- Home
- Entertainment
- TV Talk
- Bigg Boss ನೀವಂದುಕೊಂಡಂತಲ್ಲ ಎನ್ನುತ್ತಲೇ ಬಹು ದೊಡ್ಡ ಸತ್ಯ ತೆರೆದಿಟ್ಟ ನಟ ವಿಜಯ ರಾಘವೇಂದ್ರ!
Bigg Boss ನೀವಂದುಕೊಂಡಂತಲ್ಲ ಎನ್ನುತ್ತಲೇ ಬಹು ದೊಡ್ಡ ಸತ್ಯ ತೆರೆದಿಟ್ಟ ನಟ ವಿಜಯ ರಾಘವೇಂದ್ರ!
ಬಿಗ್ಬಾಸ್ಗೆ ಹೋದರೆ ಅವಕಾಶಗಳ ಬಾಗಿಲು ತೆರೆಯುತ್ತದೆ ಎಂಬುದು ಹಲವರ ನಂಬಿಕೆ. ಆದರೆ, ಮೊದಲ ಸೀಸನ್ ವಿನ್ನರ್ ವಿಜಯ ರಾಘವೇಂದ್ರ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಬಿಗ್ಬಾಸ್ನಿಂದ ಬಂದ ತಕ್ಷಣ ತಮಗೆ ಯಾವುದೇ ಆಫರ್‌ಗಳು ಬರಲಿಲ್ಲ, ಅದು ಸ್ಟಾರ್‌ಡಮ್ ತಂದುಕೊಡಲಿಲ್ಲ ಎಂದಿದ್ದಾರೆ.

ಬಿಗ್ಬಾಸ್ ಎನ್ನುವ ಮಾಯೆ
ಬಿಗ್ ಬಾಸ್ (Bigg Boss) ಮನೆಯೊಳಗೆ ಹೋಗಲು ಕಾಯುತ್ತಿರುವವರು ಅದೆಷ್ಟೋ ಲಕ್ಷ ಮಂದಿ. ಒಮ್ಮೆಯಾದರೂ ನಮಗೆ ಛಾನ್ಸ್ ಸಿಗಬಾರದೇ ಎಂದುಕೊಳ್ಳುವ ಹಲವರು ಇದ್ದಾರೆ. ಆದರೆ ಅಲ್ಲಿ ಛಾನ್ಸ್ ಸಿಗುವುದು ಕೆಲವೇ ಕೆಲವು ಜನರಿಗೆ. ಉಳಿದವರಿಗೆ ಇದು ಮರೀಚಿಕೆ. ಅದರ ಜೊತೆಗೇನೆ ಬಿಗ್ಬಾಸ್ಗೆ ಒಮ್ಮೆ ಹೋಗಿ ಬಿಟ್ಟರೆ ಅವಕಾಶಗಳ ಸರಮಾಲೆಯೇ ತೆರೆಯುತ್ತದೆ ಎನ್ನುವ ಕಲ್ಪನೆ ಕೂಡ ಬಿಗ್ಬಾಸ್ಗೆ ಹೋಗುವ ಆಸೆಯನ್ನು ಹುಟ್ಟಿಸುತ್ತದೆ.
ಅವಕಾಶಗಳು ಸಿಗತ್ತಾ?
ಹಾಗಿದ್ದರೆ ನಿಜಕ್ಕೂ ಬಿಗ್ಬಾಸ್ ಇದೇ ರೀತಿ ಇರೋದಾ? ವಾಸ್ತವವೇನು? ಬಿಗ್ಬಾಸ್ಗೆ ಹೋಗಿಬಿಟ್ಟರೆ ಅವಕಾಶಗಳ ಬಾಗಿಲು ತೆರೆಯುವುದು ನಿಜನಾ ಎನ್ನುವ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ. ಬಿಗ್ಬಾಸ್ನ ಮೊದಲ ಸೀಸನ್ನ ವಿನ್ನರ್, ಸ್ಯಾಂಡಲ್‌ವುಡ್ ಸ್ಟಾರ್ ನಟ ವಿಜಯ ರಾಘವೇಂದ್ರ.
ಮೊದಲ ಸೀಸನ್ ವಿನ್ನರ್
ಕನ್ನಡದಲ್ಲಿ ಬಿಗ್ಬಾಸ್ ಹೊಸತಾಗಿ ಇರುವ ಟೈಮ್ನಲ್ಲಿ ಮೊದಲ ಸೀಸನ್ನಲ್ಲಿ ಹೋಗಿ ಗೆದ್ದವರು ವಿಜಯ ರಾಘವೇಂದ್ರ. ಇದರ ಬಗ್ಗೆ ಚಾನೆಲ್‌ನವರಿಗೂ ಹೊಸತು, ಹೋಸ್ಟ್ಗೂ ಹೊಸತು, ವೀಕ್ಷಕರಿಗೆ ಹೊಸತು. ಈಗಿನಂತೆ ಅಷ್ಟೊಂದು ಫೇಮಸ್ ಕೂಡ ಆಗಿರಲಿಲ್ಲ ಈ ಷೋ. ಆದರೆ ಅಲ್ಲಿಂದಾಚೆಗೆ ಬಿಗ್ಬಾಸ್ ಅನ್ನೋದು ಹಲವರ ಕನಸಾಯಿತು ಎನ್ನುತ್ತಲೇ ವಿಜಯ ರಾಘವೇಂದ್ರ ಅವರು ಕೆಲವೊಂದು ಸತ್ಯಗಳನ್ನು ತೆರೆದಿಟ್ಟಿದ್ದಾರೆ.
