11:22 PM (IST) Nov 28

Karnataka News Live 28th November:ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಗೆ ಸಹಕಾರಿ ಈ ಹೆಲ್ತಿ ಜ್ಯೂಸ್, ಇಲ್ಲಿದೆ ರೆಸಿಪಿ

ABC juice recipe Kannada: ಕ್ಯಾರೆಟ್‌ನಲ್ಲಿರುವ ಬೀಟಾ-ಕ್ಯಾರೋಟಿನ್ ಮತ್ತು ಇತರ ಜೈವಿಕ ಸಂಯುಕ್ತಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ಜರ್ನಲ್ ಆಫ್ ಫಂಕ್ಷನಲ್ ಫುಡ್ಸ್ ಹೇಳುತ್ತದೆ.

Read Full Story
09:01 PM (IST) Nov 28

Karnataka News Live 28th November:ಶಾಹೀನಾ ನನ್ನ ಪತ್ನಿ ಮಸೀದಿಯಲ್ಲಿ ನಿಖಾ ನಡೆದಿದೆ - ದೆಹಲಿ ಸ್ಪೋಟದ ಆರೋಪಿ ಮುಜಾಮಿಲ್ ಮದ್ವೆ ರಹಸ್ಯ

Delhi blast accused Muzammil wife: ದೆಹಲಿ ಸ್ಫೋಟ ಪ್ರಕರಣದ ಆರೋಪಿ ಮುಜಾಮಿಲ್, ತನ್ನ ಸಹಚಾರಿ ಶಾಹೀನಾ ಸೈಯದ್ ನನ್ನ ಪತ್ನಿ, ಗರ್ಲ್‌ಫ್ರೆಂಡ್ ಅಲ್ಲ, ಮಸೀದಿಯಲ್ಲಿ ನಾವಿಬ್ಬರು ಮದ್ವೆಯಾಗಿದ್ದೇವೆ ಎಂದು ಹೇಳಿಕೊಂಡಿದ್ದಾನೆ.

Read Full Story
08:46 PM (IST) Nov 28

Karnataka News Live 28th November:ಥಾಯ್ಲೆಂಡ್ ಜಲಸಮಾಧಿ - ನಿಲ್ಲದ ಸಾವಿನ ಸರಣಿ, ರಣ ಭೀಕರ ಪ್ರವಾಹಕ್ಕೆ 145 ಮಂದಿ ಬಲಿ! ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ!

ಥಾಯ್ಲೆಂಡ್‌ನ ದಕ್ಷಿಣ ಭಾಗದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ 145 ಮಂದಿ ಬಲಿಯಾಗಿದ್ದು, 12 ಪ್ರಾಂತ್ಯಗಳಲ್ಲಿ ಸುಮಾರು 36 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಹವಾಮಾನ ಇಲಾಖೆ ಮತ್ತೊಂದು ಚಂಡಮಾರುತದ ಎಚ್ಚರಿಕೆ ನೀಡಿದೆ.

Read Full Story
08:35 PM (IST) Nov 28

Karnataka News Live 28th November:ಅಧಿಕಾರ ಬದಲಾವಣೆಯಲ್ಲಿ ಬಿಗ್ ಟ್ವಿಸ್ಟ್, ನಾಳೆ ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಡಿಕೆಶಿ ಬ್ರೇಕ್‌ಫಾಸ್ಟ್ ಮೀಟಿಂಗ್

ಅಧಿಕಾರ ಬದಲಾವಣೆಯಲ್ಲಿ ಬಿಗ್ ಟ್ವಿಸ್ಟ್, ನಾಳೆ ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಡಿಕೆಶಿ ಬ್ರೇಕ್‌ಫಾಸ್ಟ್ ಮೀಟಿಂಗ್, ರಾಜ್ಯ ರಾಜಕಾರಣ ಕ್ಷಣಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದೆ. ದೆಹಲಿ ತೆರಳಬೇಕಿದ್ದ ಡಿಕೆ ಶಿವಕುಮಾರ್ , ನಾಳೆ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Read Full Story
08:15 PM (IST) Nov 28

Karnataka News Live 28th November:ರೈತರಿಗೆ ಗುಡ್‌ನ್ಯೂಸ್ - KMF ಮೂಲಕ 50,000 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ, ನೋಂದಣಿ ಹೇಗೆ? ಎಲ್ಲೆಲ್ಲಿ ಖರೀದಿ ಕೇಂದ್ರ? ಇಲ್ಲಿದೆ ವಿವರ

