ತೇಜಸ್ವಿನಿಗೆ ಟಿಕೆಟ್ ತಪ್ಪಿಸಲು BJP ಮುಖಂಡ ಕಸರತ್ತು

ತೇಜಸ್ವಿನಿ ಅನಂತ್‌ಕುಮಾರ್ ಅವರು ಹಲವಾರು ಸಾಮಾಜಿಕ ಕಾರ್ಯಗಳ ಮೂಲಕವೇ ಗುರುತಿಸಿಕೊಂಡವರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿ ಎಂಬುವುದು ಬಿ.ಎಸ್.ಯಡಿಯೂರಪ್ಪ ಹಾಗೂ ಆರ್‌ಎಸ್‌ಎಸ್ ನಾಯಕರು ಒಪ್ಪಿಕೊಂಡಿದ್ದು, ಅವರಿಗೆ ಟಿಕೆಟ್ ನೀಡಲು ಅಸ್ತು ಎಂದಿದ್ದಾರೆ. ಆದರೆ, ಇದಕ್ಕೂ ಕೊಕ್ಕೆ ಇಡುತ್ತಿದ್ದಾರೆ ಈ ಬಿಜೆಪಿ ಮುಖಂಡರು.

Share this Video
  • FB
  • Linkdin
  • Whatsapp

'ಅದಮ್ಯ ಚೇತನ' ಎಂಬ ಸಂಸ್ಥೆಯ ಮೂಲಕ ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ದಿ.ಅನಂತ್‌ಕುಮಾರ್ ಪತ್ನಿ ತೇಜಸ್ವಿನಿಯವರು. ಬೆಂಬಲಿಗರ ಒತ್ತಡಕ್ಕೆ ಮಣಿದು ಅವರೀಗ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭಾ ಚುನಾವಣಾ ಕಣಕ್ಕಿಳಿಯಲು ಮನಸ್ಸು ಮಾಡಿದ್ದಾರೆ. ಆದರೆ, ಸೂತಕದ ಮನೆಯಲ್ಲಿಯೂ ಬಿಜೆಪಿಯ ಕೆಲವು ಮುಖಂಡರು ಷಡ್ಯಂತ್ರ ನಡೆಸುತ್ತಿದ್ದು, ಅವರಿಗೆ ಟಿಕೆಟ್ ತಪ್ಪಿಸಲು ಯತ್ನಿಸುತ್ತಿದ್ದಾರೆ. ಇಲ್ಲಿದೆ ಇಬ್ಬರು ಪ್ರಭಾವಿಗಳ ಮಹಾ EXCLUSIVE ಸುದ್ದಿ.

Related Video