11:07 PM (IST) Jan 12

Karnataka News Live 12 January 2026 ಗಾಂಧಿ ಹೆಸರು ತೆಗೆದು ಪರಮೇಶ್ವರ್ ಹೆಸರು - ನರೇಗಾಕ್ಕೆ ಒಂದು ನ್ಯಾಯ, ಸ್ಟೇಡಿಯಂಗೆ ಒಂದು ನ್ಯಾಯವೇ?

ತುಮಕೂರಿನ ಮಹಾತ್ಮಾ ಗಾಂಧಿ ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರನ್ನು ಮರುನಾಮಕರಣ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಜಿಲ್ಲಾಡಳಿತದ ಈ ಕ್ರಮದ ವಿರುದ್ಧ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

Read Full Story
10:29 PM (IST) Jan 12

Karnataka News Live 12 January 2026 ಧಾರವಾಡ ಕಿಡ್ನ್ಯಾಪ್ ಕೇಸ್ - ಜೋಯಿಡಾದಲ್ಲಿ ಮಕ್ಕಳ ರಕ್ಷಣೆ, ಅಪಹರಣಕಾರ ಮಹ್ಮದ್ ಕರೀಂ ಬಂಧನ!

ಧಾರವಾಡದ ಕಮಲಾಪುರ ಶಾಲೆಯ ಇಬ್ಬರು ಮಕ್ಕಳನ್ನು ಅಪಹರಿಸಿದ್ದ ಪ್ರಕರಣವು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಸುಖಾಂತ್ಯ ಕಂಡಿದೆ. ಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದ ಆರೋಪಿ ಅಪಘಾತಕ್ಕೀಡಾದಾಗ, ಜೋಯಿಡಾ ಪೊಲೀಸರ ಸಮಯಪ್ರಜ್ಞೆಯಿಂದ ಮಕ್ಕಳು ಸುರಕ್ಷಿತವಾಗಿ ಪೋಷಕರನ್ನು ಸೇರಿದ್ದಾರೆ.
Read Full Story
09:22 PM (IST) Jan 12

Karnataka News Live 12 January 2026 ಪುನೀತ್ ಕೆರೆಹಳ್ಳಿ ತಂಡದಿಂದ ಅಕ್ರಮ ವಲಸಿಗರ ಬೇಟೆ - ಪೊಲೀಸರು ಮಾಡಬೇಕಾದ ಕೆಲಸವನ್ನು ಸಂಘಟನೆಗಳು ಮಾಡಬೇಕೇ?

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿದ್ದಾರೆ. ಕಳೆದ ಐದು ವರ್ಷಗಳಿಂದ ಯಾವುದೇ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ ಈ ವಲಸಿಗರನ್ನು ಬನ್ನೇರುಘಟ್ಟ ಪೊಲೀಸರಿಗೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರೆದಿದೆ.
Read Full Story
09:01 PM (IST) Jan 12

Karnataka News Live 12 January 2026 ಸಿದ್ದರಾಮಯ್ಯ ಮೇಲೆ ದೈವಕೃಪೆ - ಹಾಲುಮತದ ಬಗ್ಗೆ ಮಾತನಾಡಿದರೆ ಸರ್ವನಾಶ; ರಾಜಕಾರಣಿಗೆ ಕೋಡಿಶ್ರೀ ವಾರ್ನ್!

ತಿಂಥಿಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಡಿ ಮಠದ ಶ್ರೀಗಳು, ಸಿಎಂ ಸಿದ್ದರಾಮಯ್ಯರ ಯಶಸ್ಸಿಗೆ ದೈವಕೃಪೆಯೇ ಕಾರಣ ಎಂದಿದ್ದಾರೆ. ಹಾಲುಮತ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದರೆ ಸರ್ವನಾಶ ತಪ್ಪಿದ್ದಲ್ಲ ಎಂದು ಎಚ್ಚರಿಸಿದ ಅವರು, ಬಜೆಟ್ ಮುಗಿಯುವವರೆಗೂ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಭವಿಷ್ಯ 

Read Full Story
08:15 PM (IST) Jan 12

Karnataka News Live 12 January 2026 ಧಾರವಾಡ ಕಿಡ್ನ್ಯಾಪ್ ಕೇಸ್ ಸುಖಾಂತ್ಯ - ಜೋಯಿಡಾದಲ್ಲಿ ಪತ್ತೆಯಾದ್ರು ಶಾಲಾ ಮಕ್ಕಳು! ಅಪಹರಣಕಾರ ಸಿಕ್ಕಿಬಿದ್ದಿದ್ದೇ ರೋಚಕ!

