ಬಿಹಾರ ಚುನಾವಣಾ ಆಖಾಡ ಸಾಕಷ್ಟು ರಂಗೇರುತ್ತಿದೆ. ಹೊಸ ಹೊಸ ಮುಖಗಳು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಇಳಿದು ಬಿರುಸಿನ ಮತ ಬೇಟೆಯಲ್ಲಿ ತೊಡಗಿದ್ದಾರೆ. ಅವರಲ್ಲೊಬ್ಬರು ಪುಷ್ಪಂ ಪ್ರಿಯಾ ಚೌಧರಿ ಅವರ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ.

ರಂಗೇರಿದ ಬಿಹಾರ ಚುನಾವಣಾ ಅಖಾಡ: ಹಲವು ಹೊಸ ಮುಖಗಳು ಕಣಕ್ಕೆ

ಬಿಹಾರ ಚುನಾವಣಾ ಆಖಾಡ ಸಾಕಷ್ಟು ರಂಗೇರುತ್ತಿದೆ. ಹೊಸ ಹೊಸ ಮುಖಗಳು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಇಳಿದು ಬಿರುಸಿನ ಮತ ಬೇಟೆಯಲ್ಲಿ ತೊಡಗಿದ್ದಾರೆ. ಅವರಲ್ಲೊಬ್ಬರು ಪುಷ್ಪಂ ಪ್ರಿಯಾ ಚೌಧರಿ. ಯುಕೆ ರಿಟರ್ನ್ ಆಗಿರುವ ಈ ಪುಷ್ಪಾ ಪ್ರಿಯಾ ಮಾಜಿ ಶಾಸಕರೊಬ್ಬರ ಪುತ್ರಿ., ಕೇವಲ ಕಪ್ಪು ಬಟ್ಟೆ ಹಾಗೂ ಯಾವಾಗಲೂ ಮಾಸ್ಕ್ ಧರಿಸುವ ಇವರು ತಮ್ಮ ಈ ವಿಭಿನ್ನ ವೇಷ ಭೂಷಣದಿಂದಲೇ ಬಿಹಾರ ಚುನಾವಣಾ ಅಖಾಡಕ್ಕೆ ಹೊಸ ರಂಗು ನೀಡಿದ್ದಾರೆ.

2020 ರಲ್ಲಿ 'ದಿ ಪ್ಲೂರಲ್ಸ್ ಪಾರ್ಟಿ' ಸ್ಥಾಪಿಸಿರುವ ಪುಷ್ಪಂ ಪ್ರಿಯಾ ಚೌಧರಿ, ಧಾರ್ಮಿಕ ಮತ್ತು ಜಾತಿ ರೇಖೆಗಳನ್ನು ಮೀರಿದ ಹೊಸ ಬ್ರಾಂಡ್ ರಾಜಕೀಯವನ್ನು ರಾಜ್ಯಕ್ಕೆ ಪರಿಚಯಿಸುವ ಗುರಿ ಹೊಂದಿದ್ದಾರೆ. ವಿದೇಶದಲ್ಲಿ ಶಿಕ್ಷಣ ಮುಗಿಸಿ ಬಂದಿರುವ ಈ ಉದಯೋನ್ಮುಖ ಯುವ ನಾಯಕಿ, 2025 ರ ಬಿಹಾರ ವಿಧಾನಸಭಾ ಚುನಾವಣೆಗೆ ಹೊಸ ಶಕ್ತಿಯನ್ನು ತರಲು ಮುಂದಾಗಿದ್ದು, ರಾಜ್ಯದಲ್ಲಿ ಬದಲಾವಣೆಯ ಆಕಾಂಕ್ಷೆಗಳೊಂದಿಗೆ ತಮ್ಮ ಅಭಿಪ್ರಾಯಗಳನ್ನು ಬೆರೆಸಲು ಪ್ರಯತ್ನಿಸುತ್ತಿದ್ದಾರೆ. ಈ ಬಾರಿಯಬಿಹಾರ ವಿಧಾನಸಭಾ ಚುನಾವಣೆಯಲ್ಲಿ ದರ್ಭಾಂಗ ಕ್ಷೇತ್ರದಿಂದ ಪ್ರಿಯಾ ಚೌಧರಿ ಸ್ಪರ್ಧೆ ಮಾಡ್ತಿದ್ದಾರೆ.

ಈಗಾಗಲೇ ಹೇಳಿದಂತೆ 2020ರಲ್ಲೇ ತಮ್ಮ ಹೊಸ ಪಕ್ಷವನ್ನು ಸ್ಥಾಪಿಸಿರುವ ಈ ಪುಷ್ಪಂ ಪ್ರಿಯಾ ಚೌಧರಿ ತಾವೇ ತಮ್ಮ ಪಕ್ಷದ ಸಿಎಂ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ಕೇವಲ ಕಪ್ಪು ಬಣ್ಣದ ಧಿರಿಸು ಹಾಗೂ ಮಾಸ್ಕ್‌ನೊಂದಿಗೆ ಸದಾ ಕಾಣಿಸುವ ಪುಷ್ಪಂ ಅವರು ಚುನಾವಣೆಯಲ್ಲಿ ಗೆದ್ದ ನಂತರವೇ ತಾವು ಮಾಸ್ಕ್ ಕಳಚುವುದಾಗಿ ಹೇಳಿದ್ದಾರೆ.

