'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ, ದುರ್ಗಾ ತನ್ನ ಅಕ್ಕ ಅಂಬಿಕಾಳ ಆತ್ಮವನ್ನು ದೆವ್ವವೆಂದು ಭಾವಿಸಿ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾಳೆ. ದೆವ್ವಗಳು ನಿದ್ದೆ, ಸ್ನಾನ, ಊಟ ಮಾಡುತ್ತವೆಯೇ ಮತ್ತು ಅವುಗಳ ಸೌಂದರ್ಯದ ರಹಸ್ಯವೇನು ಎಂದು ದುರ್ಗಾ ಕೇಳಿದಾಗ, ಅಂಬಿಕಾ ಉತ್ತರಿಸಲಾಗದೆ ಪೇಚಾಡುತ್ತಾಳೆ.

ಸಾಮಾನ್ಯವಾಗಿ ದೆವ್ವ ಎಂದಾಕ್ಷಣ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಇನ್ನು ಬಹುತೇಕರಿಗೆ ದೆವ್ವ ಎಂದು ಹೆಸರೇಳಿದರೆ ಸಾಕು ಭಯ ಮತ್ತು ಹಲವು ಕಪೋಲ ಕಲ್ಪಿತ ಕಥೆಗಳು ಹಾಗೂ ಘಟನೆಗಳನ್ನು ಮೆಲುಕು ಹಾಕುತ್ತಾರೆ. ಅದರಲ್ಲಿಯೂ ಒಬ್ಬರೇ ಇರುವಾಗ ದೆವ್ವದ ಆಲೋಚನೆ ಬಂದರೆ ಮಾರನೇ ದಿನ ಜ್ವರ ಬಂದು ಮಲಗೋದೇ ಹೆಚ್ಚು. ಅಂಥದ್ದರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಸತ್ತು ಹಲವು ವರ್ಷಗಳಾದರೂ ಮಗಳನ್ನು ರಕ್ಷಣೆ ಮಾಡಲು ಆತ್ಮವಾಗಿ ಸಂಚಾರ ಮಾಡುತ್ತಿರುವ ಅಂಬಿಕಾ ಹಾಗೂ ಅವರು ತನ್ನ ತಂಗಿ ದುರ್ಗಾಗೆ ಕಾಣಿಸಿಕೊಳ್ಳುವ ಕಥೆ ಬಹಳ ವೀಕ್ಷಕರಿಗೆ ಇಷ್ಟವಾಗಿದೆ. ಹೀಗಿರುವಾಗ ದುರ್ಗಾಗೆ ದೆವ್ವವಾಗಿ ತನಗೆ ಕಾಣಿಸಿಕೊಳ್ಳುವ ಅಂಬಿಕಾ ತನ್ನ ಅಕ್ಕ ಎಂಬುದು ತಿಳಿಯದೇ ದೆವ್ವ ಎಂದೇ ತಿಳಿಸುಕೊಂಡಿದ್ದಾಳೆ. ಹೀಗಾಗಿ, ದುರ್ಗಾ ಆತ್ಮವಾಗಿ ತಿರುಗಾಡುವ ಅಂಬಿಕಾಗೆ ವಿಚಿತ್ರ ಪ್ರಶ್ನೆಗಳನ್ನು ಕೇಳಿದ್ದಾಳೆ.

ಸಾಮಾನ್ಯವಾಗಿ ಎಲ್ಲರಿಗೂ ದೆವ್ವಗಳ ಬಗ್ಗೆ ಕಾಡುವ ಹಲವು ಪ್ರಶ್ನೆಗಳನ್ನು ಆತ್ಮವಾಗಿ ಓಡಾಡುವ ಅಂಬಿಕಾ ಮುಂದಿಟ್ಟಿದ್ದಾಳೆ. ದುರ್ಗಾ ಎಲ್ಲೆಲ್ಲೋ ನೋಡಿಕೊಂಡು ಕೆಲಸ ಮಾಡುತ್ತಿರುವಾಗ ಅಂಬಿಕಾ ಯಾಕೆ ಏನಾಯ್ತು ಎಂದು ಕೇಳುತ್ತಾರೆ. ಅದೂ ನಾನು ನಿಮಗೆ ಒಂದು ಪ್ರಶ್ನೆ ಕೇಳ್ತೇನೆ ನೀವು ನಗಬಾರದು ಎಂದು ದುರ್ಗಾ ಹೇಳುತ್ತಾಳೆ. ನೀನು ಎಡವಟ್ಟು ಪ್ರಶ್ನೆ ಕೇಳಿದರೆ ನಗುತ್ತೇನೆ ಎಂದು ಅಂಬಿಕಾ ಹೇಳುತ್ತಾಳೆ. ಆದರೆ ದುರ್ಗಾ ನಾನೇನು ಎಡವಟ್ಟು ಪ್ರಶ್ನೆಗಳನ್ನು ಕೇಳೊಲ್ಲ, ಎಲ್ಲರಿಗೂ ಇರೋ ಅನುಮಾನ ಎಂದು ಪ್ರಶ್ನೆ ಕೇಳಲು ಪೀಠಿಕೆ ಹಾಕುತ್ತಾಳೆ. ಆಗ ಕೇಳುವಂತೆ ಅಂಬಿಕಾ ಹೇಳುತ್ತಾಳೆ.

ರಾತ್ರಿ ಹೊತ್ತು ಓಡಾಡುವ ದೆವ್ವಗಳು ನಿದ್ದೆ ಮಾಡ್ತಾವಾ?

ಆಗ ದುರ್ಗಾ ನೀವು ನಿದ್ದೆ ಮಾಡ್ತೀರಾ ಎಂದು ಅಂಬಿಕಾಳಿಗೆ ಪ್ರಶ್ನೆ ಮಾಡುತ್ತಾರೆ. ಇದೆಂಥಾ ಪ್ರಶ್ನೆ ಎಂದು ಕೇಳುತ್ತಾರೆ. ಇದು ಎಲ್ಲರಿಗೂ ಕಾಡುವ ಪ್ರಶ್ನೆ ಕೇಳುತ್ತಿದ್ದೇನೆ. ದೆವ್ವಗಳು ರಾತ್ರಿ ಹೊತ್ತೇ ಓಡಾಡುತ್ತವೆ ಎಂದು ಎಲ್ಲರೂ ಹೇಳುತ್ತಾರಲ್ವಾ? ಹಾಗಾಗಿ ದೆವ್ವಗಳು ನಿದ್ದೆ ಮಾಡೊಲ್ವಾ? ಈ ಪ್ರಶ್ನೆಯನ್ನ ಯಾವಾಗಲೋ ಕೇಳಬೇಕು ಎಂದುಕೊಂಡಿದ್ದರೂ ಯಾವುದೇ ದೆವ್ವಗಳು ಸಿಕ್ಕಿರಲಿಲ್ಲ. ಈಗ ನೀವು ಸಿಕ್ಕಿದ್ದೀರಿ ಅಲ್ವಾ ಅದಕ್ಕೆ ಪ್ರಶ್ನೆ ಮಾಡ್ತಿದ್ದೀನಿ. ಆಗ ಅಂಬಿಕಾ ನೀನು ಎಡವಟ್ಟು ಪ್ರಶ್ನೆ ಕೇಳ್ತಿದ್ದೀಯಾ ಎಂದು ನಗಾಡುತ್ತಾರೆ.

ಎಲ್ಲಿ ಸ್ನಾನ ಮಾಡ್ತೀರಿ? ಬಟ್ಟೆ ಹೇಗೆ ಬದಲಾಯಿಸ್ತೀರಿ?

ಮುಂದುವರೆದು ನೀವು ಸ್ನಾನ ಮಾಡ್ತೀರಾ? ಬಟ್ಟೆ ಎಲ್ಲಾ ಹೇಗೆ ಬದಲಾಯಿಸ್ತೀರಿ? ಎಲ್ಲೆಂದರಲ್ಲಿ ಎಲ್ಲೆಲ್ಲೋ ಇದ್ದವರು ಫಟ್ ಅಂತಾ ಬಂದು ಬಿಡ್ತೀರಲ್ಲಾ, ಆ ಶಕ್ತಿ ನಿಮಗೆ ಹೇಗೆ ಬರುತ್ತದೆ? ಎಂದು ದುರ್ಗಾ ಕೇಳುತ್ತಾಳೆ. ನೀವು ಊಟ ತಿಂಡಿ ಎಲ್ಲಾ ಮಾಡ್ತೀರಾ? ಅಥವಾ ನಿಮಗೆ ಹಸಿವೇ ಆಗೊಲ್ವಾ ಎಂದು ಪ್ರಶ್ನಿಸುತ್ತಾಳೆ. ಆಗ ಇದಕ್ಕೆಲ್ಲಾ ಹೇಗೆ ಉತ್ತರಕೊಡಲಿ ಎಂದು ಅಂಬಿಕಾ ತಡಕಾಡುತ್ತಾಳೆ. ಅದೆಲ್ಲಾ ನನಗೆ ಗೊತ್ತಿಲ್ಲ ನನಗೆ ಉತ್ತರ ಬೇಕು ಎನ್ನುತ್ತಾಳೆ. ಮುಂದುವರೆದ ದುರ್ಗಾ, ಹೌದು ನಿಮ್ಮ ಕೂದಲು ಇಷ್ಟೊಂದು ಚೆನ್ನಾಗಿದೆ ಅಲ್ವಾ, ಯಾವ ಎಣ್ಣೆ ಹಚ್ತೀರಾ? ಈ ಸಿನಿಮಾದಲ್ಲಿ ದೆವ್ವಗಳು ಕಣ್ಣ ಸುತ್ತ ಕಪ್ಪಗೆ ಇರುತ್ತದೆ, ಬಿಳಿ ಸೀರೆ ಉಟ್ಟಿರುತ್ತವೆ, ಕೂದಲು ಹಕ್ಕಿ ಗೂಡು ಥರ ಕೆದರಿಕೊಂಡಿರುತ್ತದೆ, ಮೈ ಬಣ್ಣ ಸುಣ್ಣದ ತರಹ ಇರುತ್ತದೆ. ಆದರೆ, ನೀವು ಒಳ್ಳೆಯ ಹೀರೋಯಿನ್ ತರಹ ಇದ್ದೀರಿ ಎಂದು ಹೇಳುತ್ತಾ ಪ್ರಶ್ನೆ ಮಾಡುತ್ತಾಳೆ.

