ಸಾರಿಗೆ ಬಸ್-ಟ್ರಾಕ್ಟರ್ ನಡುವೆ ಭೀಕರ ಅಪಘಾತ, ನಾಲ್ವರ ಕಾಲು ಮುರಿತ, ರಾಯಚೂರು ಸೀತಾ ನಗರದ ಬಳಿ ಈ ಅಫಘಾತ ಸಂಭವಿಸಿದೆ. ಹಲವರು ಗಾಯಗೊಂಡಿದ್ದು, ರೀಮ್ಸ್ ಆಸ್ಪತ್ರೆಯಲ್ಲಿ ಗಾಯಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
- Home
- News
- State
- Karnataka News Live: ರಾಯಚೂರಿನಲ್ಲಿ ಸಾರಿಗೆ ಬಸ್-ಟ್ರಾಕ್ಟರ್ ನಡುವೆ ಭೀಕರ ಅಪಘಾತ, ನಾಲ್ವರ ಕಾಲು ಮುರಿತ
Karnataka News Live: ರಾಯಚೂರಿನಲ್ಲಿ ಸಾರಿಗೆ ಬಸ್-ಟ್ರಾಕ್ಟರ್ ನಡುವೆ ಭೀಕರ ಅಪಘಾತ, ನಾಲ್ವರ ಕಾಲು ಮುರಿತ

ರಾಮನಗರ: ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ ಯುವಕ ಆಕೆಯ ಬಳಿ ₹25 ಲಕ್ಷ ಹಣ, 6 ದುಬಾರಿ ಮೊಬೈಲ್ ಹಾಗೂ 137 ಗ್ರಾಂ ಚಿನ್ನಾಭರಣ ಪಡೆದು ವಂಚನೆ ಮಾಡಿರುವ ಪ್ರಕರಣ ಚನ್ನಪಟ್ಟಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಶೆಟ್ಟಿಹಳ್ಳಿ ಬಡಾವಣೆಯಲ್ಲಿ ವಾಸಿಸುತ್ತಿರುವ ಯುವತಿಗೆ, ಅಪ್ಪಗೆರೆ ಸಿದ್ದಾರ್ಥ ನಗರದ ಕೃಷ್ಣ ಮೂರ್ತಿ ಎಂಬ ವ್ಯಕ್ತಿ ಪ್ರೀತಿ ಹೆಸರಿನಲ್ಲಿ ಮೋಸ ಮಾಡಿರುವುದಾಗಿ ಪ್ರಕರಣ ದಾಖಲಾಗಿದ್ದು, ಈತನ ಜೊತೆಗೆ ಯುವಕನ ತಾಯಿ ಸಿದ್ದಮ್ಮ ಮತ್ತು ಅಣ್ಣ ಮನೋಜ್ ಎಂಬುವರು ಈ ಕೃತ್ಯಕ್ಕೆ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೃಷ್ಣಮೂರ್ತಿ ಮತ್ತು ನಾನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿದ್ದ ಈತ ನನ್ನಿಂದ ನಗದು ಹಾಗೂ ಆನ್ಲೈನ್ ಮೂಲಕ ₹25 ಲಕ್ಷ ಹಣವನ್ನು ಪಡೆದುಕೊಂಡಿದ್ದ. ಇದಲ್ಲದೆ 2019ರಿಂದ 6 ದುಬಾರಿ ಮೊಬೈಲ್ಗಳನ್ನು ದುಬಾರಿ ಸ್ಮಾರ್ಟ್ ವಾಚ್ಗಳನ್ನು ತೆಗೆಸಿಕೊಂಡಿದ್ದು, ನನ್ನ ಬಳಿ ಇದ್ದ 137 ಗ್ರಾಂ ಚಿನ್ನಾಭರಣಪಡೆದುಕೊಂಡಿದ್ದಾನೆ. ಈತನಿಗೆ ಬೇರೊಬ್ಬ ಯುವತಿಯ ಜೊತೆಗೆ ಸಂಬಂಧವಿದ್ದು ಇದನ್ನು ಮುಚ್ಚಿಟ್ಟು ವಂಚಿಸಿದ್ದಾನೆ. ಹಣ ನೀಡುವಂತೆ ಕೇಳಿದಾಗ ಧಮಕಿ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
Karnataka News Live 20 October 2025ರಾಯಚೂರಿನಲ್ಲಿ ಸಾರಿಗೆ ಬಸ್-ಟ್ರಾಕ್ಟರ್ ನಡುವೆ ಭೀಕರ ಅಪಘಾತ, ನಾಲ್ವರ ಕಾಲು ಮುರಿತ
Karnataka News Live 20 October 2025ಮನೆಯಲ್ಲಿ ಮಲಗಿದ್ದ ಮೈದುನನ ಖಾಸಗಿ ಅಂಗವನ್ನು ಕತ್ತರಿಸಿ ಪರಾರಿಯಾದ ಅತ್ತಿಗೆ; ವಿಚಿತ್ರವಾಗಿದೆ ಕಾರಣ!