ಯಾರೀಕೆ ಧರ್ಭಾಂಗ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಪುಷ್ಪಾಂ ಪ್ರಿಯಾ ಚೌಧರಿ

ಹಲವು ಬದಲಾವಣೆಗಳ ಕನಸುಗಳೊಂದಿಗೆ ಬಿಹಾರ ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಇಳಿದಿರುವ ಪ್ರಿಯಾ ಚೌಧರಿ ಧರ್ಬಾಂಗ್‌ನಲ್ಲಿ ಈ ಹಿಂದೆ ಶಾಸಕರಾಗಿದ್ದ ಜೆಡಿಯು ನಾಯಕ ವಿನೋದ್ ಕುಮಾರ್ ಚೌಧರಿ ಅವರ ಪುತ್ರಿ. ಈಕೆಯ ತಾತ ಪ್ರೊಫೆಸರ್ ಉಮಾಕಾಂತ್ ಚೌಧರಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತರಾಗಿದ್ದರು ಮತ್ತು ಸಮತಾ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಹಾಗೆಯೇ ಈಕೆ ಚಿಕ್ಕಪ್ಪ ವಿನಯ್ ಕುಮಾರ್ ಚೌಧರಿ ಅವರು 2020 ರ ವಿಧಾನಸಭಾ ಚುನಾವಣೆಯಲ್ಲಿ ಬೇಣಿಪುರದಿಂದ ಗೆದ್ದ ಜೆಡಿಯು ನಾಯಕರಾಗಿದ್ದಾರೆ.

1987 ರ ಜೂನ್ ಜೂನ್ 13ರಂದು ಜನಿಸಿರುವ ಚೌಧರಿ, ದರ್ಭಾಂಗದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದು, ಪುಣೆಯಲ್ಲಿ ಪದವಿ ಪೂರೈಸಿದ್ದಾರೆ ನಂತರ ಅವರು ಯುಕೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ. ಅವರು 2019 ರಲ್ಲಿ ಸಸೆಕ್ಸ್ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ ಅಧ್ಯಯನದಲ್ಲಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಜಕೀಯ ಪ್ರವೇಶಿಸುವುದಕ್ಕೂ ಮೊದಲು, ಅವರು ಬಿಹಾರ ಸರ್ಕಾರದ ಪ್ರವಾಸೋದ್ಯಮ ಮತ್ತು ಆರೋಗ್ಯ ಇಲಾಖೆಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.

2020 ರಲ್ಲೇ ದಿ ಪ್ಲೂರಲ್ಸ್ ಪಾರ್ಟಿ ಸ್ಥಾಪಿಸಿದ್ದ ಪ್ರಿಯಾ ಚೌಧರಿ ಆಗಲೇ ತಮ್ಮ ಹೊಸ ಪಕ್ಷದ ಬಗ್ಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಮುಖಪುಟದ ಜಾಹೀರಾತುಗಳನ್ನು ನೀಡಿದ್ದರು. ಅದರಲ್ಲಿ ಅವರು ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ತಮ್ಮನ್ನು ತಾವು ಘೋಷಿಸಿಕೊಂಡಿದ್ದರು. ಕೆಲವು ವರದಿಗಳ ಪ್ರಕಾರ ಅವರು 2020 ರಲ್ಲೇ ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದ್ದರು. ಆದರೆ ಅವರ ಪಕ್ಷದ ನೋಂದಣಿಯಲ್ಲಿನ ವಿಳಂಬ ಮತ್ತು ಇತರ ಅಂಶಗಳಿಂದಾಗಿ, ಅವರ ಪಕ್ಷವು ಕೇವಲ 148 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಲು ಸಾಧ್ಯವಾಯಿತು. ಆ ಸಮಯದಲ್ಲೇ ಪ್ರಿಯಾ, ಜಾತಿ ಮತ್ತು ಧರ್ಮ ಆಧಾರಿತ ರಾಜಕೀಯವನ್ನು ಬಹಿರಂಗವಾಗಿ ವಿರೋಧಿಸಿದ್ದರು ಮತ್ತು ಅವರು ಅಭ್ಯರ್ಥಿಗಳ ಜಾತಿಯ ಬದಲಿಗೆ ಅವರ ಜನಾಂಗವನ್ನು ಎತ್ತಿ ತೋರಿಸಿದರು ಮತ್ತು ಅವರ ನಾಮಪತ್ರಗಳಲ್ಲಿ ಅವರ ಧರ್ಮದ ಬದಲಿಗೆ ಬಿಹಾರ ಎಂದು ಉಲ್ಲೇಖಿಸಿ ಗಮನ ಸೆಳೆದಿದ್ದರು.

ಈಗ ಇವರ ಪ್ಲೂರಲ್ಸ್ ಪಾರ್ಟಿ ಈ ಬಾರಿ ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಅರ್ಧದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಪಕ್ಷಕ್ಕೆ 'ಸಿಟಿ' ಚಿಹ್ನೆ ನೀಡಲಾಗಿದೆ. ಪುಷ್ಪಮ್ ಪ್ರಿಯಾ ಚೌಧರಿ ಅವರು ಈ ಬಾರಿ ದರ್ಭಂಗಾದಿಂದ ನಾಮಪತ್ರ ಸಲ್ಲಿಸಿದ್ದಾರೆ ಅಲ್ಲಿ ವಿರೋಧ ಪಕ್ಷದ ಕೊರತೆ ಇದೆ , ವಿರೋಧ ಪಕ್ಷದಲ್ಲಿ ಹೆಚ್ಚು ವಿದ್ಯಾವಂತ ನಾಯಕರು ಇರಬೇಕೆಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಾಯಿ ಬಾರದ ತಂದೆಗೆ ಮಾತಾದಳು ಮಗಳು: ತಂದೆ ಮಗಳ ಭಾವುಕ ವೀಡಿಯೋ ವೈರಲ್

ಇದನ್ನೂ ಓದಿ: 5000 ಕೊಡ್ತಿನಿ ಬಾ ಎಂದು ಕರೆದವನ ಬೆನ್ನು ಹುಡಿ ಮಾಡಿದ ನರ್ಸ್‌