ಭವಿಷ್ಯದಲ್ಲಿ ಡಿಮಾಂಡ್
ಬಿಗ್ಬಾಸ್ನಿಂದ ವಿನ್ ಆಗಿ ಹೊರಕ್ಕೆ ಬಂದವರೂ ಸೇರಿದಂತೆ ಒಮ್ಮೆ ಬಿಗ್ಬಾಸ್ ಮನೆಗೆ ಹೋದರೆ ಅವರಿಗೆ ಭವಿಷ್ಯದಲ್ಲಿ ಸಕತ್ ಡಿಮಾಂಡ್ ಇರುತ್ತದೆ, ಅವರು ದೊಡ್ಡ ಸೆಲೆಬ್ರಿಟಿಗಳಾಗುತ್ತಾರೆ, ಬೇರೆ ಬೇರೆ ಷೋಗಳಿಗೆ ಅವರಿಗೆ ಆಫರ್ ಬರುತ್ತದೆ ಎಂದುಕೊಂಡವರು ಹೆಚ್ಚು. ಆದರೆ ತಮ್ಮ ವಿಷಯದಲ್ಲಿ ಆ ರೀತಿ ಆಗಲಿಲ್ಲ ಎಂದು ನಟ ಹೇಳಿದ್ದಾರೆ.
ಯಾವುದೇ ಆಫರ್ ಬರಲಿಲ್ಲ
ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ಯಾವುದೇ ಆಫರ್ ಬರಲಿಲ್ಲ. ಇದು ನನ್ನನ್ನು ಸ್ಟಾರ್ ಮಾಡಲಿಲ್ಲ. ಒಂದೇ ಒಂದು ಆಫರ್ ನನಗೆ ಆ ಸಮಯದಲ್ಲಿ ಬರಲಿಲ್ಲ. ಉಳಿದದ್ದೆಲ್ಲವೂ ನನ್ನ ಪರಿಶ್ರಮದಿಂದಲೇ ಆಗಿರುವುದು ಎನ್ನುವ ಮೂಲಕ ವಿಜಯ ರಾಘವೇಂದ್ರ ಅವರು, ಬಿಗ್ಬಾಸ್ನಿಂದ ಬಂದ ಮಾತ್ರಕ್ಕೆ ಎಲ್ಲರಿಗೂ ಸ್ಟಾರ್‌ಡಮ್ ಸಿಗುತ್ತದೆ ಎನ್ನುವುದು ತಪ್ಪು ಕಲ್ಪನೆ ಎಂಬುದಾಗಿ ಸೂಚ್ಯವಾಗಿ ನುಡಿದಿದ್ದಾರೆ.
ಆಗ ಹೇಳಿದ್ದೇನು ನಟ?
ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ, ಈ ಬಗ್ಗೆ ಹೇಳಿಕೊಂಡಿದ್ದ ಅವರು, ಸುಮಾರು ನೂರು ದಿನಗಳ ಕಾಲ ನನ್ನನ್ನು ನೀವು ಆಶೀರ್ವಾದ ಮಾಡಿದ್ದೀರಿ. ಅಲ್ಲಿ ದೀರ್ಘ ಅವಧಿಯವರೆಗೆ ಇದ್ದು ಜೀವಿಸಿ, ಅನುಭವಿಸಿ ಬಂದಿದ್ದೇನೆ. ನನ್ನ ಪ್ರಕಾರ ನನ್ನ ಜೀವನದಕ್ಕೆ ಮತ್ತು ಬಿಗ್ಬಾಸ್ ಮನೆಗೆ ಎಂಟ್ರಿ ಕೊಡುವ ನನ್ನ ಸ್ನೇಹಿತರೆಲ್ಲಾ ಇದರಿಂದ ಆಗಿರುವ ದೊಡ್ಡ ಅನುಭವ ಎಂದರೆ, ಅವರವರ ಜೀವನ, ಅವರ ವ್ಯಕ್ತಿತ್ವ, ಅವರ ಅಪ್ಸ್ ಆ್ಯಂಡ್ ಡೌನ್ಸ್, ಅವರಲ್ಲಿ ಇರುವ ಕೆಟ್ಟತನ-ಒಳ್ಳೆಯತನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲು ಅವಕಾಶ ಸಿಕ್ಕಿದೆ. ನಮ್ಮ ನಡವಳಿಕೆಯ ಬಗ್ಗೆ, ತಪ್ಪುಗಳು ಇದ್ದರೆ ಅದನ್ನು ಸರಿಪಡಿಸಿ ಕರೆಕ್ಷನ್ ಮಾಡುವ ಅವಕಾಶ ಸಿಕ್ಕಿದೆ ಎಂದಿದ್ದರು ವಿಜಯ ರಾಘವೇಂದ್ರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

