ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಇಲಾಖೆಯ ಉತ್ಖನನದಲ್ಲಿ ಪ್ರಾಚೀನ ಎಲುಬಿನ ಚೂರುಗಳು ಮತ್ತು ಮಣ್ಣಿನ ಬಿಲ್ಲೆ ಪತ್ತೆಯಾಗಿವೆ. ಈ ಐತಿಹಾಸಿಕ ಸ್ಥಳವು ಶೈಕ್ಷಣಿಕ ಅಧ್ಯಯನ ಕೇಂದ್ರವಾಗಿ ಮಾರ್ಪಟ್ಟಿದ್ದು, ನಿಧಿ ಕುರಿತ ಮೂಢನಂಬಿಕೆಗಳು ಮತ್ತು ಸ್ಥಳೀಯರ ಹಕ್ಕುಗಳ ಬಗ್ಗೆ ಸಾಮಾಜಿಕ ಚರ್ಚೆಗೂ ಕಾರಣವಾಗಿದೆ.
- Home
- News
- State
- Karnataka News Live: ಲಕ್ಕುಂಡಿ ಉತ್ಖನನ 6ನೇ ದಿನ ಏನೆಲ್ಲಾ ಆಯ್ತು? 7 ತಲೆಯ ಹಾವು ಇರೋದು ನಿಜವೇ? ಬಯಲಾಯ್ತು ಬೆಚ್ಚಿಬೀಳಿಸೋ ಸತ್ಯ!
Karnataka News Live: ಲಕ್ಕುಂಡಿ ಉತ್ಖನನ 6ನೇ ದಿನ ಏನೆಲ್ಲಾ ಆಯ್ತು? 7 ತಲೆಯ ಹಾವು ಇರೋದು ನಿಜವೇ? ಬಯಲಾಯ್ತು ಬೆಚ್ಚಿಬೀಳಿಸೋ ಸತ್ಯ!

ಉರುಸು ಮೆರವಣಿಗೆ ವೇಳೆ ಹಿಂದೂ ಯುವತಿ ಬುರುಕಾ ಧರಿಸಿದ ವಿಚಾರಕ್ಕೆ ಹಿಂದೂ ಯುವಕರ ಮೇಲೆ ಮುಸ್ಲಿಂ ಹುಡುಗರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅಬು ಸುಲ್ತಾನ್, ನೂರ್ ಅಹ್ಮದ್, ಮೊಹಮದ್ ನೈದ್, ಅಭಿದ್ ಅಹಮದ್ ಸೇರಿದಂತೆ 10 ಮುಸ್ಲಿಂ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪಟ್ಟಣದ ದರ್ಗಾದ ಮೈದಾನದಲ್ಲಿ ನಡೆಯುತ್ತಿರುವ ಉರುಸ್ನಲ್ಲಿ ಸುತ್ತಾಡಿಕೊಂಡು ಬರಲೆಂದು ಪಟ್ಟಣದ ದಿರೀಡ್ ನಗರದ ಹಿಂದೂ ಸಮುದಾಯದ ಮೂವರು ಹುಡುಗರು, ಒಬ್ಬ ಹುಡುಗಿ ಮತ್ತು ಮುಸ್ಲಿಂ ಸಮುದಾಯದ ಇಬ್ಬರು ಹುಡುಗ, ಹುಡುಗಿ ಒಟ್ಟಾಗಿ ಬಂದಿದ್ದರು. ಈ ವೇಳೆ 20 ಮುಸ್ಲಿಂ ಹುಡುಗರು ಏಕಾಏಕಿ ಬಂದು ಹಿಂದೂ ಹುಡುಗಿ ಹಾಕಿಕೊಂಡಿದ್ದ ಬುರುಕಾ ತೆಗೆಸಿ ನೀನು ಯಾವ ಜಾತಿ? ನಿನ್ನ ಆಧಾರ್ ಕಾರ್ಡ್ ತೋರಿಸು? ಎಂದು ಗಲಾಟೆ ಮಾಡಿದ್ದಾರೆ. ಆಗ ಜತೆಗಿದ್ದ ಹಿಂದೂ ಹುಡುಗರ ಮೇಲೆಯೂ ಈ ಪುಂಡರು ಹಲ್ಲೆ ಮಾಡಿದ್ದರಿಂದ ಸಾವಿರಾರು ಸಂಖ್ಯೆಯ ಜನರು ಜಮಾಯಿಸಿದರು.
ಹಿಂದೂ ಜಾರಗಣೆ ವೇದಿಕೆಯ ಮುಖಂಡರು, ಭಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ಜಮಾಯಿಸಿದ್ದರಿಂದ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿತ್ತು. ಸುದ್ದಿ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಕೆಜಿಎಫ್ ಎಸ್ಪಿ ಪರಿಸ್ಥಿತಿ ತಿಳಿಗೊಳಿಸಿದರು.
