆನೋವು
Image Credit : bcci

ಮ್ಯಾನೇಜ್ಮೆಂಟ್‌ಗೆ ದೊಡ್ಡ ತಲೆನೋವು

ಇಂಗ್ಲೆಂಡ್ ಪ್ರವಾಸಕ್ಕೆ ಭರ್ಜರಿ ತಯಾರಿಯೊಂದಿಗೆ ತೆರಳಿದ್ದ ಟೀಮ್ ಇಂಡಿಯಾ ಏಕದಿನ ಸರಣಿಯಲ್ಲಿ ಮುಖಭಂಗ ಅನುಭವಿಸಿದೆ. ಬಲಿಷ್ಠ ಆಟಗಾರರಿದ್ದರೂ ಸಹ 1-2 ಅಂತರದಿಂದ ಸರಣಿ ಸೋತಿರುವುದು ಬಿಸಿಸಿಐ ಮತ್ತು ಮ್ಯಾನೇಜ್‌ಮೆಂಟ್‌ಗೆ ತಲೆನೋವು ತಂದಿದೆ. ಈ ಸೋಲಿನ ಬೆನ್ನಲ್ಲೇ ತಂಡದಲ್ಲಿ ಭಾರೀ ಬದಲಾವಣೆಯಾಗುವ ಲಕ್ಷಣಗಳು ಕಾಣಿಸುತ್ತಿದ್ದು ಕಳಪೆ ಪ್ರದರ್ಶನ ನೀಡಿದ ನಾಲ್ವರು ಆಟಗಾರರ ಭವಿಷ್ಯ ಈಗ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಮುಂದಿನ ಏಕದಿನ ಸರಣಿಗಳಲ್ಲಿ ಈ ನಾಲ್ವರು ಆಟಗಾರರಿಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಆ ನಾಲ್ವರು ಯಾರು? ಇಲ್ಲಿದೆ ವಿವರ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ವಾಷಿಂಗ್ಟನ್ ಸುಂದರ್
Image Credit : ANI

ವಾಷಿಂಗ್ಟನ್ ಸುಂದರ್

ಸ್ಪಿನ್ ಆಲ್ ರೌಂಡರ್ ಆಗಿ ತಂಡಕ್ಕೆ ಸಮತೋಲನ ನೀಡಬೇಕಿದ್ದ ವಾಷಿಂಗ್ಟನ್ ಸುಂದರ್ ಸಂಪೂರ್ಣವಾಗಿ ನಿರಾಸೆ ಮೂಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡು ಏಕದಿನ ಪಂದ್ಯಗಳಲ್ಲಿ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಫ್ಲಾಪ್ ಆಗಿದ್ದಾರೆ. ಮೊದಲ ಪಂದ್ಯದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದರೂ, ಎರಡನೇ ಪಂದ್ಯದಲ್ಲಿ ಕೇವಲ 2 ರನ್‌ಗಳಿಗೆ ಔಟ್ ಆದರು. ಬೌಲಿಂಗ್‌ನಲ್ಲಂತೂ ಒಂದೂ ವಿಕೆಟ್ ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಸುಂದರ್ ಸ್ಥಾನಕ್ಕೆ ಈಗ ಕುತ್ತು ಬಂದಿದೆ.

Related Articles

Related image1
ಗಂಭೀರ್‌ ಕೋಚ್‌ ಆದ್ಮೇಲೆ.. ಈ ಮೂರು ಹಿರಿಯ ಆಟಗಾರರ ವೃತ್ತಿ ಬದುಕಿಗೆ ಬಿದ್ದಿದೆ ಕೊನೆಯ ಮೊಳೆ..?
Related image2
ಸ್ಮೃತಿ ಮಂದಾನ ನೋಡಿ ದಂಗಾದ ಆರ್‍‌ಸಿಬಿ ಫ್ಯಾನ್ಸ್.. ಈಗ ಅವರು Super Giant ತಂಡದ ಉಪನಾಯಕಿ
35
ಶಿವಂ ದುಬೆ
Image Credit : Getty

