Shankhpushpi: ಹೀಗೆ ಮಾಡಿದ್ರೆ ಸಿಕ್ಕಾಪಟ್ಟೆ ಶಂಖಪುಷ್ಪ ಬಿಡುತ್ತೆ; ದೇವರಿಗೆ ಪ್ರಿಯ, ಪವರ್‌ಫುಲ್
Shankhpushpi or aparajita gardening tips india: ಅಪರಾಜಿತಾ ಗಿಡವನ್ನು ಸರಿಯಾದ ಮಣ್ಣು, ಬಿಸಿಲು ಮತ್ತು ಆರೈಕೆಯಿಂದ ಬೆಳೆಸಬಹುದು. ಆದರೆ, ಇದರಲ್ಲಿ ಹೂಗಳು ಹೆಚ್ಚಾಗಿ ಬರಲು ಟೀ ಪುಡಿ ಮತ್ತು ಫಿಟ್ಕರಿ (ಪಟಿಕ) ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಕೆಲವೊಮ್ಮೆ ಯಾಕೆ ಹೂವು ಬಿಡೋದಿಲ್ಲ?
ಈಗೀಗ ಜನರಿಗೆ ಬಳ್ಳಿ ತರಹದ ಗಿಡಗಳನ್ನು ಬೆಳೆಸೋದು ಅಂದ್ರೆ ತುಂಬಾನೇ ಇಷ್ಟ ಆಗ್ತಿದೆ. ಇದೇ ಸಾಲಿಗೆ ಸೇರುವ ಅಪರಾಜಿತಾ (ಇದಕ್ಕೆ ವಿಷ್ಣುಕಾಂತ ಅಥವಾ ಶಂಖಪುಷ್ಪಿ ಅಂತಾನೂ ಕರೆಯುತ್ತಾರೆ) ಗಿಡ ಕೂಡ ವೇಗವಾಗಿ ಫೇಮಸ್ ಆಗ್ತಿದೆ. ಈ ಗಿಡ ತನ್ನ ನೀಲಿ ಹೂಗಳಿಂದ ಗಾರ್ಡನ್‌ಗೆ ಬರೀ ಸೌಂದರ್ಯ ಕೊಡೋದು ಮಾತ್ರವಲ್ಲ, ಇದರಿಂದ ಆರೋಗ್ಯಕ್ಕೂ ಹಲವು ಲಾಭಗಳಿವೆ. ಸರಿಯಾದ ಆರೈಕೆ ಮಾಡಿದರೆ ಅಪರಾಜಿತಾ ಗಿಡ ಚೆನ್ನಾಗಿ ಬೆಳೆಯುತ್ತೆ, ಆದರೆ ಕೆಲವೊಮ್ಮೆ ಹೂ ಬಿಡೋದೇ ಇಲ್ಲ. ಹಾಗಿದ್ರೆ, ಗಿಡದಲ್ಲಿ ಹೆಚ್ಚು ಹೂವು ಬರುವಂತೆ ಮಾಡಲು ಏನು ಮಾಡಬೇಕು ಅಂತ ನೋಡೋಣ ಬನ್ನಿ. ಮೊದಲಿಗೆ, ಅಪರಾಜಿತಾ ಗಿಡವನ್ನು ಹೇಗೆ ನೆಡಬೇಕು ಅಂತ ತಿಳಿದುಕೊಳ್ಳೋಣ.
ಅಪರಾಜಿತಾ ಗಿಡ ನೆಡುವುದು ಹೇಗೆ?
ನರ್ಸರಿಯಿಂದ ಸಸಿ ತರಬಹುದು ಅಥವಾ ಬೀಜಗಳನ್ನು ನೇರವಾಗಿ ಕುಂಡದಲ್ಲಿ ಹಾಕಬಹುದು.
ತೋಟದ ಮಣ್ಣಿಗೆ ಸ್ವಲ್ಪ ಕೊಟ್ಟಿಗೆ ಗೊಬ್ಬರ ಮತ್ತು ಮರಳು ಸೇರಿಸಿ ಫಲವತ್ತಾದ ಮಿಶ್ರಣ ರೆಡಿ ಮಾಡಿಕೊಳ್ಳಿ.
ಕುಂಡದ ಮಧ್ಯದಲ್ಲಿ ಸಣ್ಣ ಗುಂಡಿ ಮಾಡಿ ಸಸಿಯನ್ನು ನೆಡಿ. ಬೀಜ ಹಾಕುವುದಾದರೆ, ಸುಮಾರು 1 ಇಂಚು ಆಳದಲ್ಲಿ ಹಾಕಿ, ಮೇಲೆ ಸ್ವಲ್ಪ ಮಣ್ಣು ಮುಚ್ಚಿ.
