Delhi Metro viral video ದೆಹಲಿ ಮೆಟ್ರೋ ಪುಟ್ಟ ಮಕ್ಕಳ ನೃತ್ಯದಿಂದ ಸುದ್ದಿಯಾಗಿದ್ದು, ವೀಡಿಯೋ ಭಾರಿ ವೈರಲ್ ಆಗಿದೆ. ವೀಡಿಯೋದಲ್ಲಿ ಮೂವರು ಪುಟ್ಟ ಮಕ್ಕಳು ಬಾಲಿವುಡ್‌ನ ಪೆಹ್ಲಾ ಪೆಹ್ಲಾ ಪ್ಯಾರ್ ಹಾಡಿಗೆ ಸಖತ್ ಆಗಿ ಡಾನ್ಸ್ ಮಾಡಿದ್ದಾರೆ. ದೆಹಲಿ ಮೆಟ್ರೋ ರೈಲಿನೊಳಗೆ ಮಾಡಿದ ನೃತ್ಯ ಅನೇಕರ ಮನಸೆಳೆದಿದೆ.

ದೆಹಲಿ ಮೆಟ್ರೋದಲ್ಲಿ ಗಮನ ಸೆಳೆದ ಪುಟ್ಟ ಮಕ್ಕಳ ಡಾನ್ಸ್‌

ದೆಹಲಿ ಮೆಟ್ರೋ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಇದಕ್ಕೆ ಬಹುತೇಕ ಕಾರಣವಾಗಿರುವುದು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು, ಹಾಗೂ ಮೆಟ್ರೋದೊಳಗೆ ನಡೆಯುವ ಕೆಲ ಕಿತ್ತಾಟಗಳು. ಆದರೆ ಈಗ ದೆಹಲಿ ಮೆಟ್ರೋ ಪುಟ್ಟ ಮಕ್ಕಳ ನೃತ್ಯದಿಂದ ಸುದ್ದಿಯಾಗಿದ್ದು, ವೀಡಿಯೋ ಭಾರಿ ವೈರಲ್ ಆಗಿದೆ. ವೀಡಿಯೋದಲ್ಲಿ ಮೂವರು ಪುಟ್ಟ ಮಕ್ಕಳು ಬಾಲಿವುಡ್‌ನ ಪೆಹ್ಲಾ ಪೆಹ್ಲಾ ಪ್ಯಾರ್ ಹಾಡಿಗೆ ಸಖತ್ ಆಗಿ ಡಾನ್ಸ್ ಮಾಡಿದ್ದಾರೆ. ದೆಹಲಿ ಮೆಟ್ರೋ ರೈಲಿನೊಳಗೆ ಮಾಡಿದ ನೃತ್ಯ ಅನೇಕರ ಮನಸೆಳೆದಿದೆ.

ಪೆಹ್ಲಾ ಪೆಹ್ಲಾ ಪ್ಯಾರ್ ಹಾಡಿಗೆ ಹೆಜ್ಜೆ ಹಾಕಿದ ಪುಟಾಣಿಗಳು

1994 ಮಾಧುರಿ ದೀಕ್ಷಿತ್ ಹಾಗೂ ಸಲ್ಮಾನ್ ಖಾನ್ ನಟನೆಯ, 'ಹಮ್ ಆಪ್ಕೆ ಹೈ ಕೌನ್' ಸಿನಿಮಾದ ಪೆಹ್ಲಾ ಪೆಹ್ಲಾ ಪ್ಯಾರ್ ಹಾಡಿಗೆ ಈ ಮಕ್ಕಳು ಸೊಗಸಾಗಿ ನರ್ತಿಸಿದ್ದಾರೆ. ಜ್ಯೋತಿ ಜಿಎಸ್‌ಕೆ ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, 5.5 ಮಿಲಿಯನ್ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವೀಡಿಯೋದಲ್ಲಿ ಮಕ್ಕಳು ಸಖತ್ ಕಲರ್‌ಫುಲ್ ಆಗಿರುವ ಹರ್ಯಾನ್ವಿ ರಾಜಾಸ್ತಾನಿ ಮಿಶ್ರಿತ ಧಿರಿಸನ್ನು ಧರಿಸಿದ್ದು, ಬಿಂದಾಸ್ ಆಗಿ ನೃತ್ಯ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಮಕ್ಕಳ ಡಾನ್ಸ್‌ನ ಈ ಕ್ಯೂಟ್ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ಅನೇಕರು ಮಕ್ಕಳ ಎನರ್ಜಿ ಹಾಗೂ ಅಭಿವ್ಯಕ್ತಿಪಡಿಸುವಿಕೆಯನ್ನು ಕೊಂಡಾಡಿದ್ದಾರೆ.

ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್

ಎಲ್ಲರೂ ತುಂಬಾ ಸೊಗಸಾಗಿ ಕಾಣುತ್ತಿದ್ದೀರಿ ಕ್ಯೂಟ್ ಪ್ರಿನ್ಸಸ್‌ಗಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಮೆಟ್ರೋದಲ್ಲಿ ಕಾಣುವುದಕ್ಕೆ ಸಿಕ್ಕಂತಹ ಬೆಸ್ಟ್ ವೀಡಿಯೋ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆದರೆ, ದೆಹಲಿ ಮೆಟ್ರೋದಲ್ಲಿ ಇಂತಹ ಎಲ್ಲಾ ಚಟುವಟಿಕೆಗಳಿಗೆ ನಿಷೇಧವಿದೆ. ದೆಹಲಿ ಮೆಟ್ರೋ ರೈಲು ನಿಗಮ (DMRC) ರೈಲುಗಳು ಮತ್ತು ನಿಲ್ದಾಣಗಳಲ್ಲಿ ರೀಲ್‌ಗಳು, ನೃತ್ಯ ವೀಡಿಯೊಗಳು ಮತ್ತು ಇತರ ಸಾಮಾಜಿಕ ಮಾಧ್ಯಮ ವಿಷಯಗಳ ಚಿತ್ರೀಕರಣದ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಈ ನಿಯಮಗಳು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ದೈನಂದಿನ ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆಯನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಬಿಹಾರ ಚುನಾವಣಾ ಅಖಾಡ ರಂಗೇರಿಸಿದ UK ರಿಟರ್ನ್‌ಡ್ ಚೆಲುವೆ ಯಾರೀಕೆ
ಇದನ್ನೂ ಓದಿ: ಬಾಯಿ ಬಾರದ ತಂದೆಗೆ ಮಾತಾದಳು ಮಗಳು: ತಂದೆ ಮಗಳ ಭಾವುಕ ವೀಡಿಯೋ ವೈರಲ್

View post on Instagram