- Home
- Entertainment
- Sandalwood
- ಯೋಗ ದಿನದಂದು ಅಭಿಮಾನಿಗಳಿಗೆ ಹಬ್ಬದೂಟ; ಜೈಲಿನಲ್ಲಿ Actor Darshan Thoogudeepa ಯೋಗ ನೋಡಿ!
ಯೋಗ ದಿನದಂದು ಅಭಿಮಾನಿಗಳಿಗೆ ಹಬ್ಬದೂಟ; ಜೈಲಿನಲ್ಲಿ Actor Darshan Thoogudeepa ಯೋಗ ನೋಡಿ!
Darshan Thoogudeepa: ಇಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗಾಗಿ ವಿಶೇಷ ಯೋಗ ಶಿಬಿರ ಹಮ್ಮಿಕೊಳ್ಳಲಾಗಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಯೋಗ ದಿನಾಚರಣೆಯಲ್ಲಿ ಭಾಗಿ ಆಗಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲೂ ಯೋಗ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೂ ಯೋಗ ಆಚರಣೆ ಮಾಡಲಾಯಿತು. ಆರೋಪಿಗಳು, ಕೈದಿಗಳು ಯೋಗ ಮಾಡಿದ್ದಾರೆ. ಈಗ ನಟ ದರ್ಶನ್, ಪವಿತ್ರಾ ಗೌಡ ಕೂಡ ಯೋಗ ಮಾಡಿರುವ ಫೋಟೋ ವೈರಲ್ ಆಗ್ತಿದೆ.
ಎರಡು ವರ್ಷಗಳಿಂದ ಜೈಲಿನಲ್ಲಿರುವ ನಟ ದರ್ಶನ್
ಕಳೆದ ಎರಡು ವರ್ಷಗಳಿಂದ ಜೈಲುವಾಸದಲ್ಲಿರುವ ನಟ ದರ್ಶನ್ ಕೂಡ ಯೋಗ ಮಾಡಿದ್ದಾರೆ. ಜೈಲಿನ ಆವರಣದಲ್ಲಿ ಯೋಗ ನಡೆದಿದೆ. ಸದಾ ಸಿನಿಮಾಗೋಸ್ಕರ ಫಿಟ್ ಆಗಿದ್ದ ದರ್ಶನ್ ಈಗ ಸೊರಗಿದ್ದಾರೆ. ಅವರ ಮುಖದಲ್ಲಿ ಕಾಂತಿ ಇಲ್ಲ.
ನಿಯಮಗಳಿವೆ
ಜೈಲಿನಲ್ಲಿ ಒಂದಿಷ್ಟು ನಿಯಮಗಳು ಇರುತ್ತವೆ, ಕಾನೂನು ಹೋರಾಟ ಇರುತ್ತವೆ, ಮುಂದಿನ ಭವಿಷ್ಯದ ಚಿಂತೆ ಕೂಡ ಇರುತ್ತದೆ, ಅಷ್ಟೇ ಅಲ್ಲದೆ ಬೆನ್ನು ನೋವು ಇದೆ ಎಂದು ಕೂಡ ದರ್ಶನ್ ಹೇಳಿದ್ದರು.
ಸಾರ್ವಜನಿಕ ಯೋಗ
ದರ್ಶನ್, ಇಂದು ಯೋಗಕ್ಕೆ ಥ್ರಿ ಪೋರ್ಥ ಪ್ಯಾಂಟ್, ಶರ್ಟ್, ಜಾಕೆಟ್ ಧರಿಸಿ ಬಂದಿದ್ದರು. ಸಾರ್ವತ್ರಿಕ ಯೋಗ ಶಿಷ್ಟಾಚಾರದ (Common Yoga Protocol) ಪ್ರಕಾರ ಪ್ರಾಣಾಯಾಮ, ಧ್ಯಾನ ಹಾಗೂ ಸರಳ ಆಸನಗಳನ್ನು ಮಾಡಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

