MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Fathers Day Movie: ಕನ್ನಡದ ಮೊದಲ ಬೈಕರ್‌ ಸಿನಿಮಾದಲ್ಲಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ನಟ ಅಜಿತ್‌ ಹಂದೆ!

Fathers Day Movie: ಕನ್ನಡದ ಮೊದಲ ಬೈಕರ್‌ ಸಿನಿಮಾದಲ್ಲಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ನಟ ಅಜಿತ್‌ ಹಂದೆ!

Fathers Day Kannada movie: ELEVEN ELEMENTS ಸಂಸ್ಥೆ ಲಾಂಛನದಲ್ಲಿ ರಾಜಾರಾಮ್ ರಾಜೇಂದ್ರನ್ ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿರುವ ಚಿತ್ರ "ಫಾದರ್ಸ್ ಡೇ". ತಂದೆ - ಮಗನ ಬಾಂಧವ್ಯ ಸಾರುವ ಈ ಚಿತ್ರದ ಟ್ರೇಲರ್ ಫಾದರ್ಸ್ ಡೇ ದಿನದಂದೆ ಬಿಡುಗಡೆಯಾಗಿದೆ.

1 Min read
Author : Padmashree Bhat
Published : Jun 21 2026, 06:01 PM IST
Share this Photo Gallery
  • FB
  • TW
  • Linkdin
  • Whatsapp
16
ಟ್ರೇಲರ್‌ ರಿಲೀಸ್
Image Credit : Asianet News

ಟ್ರೇಲರ್‌ ರಿಲೀಸ್

ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದು ಕನ್ನಡದ ಮೊದಲ ಬೈಕರ್ ಚಿತ್ರವೂ ಆಗಿದೆ. "ಫಾದರ್ಸ್ ಡೇ" ದಿನದಂದು ಚಿತ್ರತಂಡ ಆಸಕ್ತರಿಗಾಗಿ ಬೆಂಗಳೂರಿನಲ್ಲಿ triumph motorcycle ಸಹಯೋಗದೊಂದಿಗೆ ಬೈಕ್ ರೈಡ್ ಸಹ ಆಯೋಜಿಸಿತ್ತು. ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಈ ಸಿನಿಮಾದಲ್ಲಿ ಯಾರು ನಟಿಸಿದ್ದಾರೆ?
Image Credit : Asianet News

ಈ ಸಿನಿಮಾದಲ್ಲಿ ಯಾರು ನಟಿಸಿದ್ದಾರೆ?

"ಆಚಾರ್ & ಕೋ", "ಸಪ್ತಸಾಗರದಾಚೆ ಎಲ್ಲೋ",‌ "ಅನಾಮಾಧೇಯ ಅಶೋಕ್ ಕುಮಾರ್" ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಪಡೆದುಕೊಂಡಿರುವ ಹರ್ಷಿಲ್ ಕೌಶಿಕ್ ಹಾಗೂ "ಶ್ರೀರಸ್ತು ಶುಭಮಸ್ತು" ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿರುವ ಅಜಿತ್ ಹಂದೆ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಹೆಸರಾಂತ ಗಾಯಕ ALL OK , ಸಾಮ್ರಾಗ್ನಿ ರಾಜನ್, ಕ್ಷೇಮ ಶೆಟ್ಟಿ, ಬಾಸ್ಕಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

Related Articles

Related image1
ಕನ್ನಡ ಸಿನಿಮಾ ದೃಶ್ಯದ ಬಗ್ಗೆ ಮಲಯಾಳಂ ಸಂದರ್ಶನದಲ್ಲಿ ಭಾವನಾ ಮೆನನ್ ಅದೇನು ಹೇಳಿದ್ದಾರೆ?
Related image2
ಕನ್ನಡ ಸಿನಿಮಾ ಮೂಲಕ ನಟನೆ ಅರಂಭಿಸಿ, ಪರಭಾಷೆಯಲ್ಲಿ ಫೇಮಸ್ ಆದ ನಟಿಯರು
36
ಸಿನಿಮಾ ಕಥೆ ಏನು?
Image Credit : Asianet News

ಸಿನಿಮಾ ಕಥೆ ಏನು?

ಈ ಚಿತ್ರದ ಕಥೆ ಇಬ್ಬರು ಬೈಕರ್‌ಗಳ ಸುತ್ತ ಸಾಗುತ್ತದೆ. ಇಬ್ಬರು ಸಹ ಪಯಣಿಗರ ನಡುವಿನ ಕಥೆಯೂ ಎಲ್ಲರ ಗಮನ ಸೆಳೆಯುತ್ತದೆ. ಕೊನೆಗೆ ಯಾರು ನಿರೀಕ್ಷಿಸದ ಕ್ಲೈಮ್ಯಾಕ್ಸ್ ಸಹ "ಫಾದರ್ಸ್ ಡೇ" ಚಿತ್ರದಲ್ಲಿದೆ. ಕನ್ನಡದಲ್ಲಿ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ನಿರ್ದೇಶಕ ರಾಜಾರಾಮ್ ರಾಜೇಂದ್ರನ್ ಅವರೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.