ತನ್ನ ತಂಗಿಯನ್ನು ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ ಮೈದುನನ ಮೇಲೆ ಅತ್ತಿಗೆ ಸೇಡು ತೀರಿಸಿಕೊಂಡಿದ್ದಾಳೆ. ಕುಟುಂಬದ ವಿರೋಧಕ್ಕೆ ಮಣಿದು ಪ್ರೀತಿ ಮುರಿದುಕೊಂಡಿದ್ದಕ್ಕೆ ಕೋಪಗೊಂಡ ಆಕೆ, ರಾತ್ರಿ ವೇಳೆ ಮೈದುನನ ಖಾಸಗಿ ಅಂಗವನ್ನೇ ಕತ್ತರಿಸಿ ಪರಾರಿಯಾಗಿದ್ದಾಳೆ.
Karnataka News Live 20 October 2025ದೀಪಾವಳಿ ಪಟಾಕಿ ಕಿಡಿ ಸಿಡಿದಿದ್ದಕ್ಕೆ ಮಚ್ಚು-ಲಾಂಗು ಹಿಡಿದು ಇಡೀ ಏರಿಯಾಗೆ ಬೆದರಿಸಿದ ಅನ್ಯಕೋಮಿನ ಪುಂಡರು!
ಬೆಂಗಳೂರಿನ ಹೆಣ್ಣೂರಿನಲ್ಲಿ ದೀಪಾವಳಿ ಪಟಾಕಿ ಕಿಡಿ ಸಿಡಿದಿದ್ದಕ್ಕೆ ಶುರುವಾದ ಸಣ್ಣ ಜಗಳವು, ಐವರ ಗುಂಪೊಂದು ಮಚ್ಚು-ಲಾಂಗುಗಳಿಂದ ಬಡಾವಣೆಯ ನಿವಾಸಿಗಳಿಗೆ ಪ್ರಾಣ ಬೆದರಿಕೆ ಹಾಕುವಷ್ಟರ ಮಟ್ಟಿಗೆ ಉಲ್ಬಣಗೊಂಡಿದೆ. ಈ ದಾಂಧಲೆಯಿಂದ ಬೆಚ್ಚಿಬಿದ್ದ ಸ್ಥಳೀಯರು, ಮೂವರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
Karnataka News Live 20 October 2025ದೀಪಾವಳಿ ಮೊದಲ ದಿನವೇ ಪಟಾಕಿ ಅವಘಡ, ಬಾಲಕ ಸೇರಿ ಇಬ್ಬರ ಕಣ್ಣಿಗೆ ಗಾಯ
ದೀಪಾವಳಿ ಮೊದಲ ದಿನವೇ ಪಟಾಕಿ ಅವಘಡ, ಬಾಲಕ ಸೇರಿ ಇಬ್ಬರ ಕಣ್ಣಿಗೆ ಗಾಯ, ಇಬ್ಬರನ್ನು ಆಸ್ಪತ್ರೆ ದಾಖಳಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಇದುವರೆಗೆ ನಾಲ್ವರು ಪಟಾಕಿಯಿಂದ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.
