ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ, ಇಬ್ಬರು ಮನೆ ಮಾಲೀಕರು ಕಾರ್ಮಿಕರನ್ನು ಬಳಸಿ ಅಕ್ರಮವಾಗಿ ಮಲಗುಂಡಿ ಸ್ವಚ್ಛಗೊಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಕೆಲಸವನ್ನು ನಿಲ್ಲಿಸಿ, ಕಾರ್ಮಿಕರನ್ನು ರಕ್ಷಿಸಿ, ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
- Home
- News
- State
- Karnataka News Live: ಹಾವೇರಿಯಲ್ಲಿ ಅಮಾನವೀಯ ಕೃತ್ಯ - ನಿಷೇಧವಿದ್ದರೂ ಮಲಗುಂಡಿಗೆ ಇಳಿದ ಕಾರ್ಮಿಕರು!
Karnataka News Live: ಹಾವೇರಿಯಲ್ಲಿ ಅಮಾನವೀಯ ಕೃತ್ಯ - ನಿಷೇಧವಿದ್ದರೂ ಮಲಗುಂಡಿಗೆ ಇಳಿದ ಕಾರ್ಮಿಕರು!

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದ ಮಹಿಳೆಯೊಬ್ಬರು ತನ್ನ ಮೊಮ್ಮಗಳ ಹೆಸರಿಗೆ ಸುಕನ್ಯಾ ಸಮೃದ್ಧಿ ಯೋಜನೆಗೆ ಜಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಗೃಹಲಕ್ಷ್ಮೀ ಹಣದಿಂದ ಹಲವಾರು ಕಡೆಗಳಲ್ಲಿ ಮಹಿಳೆಯರು ನಾನಾ ಕಾರ್ಯಗಳಿಗೆ ವಿನಿಯೋಗಿಸಿಕೊಂಡಿದ್ದಾರೆ. ತರಲಕಟ್ಟಿ ಗ್ರಾಮದ ಶರಣಮ್ಮ ಬ್ಯಾಳಿ ಅವರು ತಮ್ಮ ಮೊಮ್ಮಗಳು ಸಾನ್ವಿ ಬ್ಯಾಳಿ ಅವರಿಗೆ ಭವಿಷ್ಯದಲ್ಲಿ ಸಹಾಯವಾಗಲಿ ಎನ್ನುವ ಸದುದ್ದೇಶದಿಂದ ಗೃಹಲಕ್ಷ್ಮೀ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳದೆ, ಸುಕನ್ಯಾ ಸಮೃದ್ಧಿ ಯೋಜನೆಗೆ ₹10 ಸಾವಿರ ಜಮೆ ಮಾಡಿದ್ದಾರೆ. ಮೊಮ್ಮಗಳ 18 ವರ್ಷದ ನಂತರ ಶಿಕ್ಷಣ, ಮದುವೆಗೆ ಅನುಕೂಲವಾಗಲಿಗೆ ಎಂದು ಮನಗಂಡು ಹಣ ಜಮೆ ಮಾಡಿ ಮಾದರಿಯಾಗಿದ್ದಾರೆ. ಇವರ ಕಾರ್ಯಕ್ಕೆ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.
Karnataka News Live 20 January 2026ಹಾವೇರಿಯಲ್ಲಿ ಅಮಾನವೀಯ ಕೃತ್ಯ - ನಿಷೇಧವಿದ್ದರೂ ಮಲಗುಂಡಿಗೆ ಇಳಿದ ಕಾರ್ಮಿಕರು!
Karnataka News Live 20 January 2026ರಾಯಚೂರು - ಎರಡು ಬುಲೆರೋಗಳ ನಡುವೆ ಭೀಕರ ಡಿಕ್ಕಿ; ಅಪ್ಪ-ಮಗ ಸೇರಿ ಐವರು ಬಲಿ, ಹಲವರು ಗಾಯ, ಮೂರು ಕುರಿಗಳು ಸಾವು!