ಶಿವಂ ದುಬೆ

ಟಿ20 ಮಾದರಿಯಲ್ಲಿ ಅಬ್ಬರಿಸುವ ಹಾರ್ದಿಕ್ ಪಾಂಡ್ಯಗೆ ಪರ್ಯಾಯ ವೇಗದ ಬೌಲಿಂಗ್ ಆಲ್ ರೌಂಡರ್ ಎಂದು ಶಿವಂ ದುಬೆಯನ್ನು ಏಕದಿನ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ, ತಮಗೆ ಸಿಕ್ಕ ಸುವರ್ಣ ಅವಕಾಶವನ್ನು ದುಬೆ ಕೈಚೆಲ್ಲಿದ್ದಾರೆ. ಆಡಿದ ಎರಡು ಪಂದ್ಯಗಳಲ್ಲಿ ಒಂದು ಬಾರಿ 'ಗೋಲ್ಡನ್ ಡಕ್' (ಮೊದಲ ಎಸೆತಕ್ಕೆ ಸೊನ್ನೆ) ಆಗಿದ್ದು ತಂಡಕ್ಕೆ ಹೊರೆಯಾಯಿತು. ಬೌಲಿಂಗ್‌ನಲ್ಲೂ ಎರಡು ಪಂದ್ಯಗಳಿಂದ ಕೇವಲ 2 ವಿಕೆಟ್ ಪಡೆದ ದುಬೆ ಮೇಲೆ ಸೆಲೆಕ್ಟರ್ಸ್ ನಂಬಿಕೆ ಕಳೆದುಕೊಳ್ಳುವ ಸಾಧ್ಯತೆಯಿದೆ.

45
ಇಶಾನ್ ಕಿಶನ್
Image Credit : X/@AnkanKar (Screengrab)

ಇಶಾನ್ ಕಿಶನ್

ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಮೇಲೆ ಭಾರಿ ನಿರೀಕ್ಷೆ ಇಡಲಾಗಿತ್ತು. ಆದರೆ ಇಂಗ್ಲೆಂಡ್‌ನ ವೇಗದ ಪಿಚ್‌ಗಳಲ್ಲಿ ಕಿಶನ್ ಬ್ಯಾಟ್ ಸದ್ದು ಮಾಡಲಿಲ್ಲ. ಎರಡು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 1 ಮತ್ತು 14 ರನ್ ಗಳಿಸಿ ಪೆವಿಲಿಯನ್ ಸೇರಿದರು. ಕಿಶನ್ ಅವರ ಈ ವೈಫಲ್ಯದಿಂದ ಭಾರತದ ಮಧ್ಯಮ ಕ್ರಮಾಂಕ ಕುಸಿಯಿತು. ಸಂಜು ಸ್ಯಾಮ್ಸನ್ ಮತ್ತು ಕೆ.ಎಲ್. ರಾಹುಲ್ ತಂಡಕ್ಕೆ ಮರಳಿದರೆ ಇಶಾನ್ ಕಿಶನ್ ಸ್ಥಾನ ಕಳೆದುಕೊಳ್ಳುವುದು ಗ್ಯಾರಂಟಿ.

