ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಮತ್ತು ಗ್ಯಾರಂಟಿ ಯೋಜನೆಗಳ ವೈಫಲ್ಯವನ್ನು ಖಂಡಿಸಿ ಬಿಜೆಪಿ ತೀವ್ರ ಹೋರಾಟ ನಡೆಸುತ್ತಿದೆ. ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಡಜನರ ಮೇಲೆ ತೆರಿಗೆ ಹೊರೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು (ನ.11): ರಾಜ್ಯದಲ್ಲಿ ಗಾಳಿಯೊಂದು ಬಿಟ್ಟರೆ ಎಲ್ಲದರ ಬೆಲೆ ಹೆಚ್ಚಾಗಿದೆ. ಇದರಿಂದ ರಾಜ್ಯಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚುತ್ತಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸಿ ನಾವು ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಬೆಲೆ ಏರಿಕೆ ವಿರೋಧಿಸಿ ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿದೆ. ಇವತ್ತು ರಾಜ್ಯದಲ್ಲಿ ಎಲ್ಲದರ ಬೆಲೆ ಏರಿಕೆಯಾಗಿದೆ, ಯಾವುದನ್ನೂ ಬಿಡದೆ ಎಲ್ಲವನ್ನೂ ಹೆಚ್ಚಿಸಿದ್ದಾರೆ. ಬೆಲೆ ಏರಿಕೆ ಮಾಡಿ ಬಡಜನರ ಮೇಲೆ ಹೊರೆ ಹಾಕಿದ್ದಾರೆ. ಇನ್ನು ಒಂದು ವರ್ಷ ಎಷ್ಟು ಸಾಧ್ಯವೋ ಅಷ್ಟು ಜನರ ಮೇಲೆ ತೆರಿಗೆ ಹೊರೆ ಹಾಕಿ ಕಳೆಯಬೇಕು ಅಂತಾ ಸರ್ಕಾರ ಮುಂದಾಗಿದೆ. ಮೊದಲು 'ಎಲ್ಲಿಗೂ ಹೋದ್ರೂ ಬಸ್ ಫ್ರೀ' ಅಂದ್ರು ಈಗ ಎಲ್ಲದಕ್ಕೂ ಕತ್ತರಿ ಹಾಕ್ತಿದ್ದಾರೆ. ಹತ್ತು ಕೆಜಿ ಅಕ್ಕಿ ಫ್ರೀ ಅಂದ್ರು ಇವತ್ತು ಜನರಿಗೆ ಕೊಡ್ತಿರೋದು ಪ್ರಧಾನಿ ಮೋದಿ ಅವರು ಕೊಟ್ಟಿರುವ 5ಕೆಜಿ ಅಕ್ಕಿ. ಈ ಸರ್ಕಾರ ಮೊದಲು ಹೇಳಿದಂತೆ ಹತ್ತು ಕೆಜಿ ಕೊಡದೆ ಜನರಿಗೆ ಮೋಸ ಮಾಡಿದೆ, ಒಂದು ಬೊಗಸೆ ಅಕ್ಕಿನೂ ಕೊಡ್ತಿಲ್ಲ. ಕೊಡ್ತಿರೋದು ಈಗ ಪ್ರಧಾನಿ ಮೋದಿ ಕೊಟ್ಟಿರುವ ಅಕ್ಕಿ. ಯುವಕರಿಗೆ ಏನೋ ದೊಡ್ಡ ಯೋಜನೆ ತಂದರು ಅನ್ನೋ ರೀತಿ ಚುನಾವಣೆ ಟೈಂನಲ್ಲಿ ಬಿಲ್ಡಪ್ ತಗೊಂಡು ಯುವನಿಧಿ ಯೋಜನೆ ಮಾಡಿದ್ರು. ಅದು ಯಾರಿಗೆ ತಲುಪಿದೆ? ಅದು ಜಾರಿ ಆಯ್ತೋ ಇಲ್ವೋ ಯಾರಿಗೂ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಂದ್ರೆ ಬರಿ ಬುಟ್ಟಿ ಬೇವಿನ ಸೊಪ್ಪು

ಗೃಹಲಕ್ಷ್ಮಿ ಹೆಸರಲ್ಲಿ ನಾಡಿನ ತಾಯಂದಿರನ್ನು ಭಿಕ್ಷುರನ್ನಾಗಿ ಮಾಡಿದ್ರು. ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯೊಡತಿಗೆ ಎರಡು ಸಾವಿರ ಅಂದ್ರು. ಇವತ್ತು ಯಾರಿಗೂ ಹಣ ಸಿಗ್ತಿಲ್ಲ. ಕೇಳಿದ್ರೆ ಸರ್ಕಾರದಲ್ಲಿ ಹಣ ಇಲ್ಲ ಅನ್ನುತ್ತಾರೆ. ಗ್ಯಾರಂಟಿ ಹೆಸರಲ್ಲಿ ಜನರನ್ನು ನಂಬಿಸಿ, ಚುನಾವಣೆಯಲ್ಲಿ ವೋಟು ಹಾಕಿಸಿಕೊಂಡು ಈಗ ಕಾಂಗ್ರೆಸ್ ಜನರಿಗೆ ಮೋಸ ಮಾಡುತ್ತಿದೆ ಅಷ್ಟೇ ಅಲ್ಲದೆ ಎಲ್ಲ ವಸ್ತುಗಳ ದರ ಹೆಚ್ಚಿಸಿ ಬಡಜನರ ಕಿಸೆಗೆ ಕೈಹಾಕಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ ಸರ್ಕಾರ, ಬರೀ ವೋಟ್ ಚೋರಿ ಅನ್ನುತ್ತಾರೆ. ಆದ್ರೆ ಇವಾಗ ಮಾಡ್ತಿರೋದೇನು? ಗ್ಯಾರಂಟಿ ಹೆಸರಲ್ಲಿ ಚೋರಿ ಮಾಡುತ್ತಿದ್ದೀರಿ. ಬರೀ ವೋಟ್ ಚೋರಿ ಅನ್ನುತ್ತಿದ್ದೀರಿ ಕಾಂಗ್ರೆಸ್ ಇವಾಗ ಗ್ಯಾರಂಟಿ ಚೋರಿ ಮಾಡುತ್ತಿದ್ದೀರಿ. ಕಾಂಗ್ರೆಸ್ ಅಂದ್ರೆ ಬರೀ ಬುಟ್ಟಿನ ಸೊಪ್ಪು ಇದ್ದಹಾಗೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಜನರ ಬಳಿ ವೋಟ್ ಕೇಳೋಕೆ ಹೋಗ್ಲಿ ಬಹಳ ಕಷ್ಟ ಇದೆ. ಕಾಂಗ್ರೆಸ್ ಸರ್ಕಾರದ ಮೋಸದಾಟಕ್ಕೆ ರಾಜ್ಯದ ಜನರು ರೋಸಿಹೋಗಿದ್ದಾರೆ. ಈ ಸರ್ಕಾರದ ವಿರುದ್ಧ ದಿನೇದಿನೆ ಜನಾಕ್ರೋಶ ಹೆಚ್ಚಾಗುತ್ತಿದೆ. ಇಡೀ ರಾಜ್ಯ ಬರಗಾಲ ಬಂದು ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಪರಿಹಾರ ಕೊಡೋಕೆ ಸರ್ಕಾರಕ್ಕೆ ಆಗುತ್ತಿಲ್ಲ. ಲಕ್ಷಾಂತರ ರೂಪಾಯಿ ಸಾಲ ಮಾಡಿ ರೈತರು ಕೃಷಿ ಮಾಡಿರುತ್ತಾರೆ. ಅಂತ ರೈತರಿಗೆ ಬರಪರಿಹಾರ ಅಂತಾ ಇವರು ಕೊಡೋ 2500 ಭಿಕ್ಷೆ ನೀಡಿದಾಗ, ಈ ಹಣಕ್ಕೆ ತಿಂಗಳಾನುಗಟ್ಟಲೇ ಅಲೆದಾಡಬೇಕಾ? ಕೊಡೋಕೂ ಆಗುತ್ತಿಲ್ಲ. ಅಷ್ಟು ಹಣನೂ ಸರಿಯಾಗಿಲ್ಲ ಹಾಕಿಲ್ಲ. ಒಬ್ಬರಿಗೂ 300, ಇನ್ನೊಬ್ಬರಿಗೆ 400-700-2000 ರೂಪಾಯಿ ಹಾಕ್ತಿರೋ ಈ ಸರ್ಕಾರಕ್ಕೆ ಜನರು ರೈತರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಪುಲ್ವಾಮದಲ್ಲಿ ಬ್ಲಾಸ್ ಆದಾಗ ಬಾರದ ಕಣ್ಣೀರು ಬಾಬ್ರಿ ಮಸೀದಿ ಕೆಡವಿದಾಗ ಬಂತು!

ಇನ್ನು ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ನಲ್ಲಿ 'ಬಾಬರಿ ಮಸೀದಿ ಉರುಳಿಸಿದಾಗ ಕಣ್ಣೀರು ಬಂದಿತ್ತು' ಎಂಬ ಸೋನಿಯಾ ಹೇಳಿಕೆಯೊಂದು ಇದೀಗ ರಾಜಕೀಯವಾಗಿ ಬಿರುಗಾಳಿ ಎಬ್ಬಿಸಿದೆ. ಈ ಹೇಳಿಕೆ ಉಲ್ಲೇಖಿಸಿದ ಛಲವಾದಿ ನಾರಾಯಣಸ್ವಾಮಿ ಅವರು, ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಸೈನಿಕರು ಹುತಾತ್ಮಕರಾದಾಗ ಕಣ್ಣೀರು ಹಾಕದ ಸೋನಿಯಾ ಗಾಂಧಿ ಬಾಬರಿ ಮಸೀದಿ ಕೆಡವಿದಾಗ ಕಣ್ಣೀರು ಬಂತಂತೆ. ಜಮ್ಮು ಕಾಶ್ಮೀರದಲ್ಲಿ ಜನರಿಗೆ ಗುಂಡಿಕ್ಕಿ ಕೊಂದಾಗ ಸೋನಿಯಾಗೆ ಕಣ್ಣೀರು ಬರಲಿಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗ ಅನೇಕ ದಾಳಿಗಳಾದವು, ನೂರಾರು ಜನ ಭಯೋತ್ಪಾದಕರ ದಾಳಿ ಸತ್ತರು, ಅನೇಕ ಹ ತ್ಯೆಗಳಾದವು ಆಗ ಕಣ್ಣೀರು ಬರಲಿಲ್ಲ. ಆದ್ರೆ ಬಾಬ್ರಿ ಮಸೀದಿ ಬಿದ್ದಾಗ ಕಣ್ಣೀರು ಬಂತು. ಸೋನಿಯಾಗೆ ನಿಜವಾಗಿಯೂ ಕಣ್ಣೀರು ಬಂದಿದ್ದು ಯಾವಾಗ ಅಂದ್ರೆ ಅಬ್ದುಲ್ ಕಲಾಂ ಅವರು ಸೋನಿಯಾ ಗಾಂಧಿ ಪ್ರಧಾನಿ ಆಗಲು ಸಾಧ್ಯವಿಲ್ಲ ಅಂದಾಗ ಅವರಿಗೆ ನಿಜವಾಗಲೂ ಕಣ್ಣೀರು ಬಂದಿದೆ ಎಂದು ತಿರುಗೇಟು ನೀಡಿದರು.

ಈ ದೇಶದಲ್ಲಿ ಕಾಂಗ್ರೆಸ್‌ನವರನ್ನು ಹದ್ದುಬಸ್ತಿನಲ್ಲಿಡಬೇಕು

ಬಿಜೆಪಿ ಈಗ ಮತ್ತಷ್ಟು ಗಟ್ಟಿಯಾಗಿದೆ. ಇಂಡಿಯಾ ಬ್ಲಾಕ್ ಮಾಡಿಕೊಂಡು ಮೋದಿ ಅವರ ಕೈಕಟ್ಟಿಹಾಕಲು ಹೊರಟ್ರೆ ಅದು ಸಾಧ್ಯವಿಲ್ಲದ ಮಾತು. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಎನ್‌ಡಿಎ ಅಧಿಕಾರಕ್ಕೆ ಬರಲಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಅವರನ್ನು ಹದ್ದುಬಸ್ತಿನಲ್ಲಿಡಬೇಕಿದೆ ಎಂದರು.