Karnataka News Live 20 January 2026ವೇಗವಾಗಿ ಬಂತು ಹೊಸ ಕಾರು, ಹೋಯ್ತು ಮಗುವಿನ ಪ್ರಾಣ - ತರಬೇತಿ ಇಲ್ಲದ ಚಾಲಕನ ಹುಚ್ಚಾಟಕ್ಕೆ 5 ವರ್ಷದ ಬಾಲಕ ಬಲಿ!
Karnataka News Live 20 January 2026ಆನೇಕಲ್‌ನಲ್ಲಿ ಅಗ್ನಿ ದುರಂತ - ಶಂಕಿತ ಬಾಂಗ್ಲಾ ವಲಸಿಗರಿದ್ದ ಸ್ಕ್ರಾಪ್ ಶೆಡ್‌ಗಳು ಸುಟ್ಟು ಭಸ್ಮ!
ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಎಸ್. ಬಿಂಗೀಪುರ ಕೆರೆಯ ಬಳಿಯ ಸ್ಕ್ರಾಪ್ ಶೆಡ್‌ಗಳಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಇತ್ತೀಚೆಗೆ ಶಂಕಿತ ಬಾಂಗ್ಲಾ ವಲಸಿಗರ ವಾಸಸ್ಥಳವೆಂದು ವಿವಾದಕ್ಕೆ ಕಾರಣವಾಗಿದ್ದ ಈ ಶೆಡ್‌ಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.
Karnataka News Live 20 January 2026ಫಸ್ಟ್ ಟೈಮ್ ರಿಯಲ್ 2ನೇ ಪತಿ, ಮುದ್ದಾದ ಮಗನ ಪರಿಚಯ ಮಾಡಿಕೊಟ್ಟ Bhagyalakshmi Serial ಸುಷ್ಮಾ ಕೆ ರಾವ್
Bhagyalakshmi Serial Sushma K Rao: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ ರಾವ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, 25 ವರ್ಷಗಳಾಗಿವೆ, ಈ ಖುಷಿಯಲ್ಲಿ ಇವರ ಮಗ, ಪತಿಯ ಪರಿಚಯ ಮಾಡಿಕೊಡಲಾಗಿದೆ.
Karnataka News Live 20 January 2026ರೋಡ್ ಕಟಿಂಗ್ ಪರ್ಮಿಷನ್‌ಗೆ ಲಂಚ ಕೇಳಿದ ಅಧಿಕಾರಿ, ಬೆಂಗಳೂರಿನ ಭ್ರಷ್ಟಾಚಾರ ಕಂಡು ಕಂಗಾಲಾದ ಸ್ಟಾರ್ಟ್‌ಅಪ್ ಫೌಂಡರ್!
ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸಹ-ಸಂಸ್ಥಾಪಕರೊಬ್ಬರು, ತಮ್ಮ ಕಟ್ಟಡಕ್ಕೆ BWSSB ನೀರಿನ ಸಂಪರ್ಕ ಮತ್ತು ರೋಡ್ ಕಟಿಂಗ್ ಅನುಮತಿಗಾಗಿ ಅಧಿಕಾರಿಗಳು ಭಾರಿ ಲಂಚ ಕೇಳಿದ್ದಾರೆಂದು ಆರೋಪಿಸಿದ್ದಾರೆ. ಅಧಿಕೃತ ಮತ್ತು ಅನಧಿಕೃತ ಮಾರ್ಗಗಳಿಗೆ ಬೇರೆ ಬೇರೆ ಲಂಚದ ದರಗಳನ್ನು ಮುಂದಿಟ್ಟಿದ್ದಾರೆ.
Karnataka News Live 20 January 2026Breaking - ವಿಜಯಪುರದಲ್ಲಿ ಐದು ಖಾಸಗಿ ಬಸ್‌ಗಳ ಸರಣಿ ಅಪಘಾತ; ತಪ್ಪಿದ ಅನಾಹುತ!
