- Home
- Entertainment
- TV Talk
- ಗಿಲ್ಲಿ ನಟ ಮದ್ವೆಯಾಗೋ ಹುಡುಗಿ ಇವಳೇ: ಆಪ್ತ ಸ್ನೇಹಿತ ರಿವೀಲ್! Bigg Bossನಿಂದ ಬಂದ ಮೇಲೆ ಗುಡ್ನ್ಯೂಸ್
ಗಿಲ್ಲಿ ನಟ ಮದ್ವೆಯಾಗೋ ಹುಡುಗಿ ಇವಳೇ: ಆಪ್ತ ಸ್ನೇಹಿತ ರಿವೀಲ್! Bigg Bossನಿಂದ ಬಂದ ಮೇಲೆ ಗುಡ್ನ್ಯೂಸ್
ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿ ಗಿಲ್ಲಿ ನಟ, ಕಾವ್ಯಾ ಶೈವ ಮೇಲೆ ಮನಸೋತಿದ್ದಾರೆ. ಆದರೆ, ರಕ್ಷಿತಾ ಶೆಟ್ಟಿ ಕೂಡ ಗಿಲ್ಲಿ ಬಗ್ಗೆ ಆಸಕ್ತಿ ತೋರಿದ್ದು, ಮನೆಯಲ್ಲಿ ತ್ರಿಕೋನ ಪ್ರೇಮಕಥೆ ಸೃಷ್ಟಿಯಾಗಿದೆ. ಈ ನಡುವೆ, ಗಿಲ್ಲಿಯ ಆಪ್ತ ಸ್ನೇಹಿತ ದೀಪಕ್ ಗೌಡ, ಗಿಲ್ಲಿ ನಟನ ಮದುವೆ ಬಗ್ಗೆ ಹೇಳಿದ್ದೇನು?

ಗಿಲ್ಲಿ ಮೇಲೆ ಯುವತಿಯರ ಕಣ್ಣು
ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12 ) ಸ್ಪರ್ಧಿ ಗಿಲ್ಲಿ ನಟ ಇದೀಗ ಹೊಸ ದಾಖಲೆಯನ್ನೇ ಬರೆದಿದ್ದಾರೆ. ಕೆಲವೇ ಲಕ್ಷ ಇದ್ದ ಅವರ ಇನ್ಸ್ಟಾಗ್ರಾಮ್ ಖಾತೆಯ ಫಾಲೋವರ್ಸ್ 1 ಮಿಲಿಯನ್ ಆಗಬೇಕು ಎಂದು ಅವರು ಕಾವ್ಯಾ ಶೈವ ಬಳಿ ಹೇಳಿಕೊಂಡಿದ್ದರು. ಅದು ನೆರವೇರಿಯೇ ಬಿಟ್ಟಿದೆ! ಅದರಲ್ಲಿಯೂ ಗಿಲ್ಲಿನಟನ ಮೇಲೆ ಯುವತಿಯರ ಕಣ್ಣು ಕೂಡ ಸಹಜವಾಗಿ ನೆಟ್ಟಿದೆ!
ಕಾವ್ಯಾ ಮೇಲೆ ಲವ್ವು
ಅದೇ ಇನ್ನೊಂದೆಡೆ, ಬಿಗ್ಬಾಸ್ ಮನೆಯಲ್ಲಿ, ಗಿಲ್ಲಿ ನಟನಿಗೆ ಕಾವ್ಯಾ ಶೈವ ಮೇಲೆ ಲವ್ ಶುರುವಾಗಿದೆ. ಕಾವು ಕಾವು ಎನ್ನುತ್ತಾ ಅವರ ಹಿಂದೆಯೇ ಇರೋದು ಇದೀಗ ಗುಟ್ಟಾಗೇನೂ ಉಳಿದಿಲ್ಲ. ಇದನ್ನೇ ಪ್ಲಸ್ ಪಾಯಿಂಟ್ ಮಾಡಿಕೊಂಡು, ಗಿಲ್ಲಿಯ ಹಿಂದೆನೇ ಇರು ಎಂದು ಕಾವ್ಯಾ ಸಹೋದರ ಹೇಳಿಕೊಟ್ಟು ಸಮಸ್ಯೆಯೂ ಆಗಿತ್ತು. ಆದರೆ ಆ ಸಮಸ್ಯೆ ಅಲ್ಲಿಯೇ ಸ್ಟಾಪ್ ಆಯಿತು ಅನ್ನಿ.