ಬೆಲೆ ಇಳಿಕೆಯಿಂದ ಸಂಕಷ್ಟದಲ್ಲಿರುವ ಮೆಕ್ಕೆಜೋಳ ರೈತರಿಗೆ ನೆರವಾಗಲು ರಾಜ್ಯ ಸರ್ಕಾರವು ಮುಂದಾಗಿದೆ. ಕೆಎಂಎಫ್ ಮೂಲಕ 50,000 ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಪ್ರತಿ ಟನ್‌ಗೆ ₹2,400 ದರದಲ್ಲಿ ನೇರವಾಗಿ ರೈತರಿಂದ ಖರೀದಿಸಲು ನಿರ್ಧರಿಸಿದೆ. ರೈತರು ಎಲ್ಲಿ, ಹೇಗೆ ಮಾರಾಟ ಮಾಡಬೇಕು ಇಲ್ಲಿದೆ ವಿವರ.

Read Full Story
08:14 PM (IST) Nov 28

Karnataka News Live 28th November:ಶ್ರೀಲಂಕಾ ನಲುಗಿಸಿದ ದಿತ್ವಾ, 56 ಮಂದಿ ಬಲಿ! ಭಾರತದ 2 ರಾಜ್ಯಗಳಿಗೆ ಚಂಡಮಾರುತ ಅಪ್ಪಳಿಸೋ ಸೂಚನೆ!

 ದಿತ್ವಾ ಚಂಡಮಾರುತವು ಶ್ರೀಲಂಕಾದಲ್ಲಿ ಭಾರಿ ವಿನಾಶವನ್ನುಂಟುಮಾಡಿದ್ದು, 56ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಭಾರತವು 'ಆಪರೇಶನ್ ಸಾಗರಬಂಧು' ಮೂಲಕ ನೆರವಿಗೆ ಧಾವಿಸಿದ್ದು, ಚಂಡಮಾರುತವು ತಮಿಳುನಾಡಿನತ್ತ ಚಲಿಸುತ್ತಿರುವುದರಿಂದ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Read Full Story
07:58 PM (IST) Nov 28

Karnataka News Live 28th November:ಹಾಂಗ್‌ಕಾಂಗ್ - ಈ ಶತಮಾನದ ಭೀಕರ ಅಗ್ನಿ ದುರಂತಕ್ಕೆ ಬಲಿಯಾದವರ ಸಂಖ್ಯೆ 128ಕ್ಕೆ ಏರಿಕೆ, 280 ಮಂದಿ ನಾಪತ್ತೆ

ಹಾಂಗ್‌ಕಾಂಗ್‌ನ ತೈಪೊ ಜಿಲ್ಲೆಯ ವಸತಿ ಸಂಕೀರ್ಣದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಇದುವರೆಗೆ ಮೃತರಾದವರ ಸಂಖ್ಯೆ 128 ಕ್ಕೆ ಏರಿದೆ. 280ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ಘಟನೆ ಕಳೆದ 77 ವರ್ಷಗಳಲ್ಲಿ ನಗರದಲ್ಲಿ ನಡೆದ ಅತ್ಯಂತ ಭೀಕರ ಅಗ್ನಿ ದುರಂತ ಎನಿಸಿದೆ.

Read Full Story
07:53 PM (IST) Nov 28

Karnataka News Live 28th November:ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಮುಸ್ಲಿಂ ರಾಷ್ಟ , ಪಾಕಿ ಪ್ರಜೆಗಳಿಗೆ ವೀಸಾ ತಿರಸ್ಕರಿಸಿದ ಯುಎಇ

ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಮುಸ್ಲಿಂ ರಾಷ್ಟ ಯುಎಇ, ಪಾಕಿಗಳಿಗೆ ವೀಸಾ ವಿತರಣೆ ಸ್ಥಗಿತ, ರೆಗ್ಯೂಲರ್ ವೀಸಾ ನೀಡುವ ಕಾರ್ಯಕ್ಕೆ ಯುಎಇ ಸರ್ಕಾರ ಬ್ರೇಕ್ ಹಾಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ತೀವ್ರ ಹಿನ್ನಡೆ ಅನುಭವಿಸಿದೆ.

