- Home
- Sports
- Cricket
- ವಿರಾಟ್ ಕೊಹ್ಲಿ, ಸಚಿನ್ ಆಟ ಗೊತ್ತು; Vaibhav Suryavanshi ಮುಂದೆ ಹಾಗೆ ಆಗ್ತಾನೆ, ನೋಡ್ತಿರಿ: ಪಾಕ್ ಆಟಗಾರ
ವಿರಾಟ್ ಕೊಹ್ಲಿ, ಸಚಿನ್ ಆಟ ಗೊತ್ತು; Vaibhav Suryavanshi ಮುಂದೆ ಹಾಗೆ ಆಗ್ತಾನೆ, ನೋಡ್ತಿರಿ: ಪಾಕ್ ಆಟಗಾರ
ಇಷ್ಟು ವರ್ಷಗಳ ಕಾಲ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿಯ ಆಟ ನೋಡಿದ್ದ ವೀಕ್ಷಕರಿಗೆ ಈಗ ವೈಭವ್ ಸೂರ್ಯವಂಶಿ ಆರ್ಭಟ ನೋಡುವ ಸಮಯ ಸಿಕ್ಕಿದೆ. ಕೇವಲ 15 ವರ್ಷದ ಹುಡುಗನೊಬ್ಬ ಜಗತ್ತೇ ತಿರುಗಿ ನೋಡುವಂತೆ ಮಾಡಿದ್ದಾರೆ. ಭಾರತೀಯ ಕ್ರಿಕೆಟ್‌ನ 'ವಂಡರ್ ಕಿಡ್' ವೈಭವ್ ಸೂರ್ಯವಂಶಿ ಸಾಮಾನ್ಯ ಪ್ರತಿಭೆ ಅಲ್ಲ.

ಗೇಮ್ ಚೇಂಜರ್
ಕೇವಲ ಐದೇ ಓವರ್‌ಗಳಲ್ಲಿ ಗೇಮ್ ಚೇಂಜರ್ ಮಾಡಿದ್ದರು. ಎಡಗೈ ಬ್ಯಾಟರ್‌ನ ಆಟ ಈ ಪರಿಯ ಆಟ ನೋಡಿದಾಗ, ಕ್ರಿಕೆಟ್ ಜಗತ್ತಿನ ಭವಿಷ್ಯದ ಸೂಪರ್‌ಸ್ಟಾರ್ ಎಂಬ ಭಾವನೆ ಬರುತ್ತದೆ.
ಯಾರೇ ಬಂದ್ರೂ ಬಿಡಲ್ಲ
ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ನಲ್ಲಿ ವಿಭಿನ್ನವಾದ ತೇಜಸ್ಸಿದೆ. ಕ್ರೀಸ್‌ಗೆ ಬಂದ ತಕ್ಷಣ, ಬೌಲಿಂಗ್ ಮಾಡೋರು ಯಾರೇ ಇರಲಿ, ಹಿಂದೆ ಮುಂದೆ ನೋಡದೆ ಸಿಕ್ಸ್, ಫೋರ್ ಬಾರಿಸಿದ್ದಾರೆ.
ದಾಖಲೆ ಮಾಡಿದ ಪೋರ
ಅಂಡರ್-19 ಕ್ರಿಕೆಟ್‌ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ್ದರು, ಇತ್ತೀಚೆಗೆ ಐಪಿಎಲ್ (IPL) ಹರಾಜಿನಲ್ಲಿ ಕೋಟಿ ಮೊತ್ತಕ್ಕೆ ಹರಾಜು ಆಗಿದ್ದರು. ಇದು ನಿಜಕ್ಕೂ ದೊಡ್ಡ ದಾಖಲೆ ಎನ್ನಬಹುದು.
ಶೋಯೆಬ್ ಅಖ್ತರ್ ಏನಂದ್ರು?
ಈ ಬಗ್ಗೆ ಪಾಕಿಸ್ತಾನಿ ಮಾಜಿ ಆಟಗಾರ ಶೋಯೆಬ್ ಅಖ್ತರ್ ಮಾತನಾಡಿದ್ದು, “ವೈಭವ್ ಸೂರ್ಯವಂಶಿ ವಿಶ್ವದ ಎಂಟನೇ ಅದ್ಭುತ. ನಾನು ಸಚಿನ್ ತೆಂಡೂಲ್ಕರ್ ಅವರ ಆಟವನ್ನೂ ನೋಡಿದ್ದೇನೆ ಮತ್ತು ವಿರಾಟ್ ಕೊಹ್ಲಿ ಅವರ ಆಟವನ್ನೂ ನೋಡಿದ್ದೇನೆ, ಆದರೆ ವೈಭವ್ ಸೂರ್ಯವಂಶಿ ಬೇರೆಯದೇ ಆದ ಸಾಮರ್ಥ್ಯವಿರುವ ಆಟಗಾರ. ಅವರು ಕೇವಲ ಐದು ಓವರ್‌ಗಳಲ್ಲಿ ಪಂದ್ಯದ ದಿಕ್ಕನ್ನೇ ಏಕಾಂಗಿಯಾಗಿ ಬದಲಾಯಿಸಬಲ್ಲರು. ಕೇವಲ 15 ವರ್ಷದ ವಯಸ್ಸಿನಲ್ಲಿ ಯಾರಾದರೂ ಈ ರೀತಿ ಬ್ಯಾಟಿಂಗ್ ಮಾಡಬಹುದು ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ವೈಭವ್ ಸೂರ್ಯವಂಶಿ ಭವಿಷ್ಯದಲ್ಲಿ ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ತಾರೆಯಾಗಲಿದ್ದಾರೆ ಮತ್ತು ಅವರು ಪ್ರತಿಯೊಂದು ದಾಖಲೆಯನ್ನು ಮುರಿಯುವ ಸಾಮರ್ಥ್ಯವನ್ನು ಹೊಂದಿದ್ದಾರೆ” ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

