ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ನಗರದ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು ಹೊಸ ಬಸ್ ಸೇವೆಗಳನ್ನು ಆರಂಭಿಸಿದೆ. ಜುಲೈ 22 ಮತ್ತು 23 ರಿಂದ ಬನಶಂಕರಿ, ಮರಳವಾಡಿ, ಹಾರೋಹಳ್ಳಿ ಮತ್ತು ಪೀಣ್ಯ 2ನೇ ಹಂತದಂತಹ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ನೂತನ ಮಾರ್ಗಗಳು ಕಾರ್ಯಾರಂಭ ಮಾಡಿವೆ.
ಬೆಂಗಳೂರು (ಜು.23): ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಹಲವು ಹೊಸ ಬಸ್ ಸೇವೆಗಳನ್ನು ಪರಿಚಯಿಸುತ್ತಿದೆ. ನಗರದ ವಿವಿಧ ಭಾಗಗಳ ಪ್ರಯಾಣಿಕರ ಅನುಕೂಲಕ್ಕಾಗಿ ಜುಲೈ 22 ಮತ್ತು ಜುಲೈ 23 ರಿಂದ ಜಾರಿಗೆ ಬರುವಂತೆ ನೂತನ ಬಸ್ ಮಾರ್ಗಗಳನ್ನು ಆರಂಭಿಸಲಾಗಿದೆ.
ಹೊಸ ಬಸ್ ಮಾರ್ಗಗಳು, ಅವು ಹಾದುಹೋಗುವ ಹಾದಿ ಮತ್ತು ಸಮಯದ ಸಂಪೂರ್ಣ ವಿವರ ಇಲ್ಲಿದೆ
ಜುಲೈ 22 ರಿಂದ ಆರಂಭವಾಗಿರುವ ಬಸ್ ಸೇವೆಗಳು
ಮಾರ್ಗ ಸಂಖ್ಯೆ 213WB (ಬನಶಂಕರಿ ಟಿಟಿಎಂಸಿಯಿಂದ ಮರಳವಾಡಿ)
ಸಂಚರಿಸುವ ಮಾರ್ಗ: ಬನಶಂಕರಿ ಟಿಟಿಎಂಸಿ - ಕೋಣನಕುಂಟೆ ಕ್ರಾಸ್ - ಕಗ್ಗಲಿಪುರ - ಹಾರೋಹಳ್ಳಿ - ದೊಡ್ಡಸಾದೇನಹಳ್ಳಿ ಕ್ರಾಸ್ - ಅಗರ - ಮಲ್ಲಿಗೆ ಮೆಟ್ಟಿಲು - ಚಿಕ್ಕಮರಳವಾಡಿ ಮಾರ್ಗವಾಗಿ ಮರಳವಾಡಿ.
ಟ್ರಿಪ್ ವಿವರ: ಪ್ರತಿದಿನ 1 ಬಸ್ ಕಾರ್ಯನಿರ್ವಹಿಸಲಿದ್ದು, ಒಟ್ಟು 4 ಏಕಮುಖ (One-way) ಟ್ರಿಪ್‌ಗಳನ್ನು ಮಾಡಲಿದೆ.
ಸಮಯ: ಬನಶಂಕರಿ ಟಿಟಿಎಂಸಿಯಿಂದ ಮೊದಲ ಬಸ್ ಬೆಳಿಗ್ಗೆ 6:20 ಕ್ಕೆ ಮತ್ತು ಕೊನೆಯ ಬಸ್ ಸಂಜೆ 4:55 ಕ್ಕೆ ಹೊರಡಲಿದೆ. ಮರಳವಾಡಿನಿಂದ ಮೊದಲ ಬಸ್ ಸೇವೆ ಬೆಳಿಗ್ಗೆ 8:00 ಗಂಟೆಗೆ ಹಾಗೂ ಕೊನೆಯ ಸೇವೆ ರಾತ್ರಿ 7:35 ಕ್ಕೆ ಇರಲಿದೆ.
