- Home
- Entertainment
- Sandalwood
- ವೇದಿಕೆ ಮೇಲೆಯೇ 'ಕಚಡಾ ನನ್ ಮಗನೆ, ಪಾಪಿ ನನ್ ಮಗನೇ' ಎಂದೆಲ್ಲಾ ಬೈಯೋದಾ ನಟ ಉಪೇಂದ್ರ? ಸ್ಟಾರ್ ನಟರು ಸುಸ್ತು!
ವೇದಿಕೆ ಮೇಲೆಯೇ 'ಕಚಡಾ ನನ್ ಮಗನೆ, ಪಾಪಿ ನನ್ ಮಗನೇ' ಎಂದೆಲ್ಲಾ ಬೈಯೋದಾ ನಟ ಉಪೇಂದ್ರ? ಸ್ಟಾರ್ ನಟರು ಸುಸ್ತು!
ಬಹುನಿರೀಕ್ಷಿತ '45' ಚಿತ್ರದ ಪ್ರಚಾರದ ವೇಳೆ ನಟ ಉಪೇಂದ್ರ ಅವರು ಡ್ಯಾನ್ಸ್ ಶೋ ವೇದಿಕೆಯಲ್ಲಿ 'ಕಚಡಾ ನನ್ ಮಗನೆ' ಎಂದು ಬೈದಿದ್ದಾರೆ. ನಾನು ಎನ್ನುವ ಅಹಂಕಾರವನ್ನು ಬಿಡಬೇಕು ಎನ್ನುವ ಸಂದೇಶವನ್ನು ಈ ಮೂಲಕ ಸೂಚ್ಯವಾಗಿ ನೀಡಿದ್ದಾರೆ.

45 ಸಿನಿಮಾ
ನಟ ಉಪೇಂದ್ರ ಅವರು ನಟಿಸಿರುವ ಬಹು ಕುತೂಹಲದ 45 ಸಿನಿಮಾ ತೆರೆಯ ಮೇಲೆ ಬರಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಶಿವರಾಜ್ಕುಮಾರ್ ಅವರ ಹೆಣ್ಣಿನ ಲುಕ್ಗೆ ಇದಾಗಲೇ ಫ್ಯಾನ್ಸ್ ಫಿದಾ ಆಗಿದ್ದಾರೆ. ರಾಜ್ ಬಿ.ಶೆಟ್ಟಿ ಕೂಡ ಅಭಿನಿಯಿಸಿರುವ 45 ಚಿತ್ರದ ಬಗ್ಗೆ ಈಚೆಗಷ್ಟೇ ನಟ ಉಪೇಂದ್ರ ಮಾಹಿತಿ ನೀಡಿದ್ದರು. ಟ್ರೈಲರ್ ಲಾಂಚ್ ಕೂಡ ಆಗಿದೆ.
ಫ್ಯಾನ್ಸ್ ಕಾತರ
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ʼಸೂರಜ್ ಪ್ರೊಡಕ್ಷನ್ʼ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ 45 ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. 45 ಎನ್ನುವ ಹೆಸರೇ ಕುತೂಹಲ ಮೂಡಿಸುವಂತಿದೆ. ಇದೇನಿದು 45 ಎನ್ನುವುದನ್ನು ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
'ಕಚಡಾ ನನ್ ಮಗನೆ...'
ಇದರ ನಡುವೆಯೇ, ಉಪೇಂದ್ರ ಅವರು Dance ಕರ್ನಾಟಕ Dance-2025 ವೇದಿಕೆಯ ಮೇಲೆ ಬಂದು, ಅಲ್ಲಿ ಯಾರನ್ನೋ ನೋಡಿ ಕೆಟ್ಟಕೆಟ್ಟದ್ದಾಗಿ ಮಾತನಾಡಿದ್ದಾರೆ. 'ಕಚಡಾ ನನ್ ಮಗನೆ, ಪಾಪಿ ನನ್ ಮಗನೇ' ಎಂದೆಲ್ಲಾ ಬೈದಿದ್ದಾರೆ.
ನಕ್ಕ ಸ್ಟಾರ್ ನಟರು
ಈ ರೀತಿ ಬೈದಿದ್ದನ್ನು ನೋಡಿ ಶಿವರಾಜ್ಕುಮಾರ್, ವಿಜಯ ರಾಘವೇಂದ್ರ, ರಾಜ್ ಬಿ.ಶೆಟ್ಟಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಹಾಗಿದ್ದರೆ ಉಪೇಂದ್ರ ಅವರು ಬೈದದ್ದು ಯಾರಿಗೆ?
ಪ್ರತಿಬಿಂಬ ನೋಡಿ
ಅಷ್ಟಕ್ಕೂ ಉಪೇಂದ್ರ ಬೈದದ್ದು ಅಲ್ಲಿರುವ ಕನ್ನಡಿಯಲ್ಲಿ ಇರುವ ತಮ್ಮ ಪ್ರತಿಬಿಂಬವನ್ನು ನೋಡಿ. ನಾನು ನಾನು ಎನ್ನೋದನ್ನು ಬಿಡು ಕಚಡಾ ನನ್ ಮಗನೆ, ನಾನು ಸ್ಟಾರು, ನಾನು ಅಲ್ಲಿರಬೇಕು, ನಾನು ಇಲ್ಲಿರಬೇಕು ಎನ್ನುವ ಅಹಂ ಎಲ್ಲಾ ಬಿಡು ಎಂದು ತಮಗೇ ತಾವು ಹೇಳಿಕೊಂಡಿದ್ದಾರೆ!
ನಟನ ಸಂದೇಶ
ನಾನು ನಾನು ಎನ್ನುವ ಅಹಂಕಾರ ಬಿಟ್ಟರೆ ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುವುದನ್ನು ಸೂಚ್ಯವಾಗಿ ತಮ್ಮದೇ ಪ್ರತಿಬಿಂಬವನ್ನು ಕನ್ನಡಿಯಲ್ಲಿ ನೋಡಿ ಹೀಗೊಂದು ಸಂದೇಶ ಕೊಟ್ಟಿದ್ದಾರೆ ಉಪೇಂದ್ರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