Read Full Story
07:38 PM (IST) Nov 28

Karnataka News Live 28th November:120 ಅಡಿ ಎತ್ತರದ ಸ್ಕೈ ಡೈನಿಂಗ್‌ನಲ್ಲಿ ಸಿಲುಕಿದ ಮಂಗಳೂರು ಪ್ರವಾಸಿಗರು; 2.5 ವರ್ಷದ ಮಗು ಸೇರಿ 6 ಜನರ ರಕ್ಷಣೆ!

ಕೇರಳದ ಮೂನ್ನಾರ್ ಬಳಿ ಸ್ಕೈ ಡೈನಿಂಗ್ ವೇಳೆ ಕ್ರೇನ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ, ಮಂಗಳೂರು ಮೂಲದ ಕುಟುಂಬ ಸೇರಿದಂತೆ ಐವರು 120 ಅಡಿ ಎತ್ತರದಲ್ಲಿ ಸಿಲುಕಿಕೊಂಡಿದ್ದರು. ಸುಮಾರು 3 ಗಂಟೆಗಳ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಎಲ್ಲರನ್ನೂ ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ.

Read Full Story
07:28 PM (IST) Nov 28

Karnataka News Live 28th November:ಯಾರು ಸಿಎಂ ಅನ್ನೋದು ಹೈಕಮಾಂಡ್ ತೀರ್ಮಾನಿಸುತ್ತೆ, ಕಾಮೆಂಟ್ ಮಾಡೋ ಅಧಿಕಾರ ಯಾರಿಗೂ ಇಲ್ಲ - ಯತೀಂದ್ರ

ರಾಜ್ಯದಲ್ಲಿನ ಮುಖ್ಯಮಂತ್ರಿ ಬದಲಾವಣೆ ಚರ್ಚೆಯು ಕೇವಲ ಊಹಾಪೋಹವಾಗಿದ್ದು, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿರುವ ಅವರು, ಹಿಂದುಳಿದ ವರ್ಗಗಳು ರಾಜಕೀಯವಾಗಿ ಶೈಕ್ಷಣಿಕವಾಗಿ ಸಬಲರಾಗುವ ಕರೆ ನೀಡಿದ್ದಾರೆ.

Read Full Story
07:07 PM (IST) Nov 28

Karnataka News Live 28th November:ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡ, ಯಾದಗಿರಿ ಮೂಲದ ವ್ಯಕ್ತಿಯನ್ನು ಪ್ರಿಯಕರನೊಂದಿಗೆ ಬೆಂಗಳೂರಲ್ಲಿ ಕೊಂದ ಪತ್ನಿ!

ಬೆಂಗಳೂರಿನ ಗಂಗೊಂಡಗಳ್ಳಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಯುವಕನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಬಸವರಾಜುನನ್ನು, ಪತ್ನಿ ಶರಣಮ್ಮ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ದೇಹವನ್ನು ಸುಟ್ಟುಹಾಕಿದ್ದಳು. 

Read Full Story
06:49 PM (IST) Nov 28

Karnataka News Live 28th November:ಅರಣ್ಯ ಇಲಾಖೆಗೆ ಸವಾಲಾದ ಕಾಡೆಮ್ಮೆ ಸೆರೆ - ಅರವಳಿಕೆ ಇದ್ದರೆ ಕಾಡೆಮ್ಮೆ ಇಲ್ಲ, ಕಾಡೆಮ್ಮೆ ಇದ್ದರೆ ಅರವಳಿಕೆ ಇರಲಿಲ್ಲ!

ಆನೇಕಲ್ ಬಳಿ ಕಾಣಿಸಿಕೊಂಡ ಕಾಡೆಮ್ಮೆಯನ್ನು ಸೆರೆಹಿಡಿಯುವ ಅರಣ್ಯ ಇಲಾಖೆಯ ಎರಡು ದಿನಗಳ ಕಾರ್ಯಾಚರಣೆ ವಿಫಲವಾಗಿದೆ. ಮೊದಲ ದಿನ ಅರವಳಿಕೆ ಇಲ್ಲದ ಕಾರಣ ಮತ್ತು ಎರಡನೇ ದಿನ ಕಾಡೆಮ್ಮೆಯೇ ಪತ್ತೆಯಾಗದ ಕಾರಣ, ಸಿಬ್ಬಂದಿ ವಿಫಲರಾಗಿದ್ದು, ಸ್ಥಳೀಯರಲ್ಲಿ ಆತಂಕ ಮುಂದುವರೆದಿದೆ.
Read Full Story
06:01 PM (IST) Nov 28

Karnataka News Live 28th November:ದೆವ್ವಗಳು ಊಟ, ನಿದ್ದೆ, ಸ್ನಾನ ಮಾಡುತ್ತವೆಯೇ? ಅಂಬಿಕಾ ಆತ್ಮಕ್ಕೆ ದುರ್ಗಾ ಕೇಳಿದ ಪ್ರಶ್ನೆಗೆ ಇಲ್ಲಿದೆ ಉತ್ತರ!

