ದೀಪಾವಳಿ ಮೊದಲ ದಿನವೇ ಪಟಾಕಿ ಅವಘಡ, ಬಾಲಕ ಸೇರಿ ಇಬ್ಬರ ಕಣ್ಣಿಗೆ ಗಾಯ, ಇಬ್ಬರನ್ನು ಆಸ್ಪತ್ರೆ ದಾಖಳಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಇದುವರೆಗೆ ನಾಲ್ವರು ಪಟಾಕಿಯಿಂದ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.

ಬೆಂಗಳೂರು (ಅ.20) ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಬೆಂಗಳೂರಿನಲ್ಲಿ ದೀಪಗಳ ಜೊತೆಗೆ ಪಟಾಕಿ ಸದ್ದು ಜೋರಾಗಿದೆ. ಆದರೆ ದೀಪಾವಳಿ ಮೊದಲ ದಿನವೇ ಪಟಾಕಿ ಅವಘಡ ಸಂಭವಿಸಿದೆ. ಪಟಾಕಿ ಸಿಡಿಸಿ 11 ವರ್ಷದ ಬಾಲಕ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಪಟಾಕಿ ಸಿಡಿಸುವ ವೇಳೆ ಸ್ಫೋಟಗೊಂಡು ಕಣ್ಣಿಗೆ ಗಾಯವಾಗಿದೆ. ದೀಪಾವಳಿ ಸಂಭ್ರಮದಲ್ಲಿದ್ದ ಕುಟಂಬಸ್ಥರು ಇದೀಗ ಕಣ್ಣೀರು ಹಾಕುವಂತಾಗಿದೆ.

ಬಾಲಕನಿಗೆ ಬಿಜಿಲಿ ಪಟಾಕಿಯಿಂದ ಗಾಯ

ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿಸುತ್ತಿದ್ದ ವೇಲೆ ಬಿಜಿಲಿ ಪಟಾಕಿ ಸ್ಫೋಟಗೊಂಡಿದೆ. ಬಗ್ಗಿ ಪಟಾಕಿಗೆ ಬೆಂಕಿ ಹಚ್ಚುತ್ತಿದ್ದಂತೆ ಏಕಾಏಕಿ ಸ್ಫೋಟಗೊಂಡಿದೆ. ಹೀಗಾಗಿ ಬಾಲಕನ ಕಣ್ಣಿಗೆ ಗಾಯವಾಗಿದೆ. ಚಾಮರಾಜಪೇಟೆ ಬಳಿ ಇರುವ ಮಿಂಟೋ ಆಸ್ಪತ್ರೆಗೆ ಬಾಲಕನ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರಿದಿದೆ.

ಆಟಂ ಬಾಂಬ್ ಸಿಡಿಸುವಾಗ 48ರ ವ್ಯಕ್ತಿಗೆ ಗಾಯ

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸುತ್ತಿದ್ದ 48 ವರ್ಷದ ವ್ಯಕ್ತಿಯ ಕಣ್ಣಿಗೆ ಗಾಯವಾಗಿದೆ. ಆಟಂ ಬಾಂಬ್‌ಗೆ ಬೆಂಕಿ ಹಚ್ಚಿ ಬಿಸಾಡುವ ಬೆನ್ನಲ್ಲೇ ಸ್ಪೋಟಗೊಂಡಿದೆ. ಇದರಿಂದ ಕಣ್ಣಿಗೆ ಗಾಯವಾಗಿದೆ. ದೇಹದ ಇತೆರ ಕೆಲ ಭಾಗದಲ್ಲಿ ಸುಟ್ಟ ಗಾಯಗಳಾಗಿದೆ. ಎರಡು ಘಟನೆಗಳಲ್ಲಿ ಇಬ್ಬರು ಗಾಯಗೊಂಡಿದ್ದು, ಇಬ್ಬರು ಮಿಂಟೋ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಜಿ ಹಳ್ಳಿಯ ಅನುಪ್ ಎಂಬ ಬಾಲಕನ ಕಣ್ಣಿಗೆ ಗಾಯ

ಇನ್ನು ಕೆಜಿ ಹಳ್ಳಿಯಲ್ಲೂ ಪಟಾಕಿಯಿಂದ ಅವಘಡ ನಡೆದಿದೆ. ಪಟಾಕಿ ಹಚ್ಚುವಾಗ ಸಿಡಿದ ಕಾರಣ 14 ವರ್ಷದ ಬಾಲಕ ಅನೂಪ್ ಕಣ್ಣಿಗೆ ಗಾಯವಾಗಿದೆ. ಈ ವೇಳೆ ಒಟ್ಟು ಮೂವರು ಬಾಲಕರ ಕಣ್ಣಿಗೆ ಗಾಯವಾಗಿದೆ. ಸಣ್ಣ ಪ್ರಮಾಣಧ ಗಾಯದ ಕಾರಣ ಚಿಕಿತ್ಸೆ ಪಡೆದು ಮರಳಿದ್ದಾರೆ.

ಪಿಸ್ತೂಲ್ ಪಟಾಕಿಯಿಂದ ಮಕ್ಕಳ ಕಣ್ಣಿಗೆ ಗಾಯ

ನಿನ್ನೆ ಬೆಂಗಳೂರಿನ ಕಲಾಸಿಪಾಳ್ಯ ಹಾಗೂ ಕೆಂಪೇಗೌಡ ನಗರದಲ್ಲಿ ಪಟಾಕಿಯಿಂದ ಮಕ್ಕಳಿಗೆ ಗಾಯವಾಗಿದೆ. ರಾತ್ರಿ 11 ಗಂಟೆ ಹಾಗೂ ರಾತ್ರಿ 1 ಗಂಟೆಗೆ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಿಸ್ತೂಲ್ ಪಟಾಕಿಯ ಕಿಡಿ ಕಣ್ಣಿಗೆ ತಾಗಿದ ಕಾರಣ ಮಕ್ಕಳಿಗೆ ಗಾಯವಾಗಿದೆ. ಬೇರೊಬ್ಬರು ರಾಕೆಟ್ ಹೊಡೆದಿದ್ರಿಂದ ಮತ್ತೊಬ್ಬ ಬಾಲಕಿನಿಗೆ ಗಾಯವಾಗಿದೆ. ಕಣ್ಣಿನ ರೆಪ್ಪೆಗೆ ಗಾಯ,ದೃಷ್ಟಿಗೆ ತೊಂದರೆ ಆಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದರೆ.

ಬೆಂಗಳೂರಿನಲ್ಲಿ ಪಟಾಕಿಯಿಂದ ನಾಲ್ವರಿಗೆ ಗಾಯ

ನಿನ್ನೆ ಹಾಗೂ ಇಂದು ಒಟ್ಟು ಎರಡು ದಿನದಲ್ಲಿ ಪಟಾಕಿ ಅವಘಡದಿಂದ ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಇಂದು ನಡೆದ ಘಟನೆಯಲ್ಲಿ ಇಬ್ಬರ ಕಣ್ಣಿಗೆ ಗಾಯವಾಗಿದೆ.