Karnataka News Live 20 January 2026ಬೆಂಗಳೂರಿಗರಿಗೆ ಗುಡ್‌ನ್ಯೂಸ್ - ಹೊಸ ಮೆಟ್ರೋ ಪಿಂಕ್ ಲೈನ್ ಟ್ರಯಲ್ ರನ್ ಶುರು - ಮುಗಿಯಲಿದೆ ಟ್ರಾಫಿಕ್ ಗೋಳು!
Karnataka News Live 20 January 2026ಭದ್ರಾವತಿಯಲ್ಲಿ ದಂಪತಿಗಳ ಅನುಮಾನಾಸ್ಪದ ಸಾವು - ವೈದ್ಯರು ನೀಡಿದ ಇಂಜೆಕ್ಷನ್ ಪ್ರಾಣಕ್ಕೆ ಕುತ್ತು ತಂದಿತೇ?
ಭದ್ರಾವತಿಯ ಭೂತನಗುಡಿ ಬಡಾವಣೆಯಲ್ಲಿ ವಯೋವೃದ್ಧ ದಂಪತಿಗಳಾದ ಚಂದ್ರಪ್ಪ ಮತ್ತು ಜಯಮ್ಮ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ರಾತ್ರಿ ಮಲಗಿದ್ದವರು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದು, ವೈದ್ಯರು ನೀಡಿದರೆನ್ನಲಾದ ಇಂಜೆಕ್ಷನ್ ಸಾವಿಗೆ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
Karnataka News Live 20 January 2026'ಎಂಜಿ ಹೆಕ್ಟರ್ ಕಾರಿದ್ದವನು ಬಡವ ಹೇಗಾಗ್ತಾನೆ..' ಬಿಗ್‌ಬಾಸ್ ಮುಗಿದರೂ ಅಶ್ವಿನಿ, ಧ್ರುವಂತ್‌ಗೆ ಈಗಲೂ ಗಿಲ್ಲಿಯೇ ಟಾರ್ಗೆಟ್!
ಬಿಗ್‌ಬಾಸ್ ಫಿನಾಲೆ ನಂತರ ವಿನ್ನರ್ ಗಿಲ್ಲಿ ನಾಪತ್ತೆಯಾಗಿದ್ದು, ಸಹ ಸ್ಪರ್ಧಿಗಳಾದ ಧ್ರುವಂತ್ ಮತ್ತು ಅಶ್ವಿನಿ, ಗಿಲ್ಲಿ ಬಡತನದ ವೇಷ ಹಾಕಿ ಸಿಂಪತಿ ಕಾರ್ಡ್ ಬಳಸಿ ಗೆದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಗಿಲ್ಲಿ ಬಳಿ ಎಂಜಿ ಹೆಕ್ಟರ್ ಕಾರು ಇರುವುದೇ ಇದಕ್ಕೆ ಸಾಕ್ಷಿ ಎಂದು ಧ್ರುವಂತ್ ಹೇಳಿದ್ದಾರೆ.
Karnataka News Live 20 January 2026ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲೇ ಅಸಭ್ಯ ವರ್ತನೆ - ವೀಡಿಯೋ ಮಾಡ್ತಿದ್ದಂತೆ ಎಸ್ಕೇಪ್
ದೆಹಲಿಯ ಮೆಟ್ರೋ ನಿಲ್ದಾಣವೊಂದರಲ್ಲಿ ವ್ಯಕ್ತಿಯೊಬ್ಬ ಅನಾಗರಿಕನಂತೆ ವರ್ತಿಸಿದ್ದು, ಈ ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯ ನಂತರ, ದೆಹಲಿ ಮೆಟ್ರೋ ನಿಗಮವು ಪ್ರಕಟಣೆ ಹೊರಡಿಸಿದೆ.
Karnataka News Live 20 January 2026ಮೈಸೂರು-ಕೇರಳ ನಡುವೆ 'ನಕಲಿ ಲೈಸೆನ್ಸ್' ಮಾಫಿಯಾ - ಆರ್‌ಟಿಒ ಅಧಿಕಾರಿಗಳ ಅಮಾನತು; ವಿಜಿಲೆನ್ಸ್ ತನಿಖೆಗೆ ಶಿಫಾರಸು!