Karnataka News Live 20 October 2025ಸಿರಿಗೆರೆ-ಸಾಣೇಹಳ್ಳಿ ಮಠದ ನಾಲ್ಕು ವರ್ಷಗಳ ವೈಮನಸ್ಸು, ವಿವಾದಕ್ಕೆ ತೆರೆ ಬೀಳುವ ಸೂಚನೆ, ಭಕ್ತರಲ್ಲಿ ಸಂತಸ
ಕಳೆದ ನಾಲ್ಕು ವರ್ಷಗಳಿಂದ ಸಿರಿಗೆರೆಯ ತರಳಬಾಳು ಬೃಹನ್ಮಠ ಹಾಗೂ ಸಾಣೇಹಳ್ಳಿ ಶಾಖಾ ಮಠದ ಸ್ವಾಮೀಜಿಗಳ ನಡುವೆ ಇದ್ದ ವೈಮನಸ್ಸು ಶಮನಗೊಳ್ಳುವ ಲಕ್ಷಣಗಳು ಕಾಣಿಸಿವೆ. ಸಾಣೇಹಳ್ಳಿ ಶ್ರೀಗಳ ಭೇಟಿಯ ಯತ್ನಕ್ಕೆ ಪ್ರತಿಯಾಗಿ, ಮಾತುಕತೆಗೆ ಸಿದ್ಧವೆಂದು ತರಳಬಾಳು ಮಠವು ಪತ್ರದ ಮೂಲಕ ತಿಳಿಸಿದೆ.
Karnataka News Live 20 October 2025ತಾಳಿ ಕಟ್ಟಲಿಲ್ಲ, ಗಂಡನಾಗಲಿಲ್ಲ; ನಿತ್ಯಾ ಹೊಟ್ಟೆಯಲ್ಲಿ ಬೆಳೆಯುವ ಮಗುವಿಗೆ ಅಪ್ಪನಾಗ್ತಾನಾ ಕರ್ಣ?
Karnataka News Live 20 October 2025ದೀಪಾವಳಿಯ ಸಮಯದಲ್ಲಿ ಬಾನಲ್ಲಿ ಗೋಚರಿಸಲಿದೆ ಮೂರು ಧೂಮಕೇತುಗಳು, ಬರಿಗಣ್ಣಿಂದ ಎಲ್ಲರೂ ನೋಡಬಹುದು
ಈ ದೀಪಾವಳಿ ಹಬ್ಬದಂದು 'ಲೆಮೆನ್', 'ಸ್ವಾನ್' ಹಾಗೂ 'ಅಟ್ಲಸ್' ಎಂಬ ಮೂರು ಧೂಮಕೇತುಗಳು ಬಾನಂಗಳದಲ್ಲಿ ಕಾಣಿಸಿಕೊಳ್ಳಲಿವೆ. ಇವುಗಳಲ್ಲಿ ಲೆಮೆನ್ ಧೂಮಕೇತು ಬರಿಗಣ್ಣಿಗೆ ಗೋಚರಿಸಲಿದ್ದು, ಅಟ್ಲಸ್ ಧೂಮಕೇತು ನಮ್ಮ ಸೌರವ್ಯೂಹದ ಹೊರಗಿನಿಂದ ಬಂದಿರುವುದು ವಿಶೇಷವಾಗಿದೆ.
Karnataka News Live 20 October 2025ಪರಪ್ಪನ ಅಗ್ರಹಾರದಲ್ಲಿ ನಟಿ ಪವಿತ್ರಾ ಗೌಡ ಕಣ್ಣೀರು - ಮಗಳೊಂದಿಗೆ ದೀಪಾವಳಿ ಹಬ್ಬ ಮಾಡಲಾಗದೇ ಸಂಕಟ
Karnataka News Live 20 October 2025ದೀಪಾವಳಿಗೆ ಬೆಂಗಳೂರು, ದೆಹಲಿ ಆಗಸದಿಂದ ಹೀಗೆ ಕಾಣ್ತಿದೆ ಎಂದ ಮಹಿಳೆಗೆ ವಾಸ್ತವ ತಿಳಿಸಿದ ನೆಟ್ಟಿಗರು
ದೀಪಾವಳಿಗೆ ಬೆಂಗಳೂರು, ದೆಹಲಿ ಆಗಸದಿಂದ ಹೀಗೆ ಕಾಣ್ತಿದೆ ಎಂದ ಮಹಿಳೆಗೆ ವಾಸ್ತವ ತಿಳಿಸಿದ ನೆಟ್ಟಿಗರು, ಈ ಎರಡು ವಿಡಿಯೋದಲ್ಲಿ ಯಾವುದು ಬೆಂಗಳೂರು, ಯಾವುದು ದೆಹಲಿ? ಮಹಿಳೆ ಪೋಸ್ಟ್‌ಗೆ ನೆಟ್ಟಿಗರು ವಾಸ್ತವ ತಿಳಿಸಿದ್ದೇಕೆ?