ಧಾರವಾಡದ ಕಮಲಾಪುರ ಶಾಲೆಯಿಂದ ಅಪಹರಣಕ್ಕೊಳಗಾಗಿದ್ದ ಇಬ್ಬರು ಮಕ್ಕಳು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಪತ್ತೆಯಾಗಿದ್ದಾರೆ. ಅಪಹರಣಕಾರನು ಬೈಕ್ ಅಪಘಾತಕ್ಕೀಡಾದ ನಂತರ, ಸ್ಥಳಕ್ಕೆ ಬಂದ ಪೊಲೀಸರು ಮಕ್ಕಳನ್ನು ರಕ್ಷಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. 

Read Full Story
08:02 PM (IST) Jan 12

Karnataka News Live 12 January 2026 ಸುಗ್ಗಿಯ ಹಬ್ಬ ಸಂಕ್ರಾಂತಿ ಜ.14ಕ್ಕೋ ಅಥವಾ 15ಕ್ಕೋ? ಸರ್ಕಾರಿ ರಜೆ ಇರೋದು ಯಾವಾಗ? ಒಮ್ಮೆ ನೋಡಿ!

ಕನ್ನಡ ನಾಡಿನ ಸುಗ್ಗಿಯ ಸಂಭ್ರಮ ಕೊಡುವ ಮಕರ ಸಂಕ್ರಾಂತಿ ಹಬ್ಬ ಜ.14ಕ್ಕೋ ಅಥವಾ 15ಕ್ಕೋ? ಈ ಗೊಂದಲಕ್ಕೆ ಇಲ್ಲಿದೆ ಉತ್ತರ. ಹಬ್ಬದ ನಿಖರ ದಿನಾಂಕ, ಸರ್ಕಾರಿ ರಜೆ, ಮತ್ತು ಆಚರಣೆಯ ಸಂಪೂರ್ಣ ಮಾಹಿತಿ ತಿಳಿಯಿರಿ.

Read Full Story
07:44 PM (IST) Jan 12

Karnataka News Live 12 January 2026 ಲಕ್ಕುಂಡಿ ನಿಧಿ ಪ್ರಕರಣ - ‘ಅದು ಚಿನ್ನ ಅಲ್ಲ’ ಎಂದಿದ್ದ ಅಧಿಕಾರಿ ಈಗ ಯು-ಟರ್ನ್!

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಪತ್ತೆಯಾದ ಪುರಾತನ ನಿಧಿಯ ಕುರಿತು ಪುರಾತತ್ವ ಇಲಾಖೆಯ ಅಧಿಕಾರಿಯೊಬ್ಬರು ಗೊಂದಲದ ಹೇಳಿಕೆ ನೀಡಿದ್ದಾರೆ. ಆರಂಭದಲ್ಲಿ ನಿಧಿಯಲ್ಲ ಎಂದಿದ್ದ ಅವರು, ನಂತರ ಒತ್ತಡದಿಂದಾಗಿ ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡಿದ್ದು, ಈ ನಿಧಿ ಸರ್ಕಾರಕ್ಕೆ ಸೇರಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story
07:12 PM (IST) Jan 12

Karnataka News Live 12 January 2026 ಹಾಟ್​ ಅವತಾರದಲ್ಲಿ ಪಡ್ಡೆ ಹೈಕಳ ನಿದ್ದೆ ಕದ್ದ Bigg Boss ಸ್ಪಂದನಾ ಸೋಮಣ್ಣ - ವಿಡಿಯೋ ವೈರಲ್​

