- Home
- Entertainment
- Cine World
- ಬೆಂಗಳೂರಲ್ಲೇ ಇದೆ ಟಾಕ್ಸಿಕ್ ಟೀಸರ್‌ನ ವಿದೇಶಿ ಜಗತ್ತು; ಕಾರು ಗುದ್ದಿದ ಶೂಟಿಂಗ್ ಸ್ಪಾಟ್ ರಿವೀಲ್ ಮಾಡಿದ ಅಲೆಮಾರಿ!
ಬೆಂಗಳೂರಲ್ಲೇ ಇದೆ ಟಾಕ್ಸಿಕ್ ಟೀಸರ್‌ನ ವಿದೇಶಿ ಜಗತ್ತು; ಕಾರು ಗುದ್ದಿದ ಶೂಟಿಂಗ್ ಸ್ಪಾಟ್ ರಿವೀಲ್ ಮಾಡಿದ ಅಲೆಮಾರಿ!
ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್ ವಿದೇಶದಲ್ಲಿ ಚಿತ್ರೀಕರಿಸಿದ್ದಲ್ಲ, ಬದಲಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ. ಯೂಟ್ಯೂಬರ್ ಅಲೆಮಾರಿ ಅಮಿತ್ ಈ ಶೂಟಿಂಗ್ ಸ್ಪಾಟ್‌ನ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಈ ಟೀಸರ್ 84 ಮಿಲಿಯನ್ ವೀಕ್ಷಣೆ ಪಡೆದಿದೆ.

ಟಾಕ್ಸಿಕ್ ಸಿನಿಮಾದ ಟ್ರೇಲರ್ ಅನ್ನು ಯಾವುದೇ ಅಮೇರಿಕಾ, ಇಂಗ್ಲೆಂಡ್ ಹಾಗೂ ಇತರೆ ವಿದೇಶಗಳಲ್ಲಿ ಶೂಟಿಂಗ್ ಮಾಡಿಲ್ಲ. ನಮ್ಮದೇ ಊರಿನ, ಬೆಳಗಾದರೆ ಕೂಗಳತೆ ದೂರಲ್ಲಿಯೇ ಓಡಾಡುವ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಶೂಟಿಂಗ್ ಮಾಡಲಾಗಿದೆ.
ಅದರಲ್ಲಿಯೂ ಕಾರು ಬಂದು ಮರಕ್ಕೆ ಗುದ್ದುವ, ಸಮಾಧಿ ಅಗೆದಿರುವ, ಚರ್ಚ್ ಇರುವ ಸ್ಥಳಗಳು ಸಂಪೂರ್ಣವಾಗಿ ಬೆಂಗಳೂನಲ್ಲಿಯೇ ಶೂಟಿಂಗ್ ಮಾಡಲಾಗಿದ್ದು, ಅದರ ಸಂಪೂರ್ಣ ಮಾಹಿತಿಯನ್ನು ಯೂಟೂಬರ್ ಅಲೆಮಾರಿ ಅಮಿತ್ ಅವರು ಬಿಚ್ಚಿಟ್ಟಿದ್ದಾರೆ.
ಯೂಟೂಬ್‌ನಲ್ಲಿ ಬಹುತೇಕವಾಗಿ ಹಳೆಯ ಸಿನಿಮಾಗಳ ಶೂಟಿಂಗ್ ಸ್ಪಾಟ್‌ಗಳನ್ನು ರಿವೀಲ್ ಮಾಡುವ ಅಲೆಮಾರಿ ಅಮಿತ್ ಅವರು, ಇದೀಗ ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಯಾಗುತ್ತಿದ್ದಂತೆಯೇ ಅದರ ಶೂಟಿಂಗ್ ಸ್ಪಾಟ್ ರಿವೀಲ್ ಮಾಡಿದ್ದಾರೆ. ಇನ್ನು ಟಾಕ್ಸಿಕ್ ಟೀಸರ್ ಕೇವಲ ನಾಲ್ಕು ದಿನಗಳಲ್ಲಿ 84 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಅಮಿತ್ ಅವರು ಈ ಸಂಬಂಧಪಟ್ಟ ವಿಡಿಯೋ ಯೂಟೂಬ್‌ನಲ್ಲಿ ಹಂಚಿಕೊಂಡಿದ್ದು ಭಾರೀ ವೈರಲ್ ಆಗಿದೆ. ಟಾಕ್ಸಿಕ್ ಸಿನಿಮಾದ ಟೀಸರ್ ಶೂಟಿಂಗ್ ಮಾಡುವುದಕ್ಕೆ ಬೇರೆ ದೇಶಗಳಿಗೆ ಹೋಗದೇ ನಮ್ಮ ಊರಿನಲ್ಲಿಯೇ ಸಿನಿಮಾ ಮಾಡಿದ್ದಾರೆ ಎಂಬುದನ್ನು ಒಂದೊಂದು ಸ್ಥಳ, ಮರ-ಗಿಡಗಳನ್ನಾಧರಿಸಿ ಮಾಹಿತಿ ಬಿಚ್ಚಿಟ್ಟಾರೆ.