'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ, ದುರ್ಗಾ ತನ್ನ ಅಕ್ಕ ಅಂಬಿಕಾಳ ಆತ್ಮವನ್ನು ದೆವ್ವವೆಂದು ಭಾವಿಸಿ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾಳೆ. ದೆವ್ವಗಳು ನಿದ್ದೆ, ಸ್ನಾನ, ಊಟ ಮಾಡುತ್ತವೆಯೇ ಮತ್ತು ಅವುಗಳ ಸೌಂದರ್ಯದ ರಹಸ್ಯವೇನು ಎಂದು ದುರ್ಗಾ ಕೇಳಿದಾಗ, ಅಂಬಿಕಾ ಉತ್ತರಿಸಲಾಗದೆ ಪೇಚಾಡುತ್ತಾಳೆ.
Read Full Story
05:43 PM (IST) Nov 28

Karnataka News Live 28th November:ಮುಂಡಗೋಡ - ಬಿಸಿಯೂಟ ಸೇವಿಸಿ 22 ಮಕ್ಕಳು ಅಸ್ವಸ್ಥ; ಆಹಾರದಲ್ಲಿ ಇಲಿ ಹಿಕ್ಕೆ ಪತ್ತೆ!

Mundgod school mid-day meal incident: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸೇವಿಸಿದ 22 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಆಹಾರದಲ್ಲಿ ಇಲಿ ಹಿಕ್ಕೆಗಳು ಪತ್ತೆಯಾಗಿದ್ದು, ಇದು ಮಕ್ಕಳ ಅಸ್ವಸ್ಥತೆಗೆ ಕಾರಣವೆಂದು ಶಂಕಿಸಲಾಗಿದೆ. 

Read Full Story
05:34 PM (IST) Nov 28

Karnataka News Live 28th November:ನಡುರಸ್ತೆಯಲ್ಲಿ ಹುಲಿಯ ದರ್ಬಾರ್ - ಗಂಟೆಗಟ್ಟಲೆ ಸಂಚಾರ ಸ್ಥಗಿತ!

Tiger blocks road: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬಾ ಬಳಿ ಹುಲಿಯೊಂದು ನಡುರಸ್ತೆಯಲ್ಲಿ ಮಲಗಿ ವಿಶ್ರಾಂತಿ ಪಡೆದಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ಅಪರೂಪದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story
05:07 PM (IST) Nov 28

Karnataka News Live 28th November:ನಟ-ನಿರ್ಮಾಪಕ ಕಡ್ಡಿಪುಡಿ ಚಂದ್ರು ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ - ಲವ್ ಬರ್ಡ್ಸ್ ನಿರ್ದೇಶಕರಿಗೆ ವಂಚನೆ ಆರೋಪ

ಸ್ಯಾಂಡಲ್‌ವುಡ್ ನಟ-ನಿರ್ಮಾಪಕ ಕಡ್ಡಿಪುಡಿ ಚಂದ್ರು ವಿರುದ್ಧ 'ಲವ್ ಬರ್ಡ್ಸ್' ಚಿತ್ರದ ನಿರ್ದೇಶಕ ಪಿ. ಚಂದ್ರಶೇಖರ್ ನೀಡಿದ ವಂಚನೆ ಮತ್ತು ಬೆದರಿಕೆ ದೂರಿನ ಅನ್ವಯ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಸಂಭಾವನೆ ನೀಡದೆ ವಂಚನೆ ಪ್ರಕರಣದಲ್ಲಿ, ವಿಚಾರಣೆಗೆ ಗೈರಾದ ಕಾರಣ ಈ ಆದೇಶ ಹೊರಬಿದ್ದಿದೆ.

Read Full Story
04:59 PM (IST) Nov 28

Karnataka News Live 28th November:ರಾಯಚೂರು - ಹಾಡುಹಗಲೇ ಪತ್ರಕರ್ತನ ಮನೆಗೆ ಕನ್ನ, ಚಿನ್ನ, ನಗದು ಸೇರಿ ಲಕ್ಷಾಂತರ ರೂ ದೋಚಿದ ಖದೀಮರು

ರಾಯಚೂರು ಜಿಲ್ಲೆಯ ಲಿಂಗಸೂಗೂರಲ್ಲಿ ವರದಿಗಾರಿಕೆಗೆಂದು ಹೊರಗೆ ಹೋಗಿದ್ದ ಪತ್ರಕರ್ತರೊಬ್ಬರ ಮನೆಯ ಬೀಗ ಮುರಿದು ಖದೀಮರು ಕಳ್ಳತನ ಮಾಡಿದ್ದಾರೆ. ಸುಮಾರು 14 ಲಕ್ಷ ರೂ. ನಗದು ಮತ್ತು 95 ಗ್ರಾಂ ಚಿನ್ನಾಭರಣಗಳು ಕಳುವಾಗಿವೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Read Full Story
04:55 PM (IST) Nov 28

Karnataka News Live 28th November:ಡಿಕೆ ಸುರೇಶ್ ದೆಹಲಿ ತಲುಪಿದ ಬೆನ್ನಲ್ಲೇ ಡಿಸಿಎಂ ಡಿಕೆಶಿ ಕೂಡ ಇಂದೇ ದಿಲ್ಲಿ ಪ್ರಯಾಣ, ಏರ್ ಇಂಡಿಯಾ ಟಿಕೆಟ್‌ ಬುಕ್!

ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿಕೆ ಸುರೇಶ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಅಧಿಕಾರ ಹಂಚಿಕೆ ಒಪ್ಪಂದದಂತೆ ಸಿಎಂ ಪಟ್ಟಕ್ಕಾಗಿ ಈ ಭೇಟಿ ನಡೆಯುತ್ತಿದೆ ಎಂಬ ಚರ್ಚೆಗಳ ನಡುವೆಯೇ, ರಾಜ್ಯದ ಯೋಜನೆಗಳ ಬಗ್ಗೆ ಚರ್ಚಿಸಲು ಹೋಗುತ್ತಿರುವುದಾಗಿ ಡಿಕೆಶಿ ಹೇಳಿದ್ದಾರೆ. 

Read Full Story
04:36 PM (IST) Nov 28

Karnataka News Live 28th November:ಡಿಕೆಶಿ ಸಿಎಂ ಆಗಲೆಂದು ಯಡಿಯೂರು ದೇವಸ್ಥಾನದಲ್ಲಿ ಶತ್ರು ಸಂಹಾರ ಹೋಮ, ವಿಶೇಷ ಪೂಜೆ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂಬ ಉದ್ದೇಶದಿಂದ, ಅವರ ಸಂಬಂಧಿ ಹಾಗೂ ಕುಣಿಗಲ್ ಶಾಸಕ ಡಾ. ರಂಗನಾಥ್ ನೇತೃತ್ವದಲ್ಲಿ ತುಮಕೂರಿನ ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಹೋಮ-ಹವನ ನಡೆಸಲಾಯಿತು. ಮೃತ್ಯುಂಜಯ, ಶತ್ರುಸಂಹಾರ ಸೇರಿದಂತೆ ದಶ ಪ್ರಕಾರದ ಹೋಮ ನಡೆದವು.

Read Full Story
04:02 PM (IST) Nov 28

Karnataka News Live 28th November:ಉತ್ತರಕನ್ನಡಕ್ಕೆ ಟಿಬೆಟಿಯನ್ ಧರ್ಮಗುರು ದಲೈಲಾಮಾ ಪ್ರವಾಸ, ಭರದ ಸಿದ್ಧತೆ ಪ್ರವಾಸಿಗರಿಗೆ ನೋ ಎಂಟ್ರಿ!

ಟಿಬೆಟ್‌ ಧರ್ಮಗುರು ದಲೈಲಾಮಾ ಡಿ. 12 ರಂದು 45 ದಿನಗಳ ಪ್ರವಾಸಕ್ಕಾಗಿ ಉತ್ತರ ಕನ್ನಡದ ಮುಂಡಗೋಡಕ್ಕೆ ಆಗಮಿಸುತ್ತಿದ್ದಾರೆ. ಅವರ ಸ್ವಾಗತಕ್ಕೆ ಕಾಲನಿಯು ಶೃಂಗಾರಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

Read Full Story