- Home
- News
- State
- Karnataka News Live: ನಮ್ಮ ಮೆಟ್ರೋಗೆ ರಾಜ್ಯದ್ದೇ 84% ಪಾಲು, ಪ್ರಚಾರ ಮಾತ್ರ ಕೇಂದ್ರದ್ದು: ಕಾಂಗ್ರೆಸ್
LIVE NOW
Karnataka News Live: ನಮ್ಮ ಮೆಟ್ರೋಗೆ ರಾಜ್ಯದ್ದೇ 84% ಪಾಲು, ಪ್ರಚಾರ ಮಾತ್ರ ಕೇಂದ್ರದ್ದು: ಕಾಂಗ್ರೆಸ್

ಸಾರಾಂಶ
ಬೆಂಗಳೂರು: ರಾಜ್ಯ ಸರ್ಕಾರದ ಹಣಕ್ಕೆ ಕೇಂದ್ರ ಸರ್ಕಾರದ ಪ್ರಚಾರ. ನಮ್ಮ ಮೆಟ್ರೋ ವಿಚಾರದಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಹಣ ಹೂಡಿಕೆ ಮಾಡಿದರೂ ಕೇಂದ್ರ ಸರ್ಕಾರ ಹೆಚ್ಚಿನ ಪ್ರಚಾರ ಪಡೆಯುತ್ತಿದೆ ಎಂದು ಕಾಂಗ್ರೆಸ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ. ಮೆಟ್ರೋ ಯೋಜನೆಯಲ್ಲಿ ಅದರಲ್ಲೂ ನಮ್ಮ ಮೆಟ್ರೋ ವಿಚಾರದಲ್ಲಿ ಕೇಂದ್ರ ಸರ್ಕಾರ ಕಾಣಿಕೆ ಸುಮಾರು 15% ಮಾತ್ರ. ಉಳಿದ 85% ಕಾಣಿಕೆ, ಶ್ರಮ, ಜವಾಬ್ದಾರಿ ಎಲ್ಲವೂ ರಾಜ್ಯ ಸರ್ಕಾರದ್ದಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನಮ್ಮ ಮೆಟ್ರೋ ವಿಚಾರದಲ್ಲಿ ಕೇಂದ್ರ ಸರ್ಕಾರ ₹1 ಖರ್ಚು ಮಾಡಿದರೆ, ಕರ್ನಾಟಕ ಸರ್ಕಾರ ₹5 ಖರ್ಚು ಮಾಡುವ ಪರಿಸ್ಥಿತಿ ಇದೆ. ಇದುವರೆಗೂ ನಮ್ಮ ಮೆಟ್ರೋ ಯೋಜನೆಯಲ್ಲಿ ಅನುಮೋದನೆಗೊಂಡ ಯೋಜನೆ ವೆಚ್ಚ ₹77,891 ಕೋಟಿ. ಅದರಲ್ಲಿ ಕೇಂದ್ರ ಸರ್ಕಾರದ ಪಾಲು ಕೇವಲ ₹12,600 ಕೋಟಿ (16.2%) ಮಾತ್ರ. ಆದರೆ ಕರ್ನಾಟಕ ಸರ್ಕಾರದ ಪಾಲು ಬರೋಬ್ಬರಿ ₹65,291 ಕೋಟಿ (83.8%). ಇಷ್ಟಾದರೂ ಪ್ರಚಾರ ಮಾತ್ರ ಕೇಂದ್ರ ಸರ್ಕಾರ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.