ಬೆಂಗಳೂರು ಅರಮನೆ ಮೈದಾನದ ಗೇಟಿನ ಒಳಗೆ ಹೋದರೆ ಅಲ್ಲಿ ಈ ಗ್ರೌಂಡ್‌ನಲ್ಲಿ ಶೂಟಿಂಗ್ ಮಾಡಿದ ಸ್ಥಳ ನಿಮಗೆ ಸಿಗುತ್ತದೆ. ಇಲ್ಲಿ ತಾತ್ಕಾಲಿಕವಾಗಿ ವಿದೇಶಗಳಲ್ಲಿರುವ ದೃಶ್ಯಗಳ ಮಾದರಿಯಲ್ಲಿಯೇ ಸ್ಮಶಾನ, ಚರ್ಚ್, ಹಳೆಯ ವಿಂಟೇಜ್ ಕಾರುಗಳು, ವಿದೇಶಿ ಜನರಿರುವಂತೆ ವಾತಾವರಣ ನಿರ್ಮಾಣ ಮಾಡಿದ್ದಾರೆ. ನಂತರ, ಅಲ್ಲಿ ತಮಗೆ ಬೇಕಿರುವ ದೃಶ್ಯವನ್ನು ಶೂಟಿಂಗ್ ಮಾಡಿದ್ದಾರೆ.
ಸುಮಾರು ಒಂದೂವರೆಯಿಂದ 2 ತಿಂಗಳ ಕಾಲ ಇಲ್ಲಿ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಸ್ಮಶಾನಕ್ಕೆ ಬೇಕಾದ ನೂರಾರು ಗೋರಿಗಳನ್ನು, ರಸ್ತೆಗಳನ್ನು, ಕಾಂಪೌಂಡ್, ಚರ್ಚ್ ಕಟ್ಟಡ ಎಲ್ಲವನ್ನೂ ಸೆಟ್ ಹಾಕಿ ನಿರ್ಮಿಸಿದ್ದಾರೆ. ಅವೆಲ್ಲವೂ ಶೂಟಿಂಗ್ ಅವಧಿಗೆ ಮಾತ್ರ ಸೀಮಿತವಾಗಿದ್ದು, ಇದೀಗ ಬರೀ ಖಾಲಿ ಮೈದಾನ ಮಾತ್ರವಿದೆ. ಕುತೂಹಲ ಇದ್ದವರು ಈ ಶೂಟಿಂಗ್ ಸ್ಪಾಟ್ ಅನ್ನು ನೋಡಿಕೊಂಡು ಬರಬಹುದು.
ಇನ್ನು ಟಾಕ್ಸಿಕ್ ಸಿನಿಮಾದ ಟೀಸರ್‌ನಲ್ಲಿ ಇರುವ ಕಾರಿನೊಳಗೆ ನಡೆಯುವ ದೃಶ್ಯವು ಎಲ್ಲೆಡೆ ಚರ್ಚೆಯಾಗುತ್ತಿದೆ. ಕೆಲವು ಸಂಘಟನೆಗಳು ಹಾಗೂ ಆಮ್ ಆದ್ಮಿ ಪಕ್ಷದಿಂದ ಟೀಸರ್‌ನಲ್ಲಿರುವ ದೃಶ್ಯ ಮಕ್ಕಳ ಮೇಲೆ ಕಟ್ಟ ಪರಿಣಾಮ ಬೀರುತ್ತದೆ ಎಂಬ ವಾದವನ್ನೂ ಮಾಡಿದ್ದಾರೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಟಾಕ್ಸಿಕ್ ಸಿನಿಮಾ ಮಾ.19ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇದನ್ನು ಕೇವಲ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡದೇ ಹಾಲಿವುಡ್ ರೇಂಜಿನಲ್ಲಿ ಅಂದರೆ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ನಿರ್ಮಿಸಲಾಗಿದೆ.
ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದ ನಟ ಯಶ್, ಇದೀಗ ಹಾಲಿವುಡ್ ಮಟ್ಟದಲ್ಲಿ ತಮ್ಮ ಸಿನಿಮಾ ಹಾಗೂ ನಟನೆ ಪ್ರದರ್ಶನ ಮಾಡುತ್ತಿರುವುದು ಸ್ಯಾಂಡಲ್‌ವುಡ್ ಮಟ್ಟಿಗೆ ಹೆಮ್ಮೆಯ ವಿಚಾರವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