Karnataka News Live 20 October 2025ಅ. 31 ರಂದು ಮೇಲುಕೋಟೆ ಚೆಲುವನಾರಾಯಣಸ್ವಾಮಿ ರಾಜಮುಡಿಯ ಉತ್ಸವ, ಪದ್ಧತಿಯಂತೆ ತಮಿಳುನಾಡು ಸರ್ಕಾರದ ಗೌರವ
ಮೇಲುಕೋಟೆಯ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ದಶಕಗಳ ನಂತರ ಅಪರೂಪದ ನಕ್ಷತ್ರ ಸಂಯೋಗದಿಂದಾಗಿ, ರಾಜಮುಡಿ ಉತ್ಸವ ಮತ್ತು ಅಷ್ಟ ತೀರ್ಥೋತ್ಸವ ಅ. 31 ರಂದು ಒಂದೇ ದಿನ ನಡೆಯಲಿದೆ. ಈ ವಿಶೇಷ ದಿನದಂದು ಸ್ವಾಮಿಗೆ ಮೈಸೂರು ಅರಸರು ಸಮರ್ಪಿಸಿದ ವಜ್ರಖಚಿತ ರಾಜಮುಡಿ ಕಿರೀಟವನ್ನು ಧಾರಣೆ ಮಾಡಲಾಗುವುದು.
Karnataka News Live 20 October 2025ಎಷ್ಟೇ ಖರ್ಚಾದ್ರೂ ಸರಿ ಪುತ್ತೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡ್ತಿನಿ - ಸಿಎಂ ಸಿದ್ದರಾಮಯ್ಯ ಶಪಥ
ಪುತ್ತೂರಿನಲ್ಲಿ ನಡೆದ ‘ಅಶೋಕ ಜನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾಲೂಕಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ನಿರ್ಮಿಸುವುದಾಗಿ ಘೋಷಿಸಿದರು. ಸಮಾಜದಲ್ಲಿ ಸಮಾನತೆ, ಕೋಮು ಸೌಹಾರ್ದತೆ ಕಾಪಾಡುವ ಅಗತ್ಯವನ್ನು ಒತ್ತಿಹೇಳಿದರು.
Karnataka News Live 20 October 2025ಡಿವೋರ್ಸ್ ಆದ್ಮೇಲೆ ಮಾಜಿ ಪತ್ನಿ, ಫಾರಿನ್ ಲೇಡಿ ಜೊತೆ ಪುನಃ ಕ್ರಷ್ - ಕಾಂತಾರ ನಟನ ಓಪನ್ ಮಾತು ಕೇಳಿ
Karnataka News Live 20 October 2025Bigg Boss - ರಿಷಾ ಎಂಟ್ರಿ ಕೊಟ್ಟ ತಕ್ಷಣ ಕಾವ್ಯಾಳ ಮರೆತೇ ಬಿಡೋದಾ ಗಿಲ್ಲಿ? ಬೇಕಿತ್ತಾ ಇದೆಲ್ಲಾ? ಏನಾಯ್ತು ನೋಡಿ
Karnataka News Live 20 October 2025ಆರ್‌ಎಸ್‌ಎಸ್‌ಗೆ ಕ್ಷಮೆ ಕೇಳಿದ ಮಲ್ಲಿಕಾರ್ಜುನ ಖರ್ಗೆ ಪೋಸ್ಟ್; ಅಸಲಿಯತ್ತು ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ!
ಮಲ್ಲಿಕಾರ್ಜುನ ಖರ್ಗೆ ಅವರು ಆರ್‌ಎಸ್‌ಎಸ್‌ಗೆ ಕ್ಷಮೆ ಕೋರಿದ್ದಾರೆ ಎಂದು ಬಿಂಬಿಸುವ ನಕಲಿ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪೋಸ್ಟರ್ ಸಂಘಪರಿವಾರದ ಕುತಂತ್ರ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
Karnataka News Live 20 October 2025ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದ ಪುತ್ತೂರಿನ ಕಾರ್ಯಕ್ರಮದಲ್ಲಿ ಭಾರೀ ಕಾಲ್ತುಳಿತ, 11 ಮಂದಿ ಆಸ್ಪತ್ರೆಗೆ ದಾಖಲು!
Karnataka News Live 20 October 2025ದೈವವನ್ನು ವಿಶ್ವಕ್ಕೇ ರಿಷಬ್ ಶೆಟ್ಟಿ ಪರಿಚಯಿಸಿಕೊಟ್ಟರೋ? ದೈವ ನಟ-ನಿರ್ದೇಶಕನನ್ನು ಜಗತ್ತಿಗೆ ತೋರಿಸಿತಾ?
