ನನಗೆಷ್ಟು ವಯಸ್ಸಾಯ್ತು? ಎಂದು ಪ್ರಶ್ನಿಸಿದ ಸಿದ್ದಗಂಗಾ ಶ್ರೀಗಳು

ರಾಜ್ಯದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದು ಬೆಳಗ್ಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ,  ಹಿರಿಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯ ವಿಚಾರಿಸಿದ್ದಾರೆ.

Share this Video
  • FB
  • Linkdin
  • Whatsapp

ರಾಜ್ಯದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದು ಬೆಳಗ್ಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಹಿರಿಯಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯ ವಿಚಾರಿಸಿದ್ದಾರೆ.

ತಮ್ಮ ಭೇಟಿ ಬಗ್ಗೆ ತಿಳಿಸಿದ ಡಾ. ಜಿ. ಪರಮೇಶ್ವರ್ 'ಶ್ರೀ ಶಿವಕುಮಾರ ಸ್ವಾಮಿಗಳು ಚೆನ್ನಾಗಿದ್ದೀರಾ? ಅಂತಾ ಕೇಳಿದ್ದಾರೆ. ಅಲ್ಲದೇ ಅವರ ಬಳಿ ನಿಂತಿದ್ದ ಕಿರಿಯ ಶ್ರೀಗಳ ಬಳಿ‘ತಮಗೆ‌ ಎಷ್ಟು ವಯಸ್ಸಾಯ್ತು? ಎಂದು ಕೇಳಿದ್ದಾರೆ. ಅದಕ್ಕೆ ಕಿರಿಯ ಶ್ರೀಗಳು‌ 111 ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ ಶ್ರೀಗಳು ‘ಬಹಳಾ ಆಯ್ತು.. ಬಹಳ ಆಯ್ತು!’ ಎಂದು ಲವಲವಿಕೆಯಿಂದ ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ.

Related Video