ಮಾರ್ಗ ಸಂಖ್ಯೆ 213VB (ಹಾರೋಹಳ್ಳಿಯಿಂದ ಬನ್ನಿಕುಪ್ಪೆ ಸರ್ಕಲ್)
ಸಂಚರಿಸುವ ಮಾರ್ಗ: ಹಾರೋಹಳ್ಳಿ - ಹಾರೋಹಳ್ಳಿ ಕೈಗಾರಿಕಾ ಪ್ರದೇಶ - ಕೀರನಗೆರೆ ಗೇಟ್ - ದಯಾನಂದ ಸಾಗರ್ ಮೆಡಿಕಲ್ ಕಾಲೇಜು ಮತ್ತು ಅಥೆಮ್ (Athem) ಫ್ಯಾಕ್ಟರಿ ಮಾರ್ಗವಾಗಿ ಬನ್ನಿಕುಪ್ಪೆ ಸರ್ಕಲ್.
ಟ್ರಿಪ್ ವಿವರ: ಈ ಮಾರ್ಗದಲ್ಲಿ 2 ಬಸ್‌ಗಳನ್ನು ನಿಯೋಜಿಸಲಾಗಿದ್ದು, ಪ್ರತಿದಿನ ಒಟ್ಟು 40 ಏಕಮುಖ (One-way) ಟ್ರಿಪ್‌ಗಳನ್ನು ನಡೆಸಲಿವೆ.
ಜುಲೈ 23 ರಿಂದ ಆರಂಭವಾಗಿರುವ ಬಸ್ ಸೇವೆಗಳು (ವರ್ತುಲ ಮಾರ್ಗಗಳು)
ಚಕ್ರ-7 (ಪೀಣ್ಯ 2ನೇ ಹಂತದಿಂದ ಪೀಣ್ಯ 2ನೇ ಹಂತ - ವರ್ತುಲ ಸೇವೆ)
ಸಂಚರಿಸುವ ಮಾರ್ಗ: ಪೀಣ್ಯ 2ನೇ ಹಂತ - ಚೇತನ್ ಸರ್ಕಲ್ - ಕಾಳಿಕಾ ನಗರ - ಆಂಧ್ರರಹಳ್ಳಿ - ತಿಗಲರಪಾಳ್ಯ - ಮಂಜುಶ್ರೀ ಗಾರ್ಮೆಂಟ್ಸ್ ಮಾರ್ಗವಾಗಿ ಮರಳಿ ಪೀಣ್ಯ 2ನೇ ಹಂತ.
ಟ್ರಿಪ್ ವಿವರ: ಈ ಮಾರ್ಗದಲ್ಲಿ 2 ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.
ಸಮಯ: ಮೊದಲ ಬಸ್ ಸೇವೆ ಬೆಳಿಗ್ಗೆ 6:20 ಕ್ಕೆ ಆರಂಭವಾದರೆ, ಕೊನೆಯ ಬಸ್ ರಾತ್ರಿ 8:50 ಕ್ಕೆ ಲಭ್ಯವಿರಲಿದೆ.
ಚಕ್ರ-7A (ಪೀಣ್ಯ 2ನೇ ಹಂತದಿಂದ ಪೀಣ್ಯ 2ನೇ ಹಂತ - ವರ್ತುಲ ಸೇವೆ)
ಸಂಚರಿಸುವ ಮಾರ್ಗ: ಪೀಣ್ಯ 2ನೇ ಹಂತ - ಮಂಜುಶ್ರೀ ಗಾರ್ಮೆಂಟ್ಸ್ - ತಿಗಲರಪಾಳ್ಯ - ಅಂಧ್ರಹಳ್ಳಿ - ಕಾಳಿಕಾ ನಗರ - ಚೇತನ್ ಸರ್ಕಲ್ ಮಾರ್ಗವಾಗಿ ಮರಳಿ ಪೀಣ್ಯ 2ನೇ ಹಂತ.
ಟ್ರಿಪ್ ವಿವರ: ಈ ಮಾರ್ಗದಲ್ಲಿಯೂ 2 ಬಸ್‌ಗಳನ್ನು ನಿಯೋಜಿಸಲಾಗಿದೆ.
ಸಮಯ: ಮೊದಲ ಬಸ್ ಬೆಳಿಗ್ಗೆ 6:30 ಕ್ಕೆ ಹೊರಟರೆ, ಕೊನೆಯ ಬಸ್ ರಾತ್ರಿ 9:00 ಗಂಟೆಗೆ ಕಾರ್ಯಾಚರಣೆ ನಡೆಸಲಿದೆ.