ರಕ್ಷಿತಾಗೂ ಕುಚುಕುಚು
ಮತ್ತೊಂದೆಡೆ, ಮಂಗಳೂರಿನ ಪುಟ್ಟಿ ಎಂದೇ ಫೇಮಸ್ ಆಗಿರೋ ರಕ್ಷಿತಾ ಶೆಟ್ಟಿಗೆ (Rakshita Shetty) ಕೂಡ ಗಿಲ್ಲಿ ನಟನಂಥ ಹುಡುಗನ ಮೇಲೆಯೇ ಮನಸ್ಸಾಗಿದೆ. ನನಗೆ ಇಂಥದ್ದೇ ಹುಡುಗ ಬೇಕು, ಇವರ ಕೂದಲು ನನಗೆ ಇಷ್ಟ ಎಂದೆಲ್ಲಾ ಹೇಳಿದ್ದರು ರಕ್ಷಿತಾ. ಇದೇ ಕಾರಣಕ್ಕೆ ಬಿಗ್ಬಾಸ್ ಮನೆಯಲ್ಲಿ ತ್ರಿಕೋನ ಲವ್ಸ್ಟೋರಿ ಶುರುವಾಗಿದೆ ಎಂದೇ ಹೇಳಲಾಗುತ್ತಿದೆ.
ಆಪ್ತ ಸ್ನೇಹಿತ ಹೇಳಿದ್ದೇನು?
ಇದೀಗ ಗಿಲ್ಲಿ ನಟನ ಆಪ್ತ ಸ್ನೇಹಿತ, ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ದೀಪಕ್ ಗೌಡ ಅವರು, ಗಿಲ್ಲಿ ನಟನ ಹುಡುಗಿಯ ಬಗ್ಗೆ ಬಾಸ್ ಟಿವಿಯ ಜೊತೆ ಮಾತನಾಡಿದ್ದಾರೆ.
ಗಿಲ್ಲಿ ಇವರನ್ನು ಇಷ್ಟಪಡೋದು
ಬಿಗ್ಬಾಸ್ನ ತ್ರಿಕೋನ ಲವ್ಸ್ಟೋರಿ ಬಗ್ಗೆ ಅವರಿಗೆ ಪ್ರಶ್ನಿಸಿದಾಗ, ಅವರು ನಮ್ಮ ಗಿಲ್ಲಿ ಕಾವ್ಯಾರನ್ನು ಇಷ್ಟಪಡುತ್ತಾರೆ. ಬಿಗ್ಬಾಸ್ನಿಂದ ಬಂದ ಮೇಲೆ ಅವರ ಜೊತೆನೇ ಮದುವೆಯಾಗಬೇಕು ಎನ್ನುವುದು ನಮ್ಮ ಆಸೆ ಎಂದು ನೋಡಮ್ಮಾ ಕಾವ್ಯಾ, ಗಿಲ್ಲಿ ಅವರನ್ನು ಮದುವೆಯಾದರೆ ಸುಖವಾಗಿ ಇರುತ್ತೀರಿ. ಅವರ ಮನಸ್ಸನ್ನು ನೋಯಿಸಬೇಡಿ, ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದಾರೆ.
ಒಬ್ಬೊಬ್ಬರದ್ದು ಒಂದೊಂದು ರೀತಿ
ಒಟ್ಟಿನಲ್ಲಿ ಬಿಗ್ಬಾಸ್ ಮನೆಯಲ್ಲಿ ತಮಾಷೆಯ ಆಟವನ್ನು ಕೆಲವರು ಸೀರಿಯಲ್ ಆಗಿ ತೆಗೆದುಕೊಂಡಂತಿದೆ. ಅಷ್ಟಕ್ಕೂ ಕಾವ್ಯಾ ಅವರು ನಿಜವಾಗಿಯೂ ಗಿಲ್ಲಿ ಅವರನ್ನು ಇಷ್ಟಪಡುತ್ತಾರೆಯೋ ಅಥವಾ ಬಿಗ್ಬಾಸ್ನಲ್ಲಿ ಅವರನ್ನು ದಾಳವಾಗಿ ಬಳಸಿಕೊಳ್ತಿದ್ದಾರೆಯೋ ಎಂದು ಇದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಒಟ್ಟಿನಲ್ಲಿ ಅಭಿಮಾನಿಗಳು ಏನೋ ಒಂದು ಅಂದುಕೊಳ್ಳುತ್ತಲೇ ಇರುತ್ತಾರೆ ಅನ್ನಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