ಮೈಸೂರು ಮತ್ತು ಕೇರಳದ ಮೋಟಾರು ವಾಹನ ಇಲಾಖೆ ಅಧಿಕಾರಿಗಳು ಶಾಮೀಲಾದ ಬೃಹತ್ ನಕಲಿ ಚಾಲನಾ ಪರವಾನಗಿ ಹಗರಣ ಬೆಳಕಿಗೆ ಬಂದಿದೆ. ಚಾಲನಾ ಪರೀಕ್ಷೆ ಇಲ್ಲದೆ ಮೈಸೂರಿನಿಂದ ಪರವಾನಗಿ ಪಡೆದು, ನಂತರ ಕೇರಳದಲ್ಲಿ ಹೊಸ ಪರವಾನಗಿ ನೀಡುವ ಜಾಲ ಸಕ್ರಿಯವಾಗಿತ್ತು. ಇದೀಗ ಇಬ್ಬರು ಅಧಿಕಾರಿಗಳು ಅಮಾನತ್ತಾಗಿದ್ದಾರೆ.
Karnataka News Live 20 January 2026ಬಾಂಗ್ಲಾ ನುಸುಳುಕೋರರ ಬಗ್ಗೆ ಸುಳ್ಳು ಮಾಹಿತಿ, ಪ್ರಧಾನಿ ಮೋದಿ, ಅಜಿತ್ ದೋವಲ್ ವಿರುದ್ಧ ಸಂತೋಷ್ ಲಾಡ್ ಕಿಡಿ
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಬೆಲೆ ಏರಿಕೆ, ಬೇಟಿ ಬಚಾವೋ ಯೋಜನೆಯ ವೈಫಲ್ಯ ಮತ್ತು ನುಸುಳುಕೋರರ ವಿಚಾರದಲ್ಲಿ ಬಿಜೆಪಿಯ ದ್ವಂದ್ವ ನೀತಿಯನ್ನು ಪ್ರಶ್ನಿಸಿದ್ದಾರೆ.
Karnataka News Live 20 January 2026ಬಿಗ್‌ಬಾಸ್ ಮನೆಯಲ್ಲಿ ಕಾಸ್ಟ್ಯೂಮ್‌ಗಾಗಿ ಕಾವ್ಯಾ ಖರ್ಚು ಮಾಡಿದ್ದೆಷ್ಟು?
Karnataka News Live 20 January 2026ಲಕ್ಕುಂಡಿ ಉತ್ಖನನ - ಮನೆಯೊಳಗೆ ಪತ್ತೆಯಾಯ್ತು 10ನೇ ಶತಮಾನದ ಈಶ್ವರ ದೇಗುಲ; ಪುರಾತತ್ವ ಇಲಾಖೆ ಫುಲ್ ಖುಷ್!
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದ ಉತ್ಖನನದ ವೇಳೆ ಮನೆಯೊಂದರ ಹಾಲ್ ಪಕ್ಕದಲ್ಲೇ 10ನೇ ಶತಮಾನದ ಪುರಾತನ ಈಶ್ವರನ ಗರ್ಭಗುಡಿ ಪತ್ತೆಯಾಗಿದೆ. ಚೌಕಿಮಠ ಕುಟುಂಬದವರು ಕಳೆದ ನಾಲ್ಕು ತಲೆಮಾರುಗಳಿಂದ ಈ ದೇವಸ್ಥಾನದ ಆವರಣವನ್ನೇ ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದಾರೆ.