55
ಪ್ರಿನ್ಸ್ ಯಾದವ್
Image Credit : X/@BCCI

ಪ್ರಿನ್ಸ್ ಯಾದವ್

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯಗಳಲ್ಲಿ ಮಿಂಚಿದ್ದ ಯುವ ವೇಗಿ ಪ್ರಿನ್ಸ್ ಯಾದವ್, ಲಾರ್ಡ್ಸ್‌ನಲ್ಲಿ ನಡೆದ ನಿರ್ಣಾಯಕ ಏಕದಿನ ಪಂದ್ಯದಲ್ಲಿ ವಿಫಲರಾದರು. ತಮ್ಮ ಕೋಟಾದ 10 ಓವರ್‌ಗಳಲ್ಲಿ ಬರೋಬ್ಬರಿ 79 ರನ್ ಬಿಟ್ಟುಕೊಟ್ಟ ಅವರು (7.90 ಎಕಾನಮಿ) ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತರಾದರು. ವಿದೇಶಿ ನೆಲದ ಏಕದಿನ ಪಂದ್ಯಗಳಲ್ಲಿ ಪ್ರಿನ್ಸ್ ಅವರ ಅನುಭವದ ಕೊರತೆ ಎದ್ದು ಕಾಣುತ್ತಿತ್ತು. ಶಾರ್ದೂಲ್ ಠಾಕೂರ್ ಅಥವಾ ಪ್ರಸಿದ್ಧ ಕೃಷ್ಣ ಮರಳಿದರೆ ಪ್ರಿನ್ಸ್ ಯಾದವ್ ಬೆಂಚ್ ಕಾಯಬೇಕಾಗಬಹುದು.

ಸರಣಿ ಸೋಲಿನಿಂದ ಕಂಗೆಟ್ಟಿರುವ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್, ಮುಂದಿನ ಸರಣಿಗಳಲ್ಲಿ ಯುವಕರಿಗೆ ಮತ್ತು ಫಾರ್ಮ್‌ನಲ್ಲಿರುವ ಆಟಗಾರರಿಗೆ ಹೆಚ್ಚು ಆದ್ಯತೆ ನೀಡಲು ನಿರ್ಧರಿಸಿದೆ. ಈ ನಾಲ್ವರು ಆಟಗಾರರು ಮತ್ತೆ ತಂಡಕ್ಕೆ ಮರಳಬೇಕಾದರೆ ದೇಶೀಯ ಕ್ರಿಕೆಟ್‌ನಲ್ಲಿ ಭಾರಿ ಕಸರತ್ತು ನಡೆಸಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GM
Ganesh Mabla Gowda
ಟೀಮ್ ಇಂಡಿಯಾ
ಕ್ರಿಕೆಟ್
ಕ್ರೀಡೆಗಳು
ನ್ಯೂಸ್‌ ರೌಂಡ್‌ಅಪ್
ಸುದ್ದಿ
Latest Videos
Recommended Stories
Recommended image1
'ನಾನು ಅವನಿಗೆ ಹೆಚ್ಚಿಗೆ.....': ಜಿಂಬಾಬ್ವೆ ಎದುರಿನ ಮೊದಲ ಮ್ಯಾಚ್‌ಗೂ ಮುನ್ನ ವೈಭವ್ ಸೂರ್ಯವಂಶಿ ಬಗ್ಗೆ ಶ್ರೇಯಸ್ ಅಯ್ಯರ್ ಅಚ್ಚರಿ ಹೇಳಿಕೆ
Recommended image2
ಬೇಕಂತಲೇ ನೋ-ಬಾಲ್ ಎಸೆದರೆ ಇನ್ನು ಮ್ಯಾಚ್‌ನಿಂದಲೇ ಔಟ್! BCCI ಖಡಕ್ ತೀರ್ಮಾನ
Recommended image3
'ಶ್ರೀರಾಮನ ನಿಂದಿಸೋದು' -ಡೆಲ್ಲಿ ಪ್ರತಿಭಟನೆ ವಿರುದ್ಧ ಪಾಕ್ ಮಾಜಿ ಕ್ರಿಕೆಟಿಗ ಆಕ್ರೋಶ
Related Stories
Recommended image1
ಗಂಭೀರ್‌ ಕೋಚ್‌ ಆದ್ಮೇಲೆ.. ಈ ಮೂರು ಹಿರಿಯ ಆಟಗಾರರ ವೃತ್ತಿ ಬದುಕಿಗೆ ಬಿದ್ದಿದೆ ಕೊನೆಯ ಮೊಳೆ..?
Recommended image2
ಸ್ಮೃತಿ ಮಂದಾನ ನೋಡಿ ದಂಗಾದ ಆರ್‍‌ಸಿಬಿ ಫ್ಯಾನ್ಸ್.. ಈಗ ಅವರು Super Giant ತಂಡದ ಉಪನಾಯಕಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved