ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಮುಸ್ಲಿಂ ರಾಷ್ಟ ಯುಎಇ, ಪಾಕಿಗಳಿಗೆ ವೀಸಾ ವಿತರಣೆ ಸ್ಥಗಿತ, ರೆಗ್ಯೂಲರ್ ವೀಸಾ ನೀಡುವ ಕಾರ್ಯಕ್ಕೆ ಯುಎಇ ಸರ್ಕಾರ ಬ್ರೇಕ್ ಹಾಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ತೀವ್ರ ಹಿನ್ನಡೆ ಅನುಭವಿಸಿದೆ.
ಯುಎಇ (ನ.28) ಪಾಕಿಸ್ತಾನ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಲವು ಭಾರಿ ಮುಖಭಂಗಕ್ಕೀಡಾಗಿದೆ. ಪ್ರಮುಖವಾಗಿ ಉಗ್ರರ ಪರ ನಿಲುವು, ಉಗ್ರರ ಪೋಷಣೆ, ಭಾರತದ ಜೊತೆಗಿನ ಗುದ್ದಾಟ ವಿಚಾರದಲ್ಲಿ ಸುಳ್ಳು ಹೇಳಿ ಸಿಕ್ಕಿ ಬಿದ್ದಿದೆ. ಇದೀಗ ಪಾಕಿಸ್ತಾನದಲ್ಲಿ ಸರ್ಟಿಫಿಕೇಟ್, ದಾಖಳೆಗಳೂ ನಕಲಿ ಅನ್ನೋದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಗಜ್ಜಾಹೀರಾಗಿದೆ. ಇಷ್ಟೇ ಅಲ್ಲ ಬಹುತೇಕ ಪಾಕಿಸ್ತಾನಿಯರು ವಿದೇಶಗಳಲ್ಲಿ ಕಳ್ಳತನ ಸೇರಿದಂತೆ ಹಲವು ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಯುಎಇ ದಾಖಲೆ ಸಮೇತ ಹೇಳಿದೆ. ಇದೇ ಕಾರಣದಿಂದ ಪಾಕಿಸ್ತಾನ ಪ್ರಜೆಗಳಿಗೆ ರಗ್ಯೂಲರ್ ವೀಸಾ ನೀಡುವುದನ್ನು ಯುಎಐ ಸ್ಥಗಿತಗೊಳಿಸಿದೆ.
ಪಾಕಿಸ್ತಾನಿಗಳಿಗೆ ವೀಸಾ ತಿರಸ್ಕಾರ
ಯುಎಇ ಸರ್ಕಾರ ಪಾಕಿಸ್ತಾನ ಪ್ರಜೆಗಳಿಗೆ ವೀಸಾ ನಿರಾಕರಣೆ ಕುರಿತು ಹಲವು ದಾಖಲೆ ನೀಡಿದೆ. ಪ್ರಮುಖವಾಗಿ ಪಾಕಿಸ್ತಾನಿ ಪ್ರಜೆಗಳ ವಿದ್ಯಾಭ್ಯಾಸ ದಾಖಲೆಗಳು ಬಹುತೇಕ ನಕಲಿಯಾಗಿದೆ. ಇತರ ದಾಖಲೆ ಪತ್ರಗಳು ನಕಲಿಯಾಗಿದೆ. ಪಾಕಿಸ್ತಾನಿ ಪ್ರಜೆಗಳು ಯುಎಇನಲ್ಲಿ ಹಲವು ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ದೇಶದ ಸುರಕ್ಷತೆ ಹಾಗೂ ನಿಯಮ ಪಾಲನೆಯಲ್ಲಿ ಯಾವುದೇ ರಾಜೀ ಇಲ್ಲ. ಹೀಗಾಗಿ ಪಾಕಿಸ್ತಾನಿ ಪ್ರಜೆಗಳಿಗೆ ನೀಡುತ್ತಿದ್ದ ರೆಗ್ಯೂಲರ್ ವೀಸಾ ಸ್ಥಗಿತಗೊಳಿಸಲಾಗಿದೆ ಎಂದು ಯುಎಐ ಹೇಳಿದೆ.
ಸತ್ಯ ಒಪ್ಪಿಕೊಂಡ ಹಿರಿಯ ಪಾಕಿಸ್ತಾನಿ ಅಧಿಕಾರಿ
ಪಶ್ಚಿಮ ಏಷ್ಯಾ ದೇಶಗಳಿಗೆ ತೆರಳುವ ಪಾಕಿಸ್ತಾನಿಗಳಿಗೆ ವೀಸಾ ನಿರಾಕರಿಸಲಾಗುತ್ತಿದೆ. ಹಲವು ವೀಸಾಗಳು ಕಳೆದ ಹಲವು ತಿಂಗಳಿನಿಂದ ತಿರಸ್ಕಾರಗೊಳ್ಳುತ್ತಿದೆ. ಈ ಪೈಕಿ ನಕಲಿ ದಾಖಲೆ, ಕ್ರಿಮಿನಲ್ ಚಟುವಟಿಕೆ ಸೇರಿದಂತೆ ಹಲವು ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಪಾಕಿಸ್ತಾನದಲ್ಲಿ ಪಾಸ್‌ಪೋರ್ಟ್ ವಿತರಣೆ ನಿಯಮಗಳೇ ಕಠಿಣವಾಗಬೇಕು ಎಂದು ಹಿರಿಯ ಅಧಿಕಾರಿ ಅಭಿಪ್ರಾಯ ಪಟ್ಟಿದ್ದಾರೆ.
ಪಾಕಿಸ್ತಾನಿಗಳಿಗೆ ವೀಸಾ ನಿರಾಕರಣೆ ಕುರಿತು ಯುಎಇನ ಪಾಕಿಸ್ತಾನ ರಾಯಭಾರ ಅಧಿಕಾರಿ ಫೈಸಲ್ ನಿಯಾಝ್ ತಿರ್ಮಿಝಿ ಪ್ರತಿಕ್ರಿಯಿಸಿದ್ದಾರೆ. ಕಳೆದ ಹಲವು ತಿಂಗಳಿನಿಂದ ಬಹುತೇಕ ಪಾಕಿಸ್ತಾನಿಯ ವೀಸಾ ತಿರಸ್ಕಾರಗೊಳ್ಳುತ್ತಿದೆ. ಇದು ಗಂಭೀರ ವಿಚಾರವಾಗಿದೆ. ಇದನ್ನು ಪಾಕಿಸ್ತಾನ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಎಮಿರೈಟ್ಸ್ ಅಧಿಕಾರಿಗಳು ಪಾಕಿಸ್ತಾನ ಶಿಕ್ಷಣ ಸರ್ಟಿಫಿಕೇಟ್ ಕುರಿತು ಪ್ರಶ್ನಿಸಿದ್ದಾರೆ. ಪಾಕಿಸ್ತಾನ ಶಿಕ್ಷಣವೇ ಇದೀಗ ಅನುಮಾನದಿಂದ ನೋಡುವಂತಾಗಿದೆ. ಹಲವು ಪಾಕಿಸ್ತಾನ ಪ್ರಜೆಗಳ ಬಳಿ ಅಸಲಿ ಹಾಗೂ ಕಾನೂನು ಬದ್ಧವಾದ ದಾಖಲೆ ಇದ್ದರೂ ತಿರಸ್ಕೃತಗೊಂಡಿದೆ ಎಂದು ಫೈಜಲ್ ಹೇಳಿದ್ದಾರೆ.


