- Home
- Entertainment
- TV Talk
- ತಾಳಿ ಕಟ್ಟಲಿಲ್ಲ, ಗಂಡನಾಗಲಿಲ್ಲ; ನಿತ್ಯಾ ಹೊಟ್ಟೆಯಲ್ಲಿ ಬೆಳೆಯುವ ಮಗುವಿಗೆ ಅಪ್ಪನಾಗ್ತಾನಾ ಕರ್ಣ?
ತಾಳಿ ಕಟ್ಟಲಿಲ್ಲ, ಗಂಡನಾಗಲಿಲ್ಲ; ನಿತ್ಯಾ ಹೊಟ್ಟೆಯಲ್ಲಿ ಬೆಳೆಯುವ ಮಗುವಿಗೆ ಅಪ್ಪನಾಗ್ತಾನಾ ಕರ್ಣ?
ನಿಧಿಯನ್ನು ಪ್ರೀತಿಸುತ್ತಿದ್ದ ಕರ್ಣ, ಅನಿವಾರ್ಯವಾಗಿ ಅಕ್ಕ ನಿತ್ಯಾಳನ್ನು ಮದುವೆಯಾಗಿದ್ದಾನೆ. ಈ ಮದುವೆಯ ಹಿಂದಿನ ಸತ್ಯ ಯಾರಿಗೂ ತಿಳಿದಿಲ್ಲ. ಇದೀಗ ಸಪ್ತಪದಿ ತುಳಿಯುವ ವೇಳೆ ನಿತ್ಯಾ ಗರ್ಭಿಣಿ ಎಂಬ ಆಘಾತಕಾರಿ ಸತ್ಯ ಕರ್ಣನಿಗೆ ತಿಳಿದುಬಂದಿದೆ.

ತ್ಯಾಗಮಯಿ ಕರ್ಣ
ಕರ್ಣ ಅಂದ್ರೆ ತ್ಯಾಗಮಯಿ ಅಂತಾ ಎಲ್ಲರಿಗೂ ಗೊತ್ತು. ತ್ಯಾಗದ ಜೊತೆಯಲ್ಲಿ ತಾಳ್ಮೆಯೂ ಕರ್ಣನಲ್ಲಿದೆ. ತಂದೆ ರಮೇಶ್ ಮಾಡಿದ ಸಂಚಿನಿಂದ ಮದುವೆ ಮಂಟಪದಿಂದ ತೇಜಸ್ ಕಾಲ್ಕಿತ್ತಿದ್ದಾನೆ. ಮೊಮ್ಮಗಳು ನಿತ್ಯಾ ಜೀವನ ಹೀಗಾಯ್ತು ಅಂತ ಶಾಂತಿ ಅಜ್ಜಿ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕುತ್ತಿದ್ದಾಳೆ. ಗೆಳತಿಯ ಕಣ್ಣೀರಿ ನೋಡಿ ತನ್ನ ಮೊಮ್ಮಗನೇ ನಿತ್ಯಾಳನ್ನು ಮದುವೆಯಾಗುತ್ತಾನೆ ಎಂದು ಅಜ್ಜಿ ಹೇಳಿದ್ದಾಳೆ.
ಕರ್ಣನ ಹೃದಯದಲ್ಲಿ ನಿಧಿಯ ಪ್ರೀತಿ
ಮದುವೆಯೇ ಆಗಲ್ಲ ಎಂಬ ದೃಢ ನಿರ್ಧಾರದಲ್ಲಿದ್ದ ಕರ್ಣನ ಹೃದಯಲ್ಲಿ ನಿಧಿ ಪ್ರೀತಿಯ ಹೂ ಅರಳಿತ್ತು. ಈ ಸಂದರ್ಭದಲ್ಲಿ ನಿತ್ಯಾ-ಕರ್ಣನ ಮದುವೆ ನಡೆದಿದೆ. ಈ ಮದುವೆ ಹೇಗಾಯ್ತು ಎಂಬ ಸತ್ಯ ಮಾತ್ರ ನಾಲ್ಕು ಗೋಡೆಯಲ್ಲಿಯೇ ಉಳಿದುಕೊಂಡಿದೆ. ತನಗೆ ತಾನೇ ಮಾಂಗಲ್ಯ ಕಟ್ಟಿಕೊಂಡು ಕರ್ಣನ ಜೊತೆ ನಿತ್ಯಾ ಹೊರಗೆ ಬಂದಿದ್ದಾಳೆ. ಅಕ್ಕನ ಕೊರಳಲ್ಲಿ ಮಾಂಗಲ್ಯ ನೋಡಿ ನಿಧಿ ಆಘಾತಕ್ಕೊಳಗಾಗಿದ್ದಾಳೆ.
ನಿತ್ಯಾ ಕೊರಳಲ್ಲಿ ತಾಳಿ
ನಿತ್ಯಾ ಕೊರಳಲ್ಲಿ ತಾಳಿಯನ್ನು ನೋಡಿ ಸುಮತಿ ಶಾಕ್ ಆಗಿದ್ದಾಳೆ. ಮೊಮ್ಮಗ ಕರ್ಣ ನನ್ನ ಮಾತು ಮೀರಲ್ಲ ಅನ್ನೋದನ್ನು ಸಾಬೀತು ಮಾಡಿದ್ದು, ಇಲ್ಲಿಯೇ ತಾಳಿ ಕಟ್ಟಿದ್ದಾನೆ. ಇನ್ನುಳಿದ ಶಾಸ್ತ್ರಗಳು ಎಲ್ಲರ ಮುಂದೆ ನಡೆಯಬೇಕು ಎಂದು ಅಜ್ಜಿ ಹೇಳಿದ್ದಾಳೆ. ಕರ್ಣ ಮತ್ತು ನಿತ್ಯಾ ಮದುವೆಯಾಗಿದೆ ಎಂದು ತಿಳಿದು ರಮೇಶ್, ನಯನತಾರಾ, ಸಂಜಯ್ ಮೂವರು ದುಷ್ಟರ ಗುಂಪು ಒಳಗೊಳಗೆ ಖುಷಿಯಾಗಿದೆ.
ನಿಧಿ ಮತ್ತು ನಿತ್ಯಾ ಕಣ್ಣೀರು
ಮದುವೆ ಮಂಟಪದಲ್ಲಿ ತನ್ನ ಪ್ರೀತಿಯ ಕರ್ಣ ಸರ್ ಜೊತೆ ನಿತ್ಯಾಳನ್ನು ನೋಡಿದ ನಿಧಿ ಒಂದೊಂದೇ ಹೆಜ್ಜೆಯನ್ನು ಹಿಂದೆ ಇಟ್ಟಿದ್ದಾಳೆ. ನಿಧಿಗೆ ಪ್ರಪೋಸ್ ಮಾಡಲು ಹೂಗಳಿಂದ ಸೆಟ್ ಕ್ರಿಯೇಟ್ ಮಾಡಿದ್ದನು. ಮದುವೆ ವಿಷಯ ತಿಳಿದು ಹೂಗಳ ಅಲಂಕಾರವನ್ನು ನಿಧಿ ಹಾಳು ಮಾಡಿ ಕಣ್ಣೀರು ಹಾಕಿದ್ದಾಳೆ. ಮತ್ತೊಂದೆಡೆ ಇದೆಲ್ಲವೂ ತನ್ನಿದಲೇ ನಡೆದಿದೆ ಎಂದು ನಿತ್ಯಾ ಸಹ ಕಣ್ಣೀರಿಟ್ಟಿದ್ದಾಳೆ.
ಇದನ್ನೂ ಓದಿ: Bigg Bossಗೆ ಎಂಟ್ರಿ ಆಗ್ತಿದ್ದಂಗೇ ಧಮಾಲ್ ಧಿಮಿಲ್ ಧೂಳೆಬ್ಬಿಸಿದ ರಿಷಾ: ಮಾತು ಬೆಂಕಿ, ಫೋಟೋಗಳು ಪುಡಿಪುಡಿ- ಯಾರೀಕೆ?
ಅಪ್ಪನಾಗ್ತಾನಾ ಕರ್ಣ?
ಮೂರು ಗಂಟಿನ ಗುಟ್ಟು ನಾಲ್ಕು ಗೋಡೆ ಮಧ್ಯೆಯೇ ಉಳಿದಿದೆ. ಲೋಕದ ಕಣ್ಣಿಗೆ ಕರ್ಣ ಮತ್ತು ನಿತ್ಯಾ ಇದೀಗ ಗಂಡ-ಹೆಂಡತಿ. ಸಪ್ತಪದಿ ತುಳಿಯುತ್ತಿರುವಾಗಲೇ ನಿತ್ಯಾ ಗರ್ಭಿಣಿ ಅನ್ನೋ ಸ್ಪೋಟಕ ಸತ್ಯ ಕರ್ಣನ ಮುಂದೆ ಬಯಲಾಗಿದೆ. ತಾಳಿ ಕಟ್ಟಲಿಲ್ಲ, ಗಂಡನಾಗಲಿಲ್ಲ. ನಿತ್ಯಾ ಹೊಟ್ಟೆಯಲ್ಲಿ ಬೆಳೆಯುವ ಮಗನಿಗೆ ಅಪ್ಪನಾಗ್ತಾನಾ ಕರ್ಣ ಎಂದು ಸೀರಿಯಲ್ ವೀಕ್ಷಕರು ಚಿಂತೆಗೀಡಾಗಿದ್ದಾರೆ.
ಇದನ್ನೂ ಓದಿ: Karna Serial: ಗುಟ್ಟಾಗಿಯೇ ಉಳಿತು ಮೂರು ಗಂಟಿನ ಸತ್ಯ: ಕರ್ಣನದ್ದು ಒಂದೊಂದು ಭೂಮಿ ತೂಕದ ಮಾತು