ಅಯೋಗ್ಯ 2 ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಕನ್ನಡ ಚಿತ್ರರಂಗದ ಏಕತೆ ಬಗ್ಗೆ ಮಾತನಾಡಿದ್ದಾರೆ. ಸಣ್ಣಪುಟ್ಟ ಜಗಳ, ಮುನಿಸು ಮರೆತು ಸಿನಿಮಾಗಾಗಿ ಒಂದಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದ್ದಾರೆ.
Ayogya 2 - ಜಗಳ ಆಗುತ್ತೆ, ಮಾತು ಬರುತ್ತೆ, ಅದೆಲ್ಲ ಮರೆತು ಸಿನಿಮಾಕ್ಕಾಗಿ ಒಂದಾಗೋಣ - ರಚಿತಾ ರಾಮ್

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಇಂದು ರಾಜ್ಯದೆಲ್ಲೆಡೆ ಯೋಗಾಭ್ಯಾಸ ನಡೆಸಲಾಗುತ್ತಿದೆ. ವಿಧಾನಸೌಧ ಮುಂಭಾಗದ ಮೆಟ್ಟಿಲಲ್ಲಿ 12 ನೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗಿದೆ. ಆಯುಷ್ ಇಲಾಖೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದ್ದಾರೆ. ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಪರಮೇಶ್ವರ ,ಯು ಟಿ ಖಾದರ್,ಸೇರಿದಂತೆ ಹಲವು ಗಣ್ಯರು. ಭಾಗಿಯಾಗಿದ್ದಾರೆ..ಸುಧಾರಾಣಿ,ವಶಿಷ್ಠ ಸಿಂಹ ,ಹರಿಪ್ರಿಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಯಲ್ಲಿ ಭಾಗಿಯಾಗಿದ್ದಾರೆ.
Karnataka News Live 21st June:Ayogya 2 - ಜಗಳ ಆಗುತ್ತೆ, ಮಾತು ಬರುತ್ತೆ, ಅದೆಲ್ಲ ಮರೆತು ಸಿನಿಮಾಕ್ಕಾಗಿ ಒಂದಾಗೋಣ - ರಚಿತಾ ರಾಮ್
Karnataka News Live 21st June:'Useless Fellows' - ಡಿಕೆಶಿ ಘೋಷಣೆಗೆ ಸಿಟ್ಟಾದ ಖರ್ಗೆ - ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಗುಡುಗು!
Mallikarjun Kharge: ಬಿ.ಕೆ. ಹರಿಪ್ರಸಾದ್ ಪದಗ್ರಹಣ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಪರ ಘೋಷಣೆಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗರಂ ಆಗಿದ್ದಾರೆ. ವ್ಯಕ್ತಿಪೂಜೆ ಬೇಡ, ಪಕ್ಷದ ಶಿಸ್ತು ಕಾಪಾಡಿ ಎಂದು ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
Karnataka News Live 21st June:Nora Fatehi - ಫಿಫಾ ವೇದಿಕೆಯಲ್ಲಿ ಮಿಂಚಿದ ನೋರಾ - ಆ ಪ್ರದರ್ಶನಕ್ಕೆ ಗೂಗಲ್‌ನಲ್ಲಿ ನಂಬರ್ 1 ಆದ ಬಾಲಿವುಡ್ ಬೆಡಗಿ!
Nora Fatehi: ಫಿಫಾ ವಿಶ್ವಕಪ್ 2026ರ ಉದ್ಘಾಟನಾ ಸಮಾರಂಭದಲ್ಲಿ ನೀಡಿದ ಭರ್ಜರಿ ಪ್ರದರ್ಶನದ ಬಳಿಕ ನೋರಾ ಫತೇಹಿ ಜಾಗತಿಕ ಮಟ್ಟದಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಗೂಗಲ್ ಟ್ರೆಂಡ್ಸ್‌ನಲ್ಲಿ ಬಾಲಿವುಡ್ ತಾರೆಯರನ್ನು..