ಬಿಗ್​ಬಾಸ್​ ಸೀಸನ್​ 12ರ ಮೂಲಕ ಖ್ಯಾತಿ ಪಡೆದ ನಟಿ ಸ್ಪಂದನಾ ಸೋಮಣ್ಣ, ತಮ್ಮ ನಟನಾ ವೃತ್ತಿಜೀವನದ ಜೊತೆಗೆ ಇತ್ತೀಚೆಗೆ ಮಾಡಿಸಿದ ಹಾಟ್ ಫೋಟೋಶೂಟ್‌ನಿಂದ ಸದ್ದು ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ ಫೋಟೋಗಳು.

Read Full Story
07:09 PM (IST) Jan 12

Karnataka News Live 12 January 2026 ಧಾರವಾಡದಲ್ಲಿ ಆತಂಕ - ಶಾಲೆಯಿಂದ ಇಬ್ಬರು 3ನೇ ತರಗತಿ ಮಕ್ಕಳ ಕಿಡ್ನ್ಯಾಪ್, ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ!

ಧಾರವಾಡದ ಕಮಲಾಪುರ ಸರ್ಕಾರಿ ಶಾಲೆಯಿಂದ ಇಬ್ಬರು 8 ವರ್ಷದ ಮಕ್ಕಳನ್ನು ಅಪಹರಿಸಲಾಗಿದೆ. ಮಧ್ಯಾಹ್ನದ ಊಟದ ನಂತರ ಅನಾಮಿಕ ವ್ಯಕ್ತಿಯೊಬ್ಬ ಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.
Read Full Story
07:02 PM (IST) Jan 12

Karnataka News Live 12 January 2026 ಬೆಂಗಳೂರಲ್ಲೇ ಇದೆ ಟಾಕ್ಸಿಕ್ ಟೀಸರ್‌ನ ವಿದೇಶಿ ಜಗತ್ತು; ಕಾರು ಗುದ್ದಿದ ಶೂಟಿಂಗ್ ಸ್ಪಾಟ್ ರಿವೀಲ್ ಮಾಡಿದ ಅಲೆಮಾರಿ!

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್ ವಿದೇಶದಲ್ಲಿ ಚಿತ್ರೀಕರಿಸಿದ್ದಲ್ಲ, ಬದಲಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ. ಯೂಟ್ಯೂಬರ್ ಅಲೆಮಾರಿ ಅಮಿತ್ ಈ ಶೂಟಿಂಗ್ ಸ್ಪಾಟ್‌ನ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಈ ಟೀಸರ್ 84 ಮಿಲಿಯನ್‌ ವೀಕ್ಷಣೆ ಪಡೆದಿದೆ.

Read Full Story
06:54 PM (IST) Jan 12

Karnataka News Live 12 January 2026 Shivamogga ಸೊರಬದ ಹಾಯ ಗ್ರಾಮ 10ನೇ ಶತಮಾನದ ಮೂರು ಶಾಸನೋಕ್ತ ಗೋದಾನದ ಕಲ್ಲುಗಳು ಪತ್ತೆ!

ಸೊರಬ ತಾಲೂಕಿನ ಹಾಯ ಗ್ರಾಮದಲ್ಲಿ 10ನೇ ಶತಮಾನಕ್ಕೆ ಸೇರಿದ ಮೂರು ಶಾಸನೋಕ್ತ ಗೋದಾನದ ಕಲ್ಲುಗಳು ಪತ್ತೆಯಾಗಿವೆ. ರಾಷ್ಟ್ರಕೂಟರ ಕಾಲದ ಈ ಶಾಸನಗಳು, ಕುಪ್ಪಗಡ್ಡೆಯ ಮಹಾಜನಗಳಿಗೆ ಗೋದಾನ ನೀಡಿದ ವಿವರಗಳನ್ನು ಮತ್ತು ಕೃಷಿ ಮಹತ್ವ ಸಾರುವ ಚಿನ್ಹೆಗಳನ್ನು ಒಳಗೊಂಡಿವೆ.

Read Full Story
06:33 PM (IST) Jan 12

Karnataka News Live 12 January 2026 BBK ಗಿಲ್ಲಿ ನಟ ಭಾವುಕ - ಸೋತಿರ್ಬೋದು ಆದ್ರೆ ಸತ್ತಿಲ್ಲ, ಎವಿಕ್ಟ್​ ಆದೆ ಆದ್ರೆ ಜನರ ಮನಸ್ಸಿಂದ ಡಿಲೀಟ್​ ಆಗ್ಲಿಲ್ಲ!

ಬಿಗ್​ಬಾಸ್​ ಫಿನಾಲೆ ಸಮೀಪಿಸುತ್ತಿದ್ದಂತೆ, ಮನೆಯಿಂದ ಹೊರಹೋಗುವ ಬಗ್ಗೆ ಸುದೀಪ್​ ಪ್ರಶ್ನೆಗೆ ಗಿಲ್ಲಿ ನಟ ಭಾವುಕ ಉತ್ತರ ನೀಡಿದ್ದಾರೆ. ತಾನು ಎವಿಕ್ಟ್ ಆಗಬಹುದು ಆದರೆ ಜನರ ಮನಸ್ಸಿನಿಂದ ಡಿಲೀಟ್ ಆಗುವುದಿಲ್ಲ ಎಂದ ಅವರ ಮಾತು ವೈರಲ್ ಆಗಿದೆ. 

Read Full Story
06:32 PM (IST) Jan 12

Karnataka News Live 12 January 2026 ಟಾಕ್ಸಿಕ್ ಚಿತ್ರದ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು - ಯಶ್‌ಗೆ ಕಾನೂನು ಸಂಕಷ್ಟ, ಫ್ಯಾನ್ಸ್‌ಗೆ ಆತಂಕ ಮೂಡಿಸಿದ ಆಯೋಗದ ಪತ್ರ!

ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟೀಸರ್, ಮಹಿಳೆಯರ ಘನತೆಗೆ ಕುಂದು ತರುತ್ತಿದೆ ಎಂಬ ಆರೋಪದ ಮೇಲೆ ವಿವಾದಕ್ಕೆ ಸಿಲುಕಿದೆ. ಆಮ್ ಆದ್ಮಿ ಪಕ್ಷದ ದೂರಿನ ಅನ್ವಯ, ರಾಜ್ಯ ಮಹಿಳಾ ಆಯೋಗವು ಸೆನ್ಸಾರ್ ಮಂಡಳಿಯಿಂದ ವರದಿ ಕೇಳಿದ್ದು, ಚಿತ್ರತಂಡಕ್ಕೆ ಆರಂಭಿಕ ಹಂತದಲ್ಲೇ ಕಾನೂನು ಸಂಕಷ್ಟ ಎದುರಾಗಿದೆ.
Read Full Story
06:30 PM (IST) Jan 12

Karnataka News Live 12 January 2026 ತುಂಗಭದ್ರಾ ಡ್ಯಾಂನ ಎಲ್ಲ ಗೇಟ್ ಬದಲಾವಣೆ ಮೇನಲ್ಲಿ ಅಂತ್ಯ, 3 ರಾಜ್ಯಗಳಿಂದ 54 ಕೋಟಿ ವೆಚ್ಚ, ಕರ್ನಾಟಕದ ಪಾಲೆಷ್ಟು?

ಕೊಪ್ಪಳದ ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರಸ್ಟ್‌ಗೇಟ್‌ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಸಚಿವ ಶಿವರಾಜ ತಂಗಡಗಿ ಕಾಮಗಾರಿ ಪರಿಶೀಲಿಸಿದರು. ₹54 ಕೋಟಿ ವೆಚ್ಚದ ಈ ಯೋಜನೆಯಡಿ, ಎಲ್ಲಾ 33 ಗೇಟ್‌ಗಳನ್ನು ಮೇ ಅಂತ್ಯದೊಳಗೆ ಬದಲಾಯಿಸುವ ಗುರಿ ಹೊಂದಿದ್ದು, ಇದು ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ.
Read Full Story
06:10 PM (IST) Jan 12

Karnataka News Live 12 January 2026 ಚಾಮರಾಜನಗರ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಹಣ ನೀಡದ ರಾಜ್ಯಸರ್ಕಾರ, ಕೌಲಂದೆ ನಿಲ್ದಾಣದಲ್ಲಿ ಕ್ರಾಸಿಂಗ್‌ಗೆ ಒತ್ತಾಯ

ಚಾಮರಾಜನಗರ ರೈಲ್ವೇ ಯೋಜನೆಗೆ ಶತಮಾನ ತುಂಬಿದರೂ, ನಂಜನಗೂಡು-ಚಾಮರಾಜನಗರ ನಡುವೆ ಕೌಲಂದೆಯಲ್ಲಿ ಕ್ರಾಸಿಂಗ್ ವ್ಯವಸ್ಥೆ ಇಲ್ಲದಿರುವುದು ಹೆಚ್ಚಿನ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಇದರ ಜೊತೆಗೆ, ಮೆಟ್ಟುಪಾಳ್ಯಂ ಮತ್ತು ಹೆಜ್ಜಾಲ-ಚಾಮರಾಜನಗರದಂತಹ ದಶಕಗಳ ಬೇಡಿಕೆಯ ಯೋಜನೆಗಳೂ ನೆನೆಗುದಿಗೆ ಬಿದ್ದಿವೆ.

Read Full Story
05:55 PM (IST) Jan 12

Karnataka News Live 12 January 2026 ಚಿಕ್ಕೋಡಿ - 90 ವರ್ಷದ ವೃದ್ಧೆಯ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಲ್ಲೆ; ರಸ್ತೆಗಿಳಿದ ಅನ್ನದಾತರು!

ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು 90 ವರ್ಷದ ವೃದ್ಧೆ ಸೇರಿದಂತೆ ರೈತರ ಮೇಲೆ ದೌರ್ಜನ್ಯ ಎಸಗಿ, ಅವರ ಪೈಪ್‌ಲೈನ್‌ಗಳನ್ನು ಧ್ವಂಸಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಖಂಡಿಸಿ ನೂರಾರು ರೈತರು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
Read Full Story
05:41 PM (IST) Jan 12

Karnataka News Live 12 January 2026 'ಬಿಗ್ ಬಾಸ್ ನನ್ನ ಮನೆಗೆ ಕಳಿಸಿ' ಎನ್ನುತ್ತಲೇ ಫೈನಲ್‌ಗೇರಿದ 'ಧ್ರುವಂತನ 10 ಸದ್ಗುಣ' ಬಿಚ್ಚಿಟ್ಟ ಮಹಿಳೆ!

ಬಿಗ್ ಬಾಸ್ ಸೀಸನ್ 12ರ ಫೈನಲಿಸ್ಟ್ ಸ್ಪರ್ಧಿಗಳಲ್ಲಿ ಒಬ್ಬರಾದ ಧ್ರುವಂತ್, ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಅನೇಕರು ಪರಿಗಣಿಸುತ್ತಿದ್ದಾರೆ. ಅವರ ಉತ್ತಮ ಗುಣಗಳು, ಸೀಕ್ರೆಟ್ ರೂಮ್ ನಂತರ ಬದಲಾದ ಆಟ ಮತ್ತು ಕಿಚ್ಚ ಸುದೀಪ್ ಅವರಿಂದ 'ಕಿಚ್ಚನ ಚಪ್ಪಾಳೆ' ಪಡೆದಿದ್ದು ಅವರ ಗೆಲುವಿನ ಸಾಧ್ಯತೆ ಹೆಚ್ಚಿಸಿದೆ.

Read Full Story
05:40 PM (IST) Jan 12

Karnataka News Live 12 January 2026 ಇದು ದಕ್ಷಿಣ ಭಾರತದ ನಟಿಯ ದುಬಾರಿ ನಿವಾಸ, ಇಂಟಿರಿಯರ್ ನೋಡಿದ್ರೆನೇ ಕಳೆದೋಗ್ತಿರಿ, ಗಂಡನಿಗಿಂತ ಈಕೆಯ ಆಗರ್ಭ ಶ್ರೀಮಂತೆ!

ದಕ್ಷಿಣ ಭಾರತದ ಈ ನಟಿ ಚೆನ್ನೈನ ಪ್ರತಿಷ್ಠಿತ ಪೋಯಸ್ ಗಾರ್ಡನ್‌ನಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಈ ಲೇಖನವು ಅವರ ₹200 ಕೋಟಿ ನಿವ್ವಳ ಮೌಲ್ಯ, ರಿಯಲ್ ಎಸ್ಟೇಟ್ ಹೂಡಿಕೆಗಳು, ಖಾಸಗಿ ಜೆಟ್, ಮತ್ತು ಅವರ ಮನೆಗಳ ವಿಶಿಷ್ಟ ಒಳಾಂಗಣ ವಿನ್ಯಾಸದ ಬಗ್ಗೆ ವಿವರಿಸುತ್ತದೆ.

Read Full Story
05:30 PM (IST) Jan 12

Karnataka News Live 12 January 2026 ಗಿಲ್ಲಿ ನಟ ಮದ್ವೆಯಾಗೋ ಹುಡುಗಿ ಇವಳೇ - ಆಪ್ತ ಸ್ನೇಹಿತ ರಿವೀಲ್​! Bigg Bossನಿಂದ ಬಂದ ಮೇಲೆ ಗುಡ್​ನ್ಯೂಸ್​

ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿ ಗಿಲ್ಲಿ ನಟ, ಕಾವ್ಯಾ ಶೈವ ಮೇಲೆ ಮನಸೋತಿದ್ದಾರೆ. ಆದರೆ, ರಕ್ಷಿತಾ ಶೆಟ್ಟಿ ಕೂಡ ಗಿಲ್ಲಿ ಬಗ್ಗೆ ಆಸಕ್ತಿ ತೋರಿದ್ದು, ಮನೆಯಲ್ಲಿ ತ್ರಿಕೋನ ಪ್ರೇಮಕಥೆ ಸೃಷ್ಟಿಯಾಗಿದೆ. ಈ ನಡುವೆ, ಗಿಲ್ಲಿಯ ಆಪ್ತ ಸ್ನೇಹಿತ ದೀಪಕ್ ಗೌಡ, ಗಿಲ್ಲಿ ನಟನ ಮದುವೆ ಬಗ್ಗೆ ಹೇಳಿದ್ದೇನು?

Read Full Story
05:17 PM (IST) Jan 12

Karnataka News Live 12 January 2026 ಅಂಕೋಲಾದ ಸುಂಕಸಾಳದಲ್ಲಿ ಬ್ಯಾಂಕ್ ಆಫ್ ಬರೋಡಾದಲ್ಲಿ ದರೋಡೆಗೆ ವಿಫಲ ಯತ್ನ - ಸ್ಟ್ರಾಂಗ್ ರೂಮ್ ಒಡೆಯಲಾಗದೆ ಕಳ್ಳರು ಪರಾರಿ

ಅಂಕೋಲಾ ತಾಲೂಕಿನ ಸುಂಕಸಾಳದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ದರೋಡೆಗೆ ವಿಫಲ ಯತ್ನ ನಡೆದಿದೆ. ಬ್ಯಾಂಕ್‌ನ ಶೌಚಾಲಯದ ಗೋಡೆ ಕೊರೆದು ಒಳನುಗ್ಗಿದ ದುಷ್ಕರ್ಮಿಗಳು, ಹಣ ಹಾಗೂ ಚಿನ್ನಾಭರಣವಿದ್ದ ಸ್ಟ್ರಾಂಗ್ ರೂಮ್ ಒಡೆಯಲು ಸಾಧ್ಯವಾಗದೆ ಬರಿಗೈಯಲ್ಲಿ ಪರಾರಿಯಾಗಿದ್ದಾರೆ. 

Read Full Story