ಮಣ್ಣು ತೇವವಾಗಿರಲಿ, ಆದರೆ ಹೆಚ್ಚು ನೀರು ಹಾಕಬೇಡಿ. ಯಾಕಂದ್ರೆ, ನೀರು ನಿಂತರೆ ಗಿಡ ಹಾಳಾಗಬಹುದು.
ನಂಬಿಕೆಗಳ ಪ್ರಕಾರ, ಗುರುವಾರ ಮತ್ತು ಶುಕ್ರವಾರ ಅಪರಾಜಿತಾ ಗಿಡ ನೆಡಲು ಶುಭ ದಿನಗಳು. ಇದನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಆಧ್ಯಾತ್ಮಿಕ ಲಾಭ ಸಿಗುತ್ತದೆ ಎನ್ನಲಾಗುತ್ತೆ.
ನೀರು, ಬಿಸಿಲು ಮತ್ತು ಆರೈಕೆಯ ಟಿಪ್ಸ್
ಇದು ಬಳ್ಳಿ ಗಿಡ ಆಗಿರೋದ್ರಿಂದ, ಇದಕ್ಕೆ ಆಸರೆ ಕೊಡಲು ಕೋಲು, ಹಗ್ಗ ಅಥವಾ ಜಾಲರಿಯನ್ನು ಬಳಸಿ.
ಪ್ರತಿದಿನ 6-8 ಗಂಟೆಗಳ ಕಾಲ ಬಿಸಿಲು ಸಿಗೋದು ತುಂಬಾನೇ ಮುಖ್ಯ.
ನೀರು ಜಾಸ್ತಿ ಹಾಕಿದರೆ ಎಲೆಗಳು ಚೆನ್ನಾಗಿ ಬೆಳೆಯುತ್ತವೆ, ಆದರೆ ಹೂಗಳು ಕಡಿಮೆ ಆಗುತ್ತವೆ. ಹಾಗಾಗಿ, ನೀರು ಹಾಕುವಾಗ ಬ್ಯಾಲೆನ್ಸ್ ಇರಲಿ.
ಅಪರಾಜಿತಾ ಗಿಡದಲ್ಲಿ ಹೂಗಳು ಕಡಿಮೆ ಬರುತ್ತಿದ್ದರೆ, ಈ 2 ವಸ್ತುಗಳನ್ನು ಬಳಸಿ
ಬಳಸಿದ ಟೀ ಪುಡಿಯನ್ನು ನೀರಿನಲ್ಲಿ ಕುದಿಸಿ, ತಣ್ಣಗಾದ ಮೇಲೆ ತಿಂಗಳಿಗೆ 1-2 ಬಾರಿ ಗಿಡಕ್ಕೆ ಹಾಕಿ. ಇದರಿಂದ ಹೂಗಳ ಸಂಖ್ಯೆ ಹೆಚ್ಚಾಗುತ್ತದೆ.
ಸುಮಾರು 20 ಗ್ರಾಂ ಫಿಟ್ಕರಿ (ಪಟಿಕ) ತೆಗೆದುಕೊಂಡು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮರುದಿನ ಈ ನೀರನ್ನು ಗಿಡದ ಬೇರುಗಳ ಬಳಿ ಹಾಕಿ. ಇದರಿಂದ ಗಿಡದ ಬೆಳವಣಿಗೆ ಮತ್ತು ಹೂವು ಎರಡೂ ಚೆನ್ನಾಗಿ ಆಗುತ್ತದೆ.
ಅಪರಾಜಿತಾ ಗಿಡದ ಆರೋಗ್ಯ ಪ್ರಯೋಜನಗಳು
ಅಪರಾಜಿತಾ ಹೂವಿನ ಟೀ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಒತ್ತಡ ಕಡಿಮೆಯಾಗುತ್ತದೆ ಮತ್ತು ಚರ್ಮದ ಕಾಂತಿ ಹೆಚ್ಚುತ್ತದೆ.
ಇದರಲ್ಲಿ ಆ್ಯಂಟಿಬ್ಯಾಕ್ಟೀರಿಯಲ್, ಆ್ಯಂಟಿಫಂಗಲ್ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳಿವೆ.
ಇದು ಕೂದಲು, ಚರ್ಮ ಮತ್ತು ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