Karnataka News Live 21st June:ವಿರಾಟ್ ಕೊಹ್ಲಿ, ಸಚಿನ್ ಆಟ ಗೊತ್ತು; Vaibhav Suryavanshi ಮುಂದೆ ಹಾಗೆ ಆಗ್ತಾನೆ, ನೋಡ್ತಿರಿ - ಪಾಕ್ ಆಟಗಾರ
ಇಷ್ಟು ವರ್ಷಗಳ ಕಾಲ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿಯ ಆಟ ನೋಡಿದ್ದ ವೀಕ್ಷಕರಿಗೆ ಈಗ ವೈಭವ್ ಸೂರ್ಯವಂಶಿ ಆರ್ಭಟ ನೋಡುವ ಸಮಯ ಸಿಕ್ಕಿದೆ. ಕೇವಲ 15 ವರ್ಷದ ಹುಡುಗನೊಬ್ಬ ಜಗತ್ತೇ ತಿರುಗಿ ನೋಡುವಂತೆ ಮಾಡಿದ್ದಾರೆ. ಭಾರತೀಯ ಕ್ರಿಕೆಟ್‌ನ 'ವಂಡರ್ ಕಿಡ್' ವೈಭವ್ ಸೂರ್ಯವಂಶಿ ಸಾಮಾನ್ಯ ಪ್ರತಿಭೆ ಅಲ್ಲ.
Karnataka News Live 21st June:Shankhpushpi - ಹೀಗೆ ಮಾಡಿದ್ರೆ ಸಿಕ್ಕಾಪಟ್ಟೆ ಶಂಖಪುಷ್ಪ ಬಿಡುತ್ತೆ; ದೇವರಿಗೆ ಪ್ರಿಯ, ಪವರ್‌ಫುಲ್
Shankhpushpi or aparajita gardening tips india: ಅಪರಾಜಿತಾ ಗಿಡವನ್ನು ಸರಿಯಾದ ಮಣ್ಣು, ಬಿಸಿಲು ಮತ್ತು ಆರೈಕೆಯಿಂದ ಬೆಳೆಸಬಹುದು. ಆದರೆ, ಇದರಲ್ಲಿ ಹೂಗಳು ಹೆಚ್ಚಾಗಿ ಬರಲು ಟೀ ಪುಡಿ ಮತ್ತು ಫಿಟ್ಕರಿ (ಪಟಿಕ) ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
Karnataka News Live 21st June:Fathers Day Movie - ಕನ್ನಡದ ಮೊದಲ ಬೈಕರ್ ಸಿನಿಮಾದಲ್ಲಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ನಟ ಅಜಿತ್ ಹಂದೆ!
Fathers Day Kannada movie: ELEVEN ELEMENTS ಸಂಸ್ಥೆ ಲಾಂಛನದಲ್ಲಿ ರಾಜಾರಾಮ್ ರಾಜೇಂದ್ರನ್ ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿರುವ ಚಿತ್ರ "ಫಾದರ್ಸ್ ಡೇ". ತಂದೆ - ಮಗನ ಬಾಂಧವ್ಯ ಸಾರುವ ಈ ಚಿತ್ರದ ಟ್ರೇಲರ್ ಫಾದರ್ಸ್ ಡೇ ದಿನದಂದೆ ಬಿಡುಗಡೆಯಾಗಿದೆ.
Karnataka News Live 21st June:Yash Movies - ಟಾಕ್ಸಿಕ್ ಅಷ್ಟೇ ಅಲ್ಲ, ಯಶ್ ಕೈಯಲ್ಲಿವೆ ಇನ್ನೂ 5 ದೊಡ್ಡ ಸಿನಿಮಾಗಳು - ಲಿಸ್ಟ್ ಇಲ್ಲಿದೆ
Yash Movies: ಕಳೆದ 4 ವರ್ಷಗಳಿಂದ ದೊಡ್ಡ ಪರದೆಯಿಂದ ದೂರವಿದ್ದ ಯಶ್, ತಮ್ಮ 'ಟಾಕ್ಸಿಕ್' ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. 2026-27ರಲ್ಲಿ ಅವರ ಹಲವು ದೊಡ್ಡ ಸಿನಿಮಾಗಳು ತೆರೆಗೆ ಬರಲಿವೆ. ಪೂರ್ತಿ ಡೀಟೇಲ್ಸ್ ಇಲ್ಲಿದೆ.