Karnataka News Live 20 January 2026ಅಶೋಕ್, ವಿಜಯೇಂದ್ರ ಸೇರಿ ಈಗಿನ ರಾಜ್ಯ ಬಿಜೆಪಿ ನಾಯಕರಿಗೆ ಮೆಚುರಿಟಿ ಇಲ್ಲ- ಸಚಿವ ಬೋಸರಾಜು ಕಿಡಿ
Minister Boseraju on R Ashoka ವಿಪಕ್ಷ ನಾಯಕ ಆರ್. ಅಶೋಕ್ ಅವರ ಭ್ರಷ್ಟಾಚಾರ ಆರೋಪಕ್ಕೆ ಕೊಡಗಿನಲ್ಲಿ ತಿರುಗೇಟು ನೀಡಿರುವ ಸಚಿವ ಎನ್.ಎಸ್. ಬೋಸರಾಜ್, ಬಿಜೆಪಿ ನಾಯಕರಿಗೆ ಮೆಚುರಿಟಿ ಇಲ್ಲ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಕೇಂದ್ರದಿಂದ ಬರಬೇಕಾದ ಅನುದಾನ ತರುವಂತೆ ಸವಾಲು ಹಾಕಿದರು.
Karnataka News Live 20 January 2026ಯುವಕನ ಕಿರುಕುಳಕ್ಕೆ ಬಲಿಯಾದಳೇ 15ರ ಬಾಲಕಿ? ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಬಾವಿಯಲ್ಲಿ ಶವವಾಗಿ ಪತ್ತೆ!
Karnataka News Live 20 January 2026ವೀಳ್ಯದೆಲೆ ಬೆಲೆ ಗಗನಕ್ಕೆ ಏರಿಕೆ, ಚಿಕ್ಕಬಳ್ಳಾಪುರದ ಮಾರುಕಟ್ಟೆಯಲ್ಲಿ 200ರ ಗಡಿ ದಾಟಿದ ಪಾನ್ ಎಲೆ!
Karnataka News Live 20 January 2026ನನ್ನ ಪೋಸ್ಟ್ ಅಶ್ವಿನಿ ಗೌಡಗೆ ನೀಡಿದ ಟಾಂಗ್ ಅಲ್ಲ, ಸ್ಪಷ್ಟನೆ ನೀಡಿದ ಕಾವ್ಯಾ!
ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟರಾಜ್ ಕುರಿತು 'ಬಡವರ ಮಕ್ಕಳು ಬೆಳಿಬೇಕು' ಎಂದು ಹಾಕಿದ್ದ ಪೋಸ್ಟ್, ಸ್ಪರ್ಧಿ ಅಶ್ವಿನಿಗೆ ನೀಡಿದ ಟಾಂಗ್ ಎಂಬ ಚರ್ಚೆಗೆ ನಟಿ ಕಾವ್ಯಾ ಶೈವ ಸ್ಪಷ್ಟನೆ ನೀಡಿದ್ದಾರೆ. ಆ ಪೋಸ್ಟ್ ಯಾರನ್ನೂ ಉದ್ದೇಶಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
Karnataka News Live 20 January 2026ಕೋಲಾರ - ಗೊಂಬೆಯ ಮೇಲೆ ಮಾಟ ಮಂತ್ರ ಪ್ರಯೋಗಿಸಿ ದೇಗುಲದಲ್ಲಿ ಭಯಾನಕ ಬೆಚ್ಚಿ ಬೀಳಿಸೋ ಪೂಜೆ ಮಾಡಿದ ಪೂಜಾರಿ ಹತ್ಯೆ!
ಕೋಲಾರ ಜಿಲ್ಲೆಯ ಮಾಲೂರಿನಲ್ಲಿ, ಸ್ಮಶಾನದ ದೇವಸ್ಥಾನದಲ್ಲಿ ಮಾಟ-ಮಂತ್ರ ಪೂಜೆ ನಡೆಸುತ್ತಿದ್ದ ಆಂಜಿನಪ್ಪ ಎಂಬ ಪೂಜಾರಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಅಮಾವಾಸ್ಯೆಯಂದು ನಡೆದ ಈ ಘಟನೆಯ ಹಿಂದೆ ವಾಮಾಚಾರದ ವೈಷಮ್ಯ, ಜಮೀನು ವಿವಾದ ಅಥವಾ ವೈಯಕ್ತಿಕ ದ್ವೇಷದ ಶಂಕೆ ವ್ಯಕ್ತವಾಗಿದೆ..