Karnataka News Live 22 January 2026ಲಕ್ಕುಂಡಿ ಉತ್ಖನನ 6ನೇ ದಿನ ಏನೆಲ್ಲಾ ಆಯ್ತು? 7 ತಲೆಯ ಹಾವು ಇರೋದು ನಿಜವೇ? ಬಯಲಾಯ್ತು ಬೆಚ್ಚಿಬೀಳಿಸೋ ಸತ್ಯ!
Karnataka News Live 22 January 2026ಗ್ರೀನ್‌ಲ್ಯಾಂಡ್‌ನ ಬಳಿಕ ಹಿಂದು ಹಿಂದೂ ಮಹಾಸಾಗರಕ್ಕೆ ಟ್ರಂಪ್ ಕಣ್ಣು
ರಕ್ಷಣೆ ಮತ್ತು ಸಂಪನ್ಮೂಲದ ವಿಷಯದಲ್ಲಿ ಅತ್ಯಂತ ಮಹತ್ವವಿರುವ ಗ್ರೀನ್‌ಲ್ಯಾಂಡ್ ದ್ವೀಪ ವಶದ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಲೇ ಇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣ್ಣು ಇದೀಗ ಹಿಂದೂ ಮಹಾಸಾಗರದಲ್ಲಿ ಪುಟ್ಟ ದ್ವೀಪದ ಡಿಯಾಗೋ ಗಾರ್ಸಿಯೋದ ಮೇಲೆ ಬಿದ್ದಿದೆ.
Karnataka News Live 22 January 2026ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ₹4500 ಕೋಟಿ - ಸಚಿವ ಜಮೀರ್ ಅಹ್ಮದ್ ಖಾನ್
ಅಲ್ಪಸಂಖ್ಯಾತ ಹೆಣ್ಣುಮಕ್ಕಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡವನ್ನು ಸಚಿವ ಜಮೀರ್ ಅಹ್ಮದ್ ಖಾನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ರಾಜ್ಯದ ಎಲ್ಲಾ ಅಲ್ಪಸಂಖ್ಯಾತ ವಸತಿ ಶಾಲೆಗಳಿಗೆ ಡಿಜಿಟಲ್ ಕ್ಲಾಸ್ ರೂಮ್ ಸೌಲಭ್ಯ ಹಾಗೂ 100 ಹೊಸ ಶಾಲೆಗಳ ಸ್ಥಾಪನೆಯನ್ನು ಘೋಷಿಸಿದರು.
Karnataka News Live 22 January 2026ಅಮೆರಿಕ-ಇಯು ತೆರಿಗೆ ಸಮರ - ವ್ಯಾಪಾರ ಒಪ್ಪಂದಕ್ಕೆ ಬ್ರೇಕ್
ಗ್ರೀನ್‌ಲ್ಯಾಂಡ್ ವಶ ಕುರಿತು ದಾವೋಸ್ ಶೃಂಗದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಪುನರುಚ್ಚಾರ ಮಾಡಿದ ಬೆನ್ನಲ್ಲೇ, ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದ ಮಾತುಕತೆ ಸ್ಥಗಿತಗೊಳಿಸಲು ಯುರೋಪಿಯನ್ ಸಂಸತ್ ನಿರ್ಧರಿಸಿದೆ.
Karnataka News Live 22 January 2026ಬೆಂಗಳೂರಿನಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಟಾಪ್ 10 ಉದ್ಯೋಗಗಳು - ಮೊದಲ ಸ್ಥಾನದಲ್ಲಿ ಎಐ ಎಂಜಿನಿಯರ್
ಲಿಂಕ್ಡ್‌ಇನ್‌ನ ‘ಜಾಬ್ಸ್ ಆನ್ ದಿ ರೈಸ್ 2026’ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಎಐ ಇಂಜಿನಿಯರ್ ಹುದ್ದೆಯು ಅತಿ ವೇಗವಾಗಿ ಬೆಳೆಯುತ್ತಿರುವ ಉದ್ಯೋಗವಾಗಿದೆ. ತಂತ್ರಜ್ಞಾನದ ಬದಲಾವಣೆಗೆ ಬೇಕಾದ ಕೌಶಲ್ಯಗಳ ಕೊರತೆ ಮತ್ತು ಹೆಚ್ಚುತ್ತಿರುವ ಪೈಪೋಟಿಯ ಬಗ್ಗೆ ಅನೇಕ ವೃತ್ತಿಪರರು ಆತಂಕ ವ್ಯಕ್ತಪಡಿಸಿದ್ದಾರೆ.