Karnataka News Live 21st June:ನಾಳೆ, ನಾಡಿದ್ದು ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ - ದಿನಪೂರ್ತಿ ಇರಲ್ಲ ಕರೆಂಟ್ - ನಿಮ್ ಏರಿಯಾ ಇದ್ಯಾ ಚೆಕ್ ಮಾಡಿಕೊಳ್ಳಿ
Karnataka News Live 21st June:Sreeleela - ಯೋಗ ನನ್ನ ಜೀವನವೇ ಬದಲಿಸಿತು - ಶ್ರೀಲೀಲಾ ಹೇಳಿದ ಅನುಭವ ವೈರಲ್
Sreeleela: ಅಂತರಾಷ್ಟ್ರೀಯ ಯೋಗ ದಿನದಂದು ನಟಿ ಶ್ರೀಲೀಲಾ ಯೋಗದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಇಂದಿನ ಒತ್ತಡ ಮತ್ತು ಆತಂಕದ ಬದುಕಿನಲ್ಲಿ ಯೋಗ ಪ್ರತಿಯೊಬ್ಬರ ಜೀವನದ ಭಾಗವಾಗಬೇಕು ಎಂದು ಅವರು ಕರೆ ನೀಡಿದ್ದಾರೆ.
Karnataka News Live 21st June:ಕಿರಾತಕ ಸಿನಿಮಾದಲ್ಲಿಯೇ ಫಿಕ್ಸ್ ಆಗಿತ್ತು ಟಾಕ್ಸಿಕ್ ರಿಲೀಸ್ ಡೇಟ್; ತಾರಾ ಹೇಳಿದ್ದ ಭವಿಷ್ಯನುಡಿ
Karnataka News Live 21st June:Gangavathi Temple News - ವಿಜಯನಗರ ಕಾಲದ ನಿಧಿಗಾಗಿ ಕಳ್ಳರ ಬೇಟೆ - ಕೊನೆಗೆ ನಡೆದಿದ್ದು ಏನು?
Gangavathi ತಾಲೂಕಿನ ತಿಮಲಾಪುರ ಗ್ರಾಮದ ಪುರಾತನ ಲಕ್ಷ್ಮೀ ದೇಗುಲದಲ್ಲಿ ನಿಧಿಗಾಗಿ ಕಳ್ಳರು ಶೋಧನೆ ನಡೆಸಲು ಯತ್ನಿಸಿದ್ದಾರೆ. ವಿಜಯನಗರ ಕಾಲದ ದೇಗುಲದಲ್ಲಿ ನಿಧಿ ಇದೆ ಎಂಬ ಅನುಮಾನದಿಂದ ದೇಗುಲಕ್ಕೆ ಹಾನಿ ಮಾಡಲಾಗಿದೆ.
Karnataka News Live 21st June:Bigg Boss ಶೋಗೆ ಹೋಗಿದ್ದು ತಂಗಿ, ಲವ್ ಆಗಿದ್ದು ಅಕ್ಕಂಗೆ; Bhavya Gowda ಮನೇಲಿ ಮದುವೆ ಸಂಭ್ರಮ! PHOTOS
Bhavya Gowda Sister Divya Gowda: ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಭವ್ಯಾ ಗೌಡ ಭಾಗವಹಿಸಿದ್ದರು. ಈಗ ಧಾರಾವಾಹಿಯಲ್ಲಿ ನಟಿಸುತ್ತಿರುವ ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಅವರು ಮದುವೆ ಆಗಲು ರೆಡಿ ಆಗಿದ್ದಾರೆ. ಹೂ ಮುಡಿಸೋ ಶಾಸ್ತ್ರ ಕೂಡ ಆಗಿದೆ.