46
ಯಾವಾಗ ರಿಲೀಸ್‌ ಆಗಲಿದೆ?
Image Credit : Asianet News

ಯಾವಾಗ ರಿಲೀಸ್‌ ಆಗಲಿದೆ?

ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ತೆರೆಗೆ ಬರಲು ಅಣಿಯಾಗುತ್ತಿದೆ. ಬಿಡುಗಡೆಗೂ ಪೂರ್ವಭಾವಿಯಾಗಿ ಟ್ರೇಲರ್ ಸಹ ಬಿಡುಗಡೆಯಾಗಿದೆ. ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದೆ.‌ ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ‌. ಜ್ಯೋಲ್ಸ್ನಾ ಪ್ಯಾನಿಕರ್ ಸಂಕಲನ ಹಾಗೂ ಜೋ ಪ್ಯಾನಿಕರ್ ಸಂಗೀತ ನಿರ್ದೇಶನ "ಫಾದರ್ಸ್ ಡೇ" ಚಿತ್ರದ ಕ್ರಿಯೇಟಿವ್ ನಿರ್ಮಾಪಕರಾಗಿ ನಿಧಿ ಜೋಶಿ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಅವಿನಾಶ್ ಡ್ಯಾನಿಯಲ್ ಕಾರ್ಯ ನಿರ್ವಹಿಸಿದ್ದಾರೆ.

56
ಬ್ಲೂಸ್" ಶೈಲಿ ಸಂಗೀತ
Image Credit : Asianet News

ಬ್ಲೂಸ್" ಶೈಲಿ ಸಂಗೀತ

ಚಿತ್ರದಲ್ಲಿ "ಬ್ಲೂಸ್" ಶೈಲಿಯಿಂದ ಪ್ರೇರಿತವಾದ ಸಂಗೀತವಿದೆ. ಈ ಶೈಲಿಯ ಸಂಗೀತ ಸಂಯೋಜನೆ ಕನ್ನಡದಲ್ಲಿ ಇದೇ ಮೊದಲ ಬಾರಿ ಎಂದು ತಿಳಿಸಿರುವ ನಿರ್ಮಾಪಕ ಹಾಗೂ ನಿರ್ದೇಶಕ ರಾಜಾರಾಮ್ ರಾಜೇಂದ್ರನ್, ಪಿ.ವಿ.ಆರ್ - ಐನಾಕ್ಸ್ ಪಿಕ್ಚರ್ಸ್ ಮೂಲಕ "ಫಾದರ್ಸ್ ಡೇ" ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಹೇಳಿದ್ದಾರೆ.

66
ತುಂಬ ದಿನದ ಬಳಿಕ ತೆರೆಗೆ
Image Credit : Asianet News

ತುಂಬ ದಿನದ ಬಳಿಕ ತೆರೆಗೆ

ಅಜಿತ್‌ ಹಂದೆ ಅವರು ತುಂಬ ದಿನದ ಬಳಿಕ ತೆರೆ ಮೇಲೆ ಕಾಣಿಸಿಕೊಳ್ತಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ಕನ್ನಡ ಚಲನಚಿತ್ರಗಳು

Latest Videos
Recommended Stories
Recommended image1
Bigg Boss ಶೋಗೆ ಹೋಗಿದ್ದು ತಂಗಿ, ಲವ್‌ ಆಗಿದ್ದು ಅಕ್ಕಂಗೆ; Bhavya Gowda ಮನೇಲಿ ಮದುವೆ ಸಂಭ್ರಮ! PHOTOS
Recommended image2
ಹುಟ್ಟುಹಬ್ಬದಂದೇ ಗಿಲ್ಲಿ ಸಿನಿಮಾದ ಟೈಟಲ್​ ರಿವೀಲ್​- ನಾಯಕಿ ಯಾರು? ಹೆಸರಿಗೂ, ಬಿಗ್​ಬಾಸ್​ಗೂ ಭಾರಿ ನಂಟು
Recommended image3
ಜನ್ಮದಿನದಂದೇ ಹೊಸ ಸಿನಿಮಾ ಮುಹೂರ್ತ; ಕಾವ್ಯ ಶೈವ ಹೀರೋಯಿನ್‌ ಅಂತ ಕೇಳಿದ್ರೆ ಮಾತೇ ಆಡ್ಲಿಲ್ಲ ಗಿಲ್ಲಿ ನಟ
Related Stories
Recommended image1
ಕನ್ನಡ ಸಿನಿಮಾ ದೃಶ್ಯದ ಬಗ್ಗೆ ಮಲಯಾಳಂ ಸಂದರ್ಶನದಲ್ಲಿ ಭಾವನಾ ಮೆನನ್ ಅದೇನು ಹೇಳಿದ್ದಾರೆ?
Recommended image2
ಕನ್ನಡ ಸಿನಿಮಾ ಮೂಲಕ ನಟನೆ ಅರಂಭಿಸಿ, ಪರಭಾಷೆಯಲ್ಲಿ ಫೇಮಸ್ ಆದ ನಟಿಯರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved