- Home
- News
- State
- Karnataka News Live: ರಕ್ಷಿತಾ- ಧ್ರುವಂತ್ ಫೋಟೋ ಶೇರ್ ಮಾಡಿದ Bigg Boss ವೀಕ್ಷಕರಿಗೆ ಕೇಳಿದೆ ಈ ಪ್ರಶ್ನೆ - ನಿಮ್ಮ ಉತ್ತರವೇನು?
Karnataka News Live: ರಕ್ಷಿತಾ- ಧ್ರುವಂತ್ ಫೋಟೋ ಶೇರ್ ಮಾಡಿದ Bigg Boss ವೀಕ್ಷಕರಿಗೆ ಕೇಳಿದೆ ಈ ಪ್ರಶ್ನೆ - ನಿಮ್ಮ ಉತ್ತರವೇನು?

ಬೆಳಗಾವಿ: ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಹಠಯೋಗಿ ಲೋಕೇಶ್ವರ ಸ್ವಾಮೀಜಿಯು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾ*ಚಾರ ಎಸಗಿದ ಆರೋಪ ಸಾಬೀತಾಗಿದೆ. ಜಿಲ್ಲಾ ಪೋಕ್ಸೋ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದ್ದು, ಅಪರಾಧಿಗೆ ಶಿಕ್ಷೆಯನ್ನು ಶನಿವಾರ ನೀಡಲಿದೆ. ಹಠಯೋಗಿ ಲೋಕೇಶ್ವರ ಸ್ವಾಮೀಜಿ ಉರೂಫ್ ಲೋಕೇಶ್ವರ ಸಾಬಣ್ಣ ಜಂಬಗಿ (30) ಬಾಲಕಿ ಮೇಲೆ ಅತ್ಯಾ*ಚಾರ ಎಸಗಿದ ಅಪರಾಧಿ. ಮೇ 13ರಂದು ನಿಮ್ಮ ಮನೆಗೆ ಬಿಡುತ್ತೇನೆಂದು ಹೇಳಿ ಅಪ್ರಾಪ್ತ ಬಾಲಕಿಯನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಆಂಧ್ರಪ್ರದೇಶದ ಮಂತ್ರಾಲಯಕ್ಕೆ ತೆರಳಿ ಲಾಡ್ಜ್ವೊಂದರಲ್ಲಿ ಬಾಲಕಿ ಮೇಲೆ ಒತ್ತಾಯ ಪೂರ್ವಕವಾಗಿ ಅತ್ಯಾ*ಚಾರ ಎಸಗಿದ್ದ.
Karnataka News Live 20 December 2025ರಕ್ಷಿತಾ- ಧ್ರುವಂತ್ ಫೋಟೋ ಶೇರ್ ಮಾಡಿದ Bigg Boss ವೀಕ್ಷಕರಿಗೆ ಕೇಳಿದೆ ಈ ಪ್ರಶ್ನೆ - ನಿಮ್ಮ ಉತ್ತರವೇನು?
Karnataka News Live 20 December 2025ಕಚೇರಿಗಳಿಗೆ ಬಿಗಿಯುಡುಪು, ಸ್ಲೀವ್ಲೆಸ್ ಡ್ರೆಸ್, ಹರಿದ ಜೀನ್ಸ್ ನಿಷೇಧ - ಸರ್ಕಾರದ ಆದೇಶದಲ್ಲಿ ಇನ್ನೂ ಏನೇನಿವೆ?
Karnataka News Live 20 December 2025ನನ್ನ ಕೆಲಸ ಸಹಿಸದೆ ಭೂಕಬಳಿಕೆ ಆರೋಪ, ಯಾವುದೇ ತನಿಖೆಗೂ ಸಿದ್ಧ - ಸಚಿವ ಕೃಷ್ಣ ಬೈರೇಗೌಡ
ಕೋಲಾರದ ಗರುಡನಪಾಳ್ಯ ಗ್ರಾಮದ 256 ಎಕರೆ ಜಮೀನು 1953ರಿಂದಲೂ ನಮ್ಮ ಕುಟುಂಬದ ಸುಪರ್ದಿಯಲ್ಲಿದೆ. ಈ ಜಮೀನು ನಾನು ಹುಟ್ಟುವ ಮೊದಲು ಮೈಸೂರು ರಾಜರಿಂದ ನಮ್ಮ ತಾತ ಚೌಡೇಗೌಡರು ಖರೀದಿಸಿದ್ದರು.
Karnataka News Live 20 December 2025ಸಿಎಂ ರಾಂಗ್ ಫ್ಲೈಟ್ ಹತ್ತಿದ್ದಾರೆ - ಸಿದ್ಧರಾಮಯ್ಯ ವಿರುದ್ಧ ಆರ್.ಅಶೋಕ್ ಗರಂ!
ಎಲ್ಲದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದಾದರೆ, ನೀವು ಏಕಿರಬೇಕು? ರಾಜೀನಾಮೆ ಕೊಟ್ಟು ಹೊರಡಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
Karnataka News Live 20 December 2025ವೇದಿಕೆ ಮೇಲೆಯೇ 'ಕಚಡಾ ನನ್ ಮಗನೆ, ಪಾಪಿ ನನ್ ಮಗನೇ' ಎಂದೆಲ್ಲಾ ಬೈಯೋದಾ ನಟ ಉಪೇಂದ್ರ? ಸ್ಟಾರ್ ನಟರು ಸುಸ್ತು!
ಬಹುನಿರೀಕ್ಷಿತ '45' ಚಿತ್ರದ ಪ್ರಚಾರದ ವೇಳೆ ನಟ ಉಪೇಂದ್ರ ಅವರು ಡ್ಯಾನ್ಸ್ ಶೋ ವೇದಿಕೆಯಲ್ಲಿ 'ಕಚಡಾ ನನ್ ಮಗನೆ' ಎಂದು ಬೈದಿದ್ದಾರೆ. ನಾನು ಎನ್ನುವ ಅಹಂಕಾರವನ್ನು ಬಿಡಬೇಕು ಎನ್ನುವ ಸಂದೇಶವನ್ನು ಈ ಮೂಲಕ ಸೂಚ್ಯವಾಗಿ ನೀಡಿದ್ದಾರೆ.
Karnataka News Live 20 December 2025ಶಾರುಖ್ ಖಾನ್ ಜೊತೆ ಮಲ್ಟಿಸ್ಟಾರರ್ ಚಿತ್ರದಲ್ಲಿ ಜೂ.ಎನ್‌ಟಿಆರ್ - 'ವಾರ್ 2' ಸೋತರೂ ಜಗ್ಗದ ಯಂಗ್ ಟೈಗರ್!
ಜೂ.ಎನ್‌ಟಿಆರ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟು 'ವಾರ್ 2' ನಲ್ಲಿ ನಟಿಸಿದ್ದರು. ಈ ಸಿನಿಮಾ ಓಡಲಿಲ್ಲ. ಆದರೆ ಈಗ ಮತ್ತೊಂದು ಸಿನಿಮಾ ಮಾಡಲಿದ್ದಾರಂತೆ. ಶಾರುಖ್ ಖಾನ್ ಜೊತೆ ಮತ್ತೊಂದು ಮಲ್ಟಿಸ್ಟಾರರ್ ಮಾಡಲು ರೆಡಿಯಾಗಿದ್ದಾರಂತೆ.
Karnataka News Live 20 December 2025ಚೆಲುವಿನ ಚಿತ್ತಾರ ಕ್ಲೈಮ್ಯಾಕ್ಸ್‌ನಲ್ಲಿ ಅಮೂಲ್ಯ ಕೈಲಿದ್ದ ಮಗು ಈಗ ಹೇಗಾಗಿದ್ದಾನೆ?
ಗೋಲ್ಡನ್‌ಸ್ಟಾರ್ ಗಣೇಶ್ ಮತ್ತು ಅಮೂಲ್ಯ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ 'ಚೆಲುವಿನ ಚಿತ್ತಾರ' ಬಿಡುಗಡೆಯಾಗಿ 17 ವರ್ಷಗಳು ಕಳೆದಿವೆ. ಸಿನಿಮಾದ ದುರಂತ ಕ್ಲೈಮ್ಯಾಕ್ಸ್‌ನಲ್ಲಿ ಅಮೂಲ್ಯ ಕೈಲಿದ್ದ ಮಗು ಈಗ ದೊಡ್ಡವನಾಗಿದ್ದು, ನಟಿ ಆತನೊಂದಿಗಿನ ಇತ್ತೀಚಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
Karnataka News Live 20 December 2025Bigg Boss ನೀವಂದುಕೊಂಡಂತಲ್ಲ ಎನ್ನುತ್ತಲೇ ಬಹು ದೊಡ್ಡ ಸತ್ಯ ತೆರೆದಿಟ್ಟ ನಟ ವಿಜಯ ರಾಘವೇಂದ್ರ!
ಬಿಗ್ಬಾಸ್ಗೆ ಹೋದರೆ ಅವಕಾಶಗಳ ಬಾಗಿಲು ತೆರೆಯುತ್ತದೆ ಎಂಬುದು ಹಲವರ ನಂಬಿಕೆ. ಆದರೆ, ಮೊದಲ ಸೀಸನ್ ವಿನ್ನರ್ ವಿಜಯ ರಾಘವೇಂದ್ರ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಬಿಗ್ಬಾಸ್ನಿಂದ ಬಂದ ತಕ್ಷಣ ತಮಗೆ ಯಾವುದೇ ಆಫರ್‌ಗಳು ಬರಲಿಲ್ಲ, ಅದು ಸ್ಟಾರ್‌ಡಮ್ ತಂದುಕೊಡಲಿಲ್ಲ ಎಂದಿದ್ದಾರೆ.
Karnataka News Live 20 December 2025ನನ್ನ-ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ - ಡಿ.ಕೆ.ಶಿವಕುಮಾರ್ ಹೇಳಿಕೆ ಹಾಟ್ ಟಾಪಿಕ್!
ಹೈಕಮಾಂಡ್ ಅವರ ಪರ ಇಲ್ಲ ಎಂದೂ ಹೇಳಿಲ್ಲ. ನನ್ನ, ಸಿಎಂ ನಡುವೆ ಒಂದು ಒಪ್ಪಂದವಾಗಿದೆ. ಆ ಒಪ್ಪಂದದ ಪ್ರಕಾರ ನಾನು ನಡೆಯುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
Karnataka News Live 20 December 2025ಜೈಲಿಂದ ಹೊರಬಂದ ಬೆನ್ನಲ್ಲೇ ಬುರುಡೆ ಗ್ಯಾಂಗ್‌ನ ಸಮೀರ್, ತಿಮರೋಡಿ,ಮಟ್ಟೆನ್ನವರ್ ವಿರುದ್ಧ ತಿರುಗಿಬಿದ್ದ ಮಾಸ್ಕ್‌ಮ್ಯಾನ್!
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಸಾಕ್ಷಿ ಹೇಳಿದ ಆರೋಪದ ಮೇಲೆ ಬಂಧಿತನಾಗಿದ್ದ ಬುರುಡೆ ಗ್ಯಾಂಗ್‌ನ ಚಿನ್ನಯ್ಯ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ತನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ತನ್ನದೇ ಹೋರಾಟಗಾರರ ತಂಡದ ಐವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
Karnataka News Live 20 December 2025ರವಿಚಂದ್ರನ್ ಜೊತೆ ನಟಿಸಿದ ಈಕೆ 15 ವರ್ಷದಿಂದ ಸಿನಿಮಾ ಮಾಡದಿದ್ದರೂ ದೇಶದ ಶ್ರೀಮಂತ ನಟಿ - ಯಾರೀಕೆ?
ನಮ್ಮ ದೇಶದ ಅತ್ಯಂತ ಶ್ರೀಮಂತ ನಟಿ ಯಾರು ಗೊತ್ತಾ? ಹದಿನೈದು ವರ್ಷಗಳಿಂದ ಸಿನಿಮಾದಿಂದ ದೂರವಿರುವ ಜೂಹಿ ಚಾವ್ಲಾ. ಇವರ ಆಸ್ತಿ ಮೌಲ್ಯ ತಿಳಿದರೆ ಅಚ್ಚರಿ ಪಡ್ತೀರಾ. ಒಂದು ಕಾಲದಲ್ಲಿ ಬೆಳ್ಳಿತೆರೆ ಆಳಿದ ಈಕೆ ಈಗ ಉದ್ಯಮದಲ್ಲೂ ಯಶಸ್ಸು ಕಂಡಿದ್ದಾರೆ.
Karnataka News Live 20 December 2025ಶಕ್ತಿ ಯೋಜನೆ ಇದ್ದರೂ, ರಾಜ್ಯದ 1800 ಹಳ್ಳಿಗಳಿಗೆ ಇನ್ನೂ ಬಸ್ ಸಂಪರ್ಕವೇ ಇಲ್ಲ!
Karnataka: 1800 Villages Still Lack Bus Service Despite Shakti Scheme ಶಕ್ತಿ ಯೋಜನೆಯ ಯಶಸ್ಸು ಅಸ್ತಿತ್ವದಲ್ಲಿರುವ ಮಾರ್ಗಗಳಲ್ಲಿ ಬಸ್‌ಗಳಿಗೆ ಹೆಚ್ಚಿನ ಬೇಡಿಕೆಗೆ ಕಾರಣವಾಗಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Karnataka News Live 20 December 2025ಹೊಸ ವರ್ಷಾಚರಣೆ ಹಿನ್ನೆಲೆ ರಾಜ್ಯಾದ್ಯಂತ ಪೊಲೀಸರ ಸ್ಪೆಷಲ್ ಡ್ರೈವ್, ಎಣ್ಣೆ ಏಟಲ್ಲಿ ರಸ್ತೆಗಿಳಿದ್ರೆ ಶಾಕ್!
ಹೊಸ ವರ್ಷದ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ಪೊಲೀಸರು ಡಿಸೆಂಬರ್ 24 ರಿಂದ 31 ರವರೆಗೆ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಸ್ಪೇಷಲ್ ಡ್ರೈವ್‌ನ ಮುಖ್ಯ ಉದ್ದೇಶ ಡ್ರಿಂಕ್ ಅಂಡ್ ಡ್ರೈವ್ , ಅತಿವೇಗ ಮತ್ತು ವಿಲ್ಹಿಂಗ್ ತಡೆಯುವುದಾಗಿದೆ.
Karnataka News Live 20 December 2025ಬುದ್ಧಿಮಾಂದ್ಯ ಮಕ್ಕಳ ಕಣ್ಣಿಗೆ ಖಾರದ ಪುಡಿ ಎರಚಿ ಅಮಾನುಷ ಹಲ್ಲೆ, ರಾಕ್ಷಸ ದಂಪತಿ ಅರೆಸ್ಟ್!
Karnataka News Live 20 December 2025ಬೆಂಗಳೂರು ಮಕ್ಕಳ ಪಾಲಿನ ರಾಕ್ಷಸ ರಂಜನ್ ಲಾಕ್; ಗುದ್ದೋದು, ಒದೆಯೋದರ ಹಿಂದಿನ ಸತ್ಯ ಕಕ್ಕಿದ ಜಿಮ್ ಟ್ರೇನರ್!
ಬೆಂಗಳೂರಿನ ಜಿಮ್ ಟ್ರೈನರ್ ರಂಜನ್, ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದನು. ಪೊಲೀಸರು ಆತನನ್ನು ಬಂಧಿಸಿ, ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದರು. ಇದೀಗ ಮತ್ತಷ್ಟು ವಿಡಿಯೋ ವೈರಲ್ ಬೆನ್ನಲ್ಲಿಯೇ ಆತನನ್ನು ಲಾಕ್ ಮಾಡಿ, ಸತ್ಯ ಬಾಯ್ಬಿಡಿಸಿದ್ದಾರೆ.
Karnataka News Live 20 December 2025Bigg Boss - ಮೊಟ್ಟೆಗಾಗಿ ನಿದ್ದೆಗೆಟ್ಟ ಕಾವ್ಯಾ- ಕಾವ್ಯಾರ ಮೊಟ್ಟೆ ಬಾತ್ರೂಮ್ ಕೊಂಡೊಯ್ದ ರಜತ್ ಹೀಗೇ ಮಾಡೋದಾ?
Karnataka News Live 20 December 2025ಆರೆಂಜ್ ಲೈನ್ ಮೆಟ್ರೋ ಬರುವ ಮುನ್ನವೇ ಯಶವಂತಪುರದಲ್ಲಿ 430 ಕೋಟಿ ಭರ್ಜರಿ ಹೂಡಿಕೆ ಮಾಡಿದ ಫೋರ್ಟಿಸ್ ಹೆಲ್ತ್‌ಕೇರ್!
ಫೋರ್ಟಿಸ್ ಹೆಲ್ತ್‌ಕೇರ್, ಬೆಂಗಳೂರಿನ ಯಶವಂತಪುರದಲ್ಲಿರುವ ಪೀಪಲ್ ಟ್ರೀ ಆಸ್ಪತ್ರೆಯನ್ನು ₹430 ಕೋಟಿಗೆ ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಈ ಸ್ವಾಧೀನದ ಜೊತೆಗೆ, ಆಸ್ಪತ್ರೆಯ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ ಹೆಚ್ಚುವರಿಯಾಗಿ ₹410 ಕೋಟಿ ಹೂಡಿಕೆ ಮಾಡಲು ಯೋಜಿಸಿದೆ .
Karnataka News Live 20 December 2025ಬೆಂಗಳೂರು ಹಳದಿ ಮಾರ್ಗದ ಮೆಟ್ರೋ ನಿಲ್ದಾಣಗಳ ಬಳಿ, 6 ಹೊಸ ಬಿಎಂಟಿಸಿ ಬಸ್ ತಂಗುದಾಣಗಳ ಸ್ಥಾಪನೆ!
ಬೆಂಗಳೂರಿನ ಮೆಟ್ರೋ ಹಳದಿ ಮಾರ್ಗದ (ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ) ಪ್ರಯಾಣಿಕರಿಗೆ ಸುಗಮ ಸಂಪರ್ಕ ಕಲ್ಪಿಸಲು ಬಿಎಂಟಿಸಿ ಮತ್ತು ಬಿಎಂಆರ್‌ಸಿಎಲ್ ಜಂಟಿಯಾಗಿ ಕಾರ್ಯನಿರ್ವಹಿಸಿವೆ. ಮೆಟ್ರೋ ನಿಲ್ದಾಣಗಳ ಬಳಿ ಹೊಸ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ.
Karnataka News Live 20 December 2025ನಿಷೇಧದ ನಡುವೆಯೂ ಪಾಕಿಸ್ತಾನದಲ್ಲಿ 20 ಲಕ್ಷ ಬಾರಿ ಪೈರಸಿ ಆದ 'ಧುರಂಧರ್' - 50 ಕೋಟಿ ನಷ್ಟ
ಅಕ್ಷಯ್ ಖನ್ನಾ, ಸಾರಾ ಅರ್ಜುನ್ ನಟನೆಯ ‘ಧುರಂದರ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಸ್ಪೈ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿರುವ ‘ಧುರಂದರ್’ ಚಿತ್ರವನ್ನು ಪಾಕಿಸ್ತಾನದಲ್ಲಿ ನಿಷೇಧ ಮಾಡಲಾಗಿದೆ.
Karnataka News Live 20 December 2025ಟಾಟಾದ ತಾಜ್, ಐಟಿಸಿಗೆ ಅದಾನಿ ಗ್ರೂಪ್ ಟಕ್ಕರ್, ಐಷಾರಾಮಿ ಹೋಟೆಲ್ ಉದ್ಯಮಕ್ಕೆ ಎಂಟ್ರಿ, ಏರ್ಪೋರ್ಟ್‌ಗಳೇ ಟಾರ್ಗೆಟ್!
ಅದಾನಿ ಗ್ರೂಪ್, ವಿಮಾನ ನಿಲ್ದಾಣ ವ್ಯವಹಾರದಲ್ಲಿ ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಯೋಜಿಸಿದೆ. ಇದರ ಭಾಗವಾಗಿ, 60ಕ್ಕೂ ಹೆಚ್ಚು ಹೋಟೆಲ್‌ಗಳನ್ನು ನಿರ್ಮಿಸುವ ಮೂಲಕ ತಾಜ್ ಮತ್ತು ಐಟಿಸಿಗೆ ಸ್ಪರ್ಧೆ ನೀಡಲು ಸಜ್ಜಾಗಿದೆ.