ದುರ್ಗಾ ಕೇಳಿದ ಪ್ರಶ್ನೆಗಳಿಗೆ ಅಂಬಿಕಾ ಉತ್ತರ ಕೊಡದೇ ಎಡವಟ್ಟು ಪ್ರಶ್ನೆಗಳಿಗೆ ಉತ್ತರ ಕೊಡದೇ ನನ್ನನ್ನು ಬಿಟ್ಟುಬಿಡು ಎಂದು ಕೇಳುತ್ತಾಳೆ. ಆಗ ನನಗೆ ಈವರೆಗೆ ಒಂದು ದೆವ್ವನೂ ಸಿಕ್ಕಿರಲಿಲ್ಲ. ಈಗ ನೀವು ಸಿಕ್ಕಿದ್ದೀರಿ, ನನ್ನ ಪ್ರಶ್ನೆಗಳಿಗೆ ಉತ್ತರ ಕೊಡದೇ ನಿಮ್ಮನ್ನು ಸುಮ್ಮನೆ ಬಿಟ್ಟುಬಿಡ್ತೀನಾ ಎಂದು ಅಂಬಿಕಾ ಹಿಂದೆ ಬೀಳುತ್ತಾಳೆ.

View post on Instagram

ದೆವ್ವಕ್ಕೆ ವೈಜ್ಞಾನಿಕ ಪುರಾವೆ:

ಇನ್ನು ವೈಜ್ಞಾನಿಕವಾಗಿ ದೆವ್ವಗಳ ಬಗ್ಗೆ ಯಾವುದೇ ಸ್ಪಷ್ಟ ಕುರುಹುಗಳು ಇಲ್ಲ. ಮನುಷ್ಯ ದೇವರ ಇರುವಿಕೆ ಹೇಗೆ ನಂಬುತ್ತಾರೋ ಹಾಗೆ ದುಷ್ಟ ಶಕ್ತಿ (ದೆವ್ವ) ಇರುವುದನ್ನು ನಂಬುತ್ತಾರೆ. ಜನರ ಇಂತಹ ನಂಬಿಕೆ ಆಧಾರವಾಗಿ ಇಟ್ಟುಕೊಂಡು ಕಿರುತೆರೆ ನಿರ್ದೇಶಕರು ಧಾರಾವಾಹಿ ಕಥೆಯನ್ನು ಹೆಣೆದು ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಅಷ್ಟಕ್ಕೂ ಈವರೆಗೆ ಸಿನಿಮಾ ಧಾರಾವಾಹಿಗಳಲ್ಲಿ ತೋರಿಸಲಾದಂತೆ ದೆವ್ವಗಳು ಊಟ, ತಿಂಡಿ, ನಿದ್ದೆ, ಸ್ನಾನ ಹಾಗೂ ಬಟ್ಟೆ ಬದಲಾವಣೆ ಮಾಡುವ ಪ್ರಮೇಯ ಬರುವುದಿಲ್ಲ. ಅವುಗಳು ಆತ್ಮಗಳು ಎಂದು ಹೇಳಲಾಗಿದೆ. ಆದರೆ, ಆತ್ಮಗಳಿಗೆ ತನ್ನದೇ ರೂಪವಿರದ ಕಾರಣ ಬೇರೊಬ್ಬರ ದೇಹ ಅಥವಾ ಅವರ ರೂಪವನ್ನು ಆವರಿಸಿಕೊಳ್ಳುತ್ತವೆ ಎಂದು ಹೇಳಾಗಿದೆ. ಇದಕ್ಕೆ ಎಲ್ಲಿಯೂ ವೈಜ್ಞಾನಿಕ ಪುರಾವೆಗಳು ಇಲ್ಲ.