- Home
- Entertainment
- TV Talk
- BBK ಗಿಲ್ಲಿ ನಟ ಭಾವುಕ: ಸೋತಿರ್ಬೋದು ಆದ್ರೆ ಸತ್ತಿಲ್ಲ, ಎವಿಕ್ಟ್ ಆದೆ ಆದ್ರೆ ಜನರ ಮನಸ್ಸಿಂದ ಡಿಲೀಟ್ ಆಗ್ಲಿಲ್ಲ!
BBK ಗಿಲ್ಲಿ ನಟ ಭಾವುಕ: ಸೋತಿರ್ಬೋದು ಆದ್ರೆ ಸತ್ತಿಲ್ಲ, ಎವಿಕ್ಟ್ ಆದೆ ಆದ್ರೆ ಜನರ ಮನಸ್ಸಿಂದ ಡಿಲೀಟ್ ಆಗ್ಲಿಲ್ಲ!
ಬಿಗ್ಬಾಸ್ ಫಿನಾಲೆ ಸಮೀಪಿಸುತ್ತಿದ್ದಂತೆ, ಮನೆಯಿಂದ ಹೊರಹೋಗುವ ಬಗ್ಗೆ ಸುದೀಪ್ ಪ್ರಶ್ನೆಗೆ ಗಿಲ್ಲಿ ನಟ ಭಾವುಕ ಉತ್ತರ ನೀಡಿದ್ದಾರೆ. ತಾನು ಎವಿಕ್ಟ್ ಆಗಬಹುದು ಆದರೆ ಜನರ ಮನಸ್ಸಿನಿಂದ ಡಿಲೀಟ್ ಆಗುವುದಿಲ್ಲ ಎಂದ ಅವರ ಮಾತು ವೈರಲ್ ಆಗಿದೆ.

ಸ್ಪರ್ಧಿಗಳ ಹಣಾಹಣಿ
ಸದ್ಯ ಬಿಗ್ಬಾಸ್ ಮನೆಯಲ್ಲಿ ಆರು ಜನ ಸ್ಪರ್ಧಿಗಳ ಹಣಾಹಣಿ ನಡೆಯುತ್ತಿದೆ. ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಆದರೆ ಈ ಸಂದರ್ಭದಲ್ಲಿ ಯಾರು ಬೇಕಾದರೂ ಸೋಲಬಹುದು, ಯಾವ ಕ್ಷಣದಲ್ಲಿ ಯಾರು ಬೇಕಾದರೂ ಹೊರಕ್ಕೆ ಬರಬಹುದು.
ಯಾವ ಕ್ಷಣದಲ್ಲಾದರೂ
ಬಿಗ್ಬಾಸ್ ಗೆಲ್ಲಬೇಕು ಎನ್ನುವುದು ಪ್ರತಿಯೊಬ್ಬರ ಕಿಚ್ಚಾದರೂ, ಯಾವ ಕ್ಷಣದಲ್ಲಿಯಾದರೂ ಮನೆಯಿಂದ ಹೊರಕ್ಕೆ ಹೋಗಲು ರೆಡಿಯಾಗಿಯೇ ಇರಬೇಕಿದೆ. ವಾರಾಂತ್ಯದಲ್ಲಿ ಮಾತ್ರವಲ್ಲದೇ, ಮಿಡ್ವೀಕ್ನಲ್ಲಿಯೂ ಮನೆಯಿಂದ ಹೊರಕ್ಕೆ ಕಳುಹಿಸುವ ಸಾಧ್ಯತೆ ಇದೆ.
ಸುದೀಪ್ ಪ್ರಶ್ನೆ
ಇದೀಗ, ಮನೆಯಿಂದ ಹೊರಕ್ಕೆ ಹೋದರೆ ಹೇಗಿರುತ್ತದೆ ಎನ್ನುವ ಬಗ್ಗೆ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳನ್ನು ಪ್ರಶ್ನಿಸಿದ್ದರು. ಆಗ ಗಿಲ್ಲಿ ನಟ (Bigg Boss Gilli Nata) ಹೇಳಿರುವ ಮಾತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
15 ವಾರಗಳ ಅನುಭವ
ನಾನು ಇಲ್ಲಿಗೆ ಬಂದಾಗ ಏಳೆಂಟು ವಾರ ಇರಬಹುದು ಎಂದುಕೊಂಡಿದ್ದೆ. ಆದರೆ ಜನರು ಆಶೀರ್ವದಿಸಿ 15 ವಾರಗಳವರೆಗೆ ನನ್ನನ್ನು ಇಲ್ಲಿಯೇ ಇರುವಂತೆ ಮಾಡಿದ್ದಾರೆ. ಅವರ ಆಶೀರ್ವಾದ ನನ್ನ ಮೇಲೆ ಇರುವುದನ್ನು ಋಣಿಯಾಗಿದ್ದೇನೆ ಎಂದಿದ್ದಾರೆ.
ಡಿಲೀಟ್ ಆಗಲ್ಲ
ಇದೇ ವೇಳೆ, ನಾನು ಎವಿಕ್ಟ್ ಆಗಬಹುದು, ಆದರೆ ಜನರ ಮನಸ್ಸಿಂದ ಡಿಲೀಟ್ ಆಗುವುದಿಲ್ಲ, ನಮ್ಮ ಕನ್ನಡ ಜನತೆ ಅಲ್ಟಿಮೇಟು ಎಂದಿದ್ದಾರೆ. ಅದೇ ವೇಳೆ ಸುದೀಪ್ ಅವರ ಡೈಲಾಗ್ ನೆನಪಿಸಿಕೊಂಡ ಗಿಲ್ಲಿ ನಟ, ಸೋಲಬಹುದು ಆದರೆ ಸತ್ತಿಲ್ಲ ಎಂಬ ಡೈಲಾಗ್ ಕೂಡ ನನಗೆ ನೆನಪಾಗುತ್ತದೆ ಎಂದಿದ್ದಾರೆ.
ಜನರಿಗೆ ಧನ್ಯವಾದ
ಇದನ್ನು ಕೇಳಿದ ಸುದೀಪ್, ಮೊದಲಿಗೆ ಈ ರೀತಿ ಭಾಷಣ ಮಾಡುತ್ತಿರಲಿಲ್ಲ. ಈಗ ಹೇಗೆ ಕಲಿತ್ರಿ? ಯಾವ ಪಕ್ಷಕ್ಕೆ ಸೇರುವ ಉದ್ದೇಶವಿದೆ ಎಂದು ತಮಾಷೆ ಮಾಡಿದ್ದಾರೆ. ಕೊನೆಗೆ ನೀವು ಸೇಫ್. ಫೈನಲಿಸ್ಟ್ ಆಗಿದ್ದೀರಿ ಎಂದಾಗ ಕನ್ನಡದ ಜನತೆಗೆ ಧನ್ಯವಾದ ಎಂದಿದ್ದಾರೆ ಗಿಲ್ಲಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

