ಸೋನಿಯಾಗಾಂಧಿ ಅವರ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಆತ್ಮಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಲು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಮನವಿ ಮಾಡಿದ್ದಾರೆ. ಕನ್ನಡಿಗರಿಗೆ ಮಾತೃಭಾಷೆಯಲ್ಲೇ ಈ ಕೃತಿಯನ್ನು ತಲುಪಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮೈಸೂರು (ನ.19): ರಾಷ್ಟ್ರೀಯ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿಯನ್ನು ಅವರ ಅನುಮತಿ ಪಡೆದು, ತಕ್ಷಣವೇ ಕನ್ನಡಕ್ಕೆ ಅನುವಾದಿಸಲು ಮುಂದಾಗಬೇಕೆಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: BK Hariprasad: ಪಂಚಾಯ್ತಿ ಸ್ಥಾನವನ್ನೂ ಬಿಟ್ಟುಕೊಡದ ಕಾಲದಲ್ಲಿ ಪ್ರಧಾನಿ ಹುದ್ದೆ ತ್ಯಾಗ ಮಾಡಿದ ಮಹಾನ್ ನಾಯಕಿ ಸೋನಿಯಾ ಗಾಂಧಿ:
ಕನ್ನಡಿಗರಿಗೆ ಮಾತೃಭಾಷೆಯಲ್ಲೇ ಓದಲು ಸಿಗಬೇಕು
ಸೋನಿಯಾ ಅವರ ಕೃತಿಯು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಸೋನಿಯಾ ಅವರು ಇಂಗ್ಲೀಷ್ನಲ್ಲಿ ತಮ್ಮ ಆತ್ಮಕತೆಯನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಇದನ್ನು ಕರ್ನಾಟಕ ರಾಜ್ಯದ ಜನತೆಗೆ ಅವರ ಮೂಲಭಾಷೆಯಾಗಿರುವ ಕನ್ನಡದಲ್ಲಿ ತಲುಪಿಸಬೇಕಾದ ಜವಾಬ್ದಾರಿಯನ್ನು ಪ್ರದೇಶ ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರ ವಹಿಸಿಕೊಳ್ಳಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: Belonging: A Journey Of Love: ಐದನೇ ಸಾಲಿಗೆ ಕುಳಿತಿದ್ದ ಅಸಲಿ ಕಾರಣ ಬಿಚ್ಚಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ!
ಅವರು ಈ ಕೃತಿಯಲ್ಲಿ ತಮ್ಮ ಭಾನಾತ್ಮಕ ಪ್ರೇಮಯಾನ, ಕೌಟುಂಬಿಕ ಜೀವನ, ಸಾರ್ವಜನಿಕ ಜೀವನ, ಜನಪರ ನಿಲುವುಗಳನ್ನು ತಳೆಯಲು ಪ್ರೇರೇಪಣೆ ನೀಡಿದ್ದು, ಮುಂತಾದ ಅಂಶಗಳನ್ನು ಮನಮುಟ್ಟುವಂತೆ ವಿವರಿಸಿದ್ದಾರೆ.














