ಮಡಿಕೇರಿಯ ಯುವಕ ಯೋಗೀಶ್ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ ಬಳಿಕ, ಪೋಷಕರು ಆತನ ಅಂಗಾಂಗ ದಾನ ಮಾಡಿದರು. ಜೀರೋ ಟ್ರಾಫಿಕ್ ಮೂಲಕ ಯಕೃತ್ತನ್ನು ಮೈಸೂರಿಗೆ ರವಾನಿಸಿ ವ್ಯಕ್ತಿಯೊಬ್ಬರ ಜೀವ ಉಳಿಸಲಾಯಿತು. ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕನಿಗೆ ಸಾರ್ವಜನಿಕರು ಗೌರವ ಸಲ್ಲಿಸಿದರು.
ಕೊಡಗು (ನ.11): ಮಹಾದಾನಗಳಲ್ಲಿ ರಕ್ತದಾನದಂತೆ ಮೃತಪಟ್ಟ ಬಳಿಕ ಮಾಡುವ ದೇಹದ ಅಂಗಾಂಗ ದಾನವೂ ಒಂದು. ತಾನು ಮೃತಪಟ್ಟರು ಯುವಕನೋರ್ವ ಮತ್ತಿಬ್ಬರಿಗೆ ಜೀವ ನೀಡುವ ಮೂಲಕ ಸಾವಿನಲ್ಲೂ ಸಾರ್ಥಕ ಮರೆದ ಘಟನೆ ಕೊಡಗು ಜಿಲ್ಲೆಯಲ್ಲಿ ಮನಕಲುಕುವ ಘಟನೆ ನಡೆಯಿತು.
ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ ಯೋಗೀಶ್
ಮಡಿಕೇರಿಯ ಚಾಮುಂಡೇಶ್ವರಿನಗರದ ನಿವಾಸಿ ನಿರ್ಮಲಾ ಎಂಬುವವರ ಪುತ್ರನಾಗಿದ್ದ ಯೋಗೀಶ್ಗೆ ಮಿದುಳಿನಲ್ಲಿ ರಕ್ತಸ್ರಾವ ಆಗಿತ್ತು. ಕೂಡಲೇ ಯೋಗೀಶ್ ಅವರನ್ನು ಕೊಡಗು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟೊತ್ತಿಗಾಗಲೇ ಯುವಕನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದರು. ಹೀಗಾಗಿ ಕೊಡಗು ಜಿಲ್ಲಾಸ್ಪತ್ರೆಯಲ್ಲೇ ಪೋಷಕರು ಮಗನ ಅಂಗಾಂಗ ದಾನ ಮಾಡಲು ಮುಂದಾದರು.
ಜೀರೋ ಟ್ರಾಫಿಕ್ನಲ್ಲಿ ಅಪೊಲೋ ತಲುಪಿದ ಲಿವರ್
ಪೋಷಕರು ಒಪ್ಪಿಗೆ ಸೂಚಿಸಿದ ಬಳಿಕ ಯುವಕ ಯೋಗೀಶ್ ಅವರ ಲಿವರ್, ಕಾರ್ನಿಯಾ ದಾನ ಮಾಡಿದರು. ತಕ್ಷಣ ಆರೋಗ್ಯ ಇಲಾಖೆ ಸಿಬ್ಬಂದಿ ಪೊಲೀಸ್ ಎಸ್ಕಾರ್ಟ್ನೊಂದಿಗೆ ಜೀರೋ ಟ್ರಾಫಿಕ್ನಲ್ಲಿ ನಲ್ಲಿ ಮೈಸೂರಿನ ಅಪೊಲೋ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವ್ಯಕ್ತಿಯೊಬ್ಬರಿಗೆ ಲಿವರ್ ಕಸಿ ಮಾಡಿ ಜೀವ ಉಳಿಸಿದರು.
ಸಾವಿನಲ್ಲೂ ಸಾರ್ಥಕ ಮರೆದ ಮೃತ ಯೋಗೀಶ್ಗೆ ಕಣ್ಣೀರ ವಿದಾಯ
ಇತ್ತ ಅಗಲಿದ ಯುವಕ ಯೋಗೀಶ್ಗಾಗಿ ನೂರಾರು ಜನರು ಅಶ್ರುತರ್ಪಣ ಸಲ್ಲಿಸಿದರು. ಈ ವೇಳೆ ವೈದ್ಯರು ನರ್ಸ್, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಕೂಡ ಯುವಕನ ಪಾರ್ಥೀವ್ ಶರೀರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ವಿದಾಯ ಹೇಳಿದರು. ಈ ಕ್ಷಣ ಇಡೀ ಆಸ್ಪತ್ರೆಯ ಎಲ್ಲೆಡೆ ಎದ್ದು ನಿಂತು ಪುಷ್ಪಾರ್ಚನೆ ಮಾಡಿದ ದೃಶ್ಯ ಮನಕಲುಕುವಂತಿತ್ತು. ತನ್ನ ಅಂಗಾಂಗ ದಾನ ಮಾಡಿ ಮತ್ತಿಬ್ಬರ ಜೀವ ಉಳಿಸಿದ ಯುವಕನಿಗೆ ಗೌರವ ನಮನ ಸಲ್ಲಿಸಿದರು.














