- Home
- News
- State
- Karnataka Latest News Live: ಮೀನಿನ ಬಾಕ್ಸ್ಗಳ ಮಧ್ಯೆ ಸಾಗಿಸ್ತಿದ್ದ 35 ಲಕ್ಷ ರು.ಗೋವಾ ಮದ್ಯ ವಶಕ್ಕೆ
LIVE NOW
Karnataka Latest News Live: ಮೀನಿನ ಬಾಕ್ಸ್ಗಳ ಮಧ್ಯೆ ಸಾಗಿಸ್ತಿದ್ದ 35 ಲಕ್ಷ ರು.ಗೋವಾ ಮದ್ಯ ವಶಕ್ಕೆ

ಸಾರಾಂಶ
ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರ ಮಾರ್ಗವಾಗಿ ಕರ್ನಾಟಕಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 35 ಲಕ್ಷ ರು.ಮೌಲ್ಯದ ಗೋವಾ ಮದ್ಯವನ್ನು ಬಾಚಿ ಗ್ರಾಮದ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮೀನು ಸಾಗಿಸುವ ಇನ್ಸುಲೇಟೆಡ್ ಕಂಟೇನರ್ನಲ್ಲಿ ಮದ್ಯದ ಬಾಕ್ಸ್ಗಳನ್ನು ಅಡಗಿಸಿಟ್ಟು ಮದ್ಯವನ್ನು ಸಾಗಿಸಲಾಗುತ್ತಿತ್ತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮದ್ಯದ ಜತೆಗೆ 20 ಲಕ್ಷ ರು.ಮೌಲ್ಯದ ವಾಹನವನ್ನು ಜಪ್ತಿ ಮಾಡಲಾಗಿದ್ದು, ಚಾಲಕ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಗೋವಾದಿಂದ ಖಾನಾಪುರ ತಾಲೂಕಿನ ಕಣಕುಂಬಿ ಮಾರ್ಗವಾಗಿ ರಾಜ್ಯಕ್ಕೆ ಮದ್ಯ ಸಾಗಿಸಲಾಗುತ್ತಿತ್ತು. ಈ ಮಾರ್ಗದಲ್ಲಿ ಚೆಕ್ಪೋಸ್ಟ್ ಸ್ಥಾಪಿಸಿದ ಬಳಿಕ ಕಳ್ಳಸಾಗಣೆದಾರರು ಮಹಾರಾಷ್ಟ್ರದ ಬಾಚಿ ಮಾರ್ಗವನ್ನು ಬಳಸಲು ಆರಂಭಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪನಿರೀಕ್ಷಕ ಸುನೀಲ ಪಾಟೀಲ ನೇತೃತ್ವದ ತಂಡ ಸಂಶಯಾಸ್ಪದ ವಾಹನ ತಡೆದು ಪರಿಶೀಲಿಸಿದಾಗ ಮೀನು ಮತ್ತು ಐಸ್ ಗಡ್ಡೆಗಳಿದ್ದ ಟ್ರೇಗಳ ಹಿಂದೆ 350 ಬಾಕ್ಸ್ ಮದ್ಯ ಪತ್ತೆಯಾಗಿವೆ.