- Home
- Entertainment
- TV Talk
- ರಕ್ಷಿತಾ- ಧ್ರುವಂತ್ ಫೋಟೋ ಶೇರ್ ಮಾಡಿದ Bigg Boss ವೀಕ್ಷಕರಿಗೆ ಕೇಳಿದೆ ಈ ಪ್ರಶ್ನೆ: ನಿಮ್ಮ ಉತ್ತರವೇನು?
ರಕ್ಷಿತಾ- ಧ್ರುವಂತ್ ಫೋಟೋ ಶೇರ್ ಮಾಡಿದ Bigg Boss ವೀಕ್ಷಕರಿಗೆ ಕೇಳಿದೆ ಈ ಪ್ರಶ್ನೆ: ನಿಮ್ಮ ಉತ್ತರವೇನು?
ಬಿಗ್ ಬಾಸ್ ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್, ನೀಡಿದ ಟಾಸ್ಕ್ ಒಂದರಲ್ಲಿ ರಕ್ಷಿತಾ ನಡೆದುಕೊಂಡ ರೀತಿ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿವಾದದ ನಡುವೆಯೇ, ಇವರಿಬ್ಬರು ಮನೆಗೆ ಮರಳುತ್ತಾರೆಯೇ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.

ಸೀಕ್ರೆಟ್ ರೂಮ್ನಲ್ಲಿ
ಬಿಗ್ಬಾಸ್ನಲ್ಲಿ (Bigg Boss 12) ಕಳೆದ ಕೆಲವು ದಿನಗಳಿಂದ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಸೀಕ್ರೆಟ್ ರೂಮ್ನಲ್ಲಿ ಇದ್ದಾರೆ. ಅವರು ಎಲಿಮಿನೇಟ್ ಆಗಿ ಹೊರಕ್ಕೆ ಹೋಗ್ತಾರೆ ಎನ್ನಲಾಗಿತ್ತು. ಆದರ ಅವರನ್ನು ಸೀಕ್ರೆಟ್ ಕೋಣೆಯಲ್ಲಿ ಇರಿಸಿರುವ ಕಾರಣದಿಂದ ಅವರು ಪುನಃ ಮನೆಯೊಳಗೆ ಪ್ರವೇಶ ಮಾಡುವ ನಿರೀಕ್ಷೆಯಲ್ಲಿ ವೀಕ್ಷಕರು ಇದ್ದಾರೆ.
ರಕ್ಷಿತಾ ಶೆಟ್ಟಿ ಟಾಸ್ಕ್
ಆದರೆ ನಿನ್ನೆ ಅಂದರೆ ಡಿ.19ರಂದು ನೀಡಿರುವ ಟಾಸ್ಕ್ ಒಂದರಲ್ಲಿ ರಕ್ಷಿತಾ ಶೆಟ್ಟಿ (Bigg Boss Rakshita Shetty) ನಡೆದುಕೊಂಡಿರುವ ರೀತಿ ಹಲವು ವೀಕ್ಷಕರನ್ನು ಅಸಮಾಧಾನಕ್ಕೆ ತಳ್ಳಿದೆ. ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಸೀಕ್ರೆಟ್ ರೂಂನಿಂದ ಬಿಗ್ ಬಾಸ್ ಮನೆ ಒಳಗೆ ತೆರಳಿ ಕಸ ಹರಡಿ ಬರಬೇಕು ಎಂದು ಹೇಳಲಾಗಿತ್ತು.
ಅಸಮಾಧಾನಕ್ಕೆ ಗುರಿ
ಟಾಸ್ಕ್ ರೀತಿಯಲ್ಲಿ ಇದನ್ನು ಆಡುವ ಬದಲು ರಕ್ಷಿತಾ ಅವರು, ಥರ್ಮಕೋಲ್ ಚೂರು, ಪೇಪರ್ ಕಸದ ಜೊತೆ ಜೊತೆಗೇನೇ ತಮ್ಮ ಸಹ ಸ್ಪರ್ಧಿಗಳ ಮೇಕಪ್ ಬ್ರಶ್ಗಳನ್ನು ನೆಲಕ್ಕೆ ಹರಡಿ ಹಾಳು ಮಾಡಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲಿಯೂ ಅವುಗಳಲ್ಲಿ ಹೆಚ್ಚಿನವರು ರಾಶಿಕಾ ಅವರದ್ದಾಗಿತ್ತು. ಅವೆಲ್ಲ ನನ್ನ ಬ್ರಶ್ಗಳು. ಇದನ್ನು ಹೇಗೆ ಮರು ಜೋಡಿಸೋದು ಎಂದು ರಾಶಿಕಾ ಚಿಂತೆ ಮಾಡಿದರು.
ವೀಕ್ಷಕರಿಗೆ ಪ್ರಶ್ನೆ
ಇದರ ನಡುವೆಯೇ, ಇದೀಗ ವಾಹಿನಿಯು ಒಂದು ಫೋಟೋ ಶೇರ್ ಮಾಡಿದೆ. ಅದರಲ್ಲಿ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಫೋಟೋ ಹಾಕಿ, ವೀಕ್ಷಕರಿಗೆ ಒಂದು ಪ್ರಶ್ನೆ ಕೇಳಿದೆ.
ಪ್ರಶ್ನೆ ಹೀಗಿದೆ
ಅದೇನೆಂದರೆ, ಮನೆಯೊಳಗೆ ಕಮ್ಬ್ಯಾಕ್ ಆಗ್ತಾರಾ ರಕ್ಷಿತಾ ಮತ್ತು ಧ್ರುವಂತ್ ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಬಹುತೇಕ ಮಂದಿ ಇಬ್ಬರೂ ಬರುತ್ತಾರೆ ಎಂದಿದ್ದರೆ, ಕೆಲವರು ಧ್ರುವಂತ್ ಹೆಸರು ಮಾತ್ರ ಹೇಳಿದ್ದಾರೆ, ಮತ್ತೆ ಕೆಲವರು ರಕ್ಷಿತಾ ಹೆಸರು ಹೇಳಿದ್ದಾರೆ. ಇನ್ನು ಕೆಲವರು ಮೇಲಿನ ಟಾಸ್ಕ್ ವಿಷಯದಲ್ಲಿ ರಕ್ಷಿತಾ ಮಾಡಿರುವುದು ಸರಿಯಿಲ್ಲ ಎಂದಿದ್ದಾರೆ.
ಕಾದು ನೋಡಬೇಕಿದೆ
ಒಟ್ಟಿನಲ್ಲಿ ಇದೀಗ ಇವರಿಬ್ಬರಲ್ಲಿ ಯಾರು ಒಳಗೆ ಹೋಗ್ತಾರೆ, ಯಾರು ಹೊರಗೆ ಹೋಗ್ತಾರೆ ಅಥವಾ ಇಬ್ಬರೂ ಮನೆಯೊಳಕ್ಕೆ ಬರ್ತಾರೋ ಎನ್ನುವುದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