'ರಿಷಬ್ ಶೆಟ್ಟಿಯವರಿಂದ ತುಳುನಾಡು ದೇವರು-ದೈವ ಪ್ರಪಂಚಕ್ಕೆ ಪರಿಚಯ ಆಗಿದ್ದೋ ಅಥವಾ ತುಳುನಾಡ ದೈವದ ಕೃಪೆಯಿಂದ ರಿಷಬ್ ಶೆಟ್ಟಿಯವರು ಜಗತ್ತಿನ ಕಣ್ಣಿಗೆ ಬಿದ್ದಿರೋ' ಎಂಬ ಚರ್ಚೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಶುರುವಾಗಿದೆ. ಎರಡೂ ಆಂಗಲ್‌ಗಳಲ್ಲಿ ಶುರುವಾಗಿರೋ ಈ ಡಿಬೇಟ್ ಮುಂದೆ ಎಲ್ಲಿಗೆ ಹೋಗಿ ತಲುಪತ್ತೋ ಏನೋ!
Karnataka News Live 20 October 2025ರೈಲಿನಲ್ಲಿ ಪೆಹ್ಲಾ ಪೆಹ್ಲಾ ಪ್ಯಾರ್ - ವೀಡಿಯೋ ಭಾರಿ ವೈರಲ್
Delhi Metro viral video ದೆಹಲಿ ಮೆಟ್ರೋ ಪುಟ್ಟ ಮಕ್ಕಳ ನೃತ್ಯದಿಂದ ಸುದ್ದಿಯಾಗಿದ್ದು, ವೀಡಿಯೋ ಭಾರಿ ವೈರಲ್ ಆಗಿದೆ. ವೀಡಿಯೋದಲ್ಲಿ ಮೂವರು ಪುಟ್ಟ ಮಕ್ಕಳು ಬಾಲಿವುಡ್‌ನ ಪೆಹ್ಲಾ ಪೆಹ್ಲಾ ಪ್ಯಾರ್ ಹಾಡಿಗೆ ಸಖತ್ ಆಗಿ ಡಾನ್ಸ್ ಮಾಡಿದ್ದಾರೆ. ದೆಹಲಿ ಮೆಟ್ರೋ ರೈಲಿನೊಳಗೆ ಮಾಡಿದ ನೃತ್ಯ ಅನೇಕರ ಮನಸೆಳೆದಿದೆ.
Karnataka News Live 20 October 2025ಮಗು ಬೇಕಂದ್ರೆ ಮೈದುನನ ಜತೆ ಮಲಗು! ಅತ್ತೆ, ಮಾವ, ಗಂಡನ ಮನೆಯವರ ಕಿರುಕುಳಕ್ಕೆ ಉಪನ್ಯಾಸಕಿ ಸಾವಿಗೆ ಶರಣು!
ದೊಡ್ಡಬಳ್ಳಾಪುರದಲ್ಲಿ, ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತ ಉಪನ್ಯಾಸಕಿ ಪುಷ್ಪಾ ಎಂಬುವವರು ಡ್ಯಾಂಗೆ ಹಾರಿ ಆತ್ಮ8ಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ, ಅವರು ತಮ್ಮ ನೋವು ಮತ್ತು ಅನ್ಯಾಯವನ್ನು ವಿವರಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ.
Karnataka News Live 20 October 2025ಬಿಹಾರ ಚುನಾವಣಾ ಅಖಾಡ ರಂಗೇರಿಸಿದ ಸದಾ ಮಾಸ್ಕ್ ಕಪ್ಪು ಬಟ್ಟೆ ಮಾತ್ರ ಧರಿಸುವ UK ರಿಟರ್ನ್‌ಡ್ ಚೆಲುವೆ ಯಾರೀಕೆ
ಬಿಹಾರ ಚುನಾವಣಾ ಆಖಾಡ ಸಾಕಷ್ಟು ರಂಗೇರುತ್ತಿದೆ. ಹೊಸ ಹೊಸ ಮುಖಗಳು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಇಳಿದು ಬಿರುಸಿನ ಮತ ಬೇಟೆಯಲ್ಲಿ ತೊಡಗಿದ್ದಾರೆ. ಅವರಲ್ಲೊಬ್ಬರು ಪುಷ್ಪಂ ಪ್ರಿಯಾ ಚೌಧರಿ ಅವರ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ.