- Home
- Entertainment
- TV Talk
- ಹಾಟ್ ಅವತಾರದಲ್ಲಿ ಪಡ್ಡೆ ಹೈಕಳ ನಿದ್ದೆ ಕದ್ದ Bigg Boss ಸ್ಪಂದನಾ ಸೋಮಣ್ಣ: ವಿಡಿಯೋ ವೈರಲ್
ಹಾಟ್ ಅವತಾರದಲ್ಲಿ ಪಡ್ಡೆ ಹೈಕಳ ನಿದ್ದೆ ಕದ್ದ Bigg Boss ಸ್ಪಂದನಾ ಸೋಮಣ್ಣ: ವಿಡಿಯೋ ವೈರಲ್
ಬಿಗ್ಬಾಸ್ ಸೀಸನ್ 12ರ ಮೂಲಕ ಖ್ಯಾತಿ ಪಡೆದ ನಟಿ ಸ್ಪಂದನಾ ಸೋಮಣ್ಣ, ತಮ್ಮ ನಟನಾ ವೃತ್ತಿಜೀವನದ ಜೊತೆಗೆ ಇತ್ತೀಚೆಗೆ ಮಾಡಿಸಿದ ಹಾಟ್ ಫೋಟೋಶೂಟ್‌ನಿಂದ ಸದ್ದು ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ ಫೋಟೋಗಳು.

ಸ್ಪಂದನಾ ಸೋಮಣ್ಣ
ಬಿಗ್ಬಾಸ್ ಸೀಸನ್ 12 (Bigg Boss Season 12)ನಲ್ಲಿ ಫೇಮಸ್ ಆಗಿರೋ ಸ್ಪರ್ಧಿಯ ಪೈಕಿ ನಟಿ ಸ್ಪಂದನಾ ಸೋಮಣ್ಣ ಕೂಡ ಒಬ್ಬರು. 99 ದಿನಗಳು ಬಿಗ್ಬಾಸ್ ಮನೆಯಲ್ಲಿಯೇ ಇದ್ದುದಕ್ಕೆ ಕೆಲವು ಬಿಗ್ಬಾಸ್ ಸ್ಪರ್ಧಿಗಳ ಕೆಂಗಣ್ಣಿಗೂ ಗುರಿಯಾದವರು ಸ್ಪಂದನಾ ಸೋಮಣ್ಣ.
ಸ್ಪಂದನಾ ತಿರುಗೇಟು
ಅದಕ್ಕೆ ಅವರು, ಹೊರಕ್ಕೆ ಬಂದಾಗಲೇ ಟ್ರೋಲ್ ಮಾಡಿದವರಿಗೆ ಉತ್ತರವನ್ನೂ ಕೊಟ್ಟಿದ್ದಾರೆ. ನಾನೇನು ವಾಹಿನಿ ಮಗಳು ಅಲ್ಲ. ಅಷ್ಟಕ್ಕೂ ಬಿಗ್ಬಾಸ್ನಲ್ಲಿ ಮನೆ ಮಗಳು, ಸೊಸೆ, ಮಗ ಅನ್ನೋ ಕಾರಣಕ್ಕೆ ಉಳಿದುಕೊಳ್ಳಲು ಸಾಧ್ಯವೂ ಇಲ್ಲ. ನಾವೆಲ್ಲ ಜನರ ಮನೆ ಮಗಳಾಗಬೇಕು. ಆಗ ಮಾತ್ರ ಇರಲು ಸಾಧ್ಯ ಎಂದಿದ್ದರು.
ಕನ್ನಡ-ತೆಲಗುವಿನಲ್ಲಿ ನಟನೆ
ಅಂದಹಾಗೆ, ಸ್ಪಂದನಾ ಬಿಗ್ಬಾಸ್ನಿಂದ ಫೇಮಸ್ ಆಗಿದ್ದರೂ, ಅವರು ಇದಾಗಲೇ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಸೀರಿಯಲ್ನಲ್ಲಿಯೂ ನಟಿಸಿದ್ದಾರೆ. 'ನಾನು ನನ್ನ ಕನಸು' ಎಂಬ ಕನ್ನಡ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಸ್ಪಂದನಾ, ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಸಿನಿಮಾಕ್ಕೆ ಎಂಟ್ರಿ
ಇದಾಗಲೇ ನಟಿ, ತೆಲುಗಿನ 'ನಚ್ಚಾವೆ' ವೆಬ್ ಸೀರೀಸ್ ಹಾಗೂ ಹಿಂದಿಯ ಸುನ್ ಲೆ ನಾ ಎಂಬ ಆಲ್ಬಂ ಸಾಂಗ್‌ನಲ್ಲಿ ನಟಿಸಿದ್ದಾರೆ. ಇವರು ದಿಲ್ ಖುಷ್ ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದಾರೆ.
ಹಾಟ್ ಫೋಟೋಶೂಟ್
ಇದರ ನಡುವೆಯೇ, ಅವರು ಹಾಟ್ ಫೋಟೋಶೂಟ್ ಮಾಡಿಸಿಕೊಂಡು ಪಡ್ಡೆ ಹೈಕಳ ನಿದ್ದೆಯನ್ನೂ ಕದಿಯುತ್ತಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಸೀದಾಸಾದಾ ಬಟ್ಟೆ ತೊಟ್ಟು ಎಲ್ಲರ ಗಮನ ಸೆಳೆಯುತ್ತಿದ್ದ ಬೆಡಗಿ ಸ್ಪಂದನಾ ಅವರ ಹಾಟ್ ಫೋಟೋಶೂಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಾಯ್ಫ್ರೆಂಡ್ ಬಗ್ಗೆ
ಇದೇ ವೇಳೆ, ಸ್ಪಂದನಾ ಸೋಮಣ್ಣ ಅವರ ಬಾಯ್ಫ್ರೆಂಡ್ ಮತ್ತು ಮದುವೆಯ ಬಗ್ಗೆಯೂ ಕೆಲವೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರೋದು ಇದೆ. ಅದೇ ಕಾರಣಕ್ಕೆ ಅವರು ಇದರ ಬಗ್ಗೆಯೂ ಮಾತನಾಡಿದ್ದಾರೆ. ನಿಮಗೆ ಬಾಯ್ಫ್ರೆಂಡ್ ಇದ್ದಾರಾ ಎಂಬ ಪ್ರಶ್ನೆಗೆ, ನೇರವಾಗಿ ಏನನ್ನೂ ಹೇಳದ ಸ್ಪಂದನಾ, ನನಗೆ ಬಾಯ್ಫ್ರೆಂಡ್ ಇದ್ದಾರೋ, ಇಲ್ಲವೋ ಎಂದು ನೀವೇ ಗೆಸ್ ಮಾಡ್ತಾ ಇರಿ. ಇದೇ ಬೆಸ್ಟ್. ಈ ವಿಷಯದ ಬಗ್ಗೆ ಆಗಾಗ್ಗೆ ಮಾತನಾಡ್ತಾ ಇದ್ದರೆ ನನಗೂ ಖುಷಿ ಎಂದಿದ್ದಾರೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