Karnataka News Live 21st June:ಜನ್ಮದಿನದಂದೇ ಹೊಸ ಸಿನಿಮಾ ಮುಹೂರ್ತ; ಕಾವ್ಯ ಶೈವ ಹೀರೋಯಿನ್ ಅಂತ ಕೇಳಿದ್ರೆ ಮಾತೇ ಆಡ್ಲಿಲ್ಲ ಗಿಲ್ಲಿ ನಟ
Bigg Boss Gilli Nata New Movie: ಗಿಲ್ಲಿ ನಟ ಅವರಿಗೆ ಇಂದು ಜನ್ಮದಿನದ ವಿಶೇಷ. ಈ ದಿನವೇ ಅವರ ‘ಪಳಾರ್’ ಸಿನಿಮಾ ಘೋಷಣೆ ಆಗಿದೆ. ಈ ಹಿಂದೆ ಬಿಗ್ ಬಾಸ್ ಶೋನಲ್ಲಿದ್ದಾಗ ಗಿಲ್ಲಿ ನಟ ಅವರಿಗೆ ಪಳಾರ್ ಗಿಲ್ಲಿ ಎಂಬ ಬಿರುದು ಸಿಕ್ಕಿತ್ತು. ಈಗ ಈ ಹೆಸರಿನಲ್ಲೇ ಸಿನಿಮಾ ಅವಕಾಶ ಸಿಕ್ಕಿದೆ.
Karnataka News Live 21st June:ದಾವಣಗೆರೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ 19ರ ಹರೆಯದ ನವ ವಿವಾಹಿತೆ ಮೃತದೇಹ ಪತ್ತೆ
19ರ ಹರೆಯದ ಅಮೂಲ್ಯ ಮೃತದೇಹ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಘಟನೆ ಬಳಿಕ ಪತಿ ಹಾಗೂ ಆತನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಅಮೂಲ್ಯ ಬಾಳಲ್ಲಿ ಏನಾಯಿತು?
Karnataka News Live 21st June:ಶೀಘ್ರದಲ್ಲಿಯೇ ವಿಜಯಪುರ–ತಿರುಪತಿ ನಡುವೆ ನೇರ ರೈಲು ಸೇವೆ - ಟ್ರೈನ್ ರೂಟ್ ಯಾವುದು?
Karnataka News Live 21st June:Bengaluru - ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್
ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್ ಉಂಟಾಗಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ನಿಲ್ದಾಣದ ಹೊರಗೆ ಅಳವಡಿಸಿದ್ದ ನೇಮ್ ಬೋರ್ಡ್‌ನಲ್ಲಿನ ಬೆಂಕಿ ಕಾಣಿಸಿಕೊಂಡಿದೆ.
Karnataka News Live 21st June:ಎಸ್ಸೆಸ್ಸೆಲ್ಸಿವರೆಗೆ ಸಹಪಾಠಿಗಳು - ನಾಲ್ಕು ವರ್ಷದಿಂದ ಪ್ರೇಮಿಗಳು- ಈಗ ಮಂತ್ರ ಮಾಂಗಲ್ಯ ಮದುವೆ!
Karnataka News Live 21st June:ಕಮಲ್ ಹಾಸನ್ ಮಗಳು ರಜನಿಕಾಂತ್ ಫ್ಯಾನ್ ಆಗಿದ್ದು ಹೇಗೆ? ರಹಸ್ಯ ಬಿಚ್ಚಿಟ್ಟ ಶ್ರುತಿ ಹಾಸನ್!
ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರನ್ನು ಒಂದೇ ಫ್ರೇಮ್‌ನಲ್ಲಿ ನೋಡುವುದೇ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಹಬ್ಬದಂತಿದೆ. ನೆಲ್ಸನ್ ದಿಲೀಪ್ ಕುಮಾರ್ ಅವರ ಈ ಪ್ರಾಜೆಕ್ಟ್ ಸದ್ಯಕ್ಕೆ ಇಂಡಿಯನ್ ಸಿನೆಮಾ ಇಂಡಸ್ಟ್ರಿಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳ ಪಟ್ಟಿಯಲ್ಲಿದೆ.
Karnataka News Live 21st June:ಯೋಗ ದಿನದಂದು ಅಭಿಮಾನಿಗಳಿಗೆ ಹಬ್ಬದೂಟ; ಜೈಲಿನಲ್ಲಿ Actor Darshan Thoogudeepa ಯೋಗ ನೋಡಿ!
Darshan Thoogudeepa: ಇಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗಾಗಿ ವಿಶೇಷ ಯೋಗ ಶಿಬಿರ ಹಮ್ಮಿಕೊಳ್ಳಲಾಗಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಯೋಗ ದಿನಾಚರಣೆಯಲ್ಲಿ ಭಾಗಿ ಆಗಿದ್ದಾರೆ.